ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Monday 13 November 2023

ದೆಹಲಿ ರಾಷ್ಟ್ರೀಯ ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ ಆಯ್ಕೆ




*ದೆಹಲಿ ರಾಷ್ಟ್ರೀಯ ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ  ಆಯ್ಕೆ* .


ದೆಹಲಿಯಲ್ಲಿ ನಡೆಯುತ್ತಿರುವ  ರಾಷ್ಟ್ರೀಯ ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ ಶಿವಮೊಗ್ಗ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು ಘಟಕದಿಂದ  ಸಾಗರ ತಾಲೂಕಿನ  ಮಕ್ಕಳು, ಡೊಳ್ಳು ಕುಣಿತ, ವಿಚಾರಗೋಷ್ಠಿಗೆ ಆಯ್ಕೆಯಾಗಿದ್ದಾರೆ. ಗೌತಮಪುರದ ಮಲೆನಾಡು ಪ್ರೌಢಶಾಲೆಯ ಮಕ್ಕಳು ಡೊಳ್ಳು ಕುಣಿತ ಪ್ರದರ್ಶನ ನೀಡಲಿದ್ದಾರೆ. ಸಾಗರದ ಬಿಇಓ ಪರಶುರಾಮ, ಜಿಲ್ಲಾ ಅಧ್ಯಕ್ಷರಾದ ರವಿರಾಜ್ ಸಾಗರ್ ಮಂಡಗಳಲೆ, ಸಾಗರ ತಾಲೂಕು ಅಧ್ಯಕ್ಷ ಕಿಶೋರ್ ಕುಮಾರ್ ಬೈರಾಪುರ,  ಗೌತಮರದ ಗ್ರಾಮಸ್ಥರು, ಪೋಷಕರು, ಮಲೆನಾಡು ಪ್ರೌಢಶಾಲೆಯ ಅಧ್ಯಕ್ಷರು ಮತ್ತು ಶಿಕ್ಷಕರ ಬಳಗ ,ಗೌತಮ ಪುರದ ಗ್ರಾಮ ಪಂಚಾಯಿತಿ ವತಿಯಿಂದ  ಮಕ್ಕಳಿಗೆ ಶುಭ ಹಾರೈಸಿದ್ದಾರೆ.  

ಸಂಸದರಾದ ಬಿ ವೈ ರಾಘವೇಂದ್ರ, ಸಾಗರದ ಶಾಸಕರಾದ ಬೇಳೂರು ಗೋಪಾಲಕೃಷ್ಣ, ಶಾಶಕ ಭೀಮಣ್ಣ ನಾಯ್ಕ, ಮತ್ತಿತರ ಮುಖಂಡರು ಮಕ್ಕಳ ಪ್ರತಿಭೆಗೆ  ಶ್ಲಾಘಿಸಿದ್ದಾರೆ


Thursday 5 October 2023

ಸುಳ್ಳೂರ ಶಾಲಾ ಮಕ್ಕಳ ಮಂತ್ರಿ ಮಂಡಲದಿಂದ ಪಂಚಾಯಿತಿಗೆ ವಿವಿಧ ಬೇಡಿಕೆಗಳ ಮನವಿ

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸುಳ್ಳೂರು ಶಾಲಾ ಮಕ್ಕಳ ಮಂತ್ರಿಮಂಡಲದಿಂದ ಶಾಲೆಯಲ್ಲಿ ಆಟದ ಮೈದಾನ, ವಿವಿಧ ಕ್ರೀಡಾಂಗಣ, ಶಾಲಾ ಪ್ರಾರ್ಥನ ಅಂಕಣದಲ್ಲಿ ಸಿಮೆಂಟ್ ಬ್ರಿಕ್ಸ್ ಅಳವಡಿಕೆ ಬಗ್ಗೆ ಮನವಿ ಸಲ್ಲಿಸಲಾಯಿತು. ಸೈದುರ್ ಗ್ರಾಮ ಪಂಚಾಯಿತಿ ಪಿಡಿಒ ಲತಾರಾಣಿ , ಪಂಚಾಯತಿ ಉಪಾಧ್ಯಕ್ಷರಾದ ಶಿವಕುಮಾರ್ ಅವರು, ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಗ್ರಾಮಸ್ಥರು ಮತ್ತು ಶಾಲಾ ಶಿಕ್ಷಕರು ಹಾಜರಿದ್ದರು.


Monday 2 October 2023

ಸುಳ್ಳೂರಿನಲ್ಲಿ ಸಮುದಾಯದ ಸಹಭಾಗಿತ್ವದಲ್ಲಿ ಶಾಲಾ ಸ್ವಚ್ಚತೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸುಳ್ಳೂರಿನಲ್ಲಿ ಮಹಾತ್ಮ ಗಾಂಧಿ ಜಯಂತಿ ಪ್ರಯುಕ್ತ ಶ್ರಮದಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ವಿಶೇಷವಾಗಿ ಗ್ರಾಮದ  ಪಾಲಕರು,ಯುವಕರು ಎಸ್ ಡಿ ಎಂ ಸಿ ಸಮಿತಿಯವರು ಶಾಲಾ ಸ್ವಚ್ಛತೆಯ ನೇತೃತ್ವ ವಹಿಸಿದ್ದರು. ಅಂಗನವಾಡಿ ಕಾರ್ಯಕರ್ತರು ಆಶಾ ಕಾರ್ಯಕರ್ತೆಯರು ಶಾಲಾ ಶಿಕ್ಷಕರು ಮಕ್ಕಳು ಶಾಲಾ ಸ್ವಚ್ಚತೆಯಲ್ಲಿ ನಿರತರಾಗಿರುವುದು ವಿಶೇಷವಾಗಿತ್ತು. ಸಮುದಾಯ ಮನಸ್ಸು ಮಾಡಿದರೆ ಮಾತ್ರ ಸರ್ಕಾರಿ ಶಾಲಾ ಸಬಲೀಕರಣ ಸಾಧ್ಯ. ಗಾಂಧಿ ಜಯಂತಿ ಪ್ರಯುಕ್ತ ಇದೊಂದು ಸಣ್ಣ ಪ್ರಯತ್ನ ಎಂದು ಶಿಕ್ಷಕರಾದ ರವಿಚಂದ್ರ ಅವರು ಹೇಳಿದರು. ಎಸ್ ಡಿ ಎಂ ಸಿ ಅಧ್ಯಕ್ಷರಾದ ರಾಘು ಬಿ, ಶಿಕ್ಷಕಿ ಕಲ್ಪನಾ,ದೀಪಾ, ಅಣ್ಣಪ್ಪ ಅವರು ಹಾಜರಿದ್ದರು. 

Friday 28 July 2023

ವಿದ್ಯಾಧನ ಸ್ಕಾಲರ್ಶಿಪ್ ಪಡೆಯಲು ಮಾಹಿತಿ

ಈ ಮೇಲಿನ ಪೋಸ್ಟ್ ಸರಿಯಾಗಿ ಓದಿ .ವಿದ್ಯಾಧನ್ ವಿದ್ಯಾರ್ಥಿ ವೇತನದ ಲಾಭ ಪಡೆಯಿರಿ.

Thursday 15 June 2023

ಗ್ರಾಮೀಣ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣೆ

#ಮಕ್ಕಳ #ಮುಂದಾರ ಬಳಗ
ಗ್ರಾಮೀಣ ಸರ್ಕಾರಿ ಶಾಲೆಗಳಿಗೆ ಉಚಿತ ನೋಟ್ ಬುಕ್ ವಿತರಣೆ.

ರಾಮನಗರದ ನವಚೇತನ ಸಂಸ್ಥೆಯ ಮಂಜುನಾಥ ಅವರು   ಮಕ್ಕಳ ಮಂದಾರ  ಶಾಲಾ ಮಕ್ಕಳ ಪತ್ರಿಕೆಯ  ಬರಹಗಳನ್ನು ಮೆಚ್ಚಿ  ಕಳುಹಿಸಿದ 2500 ನೋಟ್ ಬುಕ್ ವಿತರಣೆ ಸಮಾರಂಭ ವನ್ನು  ವಿಮುಕ್ತಿ ಸಂಸ್ಥೆ ಪೋತ್ನಾಳ್  ಸಹಯೋಗದಲ್ಲಿ  ಮಕ್ಕಳ ಮಂದಾರ ಬಳಗ, ಮಲ್ಕಾಪುರ ಶಾಲಾ ಶಿಕ್ಷಕ ರವಿಚಂದ್ರ ಅವರು ವಿವಿಧ ಗ್ರಾಮೀಣ ಶಾಲೆಗಳಿಗೆ  ನೋಟ್ ಬುಕ್ ವಿತರಣೆ ಸಮಾರಂಭ ಉದ್ಘಾಟಿಸಿದರು.

ಸ ಹಿ ಪ್ರಾ.ಶಾಲೆ. ಮಲ್ಕಾಪುರ, ಬಸಾಪುರ ಶಾಲೆಗಳಿಗೆ ವಿತರಿಸಿದ ಅವರು   ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ, ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಿಸುವ ಅಂಗವಾಗಿ ಇದುಒಂದು ಸಣ್ಣ ಸೇವೆಯಾಗಿದೆ. ಇಂತಹ ಸಣ್ಣ ಸೇವೆಗಳು ಮಕ್ಕಳಲ್ಲಿ ಮತ್ತು  ಸಮಾಜದಲ್ಲಿ ಮತ್ತಷ್ಟು ಜನರಲ್ಲಿ ಸಮಾಜ ಸೇವಾ ಮನೋಭಾವ ಬೆಳೆಸಲು ಪ್ರೇರಣೆಯಾಗಲಿ ಎನ್ನುವುದು ಸಹ ನಮ್ಮ ಉದ್ದೇಶವೆಂದು ಮಕ್ಕಳ ಸಾಹಿತ್ಯ ಪರಿಷತ್ತಿನ ಮಸ್ಕಿ ಘಟಕದ ಅಧ್ಯಕ್ಷರಾದ ಶಿಕ್ಷಕ ರವಿಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಗ್ರಾಮೀಣ ಶಾಲೆಗಳ ಸಬಲೀಕರಣಕ್ಕೆ ಶಿಕ್ಷಕರೊಂದಿಗೆ ಸದಾ ಜೊತೆ ಇರುತ್ತೇವೆ ಎಂದು ಚಾರ್ಲಿ ಉದ್ಬಾಳ್ ನುಡಿದರು.


ವಿಮಕ್ತಿ ಸಂಸ್ಥೆಯ ಚಾರ್ಲಿ ಉದ್ಬಾಳ್,  ಆರೋಗ್ಯಪ್ಪ ಬಡಿಗೇರ್,  ಶಿಕ್ಷಕ ಸುಭಾಶ್, ಮೇಘೇಶ್, ಸುನೀಲ್,ಬೂದೇಶ್, ಶಿವರಾಂ, ಮುಖ್ಯ ಶಿಕ್ಷಕ ಅಳ್ಳಯ್ಯ, ಮಲ್ಕಾಪುರ ಶಾಲೆಯ ಶಿಕ್ಷಕರು, ಬಸಾಪುರ ಶಾಲೆಯ ಶಿಕ್ಷಕರು  ಹಾಗೂ ಗ್ರಾಮಸ್ಥರು  ಜೊತೆಯಾಗಿದ್ದರು.