ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Monday 31 July 2017

ಶಿಕ್ಷಣ ಇಲಾಖೆಯ ಸಂಪರ್ಕಕ್ಕೆ ದೂರವಾಣಿ ಕರೆ ಮಾಹಿತಿ


ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳ ಹೆಸರು ಮತ್ತು ಪದನಾಮ ಸಂಪರ್ಕ ಸಂಖ್ಯೆ ಮತ್ತು ಇ-ಮೇಲ್ ವಿಳಾಸ
01
ಶ್ರೀಮತಿ ಸೌಜನ್ಯ., ಭಾ.ಆ.ಸೇ.,
ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ,
ನೃಪತುಂಗ ರಸ್ತೆ, ಬೆಂಗಳೂರು.
ದೂರವಾಣಿ: +91-080-22214350.
ಫ್ಯಾಕ್ಷ್ : +91-080-22212137.
ಇ-ಮೇಲ್ : cpi.edu.sgkar@kar.nic.in
02
ಶ್ರೀ ವೀರಣ್ಣ ಜಿ.ತುರಮರಿ., ಕ.ಆ.ಸೇ.,
ಅಪರ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ,
ಧಾರವಾಡ.
ದೂರವಾಣಿ: +91-0836-2217062.
ಫ್ಯಾಕ್ಷ್ : +91-0836-2217067.
ಇ-ಮೇಲ್ : cpi.edu.kardwd@nic.in
03
ಶ್ರೀ ರಾಧಾಕೃಷ್ಣರಾವ್ ಮದನಕರ್., ಕ.ಆ.ಸೇ.,
ಅಪರ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ,
ಕಲಬುರಗಿ.
ದೂರವಾಣಿ: +91-08472-266963.
ಫ್ಯಾಕ್ಷ್ : +91-08472-255172.
ಇ-ಮೇಲ್ : cpi.edu.karglb@nic.in
04
ಶ್ರೀಮತಿ ಎಸ್.ಕಾತ್ಯಾಯನಿ ದೇವಿ, ಕ.ಆ.ಸೇ.,
ಜಂಟಿ ನಿರ್ದೇಶಕರು(ಆಡಳಿತ)
ದೂರವಾಣಿ:+91-080-22213129.
ಫ್ಯಾಕ್ಷ್ : +91-080-22211086.
ಇ-ಮೇಲ್ : jdadmin.edu.sgkar@kar.nic.in
05
ಸಾರ್ವಜನಿಕ ಸಂಪರ್ಕಾಧಿಕಾರಿ
ದೂರವಾಣಿ:+91-080-22484716.
ಫ್ಯಾಕ್ಷ್ : +91-080-22211086.
ಇ-ಮೇಲ್ : cpipro.edu.sgkar@kar.nic.in
ಕೇಂದ್ರೀಕೃತ ದಾಖಲಾತಿ ಘಟಕದ ಅಧಿಕಾರಿಗಳನ್ನು ಸಂಪರ್ಕಿಸಬೇಕಾದ ಮಾಹಿತಿ - ಬಿ.ಇಡಿ., ಡಿ.ಇಡಿ. ಕೌನ್ಸಿಲಿಂಗ್ ಹಾಗೂ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಕರ ನೇಮಕಾತಿ ಕೌನ್ಸಿಲಿಂಗ್ ಇತ್ಯಾದಿ
06
ಶ್ರೀ ಡಿ.ಕೆ.ಶಿವಕುಮಾರ್,
ವಿಶೇಷಾಧಿಕಾರಿಗಳು ಹಾಗೂ ಸಹನಿರ್ದೇಶಕರು
ಕೇಂದ್ರೀಕೃತ ದಾಖಲಾತಿ ಘಟಕ[CAC]
ದೂರವಾಣಿ: +91-080-22228805, 22271866, 22483145.
ಮೊಬೈಲ್ : +91-9449823723.
ಇ-ಮೇಲ್ : cackarnataka@gmail.com
07
ಶ್ರೀ ಕೆ.ರತ್ನಯ್ಯ
ಉಪನಿರ್ದೇಶಕರು
ಕೇಂದ್ರೀಕೃತ ದಾಖಲಾತಿ ಘಟಕ[CAC]
ದೂರವಾಣಿ: +91-080-22228805, 22271866, 22483145.
ಮೊಬೈಲ್: +91-9483522744.
ಇ-ಮೇಲ್ : cackarnataka@gmail.com
ಪ್ರಾಥಮಿಕ ಶಿಕ್ಷಣ ನಿರ್ದೇಶನಾಲಯ ಅಧಿಕಾರಿಗಳನ್ನು ಸಂಪರ್ಕಿಸಬೇಕಾದ ಮಾಹಿತಿ - ನೇಮಕಾತಿ, ವರ್ಗಾವಣೆ ಇತ್ಯಾಧಿ.
08
ಶ್ರೀ ಕೆ.ಆನಂದ,
ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ,
ಪ್ರಾಥಮಿಕ ಶಿಕ್ಷಣ
ದೂರವಾಣಿ: +91-080-22210117
ಮೊಬೈಲ್: +91-9448999411.
ಇ-ಮೇಲ್ : prydirector.edu.sgkar@nic.in
09
ಶ್ರೀ ಹಸನ್ ಮೊಹಿದ್ದೀನ್,
ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ,
ಪ್ರಾಥಮಿಕ ಶಿಕ್ಷಣ
Phone: +91-080-22215219
ಇ-ಮೇಲ್ : ddpiprimary.edu.sgkar@nic.in
ಪ್ರೌಢ ಶಿಕ್ಷಣ ನಿರ್ದೇಶನಾಲಯ ಅಧಿಕಾರಿಗಳನ್ನು ಸಂಪರ್ಕಿಸಬೇಕಾದ ಮಾಹಿತಿ - ನೇಮಕಾತಿ, ವರ್ಗಾವಣೆ ಇತ್ಯಾಧಿ.
10
ಶ್ರೀಮತಿ ಫಿಲೋಮಿನಾ ಲೋಬೋ.,
ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ,
ಪ್ರೌಢ ಶಿಕ್ಷಣ
ದೂರವಾಣಿ: +91-080-22212873
ಮೊಬೈಲ್: +91-9448999421.
ಇ-ಮೇಲ್ : secdirector.edu.sgkar@nic.in
11
ಶ್ರೀ ಹೆಚ್.ಕೆ.ಲಿಂಗರಾಜು,
ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ,
ಪ್ರೌಢ ಶಿಕ್ಷಣ
ದೂರವಾಣಿ: +91-080-22246976
ಮೊಬೈಲ್: ddpisecondary.edu.sgkar@nic.in
ಅಲ್ಪಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯದ ಅಧಿಕಾರಿಗಳನ್ನು ಸಂಪರ್ಕಿಸಬೇಕಾದ ಮಾಹಿತಿ - ನೇಮಕಾತಿ, ವರ್ಗಾವಣೆ ಇತ್ಯಾಧಿ.
12
ಶ್ರೀಮತಿ ಜೋಹರ್ ಜಬೀನ್,
ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ,
ಅಲ್ಪಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯ,
ದೂರವಾಣಿ: +91-080-22213766 ಫ್ಯಾಕ್ಷ್ :+91-22238718
ಮೊಬೈಲ್: +91-9448999442.
ಇ-ಮೇಲ್ : mindirector.edu.sgkar@nic.in
13
ಶ್ರೀ ಗಂಗಾಧರ್,
ಮುಖ್ಯ ಲೆಕ್ಕಾಧಿಕಾರಿಗಳು,
ದೂರವಾಣಿ: +91-080-22214352
ಇ-ಮೇಲ್ : cao.edu.karbng@nic.in
14
ಶ್ರೀ ಕಮಲಾಕರ ಟಿ ಎನ್
ಹಿರಿಯ ಸಹಾಯಕ ನಿರ್ದೇಶಕರು,
ಸಿಬ್ಬಂದಿ ಶಾಖೆ(ಅಧಿಕಾರಿಗಳು)
ದೂರವಾಣಿ: +91-080-22246975
ಇ-ಮೇಲ್ : soest1.edu.sgkar@nic.in
r

Sunday 23 July 2017

ಪುಸ್ತಕ ಪ್ರಕಟಣೆಗೆ ಮುಂದಾಗುವ ಮುನ್ನ ಗಮನಿಸಿ....

ಪುಸ್ತಕ ಪ್ರಕಟಣೆ : ಒಂದು ಸಲಹೆ
ನೀವು ಬರಹಗಾರರಾಗಿದ್ದು  ಹೊಸ ಪುಸ್ತಕವನ್ನು ನೀವೇ  ಪ್ರಕಟಿಸಬೇಕೇ ? ಇಲ್ಲಿ ಗಮನಿಸಿ :
* ಒಳ್ಳೆಯ ಬರಹಗಳನ್ನು ಆಯ್ದು ಗೆಳೆಯರಿಂದ- ಹಿರಿಯರಿಂದ ಓದಿಸಿ ಅಥವಾ ನೀವೇ ಒಂದು ಬಿಡುವಾದ ಸಮಯದಲ್ಲಿ ಓದಿ. ನಂತರ  ಮತ್ತೆ ಅವುಗಳಲ್ಲಿ ಸೂಕ್ತವೆನಿಸಿದ ಒಂದಷ್ಟು ಬರಹಗಳನ್ನು ಆಯ್ದು ವರ್ಗೀಕರಣ ಮಾಡಿಕೊಳ್ಳಿ.
ಉದಾ : ಕವಿತೆ/ಕಥೆಗಳು ಆದರೆ ಒಂದಾದಮೇಲೆ ಮತ್ತೊಂದು ಯಾವ ಕವಿತೆ /ಕಥೆ ಬರಬೇಕೆಂದು ಅನಿಸಿದೆಯೋ ಹಾಗೆ.
ಇತರ ಬರಹಗಳು ಆದರೆ ನಿಮಗೆ ಸೂಕ್ತವೆನಿಸಿದ ಅನುಕ್ರಮದಲ್ಲಿ ಬರಹಗಳನ್ನು ಸಿದ್ದಪಡಿಸಿಕೊಳ್ಳಿ. 
* ಡಿಜಿಟಲ್ ಪ್ರಿಂಟಿಂಗ್ ಇರುವ ಕಾರಣ ಎಲ್ಲವೂ ಈಗ ಕಂಪ್ಯೂಟರ್ ಮಯ. ಹಾಗಾಗಿ
ನಿಮ್ಮ ಬರಹಗಳನ್ನು  ಬಿಡುವಾದಾಗ ಟೈಪ್ ಮಾಡಿ ಅನುಕ್ರಮವಾಗಿ ಒಂದು ಫೈಲ್ ಮಾಡಿಟ್ಟುಕೊಳ್ಳಿ. ಹೀಗೆ ಟೈಪ್ ಮಾಡುವಾಗ ನುಡಿ -ಶ್ರೀಲಿಪಿ - ಬರಹಗಳನ್ನೇ ಹೆಚ್ಚು ಬಳಸಿ ಸಾಧ್ಯವಾಗದೇ ಇದ್ದಲ್ಲಿ ಯುನಿಕೋಡ್ ನಲ್ಲೇ  ( ಸಾಮಾನ್ಯವಾಗಿ ನಾವು ಬಳಸುವ ಗೂಗುಲ್ ಕನ್ನಡ ಟೈಪ್ ಮತ್ತು ಮೊಬೈಲ್ ನ ಜಸ್ಟ್ ಕನ್ನಡ ಟೈಪ್ ಗಳು ) ಟೈಪಿಸಿಕೊಳ್ಳಿ. ಆಮೇಲೆ ಅದನ್ನು ASCI ಆಗಿ ಕನ್ವರ್ಟ್ ಮಾಡಿಕೊಳ್ಳಬೇಕು. 
* ನಿಮಗೆ Page Layout ಮಾಡಲು ಬಂದ್ರೆ ನಿಮಗೆ ಇಷ್ಟವಾದ ವಿನ್ಯಾಸದಲ್ಲಿ Pagemaker, Indesign ಸಾಫ್ಟ್ವೇರ್ ಗಳಲ್ಲಿ  ಪುಟವಿನ್ಯಾಸ ಮಾಡಿ.  ಮಧ್ಯೆ ಮಧ್ಯೆ ನಿಮಗೆ ಬೇಕಾದ ರೇಖಾಚಿತ್ರಗಳನ್ನು ಕಲಾವಿದರಿಂದ ಬರೆಸಿಕೊಂಡು ಬಳಸಿಕೊಳ್ಳಿ. ಇಂಟರ್ನೆಟ್ ಚಿತ್ರಗಳನ್ನು ಬಳಸಿಕೊಳ್ಳುವಾಗ ಕಾಪಿ ರೈಟ್ ಇದೆಯೇ ಗಮನಿಸಿ. ಇದ್ದಲ್ಲಿ ಅಂತಹ ಚಿತ್ರವನ್ನೂ ಬಳಸಬೇಡಿರಿ. ಇಲ್ಲವಾದಲ್ಲಿ ಆರಾಮಾಗಿ ಬಳಸಿ ಮತ್ತು ಚಿತ್ರದ ಮೂಲವನ್ನು  ಪುಟದ ಕಡೆಯಲ್ಲೊ, ಪುಸ್ತಕದ ಕಡೆಯಲ್ಲೊ  ಹೆಸರಿಸಿ.   ನಿಮಗೆ ಸಾಧ್ಯವಿಲ್ಲ ಎಂದಾದರೆ DTP, ಗ್ರಾಫಿಕ್ಸ್ ಗಳು ಬೇಕಾದಷ್ಟಿವೆ. ಕನಿಷ್ಠ ಒಂದು ಪುಟಕ್ಕೆ 10 ರೂಪಾಯಿಯಂತೆ ನಿಮಗೆ ಪುಟವಿನ್ಯಾಸ ಮಾಡಿಕೊಡುತ್ತಾರೆ. ವಿನ್ಯಾಸ ಮುಗಿದ ನಂತರ Printout  ತೆಗೆಸಿಕೊಂಡು ಒಮ್ಮೆ Proof ನೋಡಿಕೊಂಡು ಬಿಡಿ. ಅಕ್ಷರ, ವ್ಯಾಕರಣ ದೋಷಗಳು ಇದ್ದಲ್ಲಿ ತಿದ್ದಿಸಿ.   
* ಮುನ್ನುಡಿ ಬೆನ್ನುಡಿಗಳನ್ನು ಬರೆಸುವುದಿದ್ದರೆ  1-2 ತಿಂಗಳು ಮುಂಚಿತವಾಗಿಯೇ ಬರೆಯುವವರಲ್ಲಿ ನಿಮ್ಮ ಬರಹದ ಪ್ರತಿಗಳನ್ನು ನೀಡಿರಿ.
* 1/8 ಕ್ರೌನ್ , 1/8 ಡೆಮಿ , 1/9 ಡೆಮಿ , 1/6 ಡೆಮಿ ಮುಂತಾದ ಪುಸ್ತಕದ ಗಾತ್ರಗಳಿವೆ. ನಿಮಗೆ ಬೇಕಾದ ಗಾತ್ರವನ್ನು ನಿರ್ಧರಿಸಿ ಮತ್ತು  ಕೆಲವು ವಿಶೇಷ ಗಾತ್ರಗಳಿಗೆ ಕಾಗದ ಸುಮ್ಮನೆ ಕತ್ತರಿಸಿ ಹಾಳಾಗುತ್ತದೆ. ಅದನ್ನು ಅದಷ್ಟೂ ತಡೆಗಟ್ಟಿ.
* ನಿಮ್ಮ ಬರಹಗಳಿಗೆ ತಕ್ಕ ಮುಖಪುಟ ವಿನ್ಯಾಸವನ್ನು ಮಾಡಿಸಿಕೊಳ್ಳಿ. ತುಂಬಾ ಚೆನ್ನ್ಗಿ ವಿನ್ಯಾಸ ಮಾಡುವ ಕಲಾವಿದರು ನಮ್ಮಲಿ ಸಿಗುತ್ತಾರೆ. ಕನಿಷ್ಠ ರೂ.2000ಕ್ಕೆಲ್ಲಾ ಒಳ್ಳೆಯ ವಿನ್ಯಾಸ ನಿಮಗೆ ಸಿಗುತ್ತದೆ. ಅಥವಾ ನೀವೇ ಬಣ್ಣ ಕಾಗದ ಇತ್ಯಾದಿಗಳ ಕೋಲಾಜ್ ಮಾಡಿ ಸಿದ್ದಪಡಿಸಿ ಅದನ್ನು ಗ್ರಾಫಿಕ್ಸ್ ನವರಲ್ಲಿ ಕೊಟ್ಟು ನಿಮ್ಮ ಪುಸ್ತಕದ ಅಳತೆಗಿಂತ ಅರ್ಧ ಸೆಮಿ ಹೆಚ್ಚಾಗಿಯೇ PSD ಫೋಟೋಶಾಪ್ ಫೈಲ್ ಮಾಡಿಸಿಕೊಳ್ಳಿ
* ಮುಖಪುಟ-ಒಳಪುಟ ವಿನ್ಯಾಸ ಮತ್ತು ಬರಹಗಳು ಒಂದಕ್ಕೊಂದು ಪೂರಕವಾಗಿಯೇ ಇರುವಂತೆ ನೋಡಿಕೊಳ್ಳಿ. ಇಲ್ಲವಾದರೆ ಎಲ್ಲವೂ ಏನೇನೋ ಹೇಳುತ್ತಾ ಆಭಾಸವಾಗಿಬಿಡುವ ಸಾಧ್ಯತೆಗಳಿವೆ.
*  ಸಿದ್ದವಾದ ಮುಖಪುಟದ PSD ಫೈಲ್ ಮತ್ತು ಬರಹಗಳ ಒಳಪುಟವಿನ್ಯಾಸವನ್ನು PDF ಫೈಲ್ ಮಾಡಿಕೊಂಡು ಬದ್ದತೆಯುಳ್ಳ ಒಳ್ಳೆ ಮುದ್ರಕರನ್ನು ಭೇಟಿಯಾಗಿ ದರವನ್ನು ಕುರಿತು ಚರ್ಚಿಸಿ.
* ಪುಸ್ತಕ ಮುದ್ರಣಕ್ಕೆ ಒಳ್ಳೆಯ ಗುಣಮಟ್ಟವನ್ನೇ ಆರಿಸಿ.
ಉದಾ: 70 GSM Maplitho ಕಾಗದ, ಮ್ಯಾಟ್ ಫಿನಿಷಿಂಗ್ ಇರುವ Multicolor  ಮುಖಪುಟವನ್ನು ಮಾಡಿಸಿಕೊಳ್ಳಿ. ಅಗತ್ಯ ಬಿದ್ದರೆ ಇನ್ನೂ ಹೆಚ್ಚಿನ ಗುಣಮಟ್ಟದ ಕಾಗದಕ್ಕೆ ಹೋಗಬಹುದು ಆದರೆ ಖರ್ಚು ಜಾಸ್ತಿಯಾಗುತ್ತದೆ.
ಕೆಳಗಿನದರದಲ್ಲಿ ಚೂರು ಹೆಚ್ಚು ಕಡಿಮೆಯಾಗಬಹುದು
70 GSM Maplitho - 4 color - 98/108 page - 1/8 ಕ್ರೌನ್ = ಕನಿಷ್ಠ ದರ ರೂ.18000
70 GSM Maplitho - 4 color - 98/108 page - 1/8 ಡೆಮಿ  = ಕನಿಷ್ಠ ದರ ರೂ.25000
70 GSM Maplitho - 4 color - 98/108 page - 1/9 ಡೆಮಿ  = ಕನಿಷ್ಠ ದರ ರೂ.23000
70 GSM Maplitho - 4 color - 98/108 page - 1/6 ಡೆಮಿ  = ಕನಿಷ್ಠ ದರ ರೂ.30000
* ಮುದ್ರಣಕ್ಕೆ ಕೊಟ್ಟ ಮೇಲೆ ಪೂರ್ಣಹಣವನ್ನು ಮುದ್ರಕರಿಗೆ ಪಾವತಿಸಿ. ಅದು ಒಳ್ಳೆಯ ಸಂಬಂಧವನ್ನು ಉಂಟು ಮಾಡುತ್ತದೆ. ಭಾಳಷ್ಟು ಪ್ರಕಾಶಕರು ಸರಿಯಾಗಿ ಹಣ ಪಾವತಿ ಮಾಡದೇ ಹೆಸರು ಕೆಡಿಸಿಕೊಂಡಿರುವುದೇ ಹೆಚ್ಚು :(  ಮಧ್ಯವರ್ತಿಗಳನ್ನು  ದೂರವಿಡಿ. ನೀವೇ ನೇರವಾಗಿ ಮುದ್ರಕರೊಂದಿಗೆ ಮಾತನಾಡಿ. ನಗದು ಹಣ ಪಾವತಿ ಮಾಡುವ ಬದಲು ಬ್ಯಾಂಕ್ , ಚೆಕ್ -ಡಿ‌ಡಿ ಮುಖಾಂತರ ಪಾವತಿ ಮಾಡಿ ಮತ್ತು ನಿಮ್ಮ ಮುದ್ರಣದ ಅವಶ್ಯಕತೆಗಳ ನಮೂದಾಗಿರುವ ( ಅಂದರೆ ಕಾಗದ - ಮುಖಪುಟ - ಸೈಜ್ ಗಳ ಕುರಿತ ಸ್ಪಷ್ಟ ಉಲ್ಲೇಖವಿರುವ) sale order ಅನ್ನು ಕೇಳಿ ಪಡೆದುಕೊಳ್ಳಿ. ಮುಂದೆ ಮೋಸ ಮಾಡಿದರೆ ಕಾನೂನು ಕ್ರಮ ಜರುಗಿಸಲು ಸಹಾಯವಾಗುತ್ತದೆ. ಮತ್ತು ಒಂದು ಬದ್ದತೆಯನ್ನು ಇಬ್ಬರಲ್ಲೂ ಉಂಟು ಮಾಡುತ್ತದೆ.
* ಪುಸ್ತಕವನ್ನು ISBN ನಲ್ಲಿ ರಿಜಿಸ್ಟರ್ ಮಾಡಬೇಕಿದ್ದರೆ 1-2 ತಿಂಗಳು ಮುಂಚಿತವಾಗಿಯೇ ನಿಮ್ಮ ಪುಸ್ತಕದ ಮುಖಪುಟದ ಪ್ರತಿಯೊಂದಿಗೆ ಕಲ್ಕತ್ತಾ ದಲ್ಲಿರುವ ಅದರ ಕೇಂದ್ರ ಕಚೇರಿಗೆ ಅರ್ಜಿ ಸಲ್ಲಿಸಿ ( ಈ ಅರ್ಜಿಯೂ ಇಂಟರ್ನೆಟ್ ನಲ್ಲಿ ಲಭ್ಯ. ಅದನ್ನು ಪ್ರಿಂಟ್ ತೆಗೆದು ವಿವರ ತುಂಬಿಸಿ ಮುಖಪುಟದ ಪ್ರತಿಯ ಜೊತೆ ಅವರ ವಿಳಾಸಕ್ಕೆ ಕಳುಹಿಸಿದರೆ ಸಾಕು. ಇದಕ್ಕೆ ಯಾವ ಶುಲ್ಕವೂ ಇಲ್ಲ.
ISBN ನಂಬರು ನಿಮಗೆ ಸಿಕ್ಕ ಮೇಲೆ ಅದನ್ನು ಪುಸ್ತಕದ ಮುಖಪುಟ ಮತ್ತು ಒಳಪುಟದಲ್ಲಿ ನಮೂದಿಸಿ.
* ISBN ಕಷ್ಟವೆನಿಸಿದರೆ ಮುದ್ರಣವಾದ ನಂತರದಲೇ ಬೆಂಗಳೂರಿನಲ್ಲಿರುವ ಕೇಂದ್ರ ಗ್ರಂಥಾಲಯಕ್ಕೆ ಹೋಗಿ ಪುಸ್ತಕದ 3 ಪ್ರತಿಗಳನ್ನು ಕೊಟ್ಟು ನಿಮ್ಮ ಪುಸ್ತಕದ ಕಾಪಿ ರೈಟ್ ಅನ್ನು ಕಾಯ್ದಿಸಿರಿಕೊಳ್ಳಿ.  ಇದಕ್ಕೆ ಯಾವ ಶುಲ್ಕವೂ ಇಲ್ಲ. ಉಚಿತ.
* ಗ್ರಂಥಾಲಯ ಇಲಾಖೆ ವರ್ಷಕ್ಕೆ ಎರಡು ಬಾರಿ ಆಯಾ ವರ್ಷ ಪ್ರಕಟಗೊಂಡ ಪುಸ್ತಕಗಳನ್ನು ಖರೀದಿಸಲು ಅರ್ಜಿ ಕರೆಯುತ್ತದೆ. ಬಹುಶಃ ಜೂನ್ ಮತ್ತು ಜನವರಿಯಲ್ಲಿ. ಆವಾಗ ಅರ್ಜಿಯ ಜೊತೆಯಲ್ಲಿ ನಿಮ್ಮ ಪುಸ್ತಕದ ಮೂರು ಪ್ರತಿ ಹಾಗೂ ಕಾಪಿ ರೈಟ್ ಮಾಡಿಸಿದ ಸರ್ಟಿಫಿಕೇಟ್ ನ ನೆರಳಚ್ಚು ಪ್ರತಿ ( ಜೇರಾಕ್ಸ್ ) ಜೊತೆಗೆ ಸರಿಯಾದ ಸಮಯಕ್ಕೆ ಸಲ್ಲಿಸಿ. ಆಯ್ಕೆ ಗೊಂಡಲ್ಲಿ 300 ಪ್ರತಿಗಳನ್ನು ಪರಿಣಿತರು ನಿರ್ಧರಿಸಿದ ಬೆಲೆಯಲ್ಲಿ ಕೊಂಡುಕೊಳ್ಳುತ್ತಾರೆ.
ಉದಾ : ಈ ಬೆಲೆಯು ಕಾಗದ, ಮುದ್ರಣ ಗುಣಮಟ್ಟದ ಮೇಲೆ ಅವಲಂಬಿತವಾಗಿದೆ. ಮತ್ತು ಒಂದು ಪುಟ ಇಂತಿಷ್ಟೂ ಎಂದು ನಿಗದಿ ಮಾಡಲಾಗುತ್ತದೆ. ಒಂದು ಅಂದಾಜು ಮಾಡುವುದಾದರೆ         
70 GSM Maplitho - 4 color - 108 page - 1/8 ಡೆಮಿ ಪುಸ್ತಕದ ಒಂದು ಪುಟಕ್ಕೆ 0.60 ಪೈಸೆ ಅಂದುಕೊಂಡರೆ  ರೂ. 64.80 ಯಂತೆ  
* ನಿಮಗೆ ಬೇಕಾದ ಪುಸ್ತಕದಂಗಡಿಗಳಿಗೆ ಕೊಡಬಹುದು. ಈಗೆಲ್ಲಾ ಶೇ. 40-50 ರಷ್ಟು ರಿಯಾಯಿತಿ ಕೇಳುವುದು ಸಾಮಾನ್ಯವಾಗಿದೆ. ಉಳಿದ ಹಣವು ಪುಸ್ತಕ ಮಾರಾಟವಾದ ನಂತರವೇ ನಿಮ್ಮನು ತಲುಪುವುದು. 
* ಪುಸ್ತಕಗಳನ್ನು ಕಡಿಮೆ ಬೆಲೆಯಿಟ್ಟು ನೇರ ಮಾರಾಟ ಮಾಡಿ. ( ಕಾರ್ಯಕ್ರಮಗಳಲ್ಲಿ ಸ್ಟಾಲ್ ಹಾಕುವುದು, ಆನ್ಲೈನ್ ಮೂಲಕ ಮಾರುವುದು (pay u money ಮುಂತಾದ ವೆಬ್ಸೈಟ್ ಗಳು ಮತ್ತು flipkart , amazon, snapdeal ಮಳಿಗೆಗಳು)  ಓದುಗರಿಗೂ ಒಳ್ಳೆಯ ಪುಸ್ತಕ ಒಳ್ಳೆಯ ದರಕ್ಕೆ ಸಿಗುವಂತಾಗಲಿ.
ಕನ್ನಡ ಪುಸ್ತಕಗಳ ಪ್ರಕಟಣೆಗೆ ಉತ್ಸುಕರಾಗಿರುವ ಜನರಿಗೆ ನನ್ನ ಶುಭ ಹಾರೈಕೆಗಳು. ಒಳ್ಳೆಯದಾಗಲಿ. ಮಧ್ಯವರ್ತಿಗಳನ್ನು ನಂಬಿ ಮೋಸಹೋಗಬೇಡಿ. ವಿಚಾರಿಸಿ ಮುನ್ನಡೆಯಿರಿ.
ಸಂಗ್ರಹ ಮಾಹಿತಿ...

Sunday 25 June 2017

ಕೆಲವರಿಗೆ ಸಮಾಜ ಸುಧಾರಕರು, ಚಿಂತಕರೇಕೆ ಶತ್ರುಗಳಾಗುತ್ತಾರೆ....?

ಕೆಲವರಿಗೆ ಸಮಾಜ ಸುಧಾರಕರೇಕೆ ಶತ್ರುಗಳಾಗುವರು....?
ಜಗತ್ತಿನ ಯಾವ ಚಿಂತಂಕರು  ಧಾರ್ಮಿಕ ಮೂಲಭೂತವಾದವನ್ನು ಪ್ರೋತ್ಸಾಹಿಸಲಿಲ್ಲ..ಯಾವ ಧರ್ಮಿಯನು ಈ ಭೂಮಿಯನ್ನು ಗುತ್ತಿಗೆ ಪಡೆದಿಲ್ಲ. ಯಾವ ಧರ್ಮ ಗುರುವು ತಾನು ಬೋದಿಸಿದ್ದೆ ಅತಿ ಶ್ರೇಷ್ಠ ಎಂದು ಯಾರ ಮೇಲೂ ಹೇರಲಿಲ್ಲ. ಅವರೆಲ್ಲ ಬೋದಿಸಿದ್ದು ಮಾನವತಾವಾದ, ಸಮತಾವಾದ, ವಿಶ್ವಮಾನವತೆ. ಸ್ವಾತಂತ್ರ್ಯ, ಸಹೋದರತೆ, ಸಮಾನತೆ, ದಯೆ, ಪ್ರೀತಿಯ ಪ್ರತಿಪಾದಕರಾಗಿದ್ದರು. ಎಲ್ಲ ಬುದ್ದಿಜೀವಿಗಳು ಚಿಂತಂಕರು,ಸಮಾಜ ಸೇವಕರು ಸಾಹಿತಿಗಳು ,ಕಲಾವಿದರು ಶಿಕ್ಷಕರು  ಜಗತ್ತಿನಾದ್ಯಂತ ಇದನ್ನೇ ಜಗತ್ತಿಗೆ ಸಾರಿದರು. ಆದರೂ ಜಗತ್ತಿನೆಲ್ಲೆಡೆ ಇರುವ ಧಾರ್ಮಿಕತೆಯ ಅಪೀಮು ಕುಡಿದ ಈ ಮೂಲಭೂತವಾದಿಗಳು ಧರ್ಮದ ಹೆಸರಿನಲ್ಲಿ  ಒಡೆದು ಆಳುವ ಪಾಳೆಗಾರಿಕೆಯನ್ನು ಜಗತ್ತಿನ ಎಲ್ಲ ರಾಷ್ಟ್ರಗಳಲ್ಲೂ  ಕಸುಬು ಮಾಡಿಕೊಂಡಿದ್ದಾರೆ
ಇಲ್ಲಿ ಪ್ರಮುಖ ವಿಷ್ಯ ಏನೆಂದರೆ ಈ ತರ ಧರ್ಮದ ಹೆಸರಲ್ಲಿ ಕಸುಬು ಮಾಡಿಕೊಂಡವರೆಲ್ಲ  ಆಯಾ ದೇಶದ ಪ್ರಬಲ ಮೇಲ್ವರ್ಗಗಳು. ಪ್ರತಿ ದೇಶದಲ್ಲಿ ಇರುವ ಇಂಥ ಮನಸ್ಥಿತಿಯ 10 % ಜನ ಜಗತ್ತನ್ನು ಧರ್ಮದ ಹೆಸರಲ್ಲಿ  ಹಿಡಿದಿಟ್ಟು ಒಡೆದು ಆಳುವ ದೂರಾಲೋಚನೆ ಜೊತೆಗೆ ಕಾಲಕಾಲಕ್ಕೆ ಬೇಕಾದ ತಂತ್ರ ಕುತಂತ್ರ ಮೂಲಕ ದುರಂತ ಇತಿಹಾಸ ಸನ್ನೀವೇಶ ಸೃಷ್ಟಿಗೆ ಕಾರಣರಾಗಿದ್ದಾರೆ.  
     ಅವರಿಗೆ ಸದಾ  ಸಾಮಾನ್ಯರ ಮೇಲೆ ಅಭಿಪ್ರಾಯ ಹೇರುವ, ಧರ್ಮ ಭಯ ಬಿತ್ತುವ ಶಾಸ್ತ್ರ ,ಕಾನೂನು  ಮಾಡುವ ಕೆಲಸವನ್ನು  ಜನಸಾಮಾನ್ಯರ ಅರಿವಿಗೆ ಭಾರದಂತೆ ವ್ಯವಸ್ಥಿತವಾಗಿ ಮಾಡುವ ಚಾಲಾಕಿ ಶಾಹಿಗಳು.ಈ ಭೂ ಜಗತ್ತಿನ ಎಲ್ಲ ದೇಶಗಳು ಇಂಥವರ ಹಿಡಿತದಲ್ಲೇ ಇವೆ. ಹಾಗಾಗಿಯೇ ಧರ್ಮ ಜಾತಿ ದೇಶ ಗೋಡೆಗಳಾಚೆ ವಿಶ್ವ ಮಾನವತೆಯ ವಿಶಾಲ ಮನಸ್ಸಿನ ಮನುಕುಲ ಬೆಳೆಸಲಾಗುತ್ತಿಲ್ಲ.ಇಂತ ಮನಸ್ಥಿತಿಯವರಿಗೆ ಕಾರ್ಲ್ ಮಾರ್ಕ್ಸ್, ಲೋಹಿಯಾ,ಬುದ್ಧ, ಬಸವ, ಗಾಂಧಿ ಅಂಬೇಡ್ಕರ್ ,ಕುವೆಂಪು, ಟಾಗುರ್ ಮುಂತಾದ ಚಿಂತಂಕರೆಲ್ಲ ಶತ್ರು ಗಳಂತೆ ಕಾಣುತ್ತಾರೆ. ಇಂದಿನ ಯುವ ಸಾಕ್ಷರರಿಗೂ ಈ ಐತಿಹಾಸಿಕ ಸತ್ಯ, ತಾತ್ವಿಕ ದರ್ಶನ ಆಗದೆ ಪ್ರಚೋದಿತರಾಗಿ  ಮೇಲು ಸ್ತರದ ಸಾಮಾಜಿಕ ಸರಪಳಿಯ ಉದ್ಯಮಾದಿಪತಿಗಳು, ಗುಡಿ, ಚರ್ಚು ಮಸೀದಿಗಳ ಪಾಳೆಗಾರರು,ರಾಜಕಾರಣಿಗಳ ಕುಟಿಲ ತಂತ್ರಗಳಿಗೆ ಬಲಿಯಾಗುತ್ತಿದ್ದಾರೆ. ಹಾಗೂ ಅಂತವರೊಂದಿಗೆ ಗುರುತಿಸಿಕೊಳ್ಳುವ ಹಂಬಲವುಳ್ಳವರ ಸಂಖ್ಯೆಯೂ ಜಗದ ಎಲ್ಲೆಡೆ ಇದ್ದಾರೆ. ಹಾಗಾಗಿ ಬದಲಾವಣೆಯೇ ಜಗದ ನಿಯಮ ಆಗಿದ್ದರು ಅದು ಜಗತ್ತಿನ ಕೇವಲ 10 % ಜನ ಮೇಲು ಸ್ತರದ  ಸಾಮಾಜಿಕ ಸರಪಳಿಯ ನಿರ್ದಾರದಂತೆಯೇ ನಡೆಯುತ್ತಿದೆ. ಈ ಅಮೆರಿಕಾವಂತೂ ಹಠಕ್ಕೆ ಬಿದ್ದು ಜಗತ್ತನ್ನು ನಿಯಂತ್ರಿಸಲು ಹವಣಿಸುತ್ತಿದೆ. ಇವರ ಮನಸ್ಥಿತಿಯ ಅಚ್ಚು ಜಗದ ಎಲ್ಲ ದೇಶಗಳಲ್ಲೂ ಇದ್ದಾರೆ. ಹಾಗಾಗಿ ಯಾವ ದೇಶದ  ಯಾವುದೇ  ಧರ್ಮದ ಮೂಲಭೂತ ವಾದಿಗಳು ಕಡಿಮೆ ಏನಿಲ್ಲ. ಈ ಬೆಳವಣಿಗೆ ಜೀವಂತ ಇರೋವರೆಗೂ ವಿಶ್ವ ಮಾನವೀಯತೆ ಸಾದ್ಯವಿಲ್ಲ. ದೇಶಗಳ ನಡುವೆ ಗಡಿ ತಂಟೆ, ಭಯೋತ್ಪಾದನೆ ಉಗ್ರವಾದ ಎಲ್ಲ ಇದ್ದೆ ಇರುತ್ತದೆ. ಜಗತ್ತು ಎಷ್ಟೇ ಮುಂದುವರಿದರು ಆತಂಕ ತಪ್ಪದು.
ಎಲ್ಲಕು ಒಂದೇ ಪರಿಹಾರ ಭೂ ಜಗತ್ತೇ ಒಂದು ದೇಶ ಆಗಬೇಕು. ಎಲ್ಲ ಗಡಿ ನಿಷೇಧ ಆಗಬೇಕು. ಕೇವಲ ಜೀವಿಗಳು ಬದುಕುವ ಜೀವಮಂಡಲ ಈ ವಸುಂದರೆ ಆಗಬೇಕು. ಎಲ್ಲ ಹೇಳಿದಷ್ಟು ಸುಲಭ ಅಲ್ಲ. ಕನಸು ಅಲ್ಲ. ಎಲ್ಲದಕ್ಕೂ ಎಲ್ಲರ ಸಹಕಾರವೂ ಸಿಗದು. ಹಾಗಾಗಿ ಪರಿಹಾರ ಸಿಗದು. ಆದರೂ ಈ ಬಗ್ಗೆ ಯುವ ಮನಸುಗಳು ಹೆಚ್ಚು ಯೋಚಿಸಿ ಜಾಗತಿಕ ವಿಶಾಲ ಮಾನವ ಸರಪಳಿ ,ಮಾನಾವೀಯ ಮನುಕುಲ ಬೆಳೆಸಲು ಶ್ರಮಿಸಬೇಕು.
ಇದು ರವಿರಾಜ ಮಾರ್ಗದಲ್ಲಿ ಕಂಡ ಅಂತರಾವಲೋಕನ. ಬದಲಾವಣೆಗೆ ನೀವೇ ಮೊದಲಿಗರಾಗುವ ಅವಕಾಶ.
ರವಿರಾಜ್ ಸಾಗರ್.

Wednesday 17 May 2017

K a s .ಪಾಸು ಮಾಡುವವರಿಗಾಗಿ


ಪತ್ರಿಕೆ -1

ಭಾಗ 1: ಕನ್ನಡ ಭಾಷಾ ಚರಿತ್ರೆ

ಈ ಭಾಗಕ್ಕೆ ಸಂಗಮೇಶ ಸವದತ್ತಿಮಠ,ಧಾರವಾಡಕರ ಮತ್ತು ಸಾ.ಶಿ.ಮರುಳಯ್ಯ ಅವರು ಬರೆದಿರುವ ಕನ್ನಡ ಭಾಷಾ ಅಧ್ಯಯನದ ಪುಸ್ತಕಗಳು ನೆರವಾಗುತ್ತವೆ.
ಸಾ.ಶಿ.ಮರುಳಯ್ಯ ಅವರ class notes ಸಿಕ್ಕರೆ ಓದಬಹುದು.

ಅಲ್ಲದೆ ಕ ಕನ್ನಡ ಸಾಹಿತ್ಯ ಐಚ್ಛಿಕ ವಿಷಯದ ಕುರಿತು ಮಾಲಿ ಮದ್ದಣ್ಣ, ಸಿ.ಬಿ.ಹೊನ್ನಯ್ಯ,ಚಿ.ಸಿ.ನಿಂಗಣ್ಣ ಅವರ ಪುಸ್ತಕಗಳಲ್ಲಿ ಈ ಭಾಗದ ಅಧ್ಯಾಯಗಳಿವೆ.

ಪತ್ರಿಕೆ-1 ರ ಒಟ್ಟು 250 ಅಂಕಗಳಲ್ಲಿ 50-60 ಅಂಕಗಳಿಗ ಈ ಭಾಗದಿಂದ ಪ್ರಶ್ನೆಗಳನ್ನು
ಕೇಳಬಹುದು.

ಭಾಗ-I 

ಕನ್ನಡ ಭಾಷೆಯ ಚರಿತ್ರೆ.

— ಭಾಷೆ ಎಂದರೇನು? ಭಾಷೆಯ ಸಮಾನ್ಯ ಲಕ್ಷಣಗಳು,
— ಭಾಷೆಯ ವ್ಯಾಕರಣ, ದ್ರಾವಿಡ ಭಾಷೆಗಳ ತೌಲನಿಕ ಮತ್ತು ವೈದೃಶ್ಯ  ಲಕ್ಷಣಗಳು, 
— ಕನ್ನಡ ಅಕ್ಷರಮಾಲೆ, 
— ಕನ್ನಡ ವ್ಯಾಕರಣದ ಕೆಲುವು ಪ್ರಧಾನ ಲಕ್ಷಣಗಳು:
— ಲಿಂಗ, ವಚನ, ವಿಭಕ್ತಿ, ಕ್ರಿಯಾಪದ,  ಧಾತೃ ಮತ್ತು ಸರ್ವನಾಮ.
— ಕನ್ನಡ ಭಾಷೆಯ ಕಾಲಗಣನಾ ಹಂತಗಳು.
— ಕನ್ನಡ ಭಾಷೆಯ ಮೇಲೆ ಇತರ ಭಾಷೆಗಳ ಪ್ರಭಾವ.
— ಕನ್ನಡ ಭಾಷೆಗಳಲ್ಲಿರುವ ಉಪಭಾಷೆಗಳು. - ಕನ್ನಡ ಭಾಷಾ ಬೆಳವಣಿಗೆಯ ವಿವಿಧ ಪ್ರಾದೇಶಿಕ ಮತ್ತು ಸಾಮಾಜಿಕ  ಅಂಶಗಳು.
— ಭಾಷಾ ಸ್ವೀಕರಣ ಮತ್ತು ಸ್ವರ ಭೇಧ - ಕನ್ನಡ ಭಾಷೆ ಮತ್ತು ಅದರ ಒಳಭೇಧಗಳು.
— ಕನ್ನಡ ಸಾಹಿತ್ಯಿಕ ಮತ್ತು ಆಡುಮಾತಿನ ಶೈಲಿ.

ಭಾಗ-II 
A. ಕನ್ನಡ ಸಾಹಿತ್ಯ ಚರಿತ್ರೆ

* ಪ್ರಾಚೀನ ಕನ್ನಡ ಸಾಹಿತ್ಯ 
— ಪ್ರಾಚೀನ ಕನ್ನಡ ಸಾಹಿತ್ಯದ ಉದಯ, ಅದರ ಪ್ರವ್ರತ್ತಿ, ಪ್ರಭಾವ, ಬೆಳವಣಿಗೆಗಳು

* ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಹಿನ್ನೆಲೆಯಲ್ಲಿ 10, 12, 16, 17, 19 ಮತ್ತು 20ನೇಯ  ಶತಮಾನದ ಸಾಹಿತ್ಯದ ಅಧ್ಯಯನ  ಹಾಗೂ ಕೆಳಗೆ ಪಟ್ಟಿ ಮಾಡಲಾಗಿರುವ ಕವಿಗಳಿಗೆ ಸಂಭಂಧಿಸಿದ ಸಾಹಿತ್ಯ ರೂಪಗಳ ಹಿನ್ನೆಲೆಯಲ್ಲಿ ಅವುಗಳ ಮೂಲ, ಬೆಳವಣಿಗೆ ಮತ್ತು ಸಾಧನಗಳೊಂದಿಗೆ ವಿಮರ್ಷಾತ್ಮಕವಾಗಿ  ಅಧ್ಯಯನ  ಮಾಡುವುದು.

* ಚಂಪೂ ಸಾಹಿತ್ಯ : ಪಂಪ, ಜನ್ನ, ನಾಗಚಂದ್ರ. 
* ವಚನ ನಾಹಿತ್ಯ : ಬಸವಣ್ಣ, ಅಕ್ಕ ಮಹಾದೇವಿ .
* ಮಧ್ಯಕಾಲಿನ ಕನ್ನಡ ಸಾಹಿತ್ಯ- ಅದರ ಪ್ರವ್ರತ್ತಿ, ಪ್ರಭಾವ, 
 * ಮಧ್ಯಕಾಲಿನ ಕಾವ್ಯ : 
— ಹರಿಹರ,  ರಾಘವಾಂಕ,  ಕುಮಾರವ್ಯಾಸ. 
* ದಾಸ ಸಾಹಿತ್ಯ:
— ಪುರಂದರ ದಾಸ ಮತ್ತು ಕನಕದಾಸ 
* ಸಾಂಗತ್ಯ: 
— ರತ್ನಾಕರವರ್ಣಿ. 

C. ಆಧುನಿಕ ಕನ್ನಡ ಸಾಹಿತ್ಯ : 
— ಪ್ರಭಾವ , ಪ್ರವೃತ್ತಿಗಳು.
— ನವೋದಯ,  ಪ್ರಗತಿಶೀಲ,  ನವ್ಯ, ದಲಿತ ಮತ್ತು ಬಂಡಾಯ ಸಾಹಿತ್ಯ. 

ಭಾಗ - III 
A. ಕಾವ್ಯ ಮತ್ತು ಸಾಹಿತ್ಯಿಕ ವಿಮರ್ಶೆಗಳು
- ಕಾವ್ಯ ಮೀಮಾಂಸೆ ಮತ್ತು ವಿಮರ್ಶೆಯ ಔಪಚಾರಿಕ ಭೇದಗಳು,
- ಕಾವ್ಯದ ವ್ಯಾಖ್ಯೆಗಳು ಮತ್ತು ಗುರಿಗಳು.
- ಹಲವಾರು ಕಾವ್ಯ ಪಂಥಗಳ ಪ್ರತಿಪಾದನೆಯ ನಿರೂಪಣೆ.
- ಅಲಂಕಾರ,  ರೀತಿ,  ರಸ, ವಕ್ರೋಕ್ತಿ,  ಧ್ವನಿ ಮತ್ತು ಔಚಿತ್ಯ,  
- ರಸ ಸೂತ್ರದ ಅರ್ಥವಿವರಣೆ.
- ಕನ್ನಡ ಸಾಹಿತ್ಯಿಕ ವಿಮರ್ಶೆಯ ಇತ್ತೀಚಿನ ರೂಪಗಳು,  ಪ್ರವೃತ್ತಿಗಳು, ಔಪಚಾರಿಕ,  ಐತಿಹಾಸಿಕ,  ಮಾರ್ಕ್ಸವಾದಿ,  ಮಹಿಳಾಪರ, ಪೂರ್ವ ವಸಾಹತುಶಾಹಿ ವಿಮರ್ಶೆಗಳು.

B. ಕರ್ನಾಟಕ ಸಾಂಸ್ಕೃತಿಕ ಚರಿತ್ರೆ

ಭಾರತೀಯ ಹಿನ್ನೆಲೆಯಲ್ಲಿ ಕರ್ನಾಟಕ ಸಂಸ್ಕೃತಿ,

- ಕರ್ನಾಟಕ ಸಂಸ್ಕೃತಿಯ ಪುರಾತನತೆ.

ಕರ್ನಾಟಕ ರಾಜಮನೆತನಗಳ ವಿಸ್ತೃತ ಅಧ್ಯಯನ

 - ಬಾದಾಮಿಯ ಚಾಲುಕ್ಯರು ಮತ್ತು ಕಲ್ಯಾಣದ ಚಾಲುಕ್ಯರು ,
- ರಾಷ್ಟ್ರಕೂಟರು, 
- ಹೊಯ್ಸಳರು,  
- ವಿಜಯ ನಗರದ ದೊರೆಗಳು ಮತ್ತು ಅವರ ಸಾಹಿತ್ಯಿಕ ಸ್ಥಿತಿಗತಿಗಳು.  

ಕರ್ನಾಟಕದ ಪ್ರಮುಖ ಧರ್ಮಗಳು ಮತ್ತು ಅವುಗಳ ಸಾಂಸ್ಕೃತಿಕ ಕೊಡುಗೆಗಳು.

ಧಾರ್ಮಿಕ ಚಳುವಳಿಗಳು, ಸಾಮಾಜಿಕ ಸ್ಥಿತಿಗತಿಗಳು.

ಕರ್ನಾಟಕದ ಕಲೆ ಮತ್ತು ವಾಸ್ತುಶಿಲ್ಪ : 
- ಸಾಹಿತ್ಯಿಕ ಸಂಧರ್ಭದಂತೆ  ಶಿಲ್ಪಕಲೆ , ವಾಸ್ತುಶಿಲ್ಪ,  ಚಿತ್ರಕಲೆ, ಸಂಗೀತ,  ನೃತ್ಯ. 

ಕರ್ನಾಟಕ ಸ್ವಾತಂತ್ರ ಚಳುವಳಿ . ಕರ್ನಾಟಕದ ಏಕೀಕರಣ - ಕನ್ನಡ ಸಾಹಿತ್ಯದ ಮೇಲೆ ಅದರ ಪ್ರಭಾವ. 

ಪತ್ರಿಕೆ-II

Section-A. 
A. ಹಳೆಗನ್ನಡ ಸಾಹಿತ್ಯ 

1. ಪಂಪನ ವಿಕ್ರಮಾರ್ಜುನ ವಿಜಯ  (cantos 12 & 13), ( ಪ್ರಕಾಶಕರು ಮೈಸೂರು ವಿಶ್ವವಿದ್ಯಾಲಯ )

2. ವಡ್ಡಾರಾಧನೆ  ( ಸುಕುಮಾರ ಸ್ವಾಮಿಯ ಕಥೆ,  ವಿದ್ದ್ಯುಚ್ಛೋರನ ಕಥೆ)

B. ಮಧ್ಯಕಾಲಿನ ಕನ್ನಡದ ಸಾಹಿತ್ಯ :
1. ವಚನ ಕಮ್ಮಟ, 
Ed: ಕೆ. ಮರುಳ ಸಿದ್ದಪ್ಪ ,  ಕೆ. ಆರ್.  ನಾಗರಾಜ್.
(ಪ್ರಕಾಶಕರು: ಬೆಂಗಳೂರು ವಿಶ್ವವಿದ್ಯಾಲಯ )

2. ಜನಪ್ರೀಯ ಕನಕ ಸಂಪುಟ, 
Ed. ಡಾ| ಜವರೇಗೌಡ ( ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ,  ಬೆಂಗಳೂರು )

3. ನಂಬಿಯಣ್ಣನ ರಗಳೆ, 
Ed., ಟಿ.ಎನ್.  ಶ್ರೀಕಂಠಯ್ಯ (ಟ.ವೆಂ. ಸ್ಮಾರಕ ಗ್ರಂಥ ಮಳಿಗೆ,  ಮೈಸೂರು )

4. ಕುಮಾರವ್ಯಾಸ ಭಾರತ  : ಕರ್ಣ ಪರ್ವ  (ಮೈಸೂರು ವಿಶ್ವವಿದ್ಯಾಲಯ)

5. ಭರತೇಶ ವೈಭವ ಸಂಗ್ರಹ 
Ed. ತ. ಸು. ಶಮಾ ರಾವ್
(ಮೈಸೂರು ವಿಶ್ವವಿದ್ಯಾಲಯ )

Section-B
A. ಆಧುನಿಕ ಕನ್ನಡ ಸಾಹಿತ್ಯ. 

1. ಕಾವ್ಯ : 
ಹೊಸಗನ್ನಡ ಕವಿತೆ
 Ed :ಜಿ.ಎಚ್.  ನಾಯಕ್ 
(ಕನ್ನಡ ಸಾಹಿತ್ಯ ಪರಿಷತ್ತು , ಬೆಂಗಳೂರು )

2. ಕಾದಂಬರಿ : 
ಬೆಟ್ಟದ ಜೀವ-ಶಿವರಾಂ ಕಾರಂತ. 
ಮಾಧವಿ -ಅರುಪಮಾ ನಿರಂಜನ.  
ಒಡಲಾಳ -ದೇವನೂರ ಮಹಾದೇವ. 

3. ಚಿಕ್ಕ ಕಥೆ: 

ಕನ್ನಡದ ಸಣ್ಣ ಕಥೆಗಳು, 
Ed :ಜಿ.ಎಚ್.  ನಾಯಕ್ 
(ಕನ್ನಡ ಸಾಹಿತ್ಯ ಪರಿಷತ್ತು , ನವ ದೆಹಲಿ)

4. ನಾಟಕ : 
ಶೂದ್ರ ತಪಸ್ವಿ - ಕುವೆಂಪು.
ತುಘಲಕ್ - ಗಿರೀಶ್ ಕಾರ್ನಾಡ್. 

5. ವಿಚಾರ ಸಾಹಿತ್ಯ : 
ದೇವರು - ಎ.ಎನ್.  ಮೂರ್ತಿರಾವ್
( ಪ್ರಕಾಶಕರು: ಡಾ| ವಿ.ಕೆ. ಮೂರ್ತಿ,  ಮೈಸೂರು)

B. ಜಾನಪದ ಸಾಹಿತ್ಯ :
1. ಜನಪದ ಸ್ವರೂಪ - ಡಾ| ಎಚ್.ಎಮ್.  ನಾಯಕ (ಟ.ವೆಂ. ಸ್ಮಾರಕ ಗ್ರಂಥ ಮಳಿಗೆ , ಮೈಸೂರು )

2. ಜಾನಪದ ಗೀತಾಂಜಲಿ -
 Ed. ಡಾ| ಜವರೇಗೌಡ. ( ಪ್ರಕಾಶಕರು: ಸಾಹಿತ್ಯ ಅಕಾಡೆಮಿ, ನವ ದೆಹಲಿ)

3. ಕನ್ನಡದ ಜನಪದ ಕಥೆಗಳು -
Ed. ಜಿ.ಎಸ್. ಪರಮಶಿವಯ್ಯ.
(ಮೈಸೂರು ವಿಶ್ವವಿದ್ಯಾಲಯ )

4. ಬೀದಿ ಮಕ್ಕಳು ಬೆಳೆದೂ 
Ed. ಕಳೆಗೌಡ ನಾಗವರ.
(ಪ್ರಕಾಶಕರು: ಬೆಂಗಳೂರು ವಿಶ್ವವಿದ್ಯಾಲಯ )

5. ಸಾವಿರದ ಒಗಟುಗಳು -
Ed : ಎಸ್.ಜಿ. ಇಮ್ರಾಪುರ. 

Tuesday 16 May 2017

ಭಕ್ತಿ ಬಜಾರು

ಭಕ್ತಿ ಬಜಾರು

ಯಾರೋ ಹೆಣೆದ ಬಲೆಯಲ್ಲಿ _ _ಬಿದ್ದಿರುವೆ
ಬಿಡಿಸಲು ಬಂದಿರೇನು...?
ಕತ್ತಲೂರ ಪರಂಪರೆಯ ಆಲದ _ಮರಕ್ಕೆ

ಭಯಭಕ್ತಿಯಿಂದ ಜೋತುಬಿದ್ದಿರುವೆ
ಹೊಟ್ಟೆಪಾಡಿಗೆ ಹೊಸಹಾದಿ ತುಳಿಯಲು
ಸ್ಪಂದಿಸುತ್ತಿಲ್ಲ ಜನ ಮನ
ವಿಜ್ಞಾನ ಸೂರ್ಯನೂರಿಗೆ _ ಕರೆದುಕೊಂಡು ಹೋಗುವಿರೇನು...?

ಪೈಸೆ ಹಾಕಿ ಪಲಾಯನ ಮಾಡಬೇಡಿ
ನಾನು ನಿಮ್ಮ ಮನುಕುಲದವನೆ.

ಭಕ್ತಿ ಬಜಾರಿನ ಸತ್ಯ ಗೊತ್ತೇನು....?
ಲೋಕದ ಚೋರ ಬಜಾರಿನಲ್ಲಿ
ದೇವ ದೇವತೆಗಳನೂ ಪಾಲುದಾರರಾಗಿರಿಸಿಹರಿಲ್ಲಿ

ಹೊಟ್ಟೆಪಾಡಿನ ಪಾತ್ರದಾರಿಗಳೇ ಎಲ್ಲ.

ಬೆಳಕಿನೊಡನೆ ರಾಜಿಯಾದ ಭಕ್ತಿ
ಭಕ್ತರನ್ನು ಕತ್ತಲೆ ಸುತ್ತಿಕೊಂಡರು ಸುಮ್ಮನಾಗಿದೆ

ಭಕ್ತಿ ಬಜಾರಿನ ಭವ ಬಂಧನದಿಂದ ಮುಕ್ತಿ ನೀಡುವಿರೇನು....?

ರವಿರಾಜ್ ಸಾಗರ್
9980952630

ತಾಯಿ ಶಾರದೆ

ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ
ಪ್ರೇಮದಿಂದಲಿ ಸಲಹು ಮಾತೆ ನೀಡು ಸನ್ಮತಿ ಸೌಖ್ಯದಾತೆ

ಅಂಧಕಾರವ ಓಡಿಸು ಜ್ಞಾನ ಜ್ಯೋತಿಯ ಬೆಳಗಿಸು
ಹೃದಯ ಮಂದಿರದಲ್ಲಿ ನೆಲೆಸು ಚಿಂತೆಯಾ ಅಳಿಸು
ಶಾಂತಿಯಾ ಉಳಿಸು
ಶಾಂತಿಯಾ ಉಳಿಸು

ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ...

ನಿನ್ನ ಮಡಿಲಿನ ಮಕ್ಕಳಮ್ಮ ನಿನ್ನ ನಂಬಿದ ಕಂದರಮ್ಮ
ನಿನ್ನ ಕರುಣೆಯ ಬೆಳಕಲೆಮ್ಮ ಬಾಳನೂ ಬೆಳಗಮ್ಮ
ನಮ್ಮ ಕೋರಿಕೆ ಆಲಿಸಮ್ಮ
ನಮ್ಮ ಕೋರಿಕೆ ಆಲಿಸಮ್ಮ

ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ...

ಒಳ್ಳೆ ಮಾತುಗಳಾಡಿಸು ಒಳ್ಳೆ ಕೆಲಸವ ಮಾಡಿಸು
ಒಳ್ಳೆ ದಾರಿಯಲೆಮ್ಮ ನಡೆಸು ವಿದ್ಯೆಯಾ ಕಲಿಸು
ಆಸೆ ಪೂರೈಸೂ
ಆಸೆ ಪೂರೈಸೂ

ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ...

ನನಗೆ ಅತ್ಯಂತ ಪ್ರಿಯವಾದ ಹಾಡು ಇದು....

Saturday 13 May 2017

ವಿದ್ಯಾರ್ಥಿ ವೇತನ ಈಗ ಬಲು ಸುಲಭಯವಾಗಿ ಪಡೆಯಿರಿ

*ಆತ್ಮೀಯ  ಸ್ನೇಹಿತರೆ ನನ್ನದೊಂದು ಕೋರಿಕೆ ನಿಮಗೆ ಪರಿಚಯವಿರುವ ಬಡ ವಿದ್ಯಾರ್ಥಿಗಳಿಗೆ ಈ  ಕೆಳಗಿನ ವಿದ್ಯಾರ್ಥಿ ವೇತನಗಳ ಬಗ್ಗೆ ದಯವಿಟ್ಟು ಮಾಹಿತಿ ನೀಡಿ.. ಯಾಕೆಂದರೆ  ಮುಂದಿನ ತಿಂಗಳಲ್ಲಿ ಎಲ್ಲಾ ವಿದ್ಯಾರ್ಥಿ ವೇತನಗಳ ಅರ್ಜಿಗಳನ್ನು ಕರೆಯಲಾಗುತ್ತದೆ*

1) ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ -
www.karepass.cgg.gov.in

೨) ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ   ವಿದ್ಯಾರ್ಥಿಗಳಿಗೆ 
www.sw.kar.nic.in

೩) ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ -www.gokdom.kar.nic.in

೪) ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯದ ವಿದ್ಯಾರ್ಥಿ ವೇತನ (Ministry of Human Resource Development)  ಪ್ರತಿ ವರ್ಷವು ಡಿಗ್ರಿ ಪ್ರವೇಶ ಪಡೆಯುವ  ಎಲ್ಲಾ ಜಾತಿಯಾ ಬಡ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನ - 
www.kar.nic.in/pue

೫) ನಮ್ಮ ರಾಜ್ಯದ ಹೆಮ್ಮೆಯ ಐ.ಟಿ ಕಂಪನಿ ಇನಪೋಸ್ಸಿಸ್ ನೀಡುವ ವಿದ್ಯಾರ್ಥಿ ವೇತನ - www.vidyaposhak.org

೬)ಕಿತ್ತೂರು ರಾಣಿ ಚೆನ್ನಮ್ಮ ವಿದ್ಯಾರ್ಥಿ ವೇತನ - 
www.kar.nic.in/pue/

೭) ದೀರುಬಾಯಿ ಅಂಬಾನಿ ವಿದ್ಯಾರ್ಥಿ ವೇತನ ಅಂಗವಿಕಲ ವಿದ್ಯಾರ್ಥಿಗಳಿಗೆ - 
www.kar.nic.in/pue

೮) ಅಂಬೇಡ್ಕರ್ ನ್ಯಾಶನಲ್ ಮೆರಿಟ್ ಅರ್ವಾಡ್ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ - 
www.kar.nic.in/pue

೯) ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ ಮೂಲ ವಿಜ್ಞಾನ ವಿಷಯದಲ್ಲಿ ಉನ್ನತ ಶಿಕ್ಷಣ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ (Inspire Scholarship) - 
www. kar.nic.in/pue

೧೦) ಮೆರಿಟ್ ಸ್ಕಾಲರಶಿಪ್ - ದ್ವಿತೀಯ ಪದವಿ ಪೂರ್ವ ಪರೀಕ್ಷೆಯಲ್ಲಿ ಶೇ.೮೦ ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ಬಡ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ(ಇಂಜಿನಿಯರಿಂಗ್, ವೈದ್ಯಕೀಯ, ಕೃಷಿ) ಶುಲ್ಕವನ್ನು ಸರ್ಕಾರ ನೀಡುತ್ತದೆ – 
www. kar.nic.in/pue

೧೧) ನಮ್ಮ ರಾಜ್ಯದ ಹೆಮ್ಮೆಯ ಇನ್ನೊಂದು ಐ.ಟಿ ಕಂಪನಿ  ವೀಪ್ರೊ ಅವರ  ಅಜೀಮ್ ಪ್ರೇಮಜೀ ಫೌಂಡೇಷನ್ -www.azimpremjifoundation.org

12. *ವಿದ್ಯಸಿರಿ* *ಮತ್ತು ಶುಲ್ಕ* *ವಿನಾಯಿತಿ*
http://backwardclasses.kar.nic.in/BCWD/Website/backwardclassesMain.html 

    http://backwardclasses.kar.nic.in/BCWD/Website/Educational_Scholarships.html

    Information ::

   http://www.scholarshipx.in/2015/10/karnataka-scholarship-onlline-last-date.html

13. *ಸರ್ಕಾರದ* *ಧನಸಹಾಯಗಳ* *ವೆಬ್ ವಿಳಾಸ*

http://karepass.cgg.gov.in/ 

14. *ಜಿಂದಾಲ್ scholarship*

 http://www.sitaramjindalfoundation.org/scholarships.php 

15. *B.L ಹೇಮವತಿ ಧನಸಹಾಯ*

 http://www.blhtrust.org/schpro.html 

16. *ಕೇಂದ್ರ ಸರ್ಕಾರದ ಧನಸಹಾಯಗಳು*

Central Govt Scholarship

     http://mhrd.gov.in/ 

17.  *Indian Oil Scholarship*

     https://www.iocl.com/AboutUs/AcademicScholarships.