ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Wednesday, 22 April 2015

ಹೇಳಲಾರೆ ಕಾರಣ. .!


    1    .ದಿಗಿಲು. ..!
    ..........
    ತೆರೆದಿದೆ ಬಯಕೆಯ ಬಾಗಿಲು
    ಸೆಳೆಯುತಿದೆ ತಾರೆಗಳ ಮುಗಿಲು
    ಕೆಣಕುತಿದೆ ಕಣ್ಣೊಳಗೆ...
    ಆಸೆಯ ಕಡಲು
    .... ಕ್ಷಮಿಸಿ ..!
    ಎಲ್ಲ ಹೇಳಲು
    ಕೊಂಚ ದಿಗಿಲು. .!
    ಜಾಲದೊಳಗೆ ಜಾಲಿ ನಾನು
    ಜಾರಿ ಬೀಳುವ ಮುನ್ನ
    ಜಿಗಿದು ಮಬ್ಬು ಕೊಡವಿದೆ.
    ಬುದ್ಧಿ ಹೇಳಿದೆ
    ಮನಸಿಗೆ...!
    ( ಇನ್ನೂ ಇದೆ. . "ಹೇಳಲಾರೆ ಕಾರಣ. ".. ಬಾವ ಸಂಕಲನದಿಂದ ನಿಮಗಾ..
      2.   ಛಲ. .ಫಲ. ..
      ..................
      ಏಸೊಂದು ಕನಸುಗಳೊಂದಿಗೆ ಈಜಿದೆ....
      ಆಕಾಶವ ಮುಟ್ಟಿ ಬಿಡಲೆಂದು
      ಅವಕಾಶಗಳ ಸೃಷ್ಟಿಸಿಕೊಂಡು ...
      ಕನಸುಗಳ ಮುಂಗಾರಲಿ ವರ್ಷವಿಡೀ ನೆನೆದೆ.
      ಶ್ರಮದ ವೃಕ್ಷದಡಿ
      ಛಲ ನನ್ನದು...
      ಫಲ ... ಪರಿಣಾಮದ ಚಿಂತೆಯಿಲ್ಲ..!
      ಗೆಲ್ಲುವ ಹಂಬಲ...ಚಫಲ...
      ಹೂಮಾಲೆಯೂ ಇದೆ.
      3.ನನ್ನ ಪ್ರೇಮ ಪತ್ರ
        ಎಣಿಸಿರಲಿಲ್ಲ ನಾನು...
        ನನ್ನ ಪ್ರೇಮ ಪತ್ರಕೆ
        ಕಣ್ಣೀರ ಉತ್ತರ ಸಿಗಬಹುದೆಂದು...!
        ಕಾರಣ ಕೇಳಿದರೆ ಅವಳಂದಳು...
        ಕಣ್ಣೀರಲ್ಲ... ಪನೀರಿದು......
        ನನಗೀಗ ನಿನ್ನದು
        ನೂರನೆಯ ಪ್ರೇಮ ಪತ್ರ. ....!
        ಅಂದಾಗ ಜೋಗ ಜಲಧಾರೆ ಹರಿಯಿತು
        ನನ್ನ ಕಣ್ಣಲ್ಲಿ. .,!

Monday, 20 April 2015

ಚಿನ್ನದ ಗೋರಿಯಲಿ ಮಲಗಿದಾರೆ ಮಾರ್ರೇ..!

ಚಿನ್ನದ ಗೋರಿಯಲಿ ಮಲಗಿದಾರೆ.....!
...................................
ಚಿನ್ನದ ಕಣಗಳ ರಾಸಿಯ
ಮರುಭೂಮಿಯಲಿ...
ನೀರಿಗಾಗಿ ಅಲೆದೆ..!
ನೀರಿರಲಿ... ಮರೀಚಿಕೆಯೂ ಕಾಣಲಿಲ್ಲ. ...!
ಮಡಿದ  ಹಲವರ ಅಸ್ಥಿಗಳು
ಆ ಚಿನ್ನದ ರಾಶಿಯ ಮೇಲೆಯೇ ಇವೆ.
     ಧರೆಯ ಬಗೆದು
     ಚಿನ್ನ ಕೂಡಿಟ್ಟ
     ಕೋಟಿ ಕೋಟಿ ಕುಳದವರ ಅಸ್ಥಿಗಳೂ
    ಸಾಮಾನ್ಯ ಅನಾಥರ ಅಸ್ಥಿಗಳ ನಡುವೆಯೇ ನರಳುತಿವೆ.
ಕೋಟಿ ಪಾಪಗಳೂಂದಿಗೆ ಕೊರಗುತ....!
        ಎಂತಹ ಅದೃಷ್ಟ. .!
ಚಿನ್ನದ ಗೋರಿಯಲಿ ಮಲಗಿದಾರೆ ಮಾರ್ರೇ....!

Wednesday, 1 April 2015

ಚಂದ್ರ ಮತ್ತು ತಾವರೆ

ಚಂದ್ರ ಮತ್ತು ತಾವರೆ
.....................
ಮಲಗಬೇಕು. ....
ಆದ್ರೆ ನಿದ್ರೆ ಬರದು ಕಣೇ. ..
      ಮುಂಜಾವಲಿ ಕವಿದ
     ಒಂಚೂರು ನಿದಿರೆಯಲಿ
      ಮತ್ತೆ ನೀನೇ ಕಣೇ. ..
      ಕನಸಲೆಲ್ಲಾ ಆವರಿಸಿ
       ಕಾಯಕ ಮರೆಸಿ
       ಕಾಡುವ ನೀನು
       ಕಾದಿದ್ದು ನನಗೇ ತಾನೇ...?
ಎಂದು ರಾತ್ರಿಯೆಲ್ಲ ಅಲೆದ ಚಂದ್ರ
ತಾವರೆಯ ಕೇಳಿದ. !..
       ಕೆಸರಲರಳಿದ ತಾವರೆ
      ನೀರಲೆಗಳ ನಡುವೆ ನಾಚಿ
      ಕೆಂಪೇರಿತು....!
ಧರೆಗಿಳಿದು ಬರುವಂತೆ
ಸಂದೇಶ ಕಳುಹಿಸಿದ್ದ ಕಂಡು
ಚಂದ್ರ ನಲಿದು ಬೆಳದಿಂಗಳ ಸುರಿದನು.

Saturday, 28 February 2015

ಮೈತ್ರಿ

'ಮೈತ್ರಿ' - ಬಹಳ ದಿನಗಳ ನಂತರ ಕನ್ನಡದಲ್ಲಿ ನಾನು ನೋಡಿದ ಒಂದು ಚೆಂದದ ಸಿನೆಮಾ. ದಯವಿಟ್ಟು ತಪ್ಪದೆ ಈ ಚಿತ್ರ ನೋಡಿ ಎಂಬುದು ನನ್ನೆಲ್ಲಾ ಗೆಳೆಯರಿಗೆ ನನ್ನ ಮನವಿ. ಯಾಕೆಂದರೆ ಒಂದು ಒಳ್ಳೆಯ ಸಿನೆಮಾ ಬಂದಾಗ ನಾವು ಅದನ್ನು ನೋಡದಿದ್ದರೆ , ಪ್ರೋತ್ಸಾಹಿಸದಿದ್ದರೆ, ಅಂತಹ ಒಳ್ಳೆಯ ಪ್ರಯತ್ನ ಮಾಡಿದವರ ಜತೆಗೆ ನಾವು ನಿಲ್ಲದಿದ್ದರೆ ಕೊನೆಗೆ ನಮಗೆ ಉಳಿಯುವುದು ಅದೇ 'ಮಚ್ಚು ಲಾಂಗು- ಐಟಂ ಸಾಂಗು' ಚಿತ್ರಗಳೇ. ಕನ್ನಡದಲ್ಲಿ ಒಳ್ಳೆಯ ಚಿತ್ರಗಳೇ ಬರಲ್ಲ ಗೊಣಗೋರು, ಕಂಪ್ಲೇಂಟ್ ಮಾಡೋರು ಈ ವಿಭಿನ್ನ ಪ್ರಯತ್ನವನ್ನು ನೋಡಿ, ಬೆಂಬಲಿಸಿ, ಇಲ್ಲವಾದಲ್ಲಿ ನಮಗೆ ಒಳ್ಳೆಯ ಚಿತ್ರಗಳು ಬರ್ತಿಲ್ಲ ಅಂತ ಟೀಕಿಸುವ ಹಕ...್ಕು ಅಧಿಕಾರ ಇರಲ್ಲ. ಬಿ. ಎ೦. ಗಿರಿರಾಜ್ ನಿರ್ದೇಶನದ, ಪುನೀತ್ ರಾಜ್ ಕುಮಾರ್ ಹಾಗೂ ಮೋಹನ್ ಲಾಲ್ ತಾರಾಗಣದ ಈ ಚಿತ್ರ ತನ್ನ ಹಲವು ವಿಶೇಷತೆಗಳಿಂದ ಗಮನಸೆಳೆಯುತ್ತದೆ. ಇತರ ಕಮರ್ಷಿಯಲ್ ಚಿತ್ರಗಳಂತೆ ಅಬ್ಬರದ ಡೈಲಾಗ್ ಗಳು, ಅಪ್ಪಳಿಸುವ ಸಂಗೀತ, ಹೀರೋಯಿಸಂ ಮೆರೆಸುವ ಫೈಟ್ ಗಳು, ಸೊಂಟ ಕುಣಿಸುವ ಹೀರೋಯಿನ್ ಗಳು, ಐಟಂ ಸಾಂಗ್ ಗಳು ಯಾವುದೂ ಇಲ್ಲದೆಯೂ, ಪುನೀತ್ ಹಾಗೂ ಮೋಹನ್ ಲಾಲ್ ರಂತಹ ಇಬ್ಬರು ದೊಡ್ಡ ನಟರಿದ್ದರೂ ಅವರನ್ನು ಹೀರೋ ಆಗಿ ಮೆರೆಸದೆಯೂ ಚಿತ್ರ ಎಲ್ಲೂ ಬೋರ್ ಹೊಡೆಸದೇ ತನ್ನ ವಿಭಿನ್ನ ಕಥಾಹಂದರ ಹಾಗೂ ಬಿಗಿಯಾದ ನಿರೂಪಣೆ ಯ ಮೂಲಕ ಇಷ್ಟವಾಗುತ್ತದೆ. ಚಿತ್ರ ನೋಡುವಾಗ 'ಸ್ಲಂ ಡಾಗ್ ಮಿಲೆಯನೇರ್' ಚಿತ್ರದಿಂದ ಸ್ಫೂರ್ತಿ ಪಡೆದಿರುವಂತೆ ಕಂಡುಬಂದರೂ ಚಿತ್ರದಲ್ಲಿ ತುಂಬಿರುವ ಅಪ್ಪಟ ಕನ್ನಡದ ಛಾಯೆ ಮನಸ್ಸು ತುಂಬುತ್ತದೆ. ಕೇವಲ ಕಲಾತ್ಮಕ ಚಿತ್ರವಾಗಿ ಕಳೆದು ಹೋಗಬಹುದಾಗಿದ್ದ ಅಪಾಯದಿಂದ ಚಿತ್ರ ಪಾರಾಗಿದೆ ಮತ್ತು ಕಮರ್ಷಿಯಲ್ ಚಿತ್ರವಾಗಿಯೂ ಆಪ್ತವಾಗುತ್ತದೆ. ಒಂದೆರಡು ದೃಶ್ಯಗಳಂತೂ ಕಣ್ಣಂಚು ಒದ್ದೆಮಾಡುತ್ತವೆ. ಇದು ರಿಮೇಕ್ ಅಲ್ಲದ ನಮ್ಮ ಕನ್ನಡದ್ದೇ ಆದ ಸ್ವಮೇಕ್ ಸಿನೆಮಾ ಅನ್ನೋದು ತುಂಬಾ ಹೆಮ್ಮೆಯ ವಿಚಾರ. ಇಂತಹ ಒಂದು ಒಳ್ಳೆಯ ಗಟ್ಟಿ ಕಥೆಯ ಚಿತ್ರ ಕೊಟ್ಟ ಗಿರಿರಾಜ್ ಅವರಿಗೆ ಮತ್ತು ಇಂತಹದೊಂದು ವಿಭಿನ್ನ ಪಾತ್ರವನ್ನು ಒಪ್ಪಿಕೊಂಡ ಅಪ್ಪಿಕೊಂಡ ಪುನೀತ್ ಅವರಿಗೂ ಅಭಿನಂದನೆ.

Tuesday, 7 October 2014

'mandaara kannada' children paper

ಆರನೇ ವರ್ಷ ಪೂರೈಸಿದ ನಮ್ಮ "ಮಂದಾರ ಕನ್ನಡ" ಮಕ್ಕಳ ಪತ್ರಿಕೆಯ ಸಂಚಿಕೆ  ಬಿಡುಗಡೆ ಮಾಡಲಾಗಿದೆ. ಈಮೇಲ್, ವಾಟ್ಸಆಪ., ಪೇಸ್ಬುಕ್ನಲೂ ಇದರ ಪ್ರತಿ ಪಡೆಯಲು ಸಂಪರ್ಕಿಸಿ. ಇನ್ ಬಾಕ್ಸ್ನಲಿ
ನಿಮ್ಮ ನಂಬರ್.ಈಮೇಲ್ ಕಳಿಸಿ,

Wednesday, 30 July 2014

1.ಲಗೋರಿ ಲೈಪು.


Photo: ಲಗೋರಿ ಲೈಪು.
""""""""""""""
ಕೆಡಗುವುದು, ಕೆಡಿಸುವುದು
ಮನಸ್ಸುಗಳ ಒಡೆದು ಮಜನೋಡಿ
ಎಂದೋ ಒಂದು ದಿನ
 ಪಶ್ಚಾತಾಪ ಪಡುವುದೇ
 ದಯೆ , ಧರ್ಮ ಎನ್ನುವ
ಮನುಜನ ಮುಖವಾಡದ ಆಟ
ಕೆಡವಿ ಕಟ್ಟುವ ಲಗೋರಿ ಆಟ.
  ಏಳೆಂಟು ಕಲ್ಲಿಗೆ 
 ಅಹಂನ ಚಂಡಿನೇಟು
ಕೋಟೆ ಕಟ್ಟಿ ಮೆರೆಯುವುದು
ಮಣ್ಣಾಗುವುದು....
ಕೆಡವಿ ಕಟ್ಟುವುದು
ಕಟ್ಟಿ ಕೆಡವುದು
ಲಗೋರಿ ಲೈಪು. 
..
Photo: ನನ್ನ ಆಟ. 
    ..............
ಊರ ಬಯಲಿನಲ್ಲಿ ಮೂರು ಗೂಟದ ಆಟ (ಕ್ರಿಕೆಟ್)
ಓಣಿಯ ಚಿನ್ನಿ ದಾಂಡುಗಳ
ಸದ್ದುನು ಅಡಗಿಸಿ
 ಕೇಕೆ ಹಾಕುತ್ತಾ ಕುಣಿಯುತಿದೆ
 ಜಾಗತೀಕರಣದ ಅಮಲಿನಲಿ
ಹಳ್ಳಿಯ ಓಣಿ  ಬಣ ಬಣ
ಹೆದ್ದಾರಿಯ ಸದ್ದು ಡಣಢಣ
ಬಯಲಿಗೆ ಬಂದಿದೆ ಮಂದಿ
 ಓಣಿಯ ತೊರೆದು
ನಮ್ಮ ದೇಶೀಯ ಆಟ ಜರಿದು. 
ಮರೆಯಲಾದೀತೆ ನನ್ನ ಆಟ...?
1.ಲಗೋರಿ ಲೈಪು.
""""""""""""""
ಕೆಡಗುವುದು, ಕೆಡಿಸುವುದು
ಮನಸ್ಸುಗಳ ಒಡೆದು ಮಜನೋಡಿ
ಎಂದೋ ಒಂದು ದಿನ
ಪಶ್ಚಾತಾಪ ಪಡುವುದೇ
ದಯೆ , ಧರ್ಮ ಎನ್ನುವ
ಮನುಜನ ಮುಖವಾಡದ ಆಟ
ಕೆಡವಿ ಕಟ್ಟುವ ಲಗೋರಿ ಆಟ.
ಏಳೆಂಟು ಕಲ್ಲಿಗೆ
ಅಹಂನ ಚಂಡಿನೇಟು
ಕೋಟೆ ಕಟ್ಟಿ ಮೆರೆಯುವುದು
ಮಣ್ಣಾಗುವುದು....
ಕೆಡವಿ ಕಟ್ಟುವುದು
ಕಟ್ಟಿ ಕೆಡವುದು
ಲಗೋರಿ ಲೈಪು.


ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಒಂದು ಜಾಗೃತ ಕವನ. ....

Photo: ಧರಣಿಯ ಅಳಲು
"""""""""""""""
 ಬಿರಿದ ಬಯಲು
ಮುನಿದ ಮುಗಿಲು
ಕೇಳುವರಾರು ಧರಣಿ ಅಳಲು. .?
      
ಒಡಲಲಿ ಅಡಗಿದ ಹನಿ ನೀರನೂ ಬಿಡದೆ
ಬಗೆದು   ಕುಡಿದ ಮನುಜ
ಅಸಾಧ್ಯವಾದುದು ತನಗಿಲ ಎನ್ನುವನಲ್ಲ...!
ಮುಗಿಲನು  ಒಲಿಸಿ 
ಮಳೆ ತರಿಸುವನೇನು...?
        ನಾನು ಬೆತ್ತಲಾದರೆ....
ಅವನ ಬದುಕು ಕತ್ತಲಾಗುವುದೆನುವ 
ಸತ್ಯವ ಅರಿತು
 ನನ್ನನ್ನು ಉಳಿಸಿ ಕೊಳ್ಳುವನೇನು. .?

 (  ಮುಂದೆ ಇನ್ನೂ ಇದೆ)
ಧರಣಿಯ ಅಳಲು
"""""""""""""""
ಬಿರಿದ ಬಯಲು
ಮುನಿದ ಮುಗಿಲು
ಕೇಳುವರಾರು ಧರಣಿ ಅಳಲು. .?

ಒಡಲಲಿ ಅಡಗಿದ ಹನಿ ನೀರನೂ ಬಿಡದೆ
ಬಗೆದು ಕುಡಿದ ಮನುಜ
ಅಸಾಧ್ಯವಾದುದು ತನಗಿಲ ಎನ್ನುವನಲ್ಲ...!
ಮುಗಿಲನು ಒಲಿಸಿ
ಮಳೆ ತರಿಸುವನೇನು...?
ನಾನು ಬೆತ್ತಲಾದರೆ....
ಅವನ ಬದುಕು ಕತ್ತಲಾಗುವುದೆನುವ
ಸತ್ಯವ ಅರಿತು
ನನ್ನನ್ನು ಉಳಿಸಿ ಕೊಳ್ಳುವನೇನು. .
3.
ಕಾಡಿದ ಕಡಲು
,,,,,,,,,,,,,,,,,,,,,,,,,,,
ಮೌನ ಕಡಲ ತೀರದಲ್ಲಿ
ಅವಳ ಹೆಜ್ಜೆಗಳು
ಯಾವ ಅಲೆಯ ಹೊಡೆತಕೂ ಸಿಗದೆ
ನನ್ನ ಹೆಜ್ಜೆಗೆ ಜೊತೆಯಾಗಲು ಕಾದಿವೆ
ಎ0ದೆಣಿಸಿ ಹಿಂಬಾಲಿಸಿದೆ ....!
ಮುಂದಿರುವ ಜೋಡಿ ಜೋಡಿ ಹೆಜ್ಜೆ ಕಂಡು
ಕುಸಿದು ಹೋದೆ ಕ್ಷಣದಲೇ
ಈವರೆಗೂ ಸುಮ್ಮನೆ ಇದ್ದ ಕಡಲೂ ಕೂಡ
ಜಿಗಿದು ಬಂದು ಮುಳುಗಿಸಿ
ಕಣ್ಣೀರ ಕುಡಿದುಕೊ0ಡು ಕೇಕೆ ಹಾಕಿತು

4.
ಛತ್ರಿ ಚಂದ್ರ
...................
ಗಗನದಲಿ ಎಣಿಸಲಾಗದಷಟು
ಚಿಮಣಿ ದೀಪ ದಂತೆ ಕಾಣುವ 
ತಾರೆಗಳ ಬೆಳಕಲ್ಲಿ ಅಲೆದು 
ಯಾರನ್ನು ಹುಡುಕುವನೋ...?
ಅಮಾವಾಸ್ಯೆಯಲ್ಲಿ ಕಾಣದಂತೆ
ಅದೆಲ್ಲಿಗೆ ಹೋಗುವನೋ..
5.ನನ್ನ ಆಟ. 
Photo: ನನ್ನ ಆಟ. 
    ..............
ಊರ ಬಯಲಿನಲ್ಲಿ ಮೂರು ಗೂಟದ ಆಟ (ಕ್ರಿಕೆಟ್)
ಓಣಿಯ ಚಿನ್ನಿ ದಾಂಡುಗಳ
ಸದ್ದುನು ಅಡಗಿಸಿ
 ಕೇಕೆ ಹಾಕುತ್ತಾ ಕುಣಿಯುತಿದೆ
 ಜಾಗತೀಕರಣದ ಅಮಲಿನಲಿ
ಹಳ್ಳಿಯ ಓಣಿ  ಬಣ ಬಣ
ಹೆದ್ದಾರಿಯ ಸದ್ದು ಡಣಢಣ
ಬಯಲಿಗೆ ಬಂದಿದೆ ಮಂದಿ
 ಓಣಿಯ ತೊರೆದು
ನಮ್ಮ ದೇಶೀಯ ಆಟ ಜರಿದು. 
ಮರೆಯಲಾದೀತೆ ನನ್ನ ಆಟ...?
..............
ಊರ ಬಯಲಿನಲ್ಲಿ ಮೂರು ಗೂಟದ ಆಟ (ಕ್ರಿಕೆಟ್)
ಓಣಿಯ ಚಿನ್ನಿ ದಾಂಡುಗಳ
ಸದ್ದುನು ಅಡಗಿಸಿ
ಕೇಕೆ ಹಾಕುತ್ತಾ ಕುಣಿಯುತಿದೆ
ಜಾಗತೀಕರಣದ ಅಮಲಿನಲಿ
ಹಳ್ಳಿಯ ಓಣಿ ಬಣ ಬಣ
ಹೆದ್ದಾರಿಯ ಸದ್ದು ಡಣಢಣ
ಬಯಲಿಗೆ ಬಂದಿದೆ ಮಂದಿ
ಓಣಿಯ ತೊರೆದು
ನಮ್ಮ ದೇಶೀಯ ಆಟ ಜರಿದು.
ಮರೆಯಲಾದೀತೆ ನನ್ನ ಆಟ...?
 






Monday, 31 March 2014

ರವಿರಾಜ ಮಾರ್ಗ (ravirajamaarga): ಬಿಡುವು ಮಾಡಿಕೊಂಡು ಓದಿ ,,,ಕಡಿಮೆ ಸಮಯದಲ್ಲಿ ,!

ರವಿರಾಜ ಮಾರ್ಗ (ravirajamaarga): ಬಿಡುವು ಮಾಡಿಕೊಂಡು ಓದಿ ,,,ಕಡಿಮೆ ಸಮಯದಲ್ಲಿ ,!: ೧./ ಅವಳು                                                 ಅವಳು ಬಿಡಿಸಲಾಗದ ಒಗಟು ಬಿಡಿಸಿದರೂ ಒಗಟು ನಾನು ಒರಟ ಕರಗದ ಕಲ್ಲು ಒಲವ ಮಳೆ ಸುರಿದು ಹಾಗ...

ಜಾನಪದ ವಿಶ್ವವಿದ್ಯಾಲಯದ ಡಿಪ್ಲೋಮಾ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ ..

 ಜಾನಪದ ವಿಶ್ವವಿದ್ಯಾಲಯದ ಡಿಪ್ಲೋಮಾ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ . ಹಸೆ ಚಿತ್ತಾರ , ನಾಟಿ ವೈದ್ಯ ,ವಿವಿಧ ಜಾನಪದ ನಿಕಾಯಗಳಲ್ಲಿ ಸ್ನಾತಕೋತ್ತರ ಡಿಪ್ಲೋಮಾ ,ಡಿಪ್ಲೋಮಾ ...