ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Monday 12 November 2018

ಕನ್ನಡದ ಮೊದಲುಗಳು

ಕನ್ನಡದ ಮೊದಲ ಕಾದಂಬರಿ- ಇಂದಿರಾಬಾಯಿ (ರ: ಗುಲ್ವಾಡಿ ವೆಂಕಟರಾವ್)

ಕನ್ನಡದ ಮೊದಲ ಪತ್ರಿಕೆ- ಮಂಗಳೂರು ಸಮಾಚಾರ

ಕನ್ನಡದ ಮೊದಲ ರಾಷ್ಟ್ರಕವಿ- ಮಂಜೇಶ್ವರ ಗೋವಿಂದ ಪೈ

ಕನ್ನಡದ ಮೊದಲ ಕವಯತ್ರಿ- ಅಕ್ಕಮಹಾದೇವಿ

ಕನ್ನಡದ ಮೊದಲ ಐತಿಹಾಸಿಕ ಚಲನಚಿತ್ರ- ರಣಧೀರ ಕಂಠೀರವ

ಪಂಪ ಪ್ರಶಸ್ತಿ ಪುರಸ್ಕೃತ ಮೊದಲ ಕವಿ- ಕುವೆಂಪು

ಫಾಲ್ಕೆ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ- ವಿ.ಶಾಂತಾರಾಮ್

ಕರ್ನಾಟಕದ ಮೊದಲ ಅಣೆಕಟ್ಟು- ಕೆಆರ್‌ಎಸ್ (1932)

ಕರ್ನಾಟಕದ ಮೊದಲ ರಾಜ್ಯಪಾಲ- ಜಯಚಾಮರಾಜ ಒಡೆಯರ್

ಅಚ್ಚ ಕನ್ನಡದ ಮೊದಲ ದೊರೆ - ಮಯೂರವರ್ಮ

ಕನ್ನಡದ ಮೊದಲ ಕವಿ - ಪಂಪ

ಕನ್ನಡದ ಮೊದಲ ಶಾಸನ - ಹಲ್ಮಿಡಿ ಶಾಸನ

ತ್ರಿಪದಿ ಛಂದಸ್ಸಿನ ಮೊದಲ ಬಳಕೆ - ಬಾದಾಮಿಯ ಕಪ್ಪೆ ಅರಭಟ್ಟನ ಶಾಸನ

ಕನ್ನಡದ ಮೊದಲ ಲಕ್ಷಣ ಗ್ರಂಥ - ಕವಿರಾಜಮಾರ್ಗ

ಕನ್ನಡದ ಮೊದಲ ನಾಟಕ - ಮಿತ್ರವಿಂದ ಗೋವಿಂದ (ಸಿಂಗರಾರ್ಯ)

ಕನ್ನಡದ ಮೊದಲ ಮಹಮದೀಯ ಕವಿ - ಶಿಶುನಾಳ ಷರೀಪ

ಕನ್ನಡದ ಮೊದಲ ಕವಯಿತ್ರಿ - ಅಕ್ಕಮಹಾದೇವಿ

ಕನ್ನಡದ ಮೊದಲ ಸ್ವತಂತ್ರ ಸಾಮಾಜಿಕ ಕಾದಂಬರಿ - ಇಂದಿರಾಬಾಯಿ

ಕನ್ನಡದ ಮೊದಲ ಪತ್ತೆದಾರಿ ಕಾದಂಬರಿ - ಚೋರಗ್ರಹಣ ತಂತ್ರ

ಕನ್ನಡದ ಮೊದಲ ಛಂದೋಗ್ರಂಥ - ಛಂದೋಂಬುಧಿ (ನಾಗವರ್ಮ)

ಕನ್ನಡದ ಮೊದಲ ಸಾಮಾಜಿಕ ನಾಟಕ - ಇಗ್ಗಪ್ಪ ಹೆಗ್ಗಡೆಯ ವಿವಾಹ ಪ್ರಹಸನ

ಕನ್ನಡದ ಮೊದಲ ಜ್ಯೋತಿಷ್ಯ ಗ್ರಂಥ - ಜಾತಕ ತಿಲಕ (ಶ್ರೀಧರಚಾರ್ಯ)

ಕನ್ನಡದ ಮೊದಲ ಗಣಿತಶಾಸ್ತ್ರ ಗ್ರಂಥ - ವ್ಯವಹಾರ ಗಣಿತ (ರಾಜಾದಿತ್ಯ)

ಕನ್ನಡದ ಮೊದಲ ಕಾವ್ಯ - ಆದಿಪುರಾಣ

ಕನ್ನಡದ ಮೊದಲ ಗದ್ಯ ಕೃತಿ - ವಡ್ಡಾರಾಧನೆ

ಕನ್ನಡದಲ್ಲಿ ಮೊದಲು ಅಚ್ಚಾದ ಕೃತಿ - ಎ ಗ್ರಾಮರ್ ಆಫ್ ದಿ ಕನ್ನಡ ಲಾಂಗ್ವೇಜ್ (ವಿಲಿಯಮ್ ಕ್ಯಾರಿ)

ಹೊಸಗನ್ನಡದ ಶಬ್ದವನ್ನು ಮೊದಲು ಬಳಸಿದವರು - ಚಂದ್ರರಾಜ

ಕನ್ನಡದಲ್ಲಿ ಮೊದಲು ಕಥೆ ಬರೆದವರು - ಪಂಜೆಮಂಗೇಶರಾಯರು

ಕನ್ನಡದ ಮೊದಲ ಪ್ರೇಮಗೀತೆಗಳ ಸಂಕಲನ - ಒಲುಮೆ (ತೀನಂಶ್ರೀ)

ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಅಧ್ಯಕ್ಷರು - ಹೆಚ್.ವಿ.ನಂಜುಂಡಯ್ಯ

ಕನ್ನಡದ ಮೊದಲ ಸ್ನಾತಕೋತ್ತರ ಪದವೀಧರ - ಆರ್.ನರಸಿಂಹಾಚಾರ್

ಕನ್ನಡದ ಮೊದಲ ವಚನಕಾರ - ದೇವರದಾಸಿಮಯ್ಯ

ಹೊಸಗನ್ನಡದ ಮೊದಲ ಮಹಾಕಾವ್ಯ - ಶ್ರೀರಾಮಾಯಣ ದರ್ಶನಂ

ಪಂಪಪ್ರಶಸ್ತಿ ಪಡೆದ ಮೊದಲ ಕನ್ನಡಿಗ - ಕುವೆಂಪು

ಕನ್ನಡದ ಮೊದಲ ಕನ್ನಡ-ಇಂಗ್ಲೀಷ್ ನಿಘಂಟು ರಚಿಸಿದವರು
- ಆರ್.ಎಫ್.ಕಿಟೆಲ್

ಕನ್ನಡದ ಮೊಟ್ಟಮೊದಲ ಸಂಕಲನ ಗ್ರಂಥ - ಸೂಕ್ತಿ ಸುಧಾರ್ಣವ

ಮೊದಲ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸ್ಥಳ - ಬೆಂಗಳೂರು (1915)

ಕರ್ನಾಟಕ ರತ್ನ ಪ್ರಶಸ್ತಿ ಪಡೆದ ಮೊದಲ ಕವಿ - ಕುವೆಂಪು

ಕನ್ನಡದ ಮೊದಲ ವಿಶ್ವಕೋಶ - ವಿವೇಕ ಚಿಂತಾಮಣಿ (ನಿಜಗುಣ ಶಿವಯೋಗಿ)

ಕನ್ನಡದ ಮೊದಲ ವೈದ್ಯಗ್ರಂಥ - ಗೋವೈದ್ಯ (ಕೀರ್ತಿವರ್ಮ)

ಕನ್ನಡದ ಮೊದಲ ಪ್ರಾಧ್ಯಾಪಕರು - ಟಿ.ಎಸ್.ವೆಂಕಣ್ಣಯ್ಯ

ಕನ್ನಡದಲ್ಲಿ ರಚಿತಗೊಂಡ ಮೊದಲ ರಗಳೆ - ಮಂದಾನಿಲ ರಗಳೆ

ಕನ್ನಡದ ಮೊದಲ ಹಾಸ್ಯ ಪತ್ರಿಕೆ - ವಿಕಟ ಪ್ರತಾಪ (ಸಂ:ಚನ್ನಕೇಶವಅಯ್ಯಂಗಾರ್)

ಕನ್ನಡದ ಮೊದಲ ವೀರಗಲ್ಲು - ತಮ್ಮಟಗಲ್ಲು ಶಾಸನ

ಕನ್ನಡದ ಮೊದಲ ಹಾಸ್ಯ ಲೇಖಕಿ - ಟಿ.ಸುನಂದಮ್ಮ

Wednesday 7 November 2018

ನಮ್ಮೂರ ದೀಪಾವಳಿ

*ನಮ್ಮ ದೀಪಾವಳಿ ಆಚರಣೆ..*                                                                          ಬೂದಿ ನೀರು ಮೀಯುವುದು , ಹಿಂದಿನ ದಿನ ನೀರು ಒಲೆಗೆ ,ಹರಿಗೆ ಸೇಡಿಯ ಗೆರೆ ,ಬಿಂದುಗಳನ್ನಿಟ್ಟು , ಹರಿಗೆ ಹೀರೆ ,ಕುಂಬಳಬಳ್ಳಿ ಗೊಂಡೆ ಹೂವಿನ ಸರ ಹಾಕಿ ಶಂಖ ಜಾಗಟೆ (ಜಾಗಟೆ ಬದಲು ಬಟ್ಟಲು ಬಡಿಯುತಾತಿದ್ದದ್ದೂ ಇದೆ) ಸದ್ದುಗಳೊಂದಿಗೆ ಅಮ್ಮ ನೀರು ತುಂಬುವುದು , ಬೆಳಿಗ್ಗೆ ಹೊತ್ತು ಮೂಡುವ ಮೊದಲು ತೆಂಗಿನೆಣ್ಣೆ ಅರಸಿನ ಜಜ್ಜಿದ ಚಗಟೆ ಕೋಡಿನ ಮಿಶ್ರಣ ಹಚ್ಚಿಕೊಂಡು ಮೀಯುವುದು.
ಅಮಾಸೆಯ ರಾತ್ರಿ ಗದ್ದೆ ಹಿಟ್ಟು , ಅರಸಿನ ಎಲೆಯಲ್ಲಿ ಬೇಯಿಸಿದ ಸಪ್ಪೆ ಕಡುಬು , ಜಂಗಮನ ಸೊಪ್ಪು ಕರಿಬೀಳು ಸಟ್ಟುಗದ ಎಲೆ ,ಕಿಸಗಾರ ಹೂವು , ಕೋಳಿಬೀಳು -ಇವುಗಳ ಕೊಚ್ಚಲು ಬೆಂಡೆ ಗಿಡದ ಕಾಂಡಕ್ಕೆ ನೆಣೆ ಸುತ್ತಿ ಮಾಡಿದ ದೊಂದಿ , ಅವಲಕ್ಕಿ ,ಬಾಳೆಹಣ್ಣು ,ಅರಸಿನ ಎಲೆಗಳನ್ನು ಬುಟ್ಟಿಯಲ್ಲಿಟ್ಟುಕೊಂಡು ,ಸೂಟೆ ಬೀಸಿಕೊಂಡು ಗದ್ದೆಗೆ ಹೋಗುವುದು.ಅಲ್ಲಿ ಕೊಯ್ಲು ಆದ ಗದ್ದೆಗಳಿಗೆ ಅರಸಿನ ಎಲೆಯ ಮೇಲೆ ಸೊಪ್ಪು ,ಕಡುಬು ಹಾಕಿ ನೆಣೆ ಇಟ್ಟು ದೀಪ ಹಚ್ಚಿ , ಹೊಲಿ ಕೊಟ್ರೊ ,ಬಲಿ ತಗೊಂಡ್ರೊ ,ಬಲೀಂದ್ರ ದೇವರು ತಮ್ ರಾಜ್ಯಕ್ಕೆ ತಾವೇ ಬಂದ್ರೊ ಕೂ ಕೂ ಕೂ ಎಂದು ಮೂರು ಸರತಿ ಹೇಳುವುದು.

ಅಗೇಡಿಗೆ ಅವಲಕ್ಕಿ ಬಾಳೆಹಣ್ಣು ಇಟ್ಟು ಪೂಜೆ ಮಾಡುವುದು..

ನಂತರ , ಹುಲ್ಲು ಕುತ್ರೆ ,ಮೇಟಿ ಕಂಬ , ಗೊಬ್ಬರಗುಂಡಿಗಳಿಗೂ ಹೀಗೇ  ಮಾಡಲುಂಟು.

ನಂತರ ಹೊಲಿರಾಶಿಗೆ ಬೂದಿ ಗೆರೆ ,ದೂಪ ದೀಪ ಹಿಡಿಯುವುದು.

ಮರುದಿನ ಗೋಪೂಜೆ , ಎತ್ತು ಓಡಿಸುವುದು..
ತೋಡಿನಲ್ಲಿ ಸಿಗುವ ಜಾಜಿಕಲ್ಲು ಎಂದು ಕರೆಯಲ್ಪಡುವ ತಿಳಿಗೆಂಪು.ಬಣ್ಣದ ಕಲ್ಲನ್ನು ತೇದಿ , ಗರಟೆಗೆ ಗುಣಾಕಾರದ ರೀತಿಯಲ್ಲಿ ಹಗ್ಗ ಬಿಗಿದು , ಆ ಗರಟೆ ಬಾಯಿಯನ್ನು ತೇದಿದ ಕಲ್ಲಿನ ಬಣ್ಣದಲ್ಲಿ ಅದ್ದಿ ದನ ,ಎತ್ತುಗಳ ಮೈಗೆ ಹಚ್ಚುವುದು ,ಕೋಳೆ ಹೂವಿನ್ನು ತೊಡಿಸುವುದು ,ಅಕ್ಕಿ ಹಿಟ್ಟಿ ನ ಚಪ್ಪೆ ರೊಟ್ಟಿಗಳ ಮಾಲೆಯನ್ನು  ಅವುಗಳ ಕೊರಳಿಗೆ ತೊಡಿಸುವುದು ,ಪೂಜೃಯ ನಂತರ ಅವುಗಳನ್ನು ಬಿಟ್ಟು ಬಿಡುವುದು , ಆಗ ಮಕ್ಕಳು ಅವುಗಳ ಕುತ್ತಿಗೆಯಿಂದ ರೊಟ್ಟಿಗಳನ್ನು ಹರಿದು ತಿನ್ನುವುದು ,ಹಾಗೆ ಮಾಡಿದರೆ ಚರ್ಮದ ಕಾಯಿಲೆ ಬರೋದಿಲ್ಲ ಅಂತ ನಂಬುವುದು....ರಾತ್ರಿ ಹಬ್ಬ ಹಾಡುವುದು..ಮೂರು ದಿನ ಸಂಭ್ರಮ... ಆಚರಣೆ..

ಇದು ನಮ್ಮ ಕಡೆಯ ದಿವಾಳಿ ಹಬ್ಬ , ಶುದ್ದ ಕೃಷಿ ಸಂಸ್ಕೃತಿ.ಬೆಳೆದ ಗದ್ದೆಯನ್ನು ಮರೆಯದಿರುವುದು...

ಕನ್ನಡದಲ್ಲಿ ಷಟ್ಪದಿ ಕಾವ್ಯಗಳು

ಕನ್ನಡದಲ್ಲಿ ಷಟ್ಪದಿ ಕಾವ್ಯಗಳು : - ಷಟ್ಪದಿ ಎನ್ನುವುದು ಆರು ಸಾಲಿನ ಪದ್ಯಜಾತಿಯೊಂದನ್ನು ನಿರ್ದೇಶಿಸುತ್ತದೆ. ಅದರಲ್ಲಿ 1, 2, 4, 5ನೆಯ ಪಾದಗಳು ಒಂದು ರೀತಿಯಾಗಿಯೂ 3, 6ನೆಯ ಪಾದಗಳು ಒಂದು ರೀತಿಯಾಗಿಯೂ ಇರುತ್ತವೆ. ಷಟ್ಪದಿ ಆರು ಬಗೆಯಾಗಿದೆ. ಶರ, ಕುಸುಮ, ಭೋಗ, ಭಾಮಿನಿ, ಪರಿವರ್ದಿನಿ ಮತ್ತು ವಾರ್ಧಕ. ಈ ಷಟ್ಪದಿಗಳು ಮಾತ್ರಾಗಣಗಳಿಂದ ಕೂಡಿದುವಾಗಿರುವುದರಿಂದ ಇವನ್ನು ಮಾತ್ರಾಷಟ್ಪದಿಗಳೆಂದು ಕರೆಯಬಹುದು. ಈ ಎಲ್ಲ ಮಾತ್ರಾಷಟ್ಪದಿಗಳಿಗೆ ಮೂಲವಾಗಿ ಒಂದು ಷಟ್ಪದಿಯಿತ್ತು. ಅದನ್ನು ಮೂಲಷಟ್ಪದಿ ಎಂದೋ ಅಂಶಷಟ್ಪದಿ ಎಂದೋ ಅಥವಾ ತೀ.ನಂ.ಶ್ರೀಕಂಠಯ್ಯನವರನ್ನನುಸರಿಸಿ ಷಟ್ಪದ ಎಂದೋ ನಿರ್ದೇಶಿಸಬಹುದು. ಈ ಮೂಲಷಟ್ಪದಿ ಅಥವಾ ಷಟ್ಪದ ಅಂಶಗಣಗಳಿಂದ ಕೂಡಿದ್ದು, ಈ ಲಕ್ಷಣವನ್ನು ಪಡೆದಿದ್ದಿತು (ವಿ- ವಿಷ್ಣುಗಣ : ರು- ರುದ್ರಗಣ). ವಿ | ವಿ | ವಿ | ವಿ | ವಿ | ವಿ | ರು || ವಿ | ವಿ | ವಿ | ವಿ | ವಿ | ವಿ | ರು || ನಾಗವರ್ಮ, ಜಯಕೀರ್ತಿಗಳು ತಮ್ಮ ಲಕ್ಷಣಗ್ರಂಥಗಳಲ್ಲಿ ಷಟ್ಪದಿಯ ಗುಣ ಲಕ್ಷಣಗಳನ್ನು ವರ್ಣಿಸಿರುವರಲ್ಲದೆ ಅದು ಅನೇಕ ಶಾಸನಗಳಲ್ಲೂ (ಉದಾ: ಅಮ್ಮಿನಬಾವಿ ಶಾಸನ) ಅನೇಕ ಚಂಪು ಕಾವ್ಯಗಳಲ್ಲಿಯೂ (ಉದಾ: ಸುಕುಮಾರ ಚರಿತೆ) ಕಾಣಿಸಿಕೊಂಡಿದೆ. ಚಾಳುಕ್ಯ ಚಕ್ರವರ್ತಿ 3ನೆಯ ಸೋಮೇಶ್ವರನ ಮಾನಸೋಲ್ಲಾಸದಲ್ಲಿಯೂ (ಸು.1129) ಅಂಶಗಣ ಘಟಿತವಾದ ಷಟ್ಪದ ಕಾಣಿಸಿಕೊಳ್ಳುತ್ತದೆ. ಆ ಕಾಲಕ್ಕಾಗಲೇ ಷಟ್ಪದರೂಪವಾದ ಕಥೆಗಳು ಹುಟ್ಟಿದ್ದುವೆಂಬುದಕ್ಕೆ ಆ ಕೃತಿಯಲ್ಲಿಯೇ ಆಧಾರವಿರುವುದಾದರೂ ನಮಗೆ ಷಟ್ಪದರೂಪದ ಯಾವ ಕಾವ್ಯವ ದೊರಕಿಲ್ಲ. ಎಂದರೆ 12ನೆಯ ಶತಮಾನದ ಮಧ್ಯದವರೆಗೆ ದೊರಕಿರುವ ಷಟ್ಪದಗಳೆಲ್ಲವ ಶಾಸನಗಳಲ್ಲಿ, ಕಾವ್ಯಗಳಲ್ಲಿ ಕಾಣಿಸಿಕೊಳ್ಳುವ ಬಿಡಿಪದ್ಯಗಳಾಗಿವೆ.
12ನೆಯ ಶತಮಾನದ ಮಧ್ಯಭಾಗದಲ್ಲಿ ಅಂಶಗಣಗಳ ಸ್ಥಾನದಲ್ಲಿ ಮಾತ್ರಾಗಣ ಗಳನ್ನು ತರುವ ರೂಢಿ ಪ್ರಬಲವಾದ ಮೇಲೆ ಮೂಲಷಟ್ಪದಿ ಅಥವಾ ಷಟ್ಪದ ಆರು ರೀತಿಯ ಮಾತ್ರಾಷಟ್ಪದಿಗಳಾಗಿ ವಿಕಾಸ ಹೊಂದಿತು. ಅವನ್ನೇ ಶರ, ಕುಸುಮ, ಭೋಗ, ಭಾಮಿನಿ, ಪರಿವರ್ಧಿನೀ ಮತ್ತು ವಾರ್ಧಕಗಳೆಂದು ಕರೆದಿರುವುದು. ಆಯಾ ಷಟ್ಪದಿಗಳ ಮೊದಲ ಪಾದದ ಲಕ್ಷಣ ಹೀಗಿರುತ್ತದೆ (ಮೂರನೆಯ ಪಾದ ಅದರ ಒಂದೂವರೆಯಷ್ಟು + 1 ಗುರು ಆಗಿರುತ್ತದೆ).
ಶರ (4 + 4) = 8 ಮಾತ್ರೆಗಳು ಕುಸುಮ (5 + 5) = 10 ಮಾತ್ರೆಗಳು ಭೋಗ (3 + 3 + 3 + 3) = 12 ಮಾತ್ರೆಗಳು ಭಾಮಿನಿ (3 + 4 + 3 + 4) = 14 ಮಾತ್ರೆಗಳು ಪರಿವರ್ಧಿನೀ(4 + 4 + 4 + 4) = 16 ಮಾತ್ರೆಗಳು ವಾರ್ಧಕ (5 + 5 + 5 + 5) = 20 ಮಾತ್ರೆಗಳು ಇವುಗಳಲ್ಲಿ ಭಾಮಿನಿ, ವಾರ್ಧಕಗಳು ಹೆಚ್ಚು ಪ್ರಚಾರದಲ್ಲಿದ್ದು, ಕನ್ನಡದ ಕೆಲವು ಅತ್ಯಂತ ಶ್ರೇಷ್ಠ ಕಾವ್ಯಗಳು ರಚಿತವಾಗಿವೆ. ಷಟ್ಪದಿ ಕಾವ್ಯಗಳ ಸಮಗ್ರ ಇತಿಹಾಸವನ್ನು ಕೊಡುವುದು ಇಲ್ಲಿ ಸಾಧ್ಯವಿಲ್ಲವಾದುದರಿಂದ ಕೆಲವು ಪ್ರಮುಖ ಕಾವ್ಯಗಳ ಪರಿಚಯವನ್ನು ಮಾತ್ರ ಕಾಲಾನುಕ್ರಮದಲ್ಲಿ ಕೊಡಲು ಪ್ರಯತ್ನಿಸಿದೆ.
1224ರ ಹರಿಹರದ ಶಾಸನದಲ್ಲಿ ಪೋಲಾಳ್ವದಂಡನಾಥನೆಂಬಾತ ಹರಿಚಾರಿತ್ರವೆಂಬ ಕಾವ್ಯವನ್ನು ಷಟ್ಪದಿರೂಪವಾಗಿ ರಚಿಸಿದನೆಂದು ಹೇಳಿದೆ. ಆ ಕಾವ್ಯ ದೊರೆತಿಲ್ಲವಾದ್ದರಿಂದ ಅದರ ಬಗ್ಗೆ ಇನ್ನೇನೂ ಹೇಳಲು ಸಾಧ್ಯವಿಲ್ಲ. ಆದಕಾರಣ ಅವನ ಸಮಕಾಲೀನನಾದ ರಾಘವಾಂಕನಿಂದ (ಸು.1230) ಷಟ್ಪದಿಕಾವ್ಯಗಳ ಇತಿಹಾಸವನ್ನು ಆರಂಬಿಸಬಹುದು.
ರಾಘವಾಂಕನ ಒಟ್ಟು ನಾಲ್ಕು ಕಾವ್ಯಗಳು ದೊರಕಿವೆ. ಹರಿಶ್ಚಂದ್ರಕಾವ್ಯ, ಸಿದ್ಧರಾಮಪುರಾಣ, ಸೋಮನಾಥ ಚಾರಿತ್ರ ಮತ್ತು ವೀರೇಶಚರಿತೆ (ಅವನ ಶರಭಚಾರಿತ್ರ ಮತ್ತು ಹರಿಹರ ಮಹತ್ತ್ವಗಳು ಅಲಭ್ಯ). ಇವುಗಳಲ್ಲಿ ಮೊದಲ ಮೂರು ವಾರ್ಧಕಷಟ್ಪದಿಯಲ್ಲಿದ್ದರೆ (5+5+5+5) ವೀರೇಶಚರಿತೆ ಉದ್ದಂಡ ಷಟ್ಪದಿಯಲ್ಲಿದೆ (4+4+4+4) ತನ್ನ ಬಹು ಶ್ರೇಷ್ಠ ಕೃತಿಗಳಿಂದಲೂ ನಮಗೆ ತಿಳಿದಮಟ್ಟಿಗೆ ಮೊದಲ ಷಟ್ಪದಿ ಕಾವ್ಯಗಳನ್ನು ಬರೆದ ಕವಿ ಆಗಿರುವುದರಿಂದಲೂ ರಾಘವಾಂಕ ಷಟ್ಪದಿ ಸಂಪ್ರದಾಯದ ಪ್ರವರ್ತಕನೆಂದು ಹೇಳಬಹುದು. ರಾಘವಾಂಕನ ಅನಂತರ ಷಟ್ಪದಿ ಕಾವ್ಯಗಳು ಹೆಚ್ಚು ಸಂಖ್ಯೆಯಲ್ಲಿ ಕಾಣಿಸಿಕೊಳ್ಳ ಲಾರಂಬಿಸುತ್ತವೆ. ಸು.1250-60ರಲ್ಲಿದ್ದ ಕುಮಾರಪದ್ಮರಸ ರಾಘವಾಂಕನ ಸಮಕಾಲೀನನೂ ತನ್ನ ತಂದೆಯೂ ಆದ ಕೆರೆಯಪದ್ಮರಸನ ಸಂಸ್ಕೃತ ಕೃತಿ ಸಾನಂದಚರಿತೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾನೆ. ಇದರಲ್ಲಿ ಅನೇಕ ಬಗೆಯ ಷಟ್ಪದಿಗಳಿದ್ದರೂ ಕುಸುಮಷಟ್ಪದಿಯ ಬಾಹುಳ್ಯವನ್ನು ಇಲ್ಲಿ ಕಾಣಬಹುದು. ಸು.1275ರಲ್ಲಿದ್ದ ಕುಮುದೇಂದುವಿನ ಕುಮುದೇಂದು ರಾಮಾಯಣದಲ್ಲಿ ಶರ, ಭೋಗಗಳನ್ನು ಬಿಟ್ಟರೆ ಉಳಿದೆಲ್ಲ ಷಟ್ಪದಿಗಳೂ ಬಳಕೆಯಾಗಿವೆ. ಜೈನ ಸಂಪ್ರದಾಯದ ರಾಮಾಯಣದ ಕಥೆ ಇಲ್ಲಿ ಬಂದಿದೆ. ಕವಿ ತನಗಿಂತ ಹಿಂದಿದ್ದ ನಾಗಚಂದ್ರನನ್ನು ಯಥೇಷ್ಟವಾಗಿ ಅನುಕರಿಸಿರುವುದು ಕಂಡುಬರುತ್ತದೆ. ಸು.1369ರಲ್ಲಿದ್ದ ಕವಿಯ ಬಸವಪುರಾಣ ಒಂದು ಪ್ರಮುಖ ಕೃತಿ. ಬಸವಣ್ಣನವರನ್ನು ಕುರಿತಾದ ಕನ್ನಡ ಕಾವ್ಯಗಳಲ್ಲಿ ಇದು ಅತ್ಯಂತ ಜನಪ್ರಿಯವಾದುದು. ವಾಸ್ತವವಾಗಿ ಇದು ಸ್ವತಂತ್ರ ಕೃತಿಯಲ್ಲ. ಪಾಲ್ಕುರಿಕೆ ಸೋಮನಾಥನ ತೆಲುಗು ಬಸವಪುರಾಣದ ಪ್ರಾಮಾಣಿಕವಾದ ಕನ್ನಡ ಅನುವಾದವಷ್ಟೆ. ಇದು ಭಾಮಿನಿ ಷಟ್ಪದಿಯಲ್ಲಿ ರಚಿತವಾದ ಮೊಟ್ಟಮೊದಲ ಸಮಗ್ರ ಗ್ರಂಥ. ಸು.1400ರಲ್ಲಿದ್ದ ಪದ್ಮಣಾಂಕನ ಪದ್ಮರಾಜ ಪುರಾಣವೂ ಒಂದು ಗಮನಾರ್ಹ ಕೃತಿ. ವಾರ್ಧಕಷಟ್ಪದಿಯ ಈ ಕಾವ್ಯಕ್ಕೆ ಕೆರೆಯಪದ್ಮರಸನೇ ಕಥಾವಸ್ತು. ಹೀಗೆ ತಮಗಿಂತ ಹಿಂದೆ ಮನುಷ್ಯರಂತೆಯೇ ಬದುಕಿ, ಶಿವನ ಕೃಪೆಯನ್ನು ಪಡೆದ ಭಕ್ತರ ಕಥೆಗಳನ್ನು ಆರಿಸಿಕೊಂಡು ಕಾವ್ಯಗಳನ್ನು ರಚಿಸುವ ಹರಿಹರನ ಸಂಪ್ರದಾಯ ವಿಶೇಷವಾಗಿ ವೀರಶೈವಕವಿಗಳಲ್ಲಿ ಬೆಳೆದುಕೊಂಡು ಬಂದಿರುವುದು ಒಂದು ಮುಖ್ಯ ಸಂಗತಿಯಾಗಿದೆ. ಕುಮಾರವ್ಯಾಸ (ಸು.1400) ಕನ್ನಡದ ಅತ್ಯಂತ ಶ್ರೇಷ್ಠ ಕವಿಗಳಲ್ಲೊಬ್ಬ. ಇವನ ಕನ್ನಡ ಭಾರತ ಕನ್ನಡದ ಅತಿ ಜನಪ್ರಿಯ ಕಾವ್ಯಗಳಲ್ಲೊಂದು. ವ್ಯಾಸರ ಸಂಸ್ಕೃತ ಮಹಾಭಾರತವನ್ನು ಕನ್ನಡಕ್ಕೆ ಭಾಮಿನಿ ಷಟ್ಪದಿಗಳಲ್ಲಿ ಈತ ಯಶಸ್ವಿಯಾಗಿ ತಂದಿದ್ದಾನೆ. ಕುಮಾರವ್ಯಾಸನ ಪ್ರಭಾವ ಮುಂದಿನ ಕವಿಗಳ ಮೇಲೆ ಅಪರಿಮಿತವಾಗಿದೆ. ಉದಾಹರಣೆಗೆ 1424ರಲ್ಲಿದ್ದ ಭಾಸ್ಕರ ಎಂಬ ಜೈನಕವಿ ತನ್ನ ಜೀವಂಧರಚರಿತೆಯೆಂಬ ಭಾಮಿನಿ ಷಟ್ಪದಿ ಕಾವ್ಯದಲ್ಲಿ ಕುಮಾರವ್ಯಾಸನನ್ನು ಅನೇಕ ಕಡೆಗಳಲ್ಲಿ ಅನುಕರಿಸಿರುವುದು ಸುಸ್ಪಷ್ಟವಾಗಿದೆ.
ಚಾಮರಸನ (ಸು.1430) ಪ್ರಭುಲಿಂಗಲೀಲೆ ಅಲ್ಲಮಪ್ರಭುವನ್ನು ವಸ್ತುವಾಗಿ ಉಳ್ಳ ಶ್ರೇಷ್ಠ ಕಾವ್ಯ. ಇವನು ಭಾಮಿನಿಷಟ್ಪದಿಗಳನ್ನು ಬಳಸುವುದರಲ್ಲಿ, ಸೊಗಸಾದ ರೂಪಕಗಳನ್ನು ನಿರ್ಮಿಸುವುದರಲ್ಲಿ ಕುಮಾರವ್ಯಾಸನನ್ನು ಹೋಲುತ್ತಾನೆ. ಇವನ ಸಮಕಾಲೀನನಾಗಿದ್ದ ಲಕ್ಕಣ್ಣದಂಡೇಶ ಪ್ರೌಢದೇವರಾಯನ ಮಂತ್ರಿಯಾಗಿದ್ದು ಶಿವತತ್ತ್ವ ಚಿಂತಾಮಣಿಯೆಂಬ ವಾರ್ಧಕ ಷಟ್ಪದಿ ಕಾವ್ಯವನ್ನು ಬರೆದಿದ್ದಾನೆ. ಇದರಲ್ಲಿ ಅನೇಕ ಪುರಾತನ ಹಾಗೂ ನೂತನ ಶಿವಭಕ್ತರ ಕಥೆಗಳು ದೊರೆಯುತ್ತವೆ. ಇದೇ ಕಾಲದ ಗುರುಬಸವನ ಏಳುಕಾವ್ಯಗಳು ಸಪ್ತಕಾವ್ಯಗಳೆಂದು ಪ್ರಸಿದ್ಧವಾಗಿವೆ. ಅವುಗಳಲ್ಲಿ ಶಿವಯೋಗಾಂಗಭೂಷಣ ಪರಿವದಿರ್ನಿ ಯಲ್ಲಿಯೂ ವೃಷಭಗೀತೆ ಭೋಗಷಟ್ಪದಿಯಲ್ಲಿಯೂ ಮನೋವಿಜಯಕಾವ್ಯ ಕುಸುಮಷಟ್ಪದಿ ಯಲ್ಲಿಯೂ ರಚಿತವಾಗಿವೆ. ಅದೇ ಕಾಲದ ಬತ್ತಲೇಶ್ವರ ಎಂಬ ವೀರಶೈವ ಕವಿ ಬತ್ತಲೇಶ್ವರ ರಾಮಾಯಣವನ್ನು ಬರೆದಿದ್ದಾನೆ. ಷಟ್ಪದಿ ಕಾವ್ಯಗಳನ್ನು ಬರೆದ ಈ ಶತಮಾನದ ಇತರ ವೀರಶೈವ ಕವಿಗಳು - ಬೊಮ್ಮರಸ (ಸು.1450, ಸೌಂದರ ಪುರಾಣ); ನೀಲಕಂಠಾಚಾರ್ಯ (ಸು.1485, ಆರಾಧ್ಯ ಚಾರಿತ್ರ); ಚತುರ್ಮುಖ ಬೊಮ್ಮರಸ (ಸು.1500, ರೇವಣಸಿದ್ಧೇಶ್ವರ ಕಾವ್ಯ); ಸಿಂಗಿರಾಜ (ಸು.1500, ಅಮಲಬಸವಚಾರಿತ್ರ ಅಥವಾ ಸಿಂಗಿರಾಜ ಪುರಾಣ. ಇದರಲ್ಲಿ ಬಸವಣ್ಣನವರ ಕತೆ ನಿರೂಪಿತವಾಗಿದೆ. ಇದು ಬಸವಣ್ಣನವರ ಪವಾಡಗಳ ಬಗ್ಗೆ ಹೆಚ್ಚು ಒಲವನ್ನು ತೋರಿರುವ ಕೃತಿಯಾಗಿದೆ).
15ನೆಯ ಶತಮಾನದ ಜೈನಕವಿಗಳಲ್ಲಿ ಕಲ್ಯಾಣಕೀರ್ತಿ (1439) ಮತ್ತು ತೆರಕಣಾಂಬಿ ಬೊಮ್ಮರಸ (ಸು.1485) ಉಲ್ಲೇಖಾರ್ಹರು. ಬೊಮ್ಮರಸನ ಸನತ್ಕುಮಾರಚರಿತೆ ಭಾಮಿನಿ ಷಟ್ಪದಿಯ ಕಾವ್ಯ. ವಡ್ಡಾರಾಧನೆಯಲ್ಲಿ ಗದ್ಯರೂಪವಾಗಿ ಕಾಣಿಸಿಕೊಂಡಿದ್ದ ಸನತ್ಕುಮಾರನ ಕಥೆಯನ್ನು ಇಲ್ಲಿ ಕಾವ್ಯರೂಪದಲ್ಲಿ ಸೊಗಸಾಗಿ ನಿರೂಪಿಸಲಾಗಿದೆ.
ಕುಮಾರವ್ಯಾಸನ ಸಂಪ್ರದಾಯದಲ್ಲಿ ರಾಮಾಯಣವನ್ನು ವಸ್ತುವನ್ನಾಗಿ ಮಾಡಿಕೊಂಡು ಕಾವ್ಯರಚನೆ ಮಾಡಿದ ನರಹರಿ ಅಥವಾ ಕುಮಾರವಾಲ್ಮೀಕಿಯ (ಸು.1500) ತೊರವೆ ರಾಮಾಯಣ ಅಂಥ ಉತ್ತಮ ಕಾವ್ಯವಲ್ಲದಿದ್ದರೂ ಕಥಾವಸ್ತುವಿನಿಂದಾಗಿ ಅತ್ಯಂತ ಜನಪ್ರಿಯ ಕೃತಿಗಳಲ್ಲೊಂದಾಗಿದ್ದಿತು.
ಮೂರನೆಯ ಮಂಗರಸನ (1508) ಜಯನೃಪಕಾವ್ಯ ಪರಿವದಿರ್ನಿಯಲ್ಲಿದೆ. ಗುಬ್ಬಿಮಲ್ಲಣಾರ್ಯನ (1513) ಭಾವಚಿಂತಾರತ್ನ ಚಮತ್ಕಾರಗಳಿಂದ ಕೂಡಿದ ಪ್ರೌಢರಚನೆಯ ಕಾವ್ಯ. ಪಂಚಾಕ್ಷರೀ ಮಂತ್ರದ ಮಹಿಮೆಯನ್ನು ಸಾರುವ ಸುಪ್ರಸಿದ್ಧ ಸತ್ಯೇಂದ್ರಚೋಳನ ಕಥೆ ಇದರ ವಸ್ತು. ಇವನ ವೀರಶೈವಾಮೃತ ಮಹಾಪುರಾಣ ದೊಡ್ಡ ಗಾತ್ರದ ವಾರ್ಧಕ ಷಟ್ಪದಿ ಕಾವ್ಯ. ಸು.1550ರಲ್ಲಿದ್ದ ಗುರುಲಿಂಗವಿಭುವಿನ ಭಿಕ್ಷಾಟನ ಚರಿತೆಯಲ್ಲಿನ ಶಿವನ ಅದೇ ಹೆಸರಿನ ಲೀಲೆಯೊಂದನ್ನು ನಿರೂಪಿಸಿದೆ. ಅವನ ಸಮಕಾಲೀನನಾದ ಚನ್ನಬಸವಾಂಕನ ಮಹಾದೇವಿಯಕ್ಕನ ಪುರಾಣದಲ್ಲಿ ಅಕ್ಕಮಹಾದೇವಿಯ ಕಥೆ ಹಲವು ಬಗೆಯ ಷಟ್ಪದಿಗಳಲ್ಲಿ ವರ್ಣಿತವಾಗಿದೆ.
ಈ ಶತಮಾನದ ಪ್ರಮುಖ ಷಟ್ಪದಿ ಕವಿಗಳೆಂದರೆ ಲಕ್ಷ್ಮೀಶ (ಸು.1550), ಕನಕದಾಸ (ಸು.1550) ಮತ್ತು ವಿರೂಪಾಕ್ಷಪಂಡಿತ (1584). ಕುಮಾರವ್ಯಾಸ ಮಹಾಭಾರತದ ಮೊದಲ ಹತ್ತು ಪರ್ವಗಳನ್ನು ಕನ್ನಡಕ್ಕೆ ತಂದಿದ್ದರೆ, ತಿಮ್ಮಣ್ಣ (ಸು.1510) ಅದರ ಮುಂದಿನ ಎಂಟು ಪರ್ವಗಳನ್ನು ಕನ್ನಡದಲ್ಲಿ ನಿರೂಪಿಸಿದ. ಲಕ್ಷ್ಮೀಶನ ಜೈಮಿನಿಭಾರತ ಕೌರವನ ಸಾವಿನ ಬಳಿಕ ಪಾಂಡವರು ರಾಜ್ಯದಲ್ಲಿ ಪ್ರತಿಷ್ಠಿತರಾದ ಮೇಲಿನ ಕಥೆಯನ್ನು ವಸ್ತುವಾಗಿ ಪಡೆದ ಒಂದು ಅತ್ಯಂತ ಜನಪ್ರಿಯ ಕಾವ್ಯ. ಕನಕದಾಸ ಮನೋಹರವಾದ ಕೀರ್ತನೆಗಳನ್ನು ರಚಿಸಿದ ಭಕ್ತಶ್ರೇಷ್ಠ. ಇವನ ರಾಮಧಾನ್ಯಚರಿತೆ ರಾಗಿಯ ಶ್ರೇಷ್ಠತೆಯನ್ನು ಸ್ಥಾಪಿಸಲಿಕ್ಕಾಗಿ ಹುಟ್ಟಿದ ಕಾಲ್ಪನಿಕ ಕಥೆಯೊಂದನ್ನು ಹೇಳುತ್ತದೆ. ಇವನ ನಳಚರಿತ್ರೆ ಕನ್ನಡದ ಜನಪ್ರಿಯ ಕಾವ್ಯಗಳಲ್ಲೊಂದು. ವಾರ್ಧಕ ಷಟ್ಪದಿಗಳನ್ನು ಬರೆಯುವುದರಲ್ಲಿ ಲಕ್ಷ್ಮೀಶನಿಗೆ ಹೆಗಲೆಣೆಯಾದ ಕವಿ ವಿರೂಪಾಕ್ಷಪಂಡಿತ. ಇವನ ಚನ್ನಬಸವಪುರಾಣ ನೆಪಕ್ಕೆ ಮಾತ್ರ ಚನ್ನಬಸವಣ್ಣನ ಕಥೆಯನ್ನು ಆಶ್ರಯಿಸಿದೆ. ಆದರೆ ಅದರ ತುಂಬ ಶಿವನ ಅನೇಕ ಲೀಲೆಗಳು, ವೀರಶೈವ ಧರ್ಮದ ತತ್ತ್ವಗಳು, ಕಾಲಜ್ಞಾನಗಳು ಸೇರಿಕೊಂಡು ಕಾವ್ಯವನ್ನು ಹಿಗ್ಗಿಲವೆ. ಇದೇ ಶತಮಾನದ ಇನ್ನೊಬ್ಬ ಉಲ್ಲೇಖಾರ್ಹನಾದ ಕವಿಯಂದರೆ ಕನ್ನಡ ಭಾಗವತವನ್ನು ಬರೆದ ಚಾಟುವಿಠ್ಠಲನಾಥ (ಸು.1530). ಈ ಕೃತಿ ತೊರವೆ ರಾಮಾಯಣದಂತೆಯೇ ಕೇವಲ ಕಥಾವಸ್ತುವಿನ ಕಾರಣದಿಂದಾಗಿ ಜನಪ್ರಿಯತ್ವವನ್ನು ಪಡೆದಿದ್ದ ಇನ್ನೊಂದು ಕಾವ್ಯ.
16ನೆಯ ಶತಮಾನಕ್ಕೆ ಉತ್ತಮ ಷಟ್ಪದಿ ಕಾವ್ಯಗಳ ಕಾಲ ಮುಗಿಯಿತೆಂದು ಭಾವಿಸಬಹುದು. ರಕ್ಕಸತಂಗಡಿ ಯುದ್ಧದಲ್ಲಿ (ಸು.1565) ವಿಜಯನಗರ ಸಾಮ್ರಾಜ್ಯ ಒಡೆದ ಮೇಲೆ ಸಾಹಿತ್ಯಕ್ಕಿದ್ದ ರಾಜಾಶ್ರಯ ತಪ್ಪಿತು. ಜನಜೀವನ ಅಸ್ತವ್ಯಸ್ತವಾಯಿತು. ಮುಂದೆ ಮೈಸೂರು, ಕೆಳದಿ ಮುಂತಾದ ಅರಸರು ಆಶ್ರಯವನ್ನು ಕೊಟ್ಟರೂ ಒಟ್ಟಿನಲ್ಲಿ ಯಾವುದೇ ರೀತಿಯ ಶ್ರೇಷ್ಠ ಕಾವ್ಯಗಳ ಕಾಲ ಅಲ್ಲಿಗೆ ಮುಗಿಯಿತೆಂದೂ ಅಲ್ಲಿಂದ ಏನಿದ್ದರೂ ಆಧುನಿಕ ಯುಗಕ್ಕೆ ಬಂದಾಗಲೇ ಉತ್ತಮ ಕೃತಿಗಳನ್ನು ಕಾಣಲು ಸಾಧ್ಯವೆಂದೂ ಹೇಳಬಹುದು. 17ನೆಯ ಶತಕದಿಂದೀಚೆಗೆ ಹುಟ್ಟಿದ ಕೆಲವು ಕೃತಿಗಳು ಹೀಗಿವೆ: ಸು.1606ರಲ್ಲಿದ್ದ ಎಳಂದೂರ ಹರೀಶರನು ಪ್ರಭುದೇವರ ಪುರಾಣವನ್ನು ಬರೆದಿದ್ದಾನೆ. ಇದರಲ್ಲಿ ಅಲ್ಲಮಪ್ರಭುವಿನ ಕಥೆಯ ಜೊತೆಗೆ ಬೇರೆ ಭಕ್ತರ ಕಥೆಗಳೂ ದೊರಕುತ್ತವೆ. ಸು.1650ರಲ್ಲಿದ್ದ ಸಿದ್ಧನಂಜೇಶ ಅಥವಾ ಚಿಕ್ಕ ನಂಜೇಶನ ಎರಡು ವಾರ್ಧಕ ಷಟ್ಪದಿ ರೂಪದ ಕೃತಿಗಳಿವೆ: ಗುರುರಾಜ ಚಾರಿತ್ರ ಮತ್ತು ರಾಘವಾಂಕ ಚರಿತೆ. ಕವಿ ರಾಘವಾಂಕನ ಬಗ್ಗೆ ನಮಗೆ ತಿಳಿದಿರುವ ಸಂಗತಿಗಳಿಗೆ ಇದು ಮುಖ್ಯ ಆಕರ. ಜೊತೆಗೆ, ಸಿದ್ಧನಂಜೇಶ ರಾಘವಾಂಕನ ಎಲ್ಲ ಕಾವ್ಯಗಳ ಸಾರಾಂಶವನ್ನು ಕೊಡುವಂತೆ ಹರಿಹರಮಹತ್ತ್ವ ಎಂಬ ಕೃತಿಯ ಸಾರಾಂಶವನ್ನೂ ಕೊಟ್ಟಿದ್ದಾನೆ. ರಾಘವಾಂಕನ ಈ ಕೃತಿ ಇಂದು ಅಲಭ್ಯ ವಾಗಿದೆಯಾದರೂ ಅದರ ಕಥಾ ಸಾರಾಂಶ ನಮಗೆ ದೊರಕುವುದರಿಂದಾಗಿ, ಹರಿಹರನ ವೈಯಕ್ತಿಕ ಜೀವನದ ಕೆಲವಾದರೂ ಪ್ರಮುಖ ಘಟನೆಗಳು ತಿಳಿದುಬರುವುದು ಇದರಿಂದ ಸಾಧ್ಯ ವಾಗಿದೆ. ಗೋವಿಂದ (ಸು. 1650, ನಂದಿ ಮಾಹಾತ್ಮ್ಯ), ಲಕ್ಷ್ಮಕವಿ(1723, ಭಾರತ), ಬಬ್ಬೂರುರಂಗ (1750, ಅಂಬಿಕಾ ವಿಜಯ), ಕೋನಯ್ಯ (ಸು.1750, ಗಯಚರಿತ್ರೆ)- ಇವರೆಲ್ಲರೂ ಕುಮಾರ ವ್ಯಾಸನಿಂದ ಪ್ರಭಾವಿತರಾದ ಕವಿಗಳು. ಸಹ್ಯಾದ್ರಿ ಖಂಡ ತೀರ್ಥಕ್ಷೇತ್ರಗಳ ಮಹಿಮೆಯನ್ನು ಭಾಮಿನಿಷಟ್ಪದಿಯಲ್ಲಿ ನಿರೂಪಿಸುವ ಒಂದು ಬೃಹತ್ಕಾವ್ಯ. ಮಹಲಿಂಗರಂಗನ (ಸು.1675) ಅನುಭವಾಮೃತ ಅದ್ವೈತ ತತ್ತ್ವಗಳನ್ನು ಸುಲಭಶೈಲಿಯಲ್ಲಿ ಬೋದಿಸುವ ಒಂದು ಜನಪ್ರಿಯ ಕೃತಿ. ದ್ವೈತ ತತ್ತ್ವಗಳನ್ನು ಬೋದಿಸುವ ಜಗನ್ನಾಥದಾಸರ (ಸು.1775) ಹರಿಕಥಾಮೃತಸಾರ ಇನ್ನೊಂದು ಜನಪ್ರಿಯ ಗ್ರಂಥವಾಗಿದೆ.
ಷಟ್ಪದಿ ಗ್ರಂಥಗಳ ಮಾಲಿಕೆಯಲ್ಲಿ ಕೊನೆಯದಾಗಿ ಮುದ್ದಣನ (1869-1901) ಹೆಸರನ್ನು ಹೇಳಬಹುದು. ಇವನು ಹಳೆಯ ಮತ್ತು ಹೊಸ ಸಾಹಿತ್ಯಗಳ ಸಂದಿಕಾಲದಲ್ಲಿದ್ದ ಕವಿ. ಇವನ ಗದ್ಯಕೃತಿಗಳಾದ ರಾಮಾಶ್ವಮೇಧ ಮತ್ತು ಅದ್ಭುತರಾಮಾಯಣಗಳು ಪ್ರಖ್ಯಾತವಾಗಿವೆ. ಅಷ್ಟೊಂದು ಪ್ರಸಿದ್ಧವಲ್ಲದ ಇವನ ಕೃತಿ ಶ್ರೀರಾಮಪಟ್ಟಾಬಿಷೇಕ ವಾರ್ಧಕದಲ್ಲಿ ರಚಿತವಾಗಿರುವ ಸುಂದರ ಕಾವ್ಯ. ಮುದ್ದಣನಾದ ಮೇಲೂ ಹಲವರು ಷಟ್ಪದಿ ಕಾವ್ಯಗಳನ್ನು ಮುಂದುವರಿಸಿದ್ದುಂಟು. ಬಹು ಹಿಂದಿನಿಂದ ಷಟ್ಪದಿ ಕಾವ್ಯಗಳು ಅತ್ಯಂತ ಜನಪ್ರಿಯವಾಗಿವೆ. ರಾಘವಾಂಕನ ಹರಿಶ್ಚಂದ್ರಕಾವ್ಯ, ಕುಮಾರವ್ಯಾಸ ಮತ್ತು ಲಕ್ಷ್ಮೀಶರ ಭಾರತಗಳು, ಕನಕದಾಸರ ನಳಚರಿತ್ರೆ ಇವು ಇದಕ್ಕೆ ಉದಾಹರಣೆಗಳು. ಇವನ್ನು ಇಂದಿಗೂ ಗಮಕಿಗಳು ವಾಚನಮಾಡಿ ಶ್ರೋತೃಗಳನ್ನು ತಣಿಸುತ್ತಾರೆ. ಇವು ಕವಿತೆಯ ದೃಷ್ಟಿಯಿಂದಲೂ ಉನ್ನತಮಟ್ಟದವು ಎಂಬುದರಲ್ಲಿ ಸಂದೇಹವಿಲ್ಲ. ಇವುಗಳ ವಸ್ತು ಸುಪ್ರಸಿದ್ಧ; ಭಾಷೆ ಸರಳ, ಜೊತೆಗೆ ರಾಗವಾಗಿ ಹಾಡಲೂ ಅನುಕೂಲ. ಅನುಭವಾಮೃತದಂಥ ವೇದಾಂತ ಗ್ರಂಥವ ಷಟ್ಪದೀರೂಪವಾಗಿದೆಯೆಂಬುದನ್ನು ಇಲ್ಲಿ ಸ್ಮರಿಸಬಹುದು.
20ನೆಯ ಶತಮಾನದಲ್ಲಿ ಷಟ್ಪದಿ ರಚನೆಯನ್ನು ಬಹುಯಶಸ್ವಿಯಾಗಿ ಬಳಸಿಕೊಂಡವರೆಂದರೆ ಜಿ.ಪಿ.ರಾಜರತ್ನಂ. ಇವರು ತಮ್ಮ ಮಹಾಕವಿ ಪುರುಷ ಸರಸ್ವತಿ ಎಂಬ ವಿಡಂಬನ ಗ್ರಂಥದಲ್ಲಿ ಹೊಸ ಮಾದರಿಯಲ್ಲಿ ಷಟ್ಪದಿ ರಚನೆಯನ್ನು ಕನ್ನಡಾಂಗ್ಲಭಾಷಾ ಮಿಶ್ರಣದಲ್ಲಿ ವಿಶಿಷ್ಟವಾಗಿ ಬಳಸಿಕೊಂಡಿದ್ದಾರೆ. ಮಹಾಕವಿ ಪುರುಷ ಸರಸ್ವತಿಯ ಗುಣಕಥನ ಮಾಡುವಾಗಲಾಗಲಿ, ಕುಕವಿನಿಂದೆ, ಸತ್ಕವಿಪ್ರಶಂಸೆ ಮಾಡುವಾಗಲಾಗಲಿ, ಹಾರ್ಮೋನಿಯಂ ಹರಣದಂತೆ ಕರ್ಣಕಥೆಯನ್ನು ಹೇಳುವಾಗಲಾಗಲಿ ತನಿಯಾದ ಹಾಸ್ಯ ವ್ಯಂಗ್ಯ ಬಹು ಸಹಜವಾಗಿ, ಅದ್ಭುತವಾಗಿ ಮೂಡಿನಿಂತಿದೆ. 

Sunday 4 November 2018

9 successful factor s for personal- pornima kulkarni

9-SUCCESS FACTORS FOR PERSONAL GROWTH (MOVING FORWARD TO ACHIEVE YOUR BEST LIFE).

'Success is No Accident. It's Hard Work, Perseverance, Learning, Studying, Sacrifice & Most of All, Love of what You're doing/learning to do'. - Pele..

There're 9 Success factors that you must know in order to start moving forward in life.
Each one of these success factors has been proven to be critical to the achievement of the best life possible for any given Person. By systematically implementing One/More of these success factors into Your Life, You can put Your foot on the accelerator of Your Own Career & Achieve the best life for Yourself:
1.EDUCATION: In Our Society the highest Paid People are those who know more than the average. They know more of the Critical Facts, Ideas & Information than the average person in their field. As a result they can make a more valuable contribution to a knowledge-based society & live the best life possible. They are valued more respected more & ultimately paid more Money & Promoted more often.
The rule is that 'To Earn More, You Must Learn More'. If You want to increase Your level of income & achieve the best life for Yourself, You must increase Your level of intellectual capital & thereby the value of the knowledge component of what You're doing.
2.SKILL: You can use to achieve the best life possible is simply skill. Your level of ability in Your field will determine the quality & quantity of Your Results. The better You get at what You do the easier it's for You to start moving forward to get a particular level of results.
As You increase Your skill through study & experience You get better & better at doing the small things that increase the speed & predictability of Your Results.
3.CONTACTS: Moving Forward & Schieving the best life is by developing an ever-widening circle of contacts.
You'll find that every major change in Your life is accompanied by A Person/Persons who either opens/closes doors for You. The possibility of the best life for You'll be determined by the Number of People who Know You, Like You & Who are willing to Help You.
In order to broaden Your network of contacts You must network continually at every opportunity. There seems to be a direct Relationship between the Number of People You know & How Successful You're.

4.MONEY: Having Money in the Bank gives You greater freedom & the ability to take advantage of opportunities when they come along. If You're Broke/In debt, You've very 5 options open to You.
One of the most important things I ever learned in life is that You're only as free as Your options. If You've no options You've no freedom. If You're stuck in a Dead-End job that You cann't leave because You've no Money set aside You've put a brake on Your Potential. You're locked in place & have no option for moving forward. You can end up spinning Your Wheels, Losing Months & Years of Your time by the very fact that You've no choice but to accept whatever is being handed to You.
5.GOOD WORK HABITS: The Success factors that enables You to get far more done in a shorter period of time is simply Good Work habits.
Your Ability to Increase Your ROTI or 'Return On Time Invested' can enable You to accomplish vastly more in a shorter period of time than Another Person who's disorganized & sloppy.
Developing Good Work habits requires that You think before acting. You make a list & set priorities on the list before You begin. Good work habits require that You consider the Likely Consequences, Positive/Negative of what You're doing.
6.POSITIVE MENTAL ATTITUDE: Your Career & Life is to reduce the amount of time that it takes You to achieve Your Goals is by developing a positive Mental Attitude.
A Positive Mental Attitude is very much a decision that You make. Remember You become what You do. If You engage in the same activities that Positive, Confident, Optimistic People engage in You'll eventually become one of them & live Your best Life possible.
Anyone can remain positive when things are going well. It's Your ability to look for the Good in every situation that You see positive & start moving forward in Life.

7.POSITIVE IMAGE: You can incorporate into Your Lifestyle &1 that can help You achieve the best life for Yourself is the development of a Positive Image.
People judge You by the way You look on the outside by the way You appear. The fact is that You judge everyone else by the way they look on the outside as well. Taking time to Present an attractive image in Your Person, Your Clothing, Your Grooming & Your Accessories can have an inordinate impact on the doors that open for You & People who're willing to help You start moving forward in Your Life.
8.CREATIVITY: Creativity is wonderful way to start moving forward in life & to increase the speed at which You achieve Your Goals. Creativity is something that requires that You continually look for Better, Faster, Easier, Cheaper ways to get the job done. Remember 1Good Idea is all You need to start a fortune.
9.CHARACTER: Perhaps the most important of the Success factors to accelerating Your Life is Your Character.
Self-Discipline combined with Honesty will open countless doors for You.
Trust is the foundation of All Relationships. When People know You & believe in You're convinced that they can trust You to keep Your Word & Do what You say You'll do they'll feel that they are far more likely to get the things they want through You to get the things they want Faster, Sooner, Easier & with Greater Certainty..
- pornima kulkarni

ಸುಳ್ಳೂರ ಶಾಲೆಯಲ್ಲಿ ಪಾಲಕರಿಂದ ಸ್ವಚ್ಛತಾ ಸಪ್ತಾಹ

ಊರಿನ ಗ್ರಾಮಸ್ಥರಿಂದ ಸುಳ್ಳೂರು ಶಾಲೆಯಲ್ಲಿ ಸ್ವಚ್ಛತಾ ಸಪ್ತಾಹ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಳೂರಿನ ಹಿರಿಯ ವಿದ್ಯಾರ್ಥಿಗಳು , ಪಾಲಕರೆಲ್ಲರೂ ಸೇರ...