ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Friday 12 April 2019

ಮೇ 10 . ರೇಡಿಯೋ ನಾಟಕ

https://drive.google.com/file/d/1dzi0SJ0S0V6Okebs7iUD1LJ2rGgL3-se/view?usp=drivesdk.

ಈ ಲಿಂಕ ಕ್ಲಿಕ್ ಮಾಡಿ. ನಮ್ಮ ಶಾಲಾ ಮಕ್ಕಳ ರೇಡಿಯೋ ನಾಟಕ. ಮೇ -10 .   ನಾಟಕವನ್ನು ಅಲಿಸಬಹುದು.
      ಇದು ಮಕ್ಕಳ ಶೈಕ್ಷಣಿಕ ಸಮಸ್ಯೆ, ರಿಸಲ್ಟ್ ಫೋಬಿಯ, ಮಕ್ಕಳ ಮೇಲೆ ಪಾಲಕರ ಮಾನಸಿಕ ಒತ್ತಡ, ಮಕ್ಕಳ ಹುಕ್ಕುಗಳ ಉಲ್ಲಂಘನೆ  ಮತ್ತಿತರ ವಿಷಯ ವಸ್ತುವಿನ ರಂಗ ಪಠ್ಯವಾಗಿದೆ.

Tuesday 2 April 2019

ಸರ್ಕಾರಿ ಶಾಲಾ ಸಬಲೀಕರಣಕ್ಕೆ ಪಾಲಕರ ಪಾತ್ರ

ಸರ್ಕಾರಿ ಶಾಲಾ ಸಬಲೀಕರಣಕ್ಕೆ ಪಾಲಕರ ಪಾತ್ರ...

ಪ್ರಮುಖವಾದ ಸರಳ ಮಾರ್ಗಗಳು..

1.ಜೂನ್ ತಿಂಗಳಲ್ಲೇ ತಮ್ಮ ಮಕ್ಕಳಿಗೆ  ಶಾಲಾ ಪಠ್ಯ ಪುಸ್ತಕ ಪೂರೈಕೆ ಆಗಿದೆಯೇ.. ಎಂದು ಶಾಲೆಗೆ ಭೇಟಿ ನೀಡಿ ಖಾತರಿ ಮಾಡಿಕೊಳ್ಳುವುದು.. ಇರದಿದ್ದರೆ ಶೀಘ್ರ ಪೂರೈಸುವಂತೆ ಮೇಲಧಿಕಾರಿಗಳಿಗೆ ಗಮನಕ್ಕೆ ತರುವುದು.

2. ಪ್ರತಿ ತಿಂಗಳಿಗೊಮ್ಮೆ ಆದರೂ ಎಸ್ ಡಿ ಎಂ ಸಿ ಸಭೆ ಸೇರಿ ಶಾಲಾ ಅನುದಾನ ನಿರ್ವಹಣೆ , ಸಮರ್ಪಕ ಬಳಕೆ ,ಶಿಕ್ಷಕರ ಕೊರತೆ ಮತ್ತಿತರ ಸಮಸ್ಯೆ ಕುರಿತು ಆಲಿಸಿ ಶಿಕ್ಷಕರು ಗರಿಷ್ಠ ಸೇವೆ ಸಲ್ಲಿಸುವಂತೆ ಅವರನ್ನು ಪ್ರೋತ್ಸಾಹಿಸಿ ಸಹಕರಿಸುವುದು.

3.  ಶಾಲೆಯಲ್ಲಿ ಕೊಠಡಿ , ಶೌಚಾಲಯ  ಮತ್ತಿತರ ಭೌತಿಕ ಸೌಲಭ್ಯ ಇವೆಯಾ ...? ಇಲ್ಲವಾದರೆ ಅವನ್ನು ಪಡೆಯುವ ಮಾರ್ಗ ಕುರಿತು ಯೋಜನೆ ಹಮ್ಮಿಕೊಳ್ಳುವುದು.

4.ಸರ್ಕಾರದ ಸೌಲಭ್ಯ ಗಳು , ಬಿಸಿಯೂಟ ಮತ್ತಿತರ ಯೋಜನೆಗಳು ನಿಮ್ಮ ಮಕ್ಕಳಿಗೆ ಸರಿಯಾಗಿ ಸಿಗುತ್ತಿವೆಯಾ.. ಎಂದು ಶಾಲೆಗೆ ಬಂದು ಆಗೀಗ ವಿಚಾರಿಸುವುದು.

5.ಶಾಲಾ ಸಿಬ್ಬಂದಿ ಹಾಜರಾತಿ , ಶಿಕ್ಷಕರ ರಜೆಯ ಅನುಪಸ್ಥಿತಿಯ ಅವಧಿಯಲ್ಲಿ ಬದಲಿ ವ್ಯವಸ್ಥೆ ಬಗ್ಗೆ  ಸಂಬಂಧಿಸಿದವರ ಗಮನಕ್ಕೆ ತರುವುದು.

6.ಶಾಲಾ ಕಾರ್ಯಕ್ರಮಗಳು , ರಾಷ್ಟ್ರೀಯ ಹಬ್ಬಗಳಿಗೆ ಭಾಗವಹಿಸುವುದು.

7.ಶಾಲಾ ಸಿಬ್ಬಂದಿಗೆ ಸರಿಯಾದ  ಗೌರವ , ಮಾರ್ಗದರ್ಶನ, ಸಲಹೆ ನೀಡಿ ಹೆಚ್ಚು ಸೇವೆ ಸಲ್ಲಿಸುವಂತೆ ಪೂರಕ ವಾತಾವರಣ ನಿರ್ಮಿಸುವುದು.

8.ಸಮುದಾಯವು  ಶಾಲೆಯನ್ನು  ವಿದ್ಯಾಲಯದಂತೆ  ಗೌರವದಿಂದ ಕಾಪಾಡುವುದರ ಜೊತೆಗೆ  ಸಾರ್ವಜನಿಕ ಅಸ್ತಿಯಾದ ಶಾಲೆಯ ರಕ್ಷಣೆ ಕುರಿತು ಕಾಳಜಿ  ವಹಿಸಬೇಕು.

9.ನಿಮ್ಮ ಮಕ್ಕಳು ನಿರಂತರವಾಗಿ ಹಾಜರಾಗುವಂತೆ ನೋಡಿಕೊಳ್ಳುವುದಲ್ಲದೆ ಅವರ ಓದು, ಬರಹ ಗಮನಿಸುತ್ತಾ ಮಕ್ಕಳ ಪ್ರಗತಿ ವರದಿ ಪರಿಶೀಲಿಸಲು ಆಗಾಗ್ಗೆ ಶಿಕ್ಷಕರನ್ನು ಭೇಟಿ ಮಾಡುತ್ತಿರಬೇಕು.

ಈ ಎಲ್ಲ ಕಾರ್ಯಗಳನ್ನು ಪಾಲಕರು ಆಗೀಗ ನಿರ್ವಹಿಸಿದರು ಶಿಕ್ಷಕರನ್ನು ,ಸರ್ಕಾರವನ್ನು ಎಚ್ಚರಿಸಿ ಸರ್ಕಾರಿ ಶಾಲೆಗಳು ಸಬಲೀಕರಣ ಆಗುವಂತೆ ಮಾಡಬಹುದಲ್ಲದೆ ಗುಣಮಟ್ಟದ ಶಿಕ್ಷಣ ನಿಮ್ಮ ಮಕ್ಕಳಿಗೆ ಸಿಕ್ಕೇ ಸಿಗುತ್ತದೆ.
#R .s.

Monday 18 February 2019

ಮೌನ ಯುದ್ಧಕ್ಕೆ ಕಾವ್ಯದ ಖಡ್ಗ

ಮೌನ ಯುದ್ಧಕ್ಕೆ ಕಾವ್ಯದ  ಖಡ್ಗ

"ಮೌನ ಯುದ್ಧ "ಇದು ಗೆಳೆಯ ಸುರೇಶ ರಾಜಮನೆ ಅವರ ಎರಡನೇ ಕೃತಿ.
ಸುಡುವ ಬೆಂಕಿ ಯಲ್ಲಿ ನಕ್ಕವನು ಈಗ ಯುದ್ಧಕ್ಕೆ ಇಳಿದಿದ್ದಾನೆ .

'ನೋವಿನ ನೊಗ ಹೊತ್ತು
ಬದುಕಿನ ಬಂಡಿ ಎಳಯುತ್ತಿರುವಾಗಲೂ ಎಳೆಯ ಮಕ್ಕಳಂತೆ ನಕ್ಕು
ಬದುಕಿನ ಪಾಠ ಹೇಳಿಕೊಡುವವಳು ನನ್ನವ್ವ..

ಎನ್ನುವ ರಾಜಮಾನೆ ಬಾವುಕರಾಗುತ್ತಲೇ  ವರ್ತಮಾನದ ತಲ್ಲಣಗಳಿಗೆ  ಲೇಖನಿ ಹಿಡಿದು ಸಿಡಿದಿದ್ದಾರೆ.

"ಹಾದಿ ಬೀದಿಯ ತುಂಬಾ ಬಾವುಟದ  ನೆರಳು
ಅದರೊಳಗೆ ಹಾರಾಡುವ ಹಸಿರು ತೆನೆಗಳ ಮೇಲಿನ ಹುಳುವಿನ ಹಸಿವು ಹಾರಿಹೋಗಿದೆ
ಬೆಳೆದ ಪೈರಿಗೆ ಸುರಿದ ವಿಷದ ಹಾಲು ಹುಬ್ಬೇರಿಸಿ ನಗುತ್ತಿದೆ
ಹಬ್ಬಗಳ ದಿಬ್ಬಣದ ತೇರಲಿ ಕುಳಿತು
ಗಾಲಿಗಡ್ಡ ಮಲಗಿ ನಾಲಿಗೆ ಚಾಚಿಕೊಂಡಿದೆ" ಎನ್ನುತ್ತಾ ವಿಷವರ್ತುಲ ಕವಿತೆಯಲ್ಲಿ ವರ್ತಮಾನದ ಕುರಿತು ಸಾಂಕೇತಿಕ ಪ್ರತಿಮೆಗಳಲ್ಲಿ ಸಾತ್ವಿಕವಾಗಿ ಸಿಡಿದಿದ್ದಾರೆ.

ಕೆಲವು ಕವಿತೆಗಳಲ್ಲಿ ಅವರದೇ ಬದುಕಿನ ಹೋರಾಟ ಇಣುಕಿದಂತೆ ಕಾಣುತ್ತದೆ. 56 ಕವಿತೆಗಳು ಇರುವ ಈ ಕೃತಿಯಲ್ಲಿ ಹಲವು ವಿಷಯ ವಸ್ತುಗಳು ಕವಿತೆಯಾಗಿ
ಸಂವಾದಿಸುತ್ತವೆ . ವರ್ತಮಾನದ ವಿಷಯ ವಸ್ತುವಿಗೆ ಸೃಜನಶೀಲ ಸಂವೇದನೆ ಹಲವು ಕವಿತೆಯಲ್ಲಿ ಕಂಡುಬರುತ್ತದೆ. ದೇಶಭಕ್ತ. ಬುಡ್ಡಿ ದೀಪದ ಕೆಳಗೆ ,ಹಗಲ ಹಸಿವು ,ನನ್ನ ಕವಿತೆ ,ನನ್ನವ್ವ ,ಹರಿದ ಕೌದಿ, ನಾನೊಂದು ಗುಡಿಸಲ ದೀಪ ,ನೀವು ಒಮ್ಮೆ ಓದಲೇಬೇಕು.
ವರ್ತಮಾನದ ಕುರಿತು ಸಂವೇದನಶೀಲ ನೊಬ್ಬ ಹೇಗೆ ಕವಿತೆಯಲ್ಲಿ  ಜಾಗೃತ ಸಂವಹನ ಕ್ರಿಯೆಗೆ ಹೇಗೆ ತೆರೆದುಕೊಳ್ಳಬಲ್ಲ ಎನ್ನುವುದಕ್ಕೂ ಇಲ್ಲಿ ಹಲವು ಉದಾಹರಣೆಗಳು ಕವಿತೆಯಾಗಿ ಓದಿಸಿಕೊಂಡು ಹೋಗುತ್ತದೆ.

ವಿಶ್ವ ಖುಶಿ ಪ್ರಕಾಶನ ಇದನ್ನು ಪ್ರಕಟಿಸಿದ್ದು ಕ್ರಿಯಾಶೀಲ ಬರಹಗಾರ್ತಿ ಲಲಿತಾ .ಕೆ ಹೊಸಪ್ಯಾಟಿ ಅವರು ಬೆನ್ನುಡಿ ಬರೆದು ಹರಸಿದ್ದಾರೆ. ಡಾ.ಟಿ ಯಲ್ಲಪ್ಪ ಅವರ ಮುನ್ನುಡಿ ಕೃತಿಯನ್ನು ಸಮರ್ಥವಾಗಿ ಪರಿಚಯಿಸುತ್ತದೆ. ಮೌನ ಯುದ್ಧಕ್ಕೆ ನೀವು ಸಜ್ಜಾಗಲು ಈ ಕೃತಿಯನ್ನು ಓದಬೇಕು.

ಕೊನೆ ಮಾತು. ನಾನೇಕೆ ಹೊಸ ಪುಸ್ತಕ ಪರಿಚಯಿಸುತ್ತೇನೆ ಎಂದರೆ   ಸ್ನೇಹಿತರನ್ನು ಪ್ರೋತ್ಸಾಹಿಸಲಿಕಾಗಿ. ಕಾಲೆಳೆಯುವದಕ್ಕಲ್ಲ.
ಪ್ರಸಿದ್ಧ ಪುಸ್ತಕಗಳ ಬಗ್ಗೆ ಮಾತ್ರ ಬರೆದು ವಿಮರ್ಶಕ ಅನಿಸಿಕೊಳ್ಳದೆ  ಯುವ ಬರಹಗಾರರನ್ನು ಪ್ರೋತ್ಸಾಹಿಸುವುದು ಅಗತ್ಯವಿದೆ. ಅವರು ಈಗ ಸಣ್ಣ ವೃಕ್ಷ ವಾಗಿದ್ದರು ಮುಂದೆ ಹೆಮ್ಮರವಾಗಿ ಬೆಳೆಯುವರೆಂದು ಆಶಿಸುತ್ತ  ನಾನು ಪುಸ್ತಕ ಪರಿಚಯ ಬರಹ ಮುಂದುವರಿಸುವೆ.

#ರವಿರಾಜ ಮಾರ್ಗ -ಪುಸ್ತಕ ಪರಿಚಯ









Monday 11 February 2019

ಕವಿತೆಯಾಗದ ಸಾಲ್ಗಳು

ಕವಿತೆಯಾಗದ ಸಾಲುಗಳು....ಪದ ಪುಂಜದ ಪದಗಳಿಗೆಲ್ಲ ಪ್ರೀತಿಯ ನಮನಗಳು. ಜಗದ ಕಾವ್ಯ ಲೋಕದಲ್ಲಿ ಅವಿತು ಕುಳಿತಕನಸುಗಾರನೇ ಭ್ರಮಲೋಕದ ಆದರ್ಶ ಪದಗಳೆಲ್ಲಯಾವ ಪಕ್ಷಕ್ಕೂ ಬೇಕೆನಿಸದೆ ಪಕ್ಷಾತೀತವಾಗಿ ಉಳಿಯಬೇಕಾದ ಅನಿವಾರ್ಯತೆಯ ಗೊಂದಲದ ಗೂಡಲ್ಲಿ ಯಾವ ಮೊಟ್ಟೆಯಿಟ್ಟು ಇನ್ಯಾವ ಮರಿ ತೆಗೆಯುವೆಯೋ ತಿಳಿಯೇ..ಹರಿತ ಲೇಖನಿ ಒಂಟಿಯಾಗಿಕಕ್ಕಲು ಇಂಕಿಲ್ಲದೆ ಸಾಯುವ ಅಪಾಯವೇನು ಇಲ್ಲ..ಗೀಚಲು ಚಡಪಡಿಸುವ ಚಿಂತಕರ ಬಾಯಿ ಬೆರಳು ಖಾಲಿ ಹಾಳೆ ಹೊದ್ದು ಎಚ್ಚರದಿಂದಲೇ ತೂಕಡಿಸುತ್ತ ಕುಂತಿವೆ.ಯಾವ ಪದವೋ... ಯಾವ ನುಡಿಗಟ್ಟೋ...ಹಸಿದ ಹೊಟ್ಟೆಗೆ ಅನ್ನ ಹಾಕಲಾಗದ ಖಾಲಿ ವೃತ್ತಿಯ ಕವಿ ಏಸು ಗೀಚಿ ಏಸು ಜನಗಳ ಬದಲಿಸಿ ಬಿಡುವೆಯೋ ಎಂದುಖಾಲಿ ಹಾಳೆಯ ಭಾರ ಹೊತ್ತ ಪ್ಯಾಡು ಪ್ರಶ್ನಿಸುವ ಮಟ್ಟ ತಲುಪಿದ್ದು ಯಾರಿಂದ ಹೇಳಿ...?ಇನ್ನೂ ಸಾಕ್ಷಿ ಬೇಕೇ..ಕವಿ ಕೊಟ್ಟ ಸಾಲಕ್ಕೆ ಚಕ್ರಬಡ್ಡಿಯೂ ಮೀಟರ್ ಬಡ್ಡಿಯೂ ವಸೂಲಾಗಿದೆಯೆಂದು ಹೇಳಲಿಕ್ಕೆ..ರವಿರಾಜ್ ಸಾಗರ್.ಮಂಡಗಳಲೆ.

Wednesday 23 January 2019

ಸರ್ಕಾರಿ ನೌಕರರ ಸುಲಭ ತೆರಿಗೆ ಲೆಕ್ಕಾಚಾರ..

ಕೇವಲ 5 ನಿಮಿಷಗಳಲ್ಲಿ *ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ತಮ್ಮ ವಾರ್ಷಿಕ ಆದಾಯ ತೆರಿಗೆ ಲೆಕ್ಕಚಾರ ಈ ಕೆಳಗಿನ Excel Sheet ಮೂಲಕ ಮಾಡಬಹುದು.*
Use WPS APP.
File download link*

https://drive.google.com/file/d/1245B40fYhwIU80Vk9dPjqau-BdlEHqQe/view?usp=drivesdk

*ಮೊದಲು ಈ ಕೆಳಗಿನ ಮಾಹಿತಿಯನ್ನು ಕಲೆಹಾಕಿ.*

*ಎಲ್ಲಾ ಗುಲಾಬಿ ಬಣ್ಣದ ಬಾಕ್ಸ್ ಗಳಲ್ಲಿ ಮಾಹಿತಿ ತುಂಬಿ.*
*ನೀಲಿಬಣ್ಣದ ಬಾಕ್ಸಗಳು ಡ್ರಾಪ್‌ಡೌನ್‌ ಬಾಕ್ಸ್ ಗಳಾಗಿವೆ.*

1) Employee Group:(select A, B, C or D)

*ನೌಕರರ ದರ್ಜೆಯನ್ನು ಆಯ್ಕೆ ಮಾಡಿ,  A,B,C or D.*

2) Enter Basic Pay as in January-2018

*ಜನವರಿ 2018ರ ಮೂಲವೇತನ ನಮೂದಿಸಿ.*
3) Enter Basic Pay as per 6th Pay Scale

*6ನೇ ವೇತನ ಆಯೋಗದ ಪ್ರಕಾರ ನಿಗದಿಗೊಳಿಸಿದ ಮೂಲವೇತನ  ನಮೂದಿಸಿ.*

4) Select Month Code:  6th Pay Scale implemented Month

*6ನೇ ವೇತನ ಆಯೋಗದ ಪ್ರಕಾರ ನಿಗದಿಗೊಳಿಸಿದ ಮೂಲವೇತನ ಜಾರಿ ಮಾಡಿದ ತಿಂಗಳನ್ನು ಆಯ್ಕೆ ಮಾಡಿ.*


5) Select Month code for 1st INCREMENT OF  THE YEAR ( ANNUAL or TIME BOUND )

*ವಾರ್ಷಿಕ ಬಡ್ತಿ/ಕಾಲಮಿತಿ ಬಡ್ತಿ ಜಾರಿ ಮಾಡಿದ ತಿಂಗಳನ್ನು ಆಯ್ಕೆ ಮಾಡಿ.(ವರ್ಷದಲ್ಲಿ ಮೊದಲು ಯಾವ ಬಡ್ತಿ ಬರುತ್ತದೆಯೋ ಅದನ್ನು ಆಯ್ಕೆ ಮಾಡಿ.)*

6) Select Month code for 2nd INCREMENT OF  THE YEAR ( ANNUAL or TIME BOUND )

*ವಾರ್ಷಿಕ ಬಡ್ತಿ/ಕಾಲಮಿತಿ ಬಡ್ತಿ ಜಾರಿ ಮಾಡಿದ ತಿಂಗಳನ್ನು ಆಯ್ಕೆ ಮಾಡಿ.(ವರ್ಷದಲ್ಲಿ ನಂತರ ಯಾವ ಬಡ್ತಿ ಬರುತ್ತದೆಯೋ ಅದನ್ನು ಆಯ್ಕೆ ಮಾಡಿ.)*

7) Select Month Code of (Decreased) D.A=0%

*ತುಟ್ಟಿಭತ್ಯೆ ಯನ್ನು 45.25% ರಿಂದ 0% ಇಳಿಸಿದ ತಿಂಗಳನ್ನು ಆಯ್ಕೆ ಮಾಡಿ.*
8) Enter lncreased DA% then select Month Code

*ತುಟ್ಟಿಭತ್ಯೆ ಯನ್ನು 1.75%ಕ್ಕೆ ಹೆಚ್ಚಿಸಿದ ತಿಂಗಳನ್ನು ಆಯ್ಕೆ ಮಾಡಿ.*

9) Enter lncreased DA%, then select Month Code
*ತುಟ್ಟಿಭತ್ಯೆ ಯನ್ನು 2% ಕ್ಕೆ ಹೆಚ್ಚಿಸಿದ ತಿಂಗಳನ್ನು ಆಯ್ಕೆ ಮಾಡಿ.*
10) Select Surrender Taken Month Code (Ex:-Jan=1, Mar=3  NO=0, ..)

*ಗಳಿಕೆ ರಜೆ ನಗದೀಕರಿಸಿದ  ತಿಂಗಳನ್ನು ಆಯ್ಕೆ ಮಾಡಿ.*

11) Select HRA Grade (Ex:-A=24%, B=16%, C=8%)

*ಮನೆ ಬಾಡಿಗೆ ಭತ್ಯೆ ಗಾಗಿ ನಿಮ್ಮ ನಗರದ ಗ್ರೇಡ್ ನನ್ನು ಆಯ್ಕೆ ಮಾಡಿ.*
12) Select Your City for CITY ALLOWANCES or Others

*ನಗರ ಭತ್ಯೆ ಗಾಗಿ ನಿಮ್ಮ ನಗರವನ್ನು ಆಯ್ಕೆ ಮಾಡಿ.ಅಥವಾ ಈ ಕಾಲಮ್‌ನ್ನು ಇತರೆ ಯಾಗಿ ಬಳಸಿ*


13) Select SFN,  Special Pay or OTHERS

*ಕುಟುಂಬ ಯೋಜನೆ ಭತ್ಯೆ , ವಿಶೇಷ ಭತ್ಯೆ ಅಥವಾ ಈ ಕಾಲಮ್‌ನ್ನು ಇತರೆ ಯಾಗಿ ಬಳಸಿ.*

14) Select PH/OTHERS/Special Pay

*ಅಂಗವಿಕಲ ಭತ್ಯೆ , ವಿಶೇಷ ಭತ್ಯೆ ಅಥವಾ ಈ ಕಾಲಮ್‌ನ್ನು ಇತರೆ ಯಾಗಿ ಬಳಸಿ.*

15) Select YES for Auto Calculatuon of Pay Arrears , Otherwise NO

*ಬಾಕಿ ಉಳಿದಿರುವ ವೇತನ ದ ಲೆಕ್ಕಾಚಾರಕ್ಕಾಗಿ YES/NO ಆಯ್ಕೆ ಮಾಡಿ.*
** *DEDUCTIONS IN SALARY ವೇತನ ದಲ್ಲಿನ ಕಟಾವಣೆಗಳು*
16) Select GIS/FBF

*ಸಾಮಾನ್ಯ ಭವಿಷ್ಯ ನಿಧಿ/ ಕುಟುಂಬ ಕಲ್ಯಾಣ ನಿಧಿ ಆಯ್ಕೆ ಮಾಡಿ.*
17) Professional Tax   *ವೃತ್ತಿ ತೆರಿಗೆ YES/NO ಆಯ್ಕೆ ಮಾಡಿ.*

18) Taxes Paid in Advance/ Others

*ಮುಂಚಿತವಾಗಿ ತೆರಿಗೆ ಪಾವತಿ/ಇತರೆ ಪಾವತಿ*
19) Select LIC
*ಎಲ್ ಐ ಸಿ ಕಂತಿನ ಹಣ ತುಂಬಿ.*
20 Select KGID
*ಕೆ.ಜಿ.ಐ.ಡಿ ಕಂತಿನ ಹಣ ತುಂಬಿ.*

21) Select FA, ROP or OTHERS *ಹಬ್ಬದ ಮುಂಗಡ ಹಣ ತುಂಬಿ.*
22) Select NPS/GPF

*ಎನ್‌ ಪಿ‌ ಎಸ್ /ಜಿ.ಪಿ.ಎಫ್ ಆಯ್ಕೆ ಮಾಡಿ. ಜಿ.ಪಿ.ಎಫ್ ಆಯ್ಕೆ ಮಾಡಿಕೊಂಡಿದ್ದರೆ ಮಾತ್ರ ಕಂತಿನ ಹಣ ತುಂಬಿ.*

23)SELECT SEX:- MALE/FEMALE/SENIOR CITIZEN

*ಮಹಿಳಾ/ಪುರುಷ/ಹಿರಿಯ ನಾಗರಿಕ ಆಯ್ಕೆ ಮಾಡಿ.*

24)HRA EXEMPTION u/s 10(13A)

*ಸೆಕ್ಷನ್ 10(13A)ಅಡಿಯಲ್ಲಿ ಮನೆ ಬಾಡಿಗೆಗೆ ತೆರಿಗೆ ರಿಯಾಯಿತಿ*

25) DEDUCTIONS U/s 80C

*ಸೆಕ್ಷನ್ 80C ಮತ್ತು ಇತರೆ ಸೆಕ್ಷನ್ ‌ಗಳ ಅಡಿಯಲ್ಲಿ ತೆರಿಗೆ ರಿಯಾಯಿತಿ*

*File download link*

https://drive.google.com/file/d/1245B40fYhwIU80Vk9dPjqau-BdlEHqQe/view?usp=drivesdk