ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Monday 20 May 2019

ಗಜಲ್ ಬಗ್ಗೆ ಒಂದಿಷ್ಟು ಮಾಹಿತಿ

                  ಗಝಲ್ ರೀತಿ-ನೀತಿ.
                  *****************

ಗಜಲ್ ರಚನೆಯಲ್ಲಿ ನಾಲ್ಕು ಅಂಗಗಳಿರುತ್ತವೆ.ಒಂದು ಮತ್ಲಾ.ಎರಡು ಕಾಫಿಯಾ.ಮೂರು ರದೀಫ್.ನಾಲ್ಕು ಮಕ್ತಾ.ಗಜಲ್ ದ್ವಿಪದಿಯಲ್ಲಿರುತ್ತದೆ.ಒಂದು ಗಜಲ್ ನಲ್ಲಿ ಐದರಿಂದ ಇಪ್ಪತ್ತೈದವರೆಗೆ ದ್ವಿಪದಿಗಳಿರಬಹುದೆಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ.

                             ಮತ್ಲಾ:
ಗಜಲಿನ ಮೊದಲ ದ್ವಿಪದಿಗೆ ಮತ್ಲಾ ಎನ್ನುತ್ತಾರೆ.ಇದರ ಎರಡೂ ಚರಣಗಳಲ್ಲಿ ಕಾಫಿಯಾ ಮತ್ತು ರದೀಫ್ ಇರಲೇಬೇಕು.ಇವರಡೂ ಪ್ರಾಸಗಳು.ಇವು ಒಂದರ ಮುಂದೆ ಒಂದು ಬರುತ್ತವೆ.
                             ಕಾಫಿಯಾ:
ಇದು ಒಂದು ಪ್ರಾಸ.ಹಿಂದೆ ಬರುವುದು ಎಂದು ಶಬ್ದಕೋಶದ ಅರ್ಥ.ನಿಶ್ಚಿತವಾದ ಅಕ್ಷರಗಳು ಬೇರೆ ಬೇರೆ ಶಬ್ದಗಳಲ್ಲಿ ಮತ್ಲಾದ ಎರಡೂ ಚರಣದ ಅಂತ್ಯದಲ್ಲಿ ಪುನ: ಪುನ: ಬರುವುದಕ್ಕೆ ಕಾಫಿಯಾ ಎನ್ನುತ್ತಾರೆ.
                                ರದೀಫ್:
ಇದು ಒಂದು ಪ್ರಾಸ. ಅರ್ಥವುಳ್ಳ ಶಬ್ದ.ಪೂರ್ಣ ಅರ್ಥ ಕೂಡುವ ಶಬ್ದಗಳ ಗುಂಪು ಮತ್ತು ಅಕ್ಷರ-ಇವು ಪುನ: ಪುನ: ನಿಶ್ಚಿತವಾಗಿ ಕಾಫಿಯಾದ ಬಳಿಕ ಬರುವುದಕ್ಕೆ ರದೀಫ್ ಎನ್ನುತ್ತಾರೆ. ರದೀಫ್ ಗಜಲಿಗೆ ರಮ್ಯತೆಯನ್ನೂ ಕಾಂತಿಯನ್ನೂ ತಂದುಕೊಡುತ್ತಾದೆ.ಇದು ಲಾಲಿತ್ಯವಿದಷ್ಟೂ ಸಂಗೀತಮಯವಾಗುತ್ತದೆ.
                                     ಮಕ್ತಾ:
ಗಜಲಿನ ಕೊನೆಯ ದ್ವಿಪದಿಗೆ ಮಕ್ತಾ ಎನ್ನುತ್ತಾರೆ.ಇದರಲ್ಲಿ ಕವಿ ತನ್ನ ಕಾವ್ಯನಾಮವನ್ನು  ಸೇರಿಸಿ ಗಜಲ್ ಮುಕ್ತಾಯ ಮಾಡುತ್ತಾರೆ.ಕೆಲವು ಕವಿಗಳು ಗಜಲ್ ನಲ್ಲಿ ತಮ್ಮ ಕಾವ್ಯನಾಮವನ್ನು ಬಳಸದಿರುವುದು ಕಂಡುಬರುತ್ತದೆ.

ಒಂದು ಗಝಲ್ ನ ಉದಾಹರಣೆ:

" ಏರಿಳಿಗಳೇನಿದ್ದುವೋ ದಾರಿಯಲಿ ಯೋಚನೆ ಮಾಡಲೇ ಇಲ್ಲ.
ಪಯಣ ಕೈಕೊಂಡ ಬಳಿಕೊಮ್ಮೆಯೂ ಹಿಂದಿರುಗಿ ನೋಡಲೇ ಇಲ್ಲ"

ಮಾಡಲೇ, ನೋಡಲೇ ಈ ಪದಗಳೇ ಕಾಫಿಯಾಗಳು.
ಇಲ್ಲ-- ಎನ್ನುವ ಪದವೇ ರದೀಫ್ ..........

                           - - ಅಲ್ಲಾಗಿರಿರಾಜ್ ಕನಕಗಿರಿ.
                 ಅವರ 'ನೂರ್ ಗಜಲ್' ಪುಸ್ತಕದಿಂದ
              .... ಸಂಗ್ರಹ : ಗಜಲ್ ಲೋಕ ಗಜಲ್.

No comments:

Post a Comment