ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Monday 20 May 2019

ಗಜಲ್ ಬಗ್ಗೆ ಒಂದಿಷ್ಟು ಮಾಹಿತಿ

                  ಗಝಲ್ ರೀತಿ-ನೀತಿ.
                  *****************

ಗಜಲ್ ರಚನೆಯಲ್ಲಿ ನಾಲ್ಕು ಅಂಗಗಳಿರುತ್ತವೆ.ಒಂದು ಮತ್ಲಾ.ಎರಡು ಕಾಫಿಯಾ.ಮೂರು ರದೀಫ್.ನಾಲ್ಕು ಮಕ್ತಾ.ಗಜಲ್ ದ್ವಿಪದಿಯಲ್ಲಿರುತ್ತದೆ.ಒಂದು ಗಜಲ್ ನಲ್ಲಿ ಐದರಿಂದ ಇಪ್ಪತ್ತೈದವರೆಗೆ ದ್ವಿಪದಿಗಳಿರಬಹುದೆಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ.

                             ಮತ್ಲಾ:
ಗಜಲಿನ ಮೊದಲ ದ್ವಿಪದಿಗೆ ಮತ್ಲಾ ಎನ್ನುತ್ತಾರೆ.ಇದರ ಎರಡೂ ಚರಣಗಳಲ್ಲಿ ಕಾಫಿಯಾ ಮತ್ತು ರದೀಫ್ ಇರಲೇಬೇಕು.ಇವರಡೂ ಪ್ರಾಸಗಳು.ಇವು ಒಂದರ ಮುಂದೆ ಒಂದು ಬರುತ್ತವೆ.
                             ಕಾಫಿಯಾ:
ಇದು ಒಂದು ಪ್ರಾಸ.ಹಿಂದೆ ಬರುವುದು ಎಂದು ಶಬ್ದಕೋಶದ ಅರ್ಥ.ನಿಶ್ಚಿತವಾದ ಅಕ್ಷರಗಳು ಬೇರೆ ಬೇರೆ ಶಬ್ದಗಳಲ್ಲಿ ಮತ್ಲಾದ ಎರಡೂ ಚರಣದ ಅಂತ್ಯದಲ್ಲಿ ಪುನ: ಪುನ: ಬರುವುದಕ್ಕೆ ಕಾಫಿಯಾ ಎನ್ನುತ್ತಾರೆ.
                                ರದೀಫ್:
ಇದು ಒಂದು ಪ್ರಾಸ. ಅರ್ಥವುಳ್ಳ ಶಬ್ದ.ಪೂರ್ಣ ಅರ್ಥ ಕೂಡುವ ಶಬ್ದಗಳ ಗುಂಪು ಮತ್ತು ಅಕ್ಷರ-ಇವು ಪುನ: ಪುನ: ನಿಶ್ಚಿತವಾಗಿ ಕಾಫಿಯಾದ ಬಳಿಕ ಬರುವುದಕ್ಕೆ ರದೀಫ್ ಎನ್ನುತ್ತಾರೆ. ರದೀಫ್ ಗಜಲಿಗೆ ರಮ್ಯತೆಯನ್ನೂ ಕಾಂತಿಯನ್ನೂ ತಂದುಕೊಡುತ್ತಾದೆ.ಇದು ಲಾಲಿತ್ಯವಿದಷ್ಟೂ ಸಂಗೀತಮಯವಾಗುತ್ತದೆ.
                                     ಮಕ್ತಾ:
ಗಜಲಿನ ಕೊನೆಯ ದ್ವಿಪದಿಗೆ ಮಕ್ತಾ ಎನ್ನುತ್ತಾರೆ.ಇದರಲ್ಲಿ ಕವಿ ತನ್ನ ಕಾವ್ಯನಾಮವನ್ನು  ಸೇರಿಸಿ ಗಜಲ್ ಮುಕ್ತಾಯ ಮಾಡುತ್ತಾರೆ.ಕೆಲವು ಕವಿಗಳು ಗಜಲ್ ನಲ್ಲಿ ತಮ್ಮ ಕಾವ್ಯನಾಮವನ್ನು ಬಳಸದಿರುವುದು ಕಂಡುಬರುತ್ತದೆ.

ಒಂದು ಗಝಲ್ ನ ಉದಾಹರಣೆ:

" ಏರಿಳಿಗಳೇನಿದ್ದುವೋ ದಾರಿಯಲಿ ಯೋಚನೆ ಮಾಡಲೇ ಇಲ್ಲ.
ಪಯಣ ಕೈಕೊಂಡ ಬಳಿಕೊಮ್ಮೆಯೂ ಹಿಂದಿರುಗಿ ನೋಡಲೇ ಇಲ್ಲ"

ಮಾಡಲೇ, ನೋಡಲೇ ಈ ಪದಗಳೇ ಕಾಫಿಯಾಗಳು.
ಇಲ್ಲ-- ಎನ್ನುವ ಪದವೇ ರದೀಫ್ ..........

                           - - ಅಲ್ಲಾಗಿರಿರಾಜ್ ಕನಕಗಿರಿ.
                 ಅವರ 'ನೂರ್ ಗಜಲ್' ಪುಸ್ತಕದಿಂದ
              .... ಸಂಗ್ರಹ : ಗಜಲ್ ಲೋಕ ಗಜಲ್.

Saturday 4 May 2019

ದಿನಪತ್ರಿಕೆ ಗಳ ಲಿಂಕ್ ಫೈಲ್

🙏1⃣1⃣➖0⃣4⃣➖1⃣9⃣🙏
*🌹ಗುರುವಾರದ ದಿನಪತ್ರಿಕೆಗಳು*
*🗞ಕನ್ನಡಪ್ರಭ* bit.ly/2GY9skG
*🗞ವಿಜಯ ಕರ್ನಾಟಕ* bit.ly/2LdcS2E
*🗞ವಿಜಯವಾಣಿ* bit.ly/2KAVR1f
*🗞ಸಂಯುಕ್ತ ಕರ್ನಾಟಕ* bit.ly/2Lbb36j
*🗞ಪ್ರಜಾವಾಣಿ*  bit.ly/2Gt2Nev
*🗞ಉದಯವಾಣಿ*  bit.ly/2IvUx31
*🗞ವಾರ್ತಾಭಾರತಿ* bit.ly/2rR08GV
*🗞The Hindu* bit.ly/2Iz3m8s
*🗞Indian Express* bit.ly/2KzfLtl
*🗞Times of India* bit.ly/2wRoTHY
➖➖➖➖➖➖➖➖➖➖➖
*🌹☘ಇಂದಿನ ಪ್ರಮುಖ ಸುದ್ದಿಗಳನ್ನು ಓದಲು/ PDF ಡೌನ್‌ಲೋಡಗಾಗಿ*
https://www.educationfest.ml/2019/04/11-04-2019-educational-employment.html

*2018-19 Income tax Calculator*
http://bit.ly/2P7MjNb
➖➖➖➖➖➖➖➖➖➖➖
*🌹☘PLI: ಪೋಸ್ಟಲ್ ಲೈಫ್ ಇನ್ಸುರನ್ಸನ ಕಂತುಗಳನ್ನು ಆನ್ ಲೈನ್ ನಲ್ಲಿ ಭರ್ತಿ ಮಾಡುವ ವಿಧಾನ, ಚಿತ್ರ ಸಹಿತ*
👇🏿👇🏿👇🏿👇🏿👇🏿👇🏿👇🏿👇🏿👇🏿👇🏿
https://www.educationfest.ml/2019/04/how-to-pay-postal-life-insurance-pli.html
➖➖➖➖➖➖➖➖➖➖➖
*🌹☘ಆರೋಗ್ಯ ಕರ್ನಾಟಕ ಯೋಜನೆಯ ಸಂಪೂರ್ಣ ಮಾಹಿತಿ, ಅನುಷ್ಠಾನ ಮಾರ್ಗಸೂಚಿ*
👇🏿👇🏿👇🏿👇🏿👇🏿👇🏿👇🏿👇🏿👇🏿👇🏿
https://www.educationfest.ml/2019/04/complete-details-registration-and.html
➖➖➖➖➖➖➖➖➖➖➖
*🍀🌺190 ಸಿವಿಲ್ ಪೊಲೀಸ್ ಸಬ್ - ಇನ್ಸ್ಪೆಕ್ಟರ್ (ಪುರುಷ ಮತ್ತು ಮಹಿಳಾ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ Interview ದಿನಾಂಕವನ್ನು ಪ್ರಕಟಿಸಲಾಗಿದ್ದು, ಏಪ್ರಿಲ್ 24ರಿಂದ ಸಂದರ್ಶನ ಪ್ರಾರಂಭಗೊಳ್ಳಲಿದೆ.!!*
https://www.educationfest.ml/2019/04/police-sub-inspector-civil-posts.html
➖➖➖➖➖➖➖➖➖➖
*🍀🌺ಬೇಸಿಗೆ ಸಂಭ್ರಮ 2019ರ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಶಿಕ್ಷಕರು ಕೈಗೊಳ್ಳಬೇಕಾದ ಮೌಲ್ಯಮಾಪನ ವಹಿಗಳು,ನಮೂನೆಗಳು ಮತ್ತು ಮಾರ್ಗದರ್ಶಿ ಕೈಪಿಡಿ ಇಲಾಖೆಯಿಂದ ಪ್ರಕಟ*
https://www.educationfest.ml/2019/04/besige-sambhrama-2019-assessment-tools.html
*🌺🍀ಬೇಸಿಗೆ ಸಂಭ್ರಮ 2019 ರ ಐದು ವಾರಗಳ ಪೂರ್ಣ ಸಾಹಿತ್ಯವನ್ನು ಡೌನ್‌ಲೋಡ್ ಮಾಡಲು*
https://www.educationfest.ml/2019/04/literature-of-besige-sambhrama-2019.html
*🌹☘ಅಣಕು ಮತದಾನವನ್ನು 90 ನಿಮಿಷ ಮುಂಚಿತವಾಗಿ ಮಾಡುವಂತೆ ಚುನಾವಣಾ ಆಯೋಗದ ಆದೇಶ*
https://www.educationfest.ml/2019/04/lokhsabha-elections-2019-election.html
*🌹☘VVPATಗಳಲ್ಲಿನ ಬ್ಯಾಟರಿ ಬಳಕೆಯ ಕುರಿತು ಚುನಾವಣೆ ಆಯೋಗದ ಸೂಚನೆಗಳು*
https://www.educationfest.ml/2019/04/instructions-to-use-of-battery-pack-in.html
*🍀🌺10611 ಪದವೀದರ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಹೈದರಾಬಾದ್ ಕರ್ನಾಟಕ ಅಭ್ಯರ್ಥಿಗಳಿಗೆ ಸೂಚನೆಗಳು*
https://www.educationfest.ml/2019/04/instructions-to-hyderabad-karnataka.html
*🌹☘ಪ್ರಧಾನಮಂತ್ರಿ ನಗರ ಅವಾಸ ಯೋಜನೆಯಡಿ ₹2.67 ಲಕ್ಷ ರೂಪಾಯಿಗಳ ಸಬ್ಸಿಡಿ ಇದ್ದು, ಸರಕಾರಿ ನೌಕರರು ಇದರ ಪ್ರಯೋಜನ ಪಡೆದು ಸ್ವಂತ ಮನೆ ಹೊಂದಬಹುದು*
https://www.educationfest.ml/2019/04/pradhanmantri-urban-awas-yojana.html
*🌺🍀ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಶಿಕ್ಷಕರ ವರ್ಗಾವಣಾ ನಿಯಂತ್ರಣ) ತಿದ್ದುಪಡಿ ಅಧಿನಿಯಮ 2018ಕ್ಕೆ ನಿಯಮಗಳನ್ನು ರಚಿಸುವ ಬಗ್ಗೆ*
(ಆದೇಶ ದಿ: 09-04-2019)
https://www.educationfest.ml/2019/04/letter-about-rules-of-teachers-transfer.html
*🌹☘FSSAI: Food safety and standards of India ರಲ್ಲಿ 275 ಕ್ಕಿಂತ ಹೆಚ್ಚು ಹುದ್ದೆಗಳ ನೇಮಕಾತಿ*
https://www.educationfest.ml/2019/04/fssai-more-than-275-posts-recruitment.html
*🌹☘ಪ್ರತಿ ಸರಕಾರಿ ನೌಕರರು ತಮ್ಮ 2017-18 ನೇ ಸಾಲಿನ GPF statement ನ್ನು 👇🏿 ಈ ಕೆಳಗಿನ ಲಿಂಕ್ ಬಳಿಸಿ ಪಡೆದುಕೊಳ್ಳಬಹುದು*
https://www.educationfest.ml/2019/03/get-your-2017-18-gpf-statement-for.html
*🌹🍀ಗೃಹ ಸಾಲ, ವಾಹನ ಸಾಲ ಇತ್ಯಾದಿ ಸಾಲದ ಪ್ರತಿ ತಿಂಗಳ ಕಂತು EMI ಹಾಗೂ ಬಡ್ಡಿಯನ್ನು (Interest) ಲೆಕ್ಕ ಹಾಕಲು 👇🏿ಈ ಕ್ಯಾಲ್ಕುಲೇಟರ್ ಬಳಸಿ*
https://www.educationfest.ml/2018/11/emi-calculator-calculate-your-home-loan.

Friday 12 April 2019

ಮೇ 10 . ರೇಡಿಯೋ ನಾಟಕ

https://drive.google.com/file/d/1dzi0SJ0S0V6Okebs7iUD1LJ2rGgL3-se/view?usp=drivesdk.

ಈ ಲಿಂಕ ಕ್ಲಿಕ್ ಮಾಡಿ. ನಮ್ಮ ಶಾಲಾ ಮಕ್ಕಳ ರೇಡಿಯೋ ನಾಟಕ. ಮೇ -10 .   ನಾಟಕವನ್ನು ಅಲಿಸಬಹುದು.
      ಇದು ಮಕ್ಕಳ ಶೈಕ್ಷಣಿಕ ಸಮಸ್ಯೆ, ರಿಸಲ್ಟ್ ಫೋಬಿಯ, ಮಕ್ಕಳ ಮೇಲೆ ಪಾಲಕರ ಮಾನಸಿಕ ಒತ್ತಡ, ಮಕ್ಕಳ ಹುಕ್ಕುಗಳ ಉಲ್ಲಂಘನೆ  ಮತ್ತಿತರ ವಿಷಯ ವಸ್ತುವಿನ ರಂಗ ಪಠ್ಯವಾಗಿದೆ.

Tuesday 2 April 2019

ಸರ್ಕಾರಿ ಶಾಲಾ ಸಬಲೀಕರಣಕ್ಕೆ ಪಾಲಕರ ಪಾತ್ರ

ಸರ್ಕಾರಿ ಶಾಲಾ ಸಬಲೀಕರಣಕ್ಕೆ ಪಾಲಕರ ಪಾತ್ರ...

ಪ್ರಮುಖವಾದ ಸರಳ ಮಾರ್ಗಗಳು..

1.ಜೂನ್ ತಿಂಗಳಲ್ಲೇ ತಮ್ಮ ಮಕ್ಕಳಿಗೆ  ಶಾಲಾ ಪಠ್ಯ ಪುಸ್ತಕ ಪೂರೈಕೆ ಆಗಿದೆಯೇ.. ಎಂದು ಶಾಲೆಗೆ ಭೇಟಿ ನೀಡಿ ಖಾತರಿ ಮಾಡಿಕೊಳ್ಳುವುದು.. ಇರದಿದ್ದರೆ ಶೀಘ್ರ ಪೂರೈಸುವಂತೆ ಮೇಲಧಿಕಾರಿಗಳಿಗೆ ಗಮನಕ್ಕೆ ತರುವುದು.

2. ಪ್ರತಿ ತಿಂಗಳಿಗೊಮ್ಮೆ ಆದರೂ ಎಸ್ ಡಿ ಎಂ ಸಿ ಸಭೆ ಸೇರಿ ಶಾಲಾ ಅನುದಾನ ನಿರ್ವಹಣೆ , ಸಮರ್ಪಕ ಬಳಕೆ ,ಶಿಕ್ಷಕರ ಕೊರತೆ ಮತ್ತಿತರ ಸಮಸ್ಯೆ ಕುರಿತು ಆಲಿಸಿ ಶಿಕ್ಷಕರು ಗರಿಷ್ಠ ಸೇವೆ ಸಲ್ಲಿಸುವಂತೆ ಅವರನ್ನು ಪ್ರೋತ್ಸಾಹಿಸಿ ಸಹಕರಿಸುವುದು.

3.  ಶಾಲೆಯಲ್ಲಿ ಕೊಠಡಿ , ಶೌಚಾಲಯ  ಮತ್ತಿತರ ಭೌತಿಕ ಸೌಲಭ್ಯ ಇವೆಯಾ ...? ಇಲ್ಲವಾದರೆ ಅವನ್ನು ಪಡೆಯುವ ಮಾರ್ಗ ಕುರಿತು ಯೋಜನೆ ಹಮ್ಮಿಕೊಳ್ಳುವುದು.

4.ಸರ್ಕಾರದ ಸೌಲಭ್ಯ ಗಳು , ಬಿಸಿಯೂಟ ಮತ್ತಿತರ ಯೋಜನೆಗಳು ನಿಮ್ಮ ಮಕ್ಕಳಿಗೆ ಸರಿಯಾಗಿ ಸಿಗುತ್ತಿವೆಯಾ.. ಎಂದು ಶಾಲೆಗೆ ಬಂದು ಆಗೀಗ ವಿಚಾರಿಸುವುದು.

5.ಶಾಲಾ ಸಿಬ್ಬಂದಿ ಹಾಜರಾತಿ , ಶಿಕ್ಷಕರ ರಜೆಯ ಅನುಪಸ್ಥಿತಿಯ ಅವಧಿಯಲ್ಲಿ ಬದಲಿ ವ್ಯವಸ್ಥೆ ಬಗ್ಗೆ  ಸಂಬಂಧಿಸಿದವರ ಗಮನಕ್ಕೆ ತರುವುದು.

6.ಶಾಲಾ ಕಾರ್ಯಕ್ರಮಗಳು , ರಾಷ್ಟ್ರೀಯ ಹಬ್ಬಗಳಿಗೆ ಭಾಗವಹಿಸುವುದು.

7.ಶಾಲಾ ಸಿಬ್ಬಂದಿಗೆ ಸರಿಯಾದ  ಗೌರವ , ಮಾರ್ಗದರ್ಶನ, ಸಲಹೆ ನೀಡಿ ಹೆಚ್ಚು ಸೇವೆ ಸಲ್ಲಿಸುವಂತೆ ಪೂರಕ ವಾತಾವರಣ ನಿರ್ಮಿಸುವುದು.

8.ಸಮುದಾಯವು  ಶಾಲೆಯನ್ನು  ವಿದ್ಯಾಲಯದಂತೆ  ಗೌರವದಿಂದ ಕಾಪಾಡುವುದರ ಜೊತೆಗೆ  ಸಾರ್ವಜನಿಕ ಅಸ್ತಿಯಾದ ಶಾಲೆಯ ರಕ್ಷಣೆ ಕುರಿತು ಕಾಳಜಿ  ವಹಿಸಬೇಕು.

9.ನಿಮ್ಮ ಮಕ್ಕಳು ನಿರಂತರವಾಗಿ ಹಾಜರಾಗುವಂತೆ ನೋಡಿಕೊಳ್ಳುವುದಲ್ಲದೆ ಅವರ ಓದು, ಬರಹ ಗಮನಿಸುತ್ತಾ ಮಕ್ಕಳ ಪ್ರಗತಿ ವರದಿ ಪರಿಶೀಲಿಸಲು ಆಗಾಗ್ಗೆ ಶಿಕ್ಷಕರನ್ನು ಭೇಟಿ ಮಾಡುತ್ತಿರಬೇಕು.

ಈ ಎಲ್ಲ ಕಾರ್ಯಗಳನ್ನು ಪಾಲಕರು ಆಗೀಗ ನಿರ್ವಹಿಸಿದರು ಶಿಕ್ಷಕರನ್ನು ,ಸರ್ಕಾರವನ್ನು ಎಚ್ಚರಿಸಿ ಸರ್ಕಾರಿ ಶಾಲೆಗಳು ಸಬಲೀಕರಣ ಆಗುವಂತೆ ಮಾಡಬಹುದಲ್ಲದೆ ಗುಣಮಟ್ಟದ ಶಿಕ್ಷಣ ನಿಮ್ಮ ಮಕ್ಕಳಿಗೆ ಸಿಕ್ಕೇ ಸಿಗುತ್ತದೆ.
#R .s.

Monday 18 February 2019

ಮೌನ ಯುದ್ಧಕ್ಕೆ ಕಾವ್ಯದ ಖಡ್ಗ

ಮೌನ ಯುದ್ಧಕ್ಕೆ ಕಾವ್ಯದ  ಖಡ್ಗ

"ಮೌನ ಯುದ್ಧ "ಇದು ಗೆಳೆಯ ಸುರೇಶ ರಾಜಮನೆ ಅವರ ಎರಡನೇ ಕೃತಿ.
ಸುಡುವ ಬೆಂಕಿ ಯಲ್ಲಿ ನಕ್ಕವನು ಈಗ ಯುದ್ಧಕ್ಕೆ ಇಳಿದಿದ್ದಾನೆ .

'ನೋವಿನ ನೊಗ ಹೊತ್ತು
ಬದುಕಿನ ಬಂಡಿ ಎಳಯುತ್ತಿರುವಾಗಲೂ ಎಳೆಯ ಮಕ್ಕಳಂತೆ ನಕ್ಕು
ಬದುಕಿನ ಪಾಠ ಹೇಳಿಕೊಡುವವಳು ನನ್ನವ್ವ..

ಎನ್ನುವ ರಾಜಮಾನೆ ಬಾವುಕರಾಗುತ್ತಲೇ  ವರ್ತಮಾನದ ತಲ್ಲಣಗಳಿಗೆ  ಲೇಖನಿ ಹಿಡಿದು ಸಿಡಿದಿದ್ದಾರೆ.

"ಹಾದಿ ಬೀದಿಯ ತುಂಬಾ ಬಾವುಟದ  ನೆರಳು
ಅದರೊಳಗೆ ಹಾರಾಡುವ ಹಸಿರು ತೆನೆಗಳ ಮೇಲಿನ ಹುಳುವಿನ ಹಸಿವು ಹಾರಿಹೋಗಿದೆ
ಬೆಳೆದ ಪೈರಿಗೆ ಸುರಿದ ವಿಷದ ಹಾಲು ಹುಬ್ಬೇರಿಸಿ ನಗುತ್ತಿದೆ
ಹಬ್ಬಗಳ ದಿಬ್ಬಣದ ತೇರಲಿ ಕುಳಿತು
ಗಾಲಿಗಡ್ಡ ಮಲಗಿ ನಾಲಿಗೆ ಚಾಚಿಕೊಂಡಿದೆ" ಎನ್ನುತ್ತಾ ವಿಷವರ್ತುಲ ಕವಿತೆಯಲ್ಲಿ ವರ್ತಮಾನದ ಕುರಿತು ಸಾಂಕೇತಿಕ ಪ್ರತಿಮೆಗಳಲ್ಲಿ ಸಾತ್ವಿಕವಾಗಿ ಸಿಡಿದಿದ್ದಾರೆ.

ಕೆಲವು ಕವಿತೆಗಳಲ್ಲಿ ಅವರದೇ ಬದುಕಿನ ಹೋರಾಟ ಇಣುಕಿದಂತೆ ಕಾಣುತ್ತದೆ. 56 ಕವಿತೆಗಳು ಇರುವ ಈ ಕೃತಿಯಲ್ಲಿ ಹಲವು ವಿಷಯ ವಸ್ತುಗಳು ಕವಿತೆಯಾಗಿ
ಸಂವಾದಿಸುತ್ತವೆ . ವರ್ತಮಾನದ ವಿಷಯ ವಸ್ತುವಿಗೆ ಸೃಜನಶೀಲ ಸಂವೇದನೆ ಹಲವು ಕವಿತೆಯಲ್ಲಿ ಕಂಡುಬರುತ್ತದೆ. ದೇಶಭಕ್ತ. ಬುಡ್ಡಿ ದೀಪದ ಕೆಳಗೆ ,ಹಗಲ ಹಸಿವು ,ನನ್ನ ಕವಿತೆ ,ನನ್ನವ್ವ ,ಹರಿದ ಕೌದಿ, ನಾನೊಂದು ಗುಡಿಸಲ ದೀಪ ,ನೀವು ಒಮ್ಮೆ ಓದಲೇಬೇಕು.
ವರ್ತಮಾನದ ಕುರಿತು ಸಂವೇದನಶೀಲ ನೊಬ್ಬ ಹೇಗೆ ಕವಿತೆಯಲ್ಲಿ  ಜಾಗೃತ ಸಂವಹನ ಕ್ರಿಯೆಗೆ ಹೇಗೆ ತೆರೆದುಕೊಳ್ಳಬಲ್ಲ ಎನ್ನುವುದಕ್ಕೂ ಇಲ್ಲಿ ಹಲವು ಉದಾಹರಣೆಗಳು ಕವಿತೆಯಾಗಿ ಓದಿಸಿಕೊಂಡು ಹೋಗುತ್ತದೆ.

ವಿಶ್ವ ಖುಶಿ ಪ್ರಕಾಶನ ಇದನ್ನು ಪ್ರಕಟಿಸಿದ್ದು ಕ್ರಿಯಾಶೀಲ ಬರಹಗಾರ್ತಿ ಲಲಿತಾ .ಕೆ ಹೊಸಪ್ಯಾಟಿ ಅವರು ಬೆನ್ನುಡಿ ಬರೆದು ಹರಸಿದ್ದಾರೆ. ಡಾ.ಟಿ ಯಲ್ಲಪ್ಪ ಅವರ ಮುನ್ನುಡಿ ಕೃತಿಯನ್ನು ಸಮರ್ಥವಾಗಿ ಪರಿಚಯಿಸುತ್ತದೆ. ಮೌನ ಯುದ್ಧಕ್ಕೆ ನೀವು ಸಜ್ಜಾಗಲು ಈ ಕೃತಿಯನ್ನು ಓದಬೇಕು.

ಕೊನೆ ಮಾತು. ನಾನೇಕೆ ಹೊಸ ಪುಸ್ತಕ ಪರಿಚಯಿಸುತ್ತೇನೆ ಎಂದರೆ   ಸ್ನೇಹಿತರನ್ನು ಪ್ರೋತ್ಸಾಹಿಸಲಿಕಾಗಿ. ಕಾಲೆಳೆಯುವದಕ್ಕಲ್ಲ.
ಪ್ರಸಿದ್ಧ ಪುಸ್ತಕಗಳ ಬಗ್ಗೆ ಮಾತ್ರ ಬರೆದು ವಿಮರ್ಶಕ ಅನಿಸಿಕೊಳ್ಳದೆ  ಯುವ ಬರಹಗಾರರನ್ನು ಪ್ರೋತ್ಸಾಹಿಸುವುದು ಅಗತ್ಯವಿದೆ. ಅವರು ಈಗ ಸಣ್ಣ ವೃಕ್ಷ ವಾಗಿದ್ದರು ಮುಂದೆ ಹೆಮ್ಮರವಾಗಿ ಬೆಳೆಯುವರೆಂದು ಆಶಿಸುತ್ತ  ನಾನು ಪುಸ್ತಕ ಪರಿಚಯ ಬರಹ ಮುಂದುವರಿಸುವೆ.

#ರವಿರಾಜ ಮಾರ್ಗ -ಪುಸ್ತಕ ಪರಿಚಯ