ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Monday 10 April 2017

ಮಾರುತಿ ಮಹಿಮೆ

*ಮಾರುತಿ ಜನ್ಮದ ಇತಿಹಾಸ*

ರಾಜಾ ದಶರಥನು ಪುತ್ರಪ್ರಾಪ್ತಿಗಾಗಿ *‘ಪುತ್ರಕಾಮೇಷ್ಟಿ ಯಜ್ಞ’*ವನ್ನು ಮಾಡಿದನು. ಆಗ ಯಜ್ಞದಿಂದ ಅಗ್ನಿದೇವನು ಪ್ರತ್ಯಕ್ಷನಾಗಿ ದಶರಥನ ರಾಣಿಯರಿಗಾಗಿ ಪಾಯಸ (ಖೀರು, ಯಜ್ಞದಲ್ಲಿನ ಉಳಿದ ಪ್ರಸಾದ) ವನ್ನು ನೀಡಿದನು. ದಶರಥನ ರಾಣಿಯರಂತೆಯೇ ತಪಸ್ಸನ್ನು ಮಾಡುವ *ಅಂಜನೀಗೂ ಪಾಯಸವು ದೊರಕಿತ್ತು ಮತ್ತು ಅದರಿಂದಲೇ ಮಾರುತಿಯ ಜನ್ಮವಾಗಿತ್ತು.*

ಆ ದಿನ *ಚೈತ್ರ ಪೌರ್ಣಿಮೆಯಾಗಿತ್ತು.* ಈ ದಿನವನ್ನು *‘ಹನುಮಾನ್ ಜಯಂತಿ’* ಎಂದು ಆಚರಿಸುತ್ತಾರೆ. ವಾಲ್ಮೀಕಿ ರಾಮಾಯಣದಲ್ಲಿ *(ಕಿಷ್ಕಿಂಧಾಕಾಂಡ, ಅಧ್ಯಾಯ ೬೬)*

*ಹನುಮಂತ ಜಯಂತಿ*

*ತಿಥಿ :* ಕೆಲವು ಪಂಚಾಂಗಗಳ ಪ್ರಕಾರ *ಆಶ್ವಯುಜ ಕೃಷ್ಣ ಚತುರ್ದಶಿಯು* ಹನುಮಂತನ ಜನ್ಮತಿಥಿಯಾಗಿದೆ ಮತ್ತು ಇನ್ನೂ ಕೆಲವರ ಪ್ರಕಾರ *ಚೈತ್ರ ಹುಣ್ಣಿಮೆಯು* ಹನುಮಂತನ ಜನ್ಮತಿಥಿಯಾಗಿದೆ. *ಕರ್ನಾಟಕದಲ್ಲಿ ಹನುಮಂತ ಜಯಂತಿಯನ್ನು ಚೈತ್ರ ಹುಣ್ಣಿಮೆಯಂದು ಆಚರಿಸುತ್ತಾರೆ.*

*ಮಹತ್ವ : ಹನುಮಂತ ಜಯಂತಿಯಂದು ಹನುಮಂತತತ್ತ್ವವು ಎಂದಿಗಿಂತ ೧೦೦೦ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಈ ತಿಥಿಗೆ ‘ಶ್ರೀ ಹನುಮತೇ ನಮಃ|’ ನಾಮಜಪ, ಹಾಗೆಯೇ ಹನುಮಂತನ ಇತರ ಉಪಾಸನೆಯನ್ನು ಭಾವಪೂರ್ಣವಾಗಿ ಮಾಡುವುದರಿಂದ ಹನುಮಂತತತ್ತ್ವದ ಲಾಭವು ಹೆಚ್ಚೆಚ್ಚು ದೊರೆಯಲು ಸಹಾಯವಾಗುತ್ತದೆ.*

*ಉತ್ಸವವನ್ನು ಆಚರಿಸುವ ಪದ್ಧತಿ :* ಈ ದಿನ ಹನುಮಂತನ ದೇವಸ್ಥಾನದಲ್ಲಿ ಸೂರ್ಯೋದಯಕ್ಕೆ ಮೊದಲೇ ಕೀರ್ತನೆಯು (ಹರಿಕಥೆ) ಪ್ರಾರಂಭವಾಗುತ್ತದೆ. ಸೂರ್ಯೋದಯಕ್ಕೆ ಕೀರ್ತನೆ ಮುಕ್ತಾಯಗೊಳ್ಳುತ್ತದೆ ಮತ್ತು ಹನುಮಂತನ ಜನ್ಮವಾಗುತ್ತದೆ. ನಂತರ ಹನುಮಂತನ ಮೂರ್ತಿಯನ್ನು ಪೂಜಿಸುತ್ತಾರೆ ಮತ್ತು ಎಲ್ಲರಿಗೂ ಪ್ರಸಾದವನ್ನು ಕೊಡುತ್ತಾರೆ.

*ಕಾರ್ಯ ಮತ್ತು ವೈಶಿಷ್ಟ್ಯಗಳು*

*ಸರ್ವಶಕ್ತಿವಂತ :* ಹುಟ್ಟಿದ ಕೂಡಲೇ *ಮಾರುತಿಯು ಸೂರ್ಯನನ್ನು ನುಂಗಲು ಹಾರಿದನು ಎಂಬ ಕಥೆಯಿದೆ,* ಇದರಿಂದ *ವಾಯುಪುತ್ರ* (ಅಂದರೆ ವಾಯುತತ್ತ್ವದಿಂದ ನಿರ್ಮಾಣವಾದ) ಮಾರುತಿಯು ಸೂರ್ಯನನ್ನು (ತೇಜತತ್ತ್ವ ವನ್ನು) ಜಯಿಸುವವನಾಗಿದ್ದನು ಎನ್ನುವುದು ತಿಳಿಯುತ್ತದೆ. ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ ಈ ತತ್ತ್ವಗಳಲ್ಲಿ ವಾಯುತತ್ತ್ವವು ತೇಜತತ್ತ್ವಕ್ಕಿಂತಲೂ ಹೆಚ್ಚು ಸೂಕ್ಷ್ಮ, ಅಂದರೆ ಹೆಚ್ಚು ಶಕ್ತಿಯುಳ್ಳದ್ದಾಗಿದೆ.

*ಭೂತ ಮತ್ತು ಮಾರುತಿ :* ಎಲ್ಲ ದೇವತೆಗಳಲ್ಲಿ ಕೇವಲ ಮಾರುತಿಗೆ ಮಾತ್ರ ಕೆಟ್ಟ ಶಕ್ತಿಗಳು ತೊಂದರೆಗಳನ್ನು ಕೊಡುವುದಿಲ್ಲ. ಲಂಕೆಯಲ್ಲಿ ಲಕ್ಷಗಟ್ಟಲೆ ರಾಕ್ಷಸರಿದ್ದರು, ಆದರೆ ಅವರಿಗೆ ಮಾರುತಿಗೆ ತೊಂದರೆ ಕೊಡಲು ಸಾಧ್ಯವಾಗಲಿಲ್ಲ. ಆದ್ದರಿಂದ ಮಾರುತಿಗೆ *‘ಭೂತಗಳ ಸ್ವಾಮಿ’* ಎನ್ನುತ್ತಾರೆ. ಯಾರನ್ನಾದರೂ ಭೂತವು ಹಿಡಿದಿದ್ದರೆ, ಆ ವ್ಯಕ್ತಿಯನ್ನು ಮಾರುತಿಯ ದೇವಸ್ಥಾನಕ್ಕೆ ಒಯ್ಯುತ್ತಾರೆ ಅಥವಾ ಮಾರುತಿ ಸ್ತೋತ್ರವನ್ನು ಪಠಿಸುತ್ತಾರೆ. ಇದರಿಂದ ಅವನ ತೊಂದರೆಗಳು ಕಡಿಮೆಯಾಗದಿದ್ದರೆ ಅವನ ಮೇಲಿನಿಂದ ತೆಂಗಿನಕಾಯಿಯನ್ನು ನಿವಾಳಿಸಿ ಮಾರುತಿಯ ದೇವಸ್ಥಾನದಲ್ಲಿ ಒಡೆಯುತ್ತಾರೆ.
ಅವನ ಮೇಲಿನಿಂದ ತೆಂಗಿನಕಾಯಿಯನ್ನು ನಿವಾಳಿಸುವುದರಿಂದ ಅವನಲ್ಲಿದ್ದ ಕೆಟ್ಟ ಶಕ್ತಿಯು ತೆಂಗಿನಕಾಯಿಯಲ್ಲಿ ಪ್ರವೇಶಿಸುತ್ತದೆ ಮತ್ತು ಆ ತೆಂಗಿನಕಾಯಿಯನ್ನು ಮಾರುತಿಯ ದೇವಸ್ಥಾನದಲ್ಲಿ ಒಡೆಯುವುದರಿಂದ ಅದರಲ್ಲಿರುವ ಕೆಟ್ಟ ಶಕ್ತಿಯು ಮಾರುತಿಯ ಸಾಮರ್ಥ್ಯದಿಂದ ನಾಶವಾಗುತ್ತದೆ. ನಂತರ ಆ ತೆಂಗಿನಕಾಯಿಯನ್ನು ವಿಸರ್ಜನೆ ಮಾಡುತ್ತಾರೆ.

*ಮಹಾಪರಾಕ್ರಮಿ :* ರಾಮ-ರಾವಣರ ಯುದ್ಧದಲ್ಲಿ ಬ್ರಹ್ಮಾಸ್ತ್ರದಿಂದ ರಾಮ, ಲಕ್ಷ್ಮಣ, ಸುಗ್ರೀವ ಇತ್ಯಾದಿ ವೀರರು ಮೂರ್ಛೆ ಹೋದಾಗ ಜಾಂಬವಂತನು ಹನುಮಂತನ ಪರಾಕ್ರಮದ ಬಗ್ಗೆ ಹೀಗೆ ವರ್ಣನೆ ಮಾಡಿದ್ದನು – ವಾನರಶ್ರೇಷ್ಠ ಹನುಮಂತನು ಜೀವಂತವಾಗಿದ್ದಾಗ ಎಲ್ಲ ಸೈನ್ಯವು ಮರಣ ಹೊಂದಿದರೂ ಅವರು ಮರಣ ಹೊಂದದಂತೆ ಆಗಿದೆ; ಆದರೆ ಹನುಮಂತನು ಪ್ರಾಣತ್ಯಾಗ ಮಾಡಿದರೆ ನಾವು ಜೀವಂತವಾಗಿದ್ದರೂ ಮೃತರಾದಂತೆಯೇ ಆಗಿದೆ. ಹನುಮಂತನು ಜಂಬು-ಮಾಲಿ, ಅಕ್ಷ, ಧೂಮ್ರಾಕ್ಷ, ನಿಕುಂಭ ಇತ್ಯಾದಿ ಬಲಾಢ್ಯ ವೀರರನ್ನು ನಾಶ ಮಾಡಿದನು. ಅವನು ರಾವಣನನ್ನೂ ಮೂರ್ಛಿತಗೊಳಿಸಿದನು. ಸಮುದ್ರ ಉಡ್ಡಾಣ, ಲಂಕೆಯ ದಹನ, ದ್ರೋಣಗಿರಿ ಪರ್ವತವನ್ನು ತರುವುದು ಇತ್ಯಾದಿ ಘಟನೆಗಳು ಹನುಮಂತನ ಶೌರ್ಯದ ಪ್ರತೀಕವಾಗಿವೆ.

*ಜಿತೇಂದ್ರಿಯ :* ಸೀತೆಯನ್ನು ಶೋಧಿಸಲು ರಾವಣನ ಅಂತಃಪುರದೊಳಗೆ ಪ್ರವೇಶಿಸಿದ ಮಾರುತಿಯ ಮನಃಸ್ಥಿತಿಯು ಅವನ ಉಚ್ಚಚಾರಿತ್ರ್ಯದ ನಿದರ್ಶಕವಾಗಿದೆ. ಅವನು ಸ್ವತಃ ಹೇಳುತ್ತಾನೆ, *‘ನಿಶ್ಚಿಂತೆಯಿಂದ ಬಿದ್ದಿರುವ ಈ ಎಲ್ಲ ರಾವಣನ ಸ್ತ್ರೀಯರನ್ನು ನಾನು ಹೀಗೆ ನೋಡಿರುವುದು ನಿಜ, ಆದರೆ ಅವರನ್ನು ನೋಡಿ ನನ್ನ ಮನಸ್ಸಿನಲ್ಲಿ ವಿಕಾರವುಂಟಾಗಲಿಲ್ಲ’* (ಶ್ರೀವಾಲ್ಮೀಕಿರಾಮಾಯಣ, ಸುಂದರಕಾಂಡ, ಅಧ್ಯಾಯ ೧೧, ಶ್ಲೋಕ ೪೨, ೪೩) ಅನೇಕ ಸಂತರೂ ಈ ಜಿತೇಂದ್ರಿಯ ಮಾರುತಿಯ ಪೂಜೆಯನ್ನು ಮಾಡಿ ಅವನ ಆದರ್ಶವನ್ನು ಸಮಾಜದ ಮುಂದೆ ಇಟ್ಟಿದ್ದಾರೆ.

*ಬ್ರಾಹ್ಮತೇಜ ಮತ್ತು ಕ್ಷಾತ್ರತೇಜದ ಪ್ರತೀಕ :* ಹಿಂದೂ ಧರ್ಮಗ್ರಂಥಗಳಲ್ಲೊಂದಾದ ರಾಮಾಯಣದಲ್ಲಿನ ಪ್ರಮುಖ ಪಾತ್ರಗಳಲ್ಲೊಬ್ಬ ಹಾಗೂ ಹಿಂದು ದೇವತೆಗಳಲ್ಲಿ ಒಬ್ಬ. ವಾಯುಪುತ್ರ, ಕಪಿವೀರನೆಂದು ಕರೆಯಲ್ಪಡುವ ಹನುಮಂತ ಕೇಸರಿ ಎಂಬ ವಾನರ ಮತ್ತು ಅಂಜನಾದೇವಿಯ ಮಗ ಮತ್ತು ರಾಮನ ಪರಮಭಕ್ತ. ಶಕ್ತಿಯ ದೇವತೆಯೆಂದು ಹನುಮಂತನನ್ನು ಪೂಜಿಸಲಾಗುತ್ತದೆ.

ಹನುಮಂತ ಕಿಷ್ಕಿಂಧೆಯಲ್ಲಿ ಸುಗ್ರೀವನ ಜೊತೆಯಲ್ಲಿರುತ್ತಾನೆ. ಸೀತೆಯನ್ನು ಹುಡುಕಿಕೊಂಡು ರಾಮ ಕಿಷ್ಕಿಂಧೆಗೆ ಬಂದಾಗ ಹನುಮಂತನಿಗೆ ರಾಮನೊಡನೆ ಭೇಟಿಯಾಗುತ್ತದೆ. ತನ್ನ ಸ್ವಾಮಿಯಾದ ರಾಮನಿಗೆ ಸಹಾಯ ಮಾಡಲು ಮುಂದಾಗುತ್ತಾನೆ. ನೂರು ಯೋಜನ ವಿಸ್ತಾರದ ಮಹಾ ಸಮುದ್ರವನ್ನು ಹಾರಿ ಸೀತೆಯು ಲಂಕೆಯಲ್ಲಿರುವ ವಿಷಯವನ್ನು ರಾಮನಿಗೆ ತಿಳಿಸುತ್ತಾನೆ. ಮುಂದೆ ರಾವಣನ ಜೊತೆ ಯುದ್ಧ ಮಾಡಿ, ಸೀತೆಯನ್ನು ಲಂಕೆಯಿಂದ ಕರೆದುಕೊಂಡು ಬರಲು ರಾಮನಿಗೆ ಹನುಮಂತ ಹಲವು ವಿಧದಲ್ಲಿ ನೆರವಾಗುತ್ತಾನೆ.

ಹನುಮಂತನು ಧರಿಸಿರುವ ಜನಿವಾರವು ಬ್ರಾಹ್ಮತೇಜದ ಪ್ರತೀಕವಾಗಿದೆ. ಹನುಮಂತನು ಶಿವನ ಅವತಾರವಾಗಿರುವುದರಿಂದ ಅವರಲ್ಲಿ ಲಯ ಮಾಡುವ ಸಾಮರ್ಥ್ಯವಿದೆ. ರಾಮನ ಭಕ್ತನಾದ ಕಾರಣ ಅವರಲ್ಲಿ ವಿಷ್ಣುವಿನ ತತ್ತ್ವವಿದೆ. ಹೀಗಾಗಿ ಅವರಲ್ಲಿ ಸ್ಥಿತಿ ಅಂದರೆ ಸಾತ್ತ್ವಿಕ ತತ್ತ್ವವೂ ಇದೆ.

*ಹನುಮಂತನಲ್ಲಿ ಬ್ರಾಹ್ಮತೇಜ ಮತ್ತು ಕ್ಷಾತ್ರತೇಜ ಎರಡೂ ಇರುವುದರಿಂದ* ಯುದ್ಧದಲ್ಲಿ ಹನುಮಂತನು ಅವಶ್ಯಕತೆ ಅನುಸಾರ ಅದನ್ನು ಉಪಯೋಗಿಸುತ್ತಾರೆ. ಕೌರವ ಪಾಂಡವರ ಯುದ್ಧದಲ್ಲಿ ಶ್ರೀಕೃಷ್ಣನು ಅರ್ಜುನನ ರಥದ ಮೇಲೆ ಹನುಮಂತನಿಗೆ ಸ್ಥಾನವನ್ನು ನೀಡಿದರು. ಆಗ ಅರ್ಜುನ ಮತ್ತು ಶ್ರೀ ಕೃಷ್ಣನ ಮೇಲೆ ಬರುವ ಎಲ್ಲಾ ಆಯುಧಗಳನ್ನು ಹನುಮಂತನು ನಾಶ ಮಾಡುತ್ತಿದ್ದರು.

*ಉಪಾಸನೆ*

*ಉದ್ದೇಶ :* ಮಾರುತಿಯಲ್ಲಿನ ಪ್ರಕಟ ಶಕ್ತಿಯು (ಶೇ.೭೨) ಇತರ ದೇವತೆಗಳ ಪ್ರಕಟ ಶಕ್ತಿಯ (ಶೇ.೧೦) ತುಲನೆಯಲ್ಲಿ ಅಧಿಕ ಪ್ರಮಾಣದಲ್ಲಿರುವುದರಿಂದ ಮುಂದಿನ ಕಾರಣಗಳಿಗಾಗಿ ಮಾರುತಿಯ ಉಪಾಸನೆಯನ್ನು ಮಾಡುತ್ತಾರೆ.

*ಕೆಟ್ಟ ಶಕ್ತಿಗಳ ತೊಂದರೆಗಳ ನಿವಾರಣೆಗಾಗಿ ಉಪಾಸನೆ:* ಸಮಾಜದಲ್ಲಿನ ಶೇ.೧೦೦ರಷ್ಟು ಜನರಿಗೆ ಕೆಟ್ಟ ಶಕ್ತಿಗಳ ತೊಂದರೆಯಿರುತ್ತದೆ. ಕೆಲವು ಬಾರಿ ಕೆಟ್ಟ ಶಕ್ತಿಗಳಿಂದ ವ್ಯಕ್ತಿಗೆ ಶಾರೀರಿಕ ಮತ್ತು ಮಾನಸಿಕ ತೊಂದರೆಗಳಾಗುತ್ತವೆ. ಹಾಗೆಯೇ ಜೀವನದಲ್ಲಿ ಇತರ ಅಡಚಣೆಗಳೂ ಬರುತ್ತವೆ. ಕೆಟ್ಟ ಶಕ್ತಿಗಳು ಸಾಧಕರ ಸಾಧನೆಯಲ್ಲಿ ಅಡಚಣೆಗಳನ್ನೂ ನಿರ್ಮಿಸುತ್ತವೆ; ಆದರೆ ದುರ್ದೈವದಿಂದ ಬಹುತೇಕ ಜನರಿಗೆ ಕೆಟ್ಟ ಶಕ್ತಿಗಳ ತೊಂದರೆಗಳ ಬಗ್ಗೆ ತಿಳಿದಿರುವುದಿಲ್ಲ. ಸಮಾಜದಲ್ಲಿನ ಕೆಲವು ಜನರು ಕೆಟ್ಟ ಶಕ್ತಿಗಳ ತೊಂದರೆಗಳ ನಿವಾರಣೆಗಾಗಿ ಮಾಂತ್ರಿಕ ಅಥವಾ ಭಗತರ ಕಡೆಗೆ ಹೋಗುತ್ತಾರೆ.
ಆದರೆ ಅವರು ಮಾಡಿದ ಉಪಾಯವು ಹೆಚ್ಚಿನಾಂಶ ತಾತ್ಕಾಲಿಕವಾಗಿರುತ್ತದೆ. ಕೆಲವು ಸಮಯದ ನಂತರ ಕೆಟ್ಟ ಶಕ್ತಿಗಳು ಆ ವ್ಯಕ್ತಿಗೆ ಪುನಃ ತೊಂದರೆಗಳನ್ನು ಕೊಡಬಹುದು. ಹೆಚ್ಚಿನಾಂಶ ಮಾಂತ್ರಿಕ ಮತ್ತು ಭಗತರು ಮೋಸಗಾರರಾಗಿರುತ್ತಾರೆ. ಅವರು ಜನರನ್ನು ಮೋಸಗೊಳಿಸುತ್ತಾರೆ. ಆದ್ದರಿಂದ ಕೆಟ್ಟ ಶಕ್ತಿಗಳ ತೊಂದರೆಗಳ ನಿವಾರಣೆಗಾಗಿ ಕಪಟ ಮಾಂತ್ರಿಕ ಮುಂತಾದವರ ಕೈಯಲ್ಲಿ ಸಿಲುಕಿಕೊಳ್ಳುವುದಕ್ಕಿಂತ ಮತ್ತು ಮುಗಿಯದ ಕರ್ಮಕಾಂಡಗಳನ್ನು ಮಾಡುವುದಕ್ಕಿಂತ ಸಾಧನೆ ಮಾಡುವುದೇ ಪ್ರಭಾವಿ ಉಪಾಯವಾಗಿದೆ.

ಕೆಟ್ಟ ಶಕ್ತಿಗಳ ತೊಂದರೆಗಳ ನಿವಾರಣೆಯನ್ನು ಮಾಡುವ ದೇವತೆಗಳಲ್ಲಿ ಮಾರುತಿಯು ಒಬ್ಬನು. ಮಾರುತಿಯ ನಾಮಜಪದಿಂದ *ಕೆಟ್ಟ ಶಕ್ತಿಗಳ ತೊಂದರೆಯಿಂದ ಶಾಶ್ವತವಾಗಿ ಮುಕ್ತಿಯನ್ನು ಹೇಗೆ ಪಡೆದುಕೊಳ್ಳಬೇಕು ಎಂಬುದರ ಮಾಹಿತಿಯನ್ನು ಸನಾತನ ಸಂಸ್ಥೆಯ ಸತ್ಸಂಗಗಳಲ್ಲಿ ಹೇಳಲಾಗುತ್ತದೆ.*

*ರೋಗನಿವಾರಣೆ :* ರೋಗಿ ವ್ಯಕ್ತಿಗಳಿಗೆ ಒಳ್ಳೆಯದಾಗಲು ಅವರನ್ನು ಹನುಮಂತನ ದೇವಸ್ಥಾನಕ್ಕೆ ಕರೆದೊಯ್ಯುವ ಪದ್ಧತಿಯಿದೆ. *ರೋಗಗಳಿಂದ ಮುಕ್ತರಾಗಲು ವೀರಹನುಮಂತನ ಮಂತ್ರವನ್ನೂ ಪಠಿಸುತ್ತಾರೆ.*

*ಮಾರುತಿಯ ಪೂಜೆ ಅಥವಾ ಉಪಾಸನೆಯ ಮೊದಲು ಬಿಡಿಸಬೇಕಾದ ರಂಗೋಲಿ*

*ಮಧ್ಯದ ಬಿಂದುವಿನಿಂದ ಅಷ್ಟದಿಕ್ಕುಗಳಲ್ಲಿ ೪ ಚುಕ್ಕಿಗಳನ್ನು ಹಾಕಬೇಕು.*
*ಈ ರಂಗೋಲಿಯು ಮಾರುತಿ ತತ್ತ್ವವನ್ನು ಆಕರ್ಷಿಸುತ್ತದೆ ಮತ್ತು ಪ್ರಕ್ಷೇಪಿಸುತ್ತದೆ*
(Image attached)

*ಮಾರುತಿ ಗಾಯತ್ರಿ*

*ಆಂಜನೇಯಾಯ ವಿದ್ಮಹೇ| ವಾಯುಪುತ್ರಾಯ ಧೀಮಹಿ|*
*ತನ್ನೋ ವೀರಃ ಪ್ರಚೋದಯಾತ್||*

ಅರ್ಥ: ನಾವು ಅಂಜನೀಪುತ್ರ ಮಾರುತಿಯನ್ನು ಅರಿತಿದ್ದೇವೆ. ವಾಯುಪುತ್ರ ಮಾರುತಿಯ ಧ್ಯಾನವನ್ನು ಮಾಡುತ್ತೇವೆ. ಆ ವೀರ ಮಾರುತಿಯು ನಮ್ಮ ಬುದ್ಧಿಗೆ ಸತ್ಪ್ರೇರಣೆ ಕೊಡಲಿ.

(ಹೆಚ್ಚಿನ ಮಾಹಿತಿಗಾಗಿ *ಸನಾತನ ಸಂಸ್ಥೆಯ* ಕಿರುಗ್ರಂಥ *‘ಮಾರುತಿ’* ಓದಿರಿ.)

*ಮಾರುತಿಗೆ ಮಾಡಬೇಕಾದ ಕೆಲವು ಪ್ರಾರ್ಥನೆಗಳು*

*ಹೇ ಮಾರುತಿ, ನೀನು ಹೇಗೆ ಶ್ರೀರಾಮಚಂದ್ರನ ದಾಸ್ಯಭಕ್ತಿಯನ್ನು ಮಾಡಿದೆಯೋ, ಹಾಗೆಯೇ ನನಗೂ ಭಕ್ತಿಯನ್ನು ಮಾಡಲು ಕಲಿಸು, ಇದೇ ನಿನ್ನ ಚರಣಗಳಲ್ಲಿ ಪ್ರಾರ್ಥನೆ!*

*ಹೇ ಮಾರುತಿ, ಧರ್ಮರಕ್ಷಣೆಗಾಗಿ ನೀನು ನನಗೆ ಭಕ್ತಿ ಮತ್ತು ಶಕ್ತಿಯನ್ನು ಕೊಡು, ಇದೇ ನಿನ್ನ ಚರಣಗಳಲ್ಲಿ ಪ್ರಾರ್ಥನೆ!*

*ಹೇ ಮಾರುತಿ, ಹೇಗೆ ನೀನು ರಾಮನಾಮದ ಬಲದಿಂದ ಅಧರ್ಮಿ ಅಸುರರನ್ನು ನಾಶ ಮಾಡಿದೆ, ಹಾಗೆ ಈಗ ನಡೆಯುತ್ತಿರುವ ಧರ್ಮ-ಅಧರ್ಮದ ಹೋರಾಟದಲ್ಲಿ ನಮಗೆ ‘ಸಾಧನೆ’ಯೆಂದು ರಾಷ್ಟ್ರರಕ್ಷಣೆ, ಧರ್ಮರಕ್ಷಣೆ ಇವುಗಳ ಕಾರ್ಯವನ್ನು ಮಾಡಲು ಆಶೀರ್ವಾದ ಮತ್ತು ಬಲವನ್ನು ಕೊಡು!*

(ಪ್ರಾರ್ಥನೆಯ ಬಗೆಗಿನ ಸವಿಸ್ತಾರ ವಿವೇಚನೆ ಮತ್ತು ವಿವಿಧ ಪ್ರಸಂಗಗಳಲ್ಲಿ ಮಾಡಬೇಕಾದ ಪ್ರಾರ್ಥನೆಗಳನ್ನು *ಸನಾತನ ಸಂಸ್ಥೆ* ನಿರ್ಮಿಸಿದ *‘ಪ್ರಾರ್ಥನೆ (ಮಹತ್ವ ಮತ್ತು ಉದಾಹರಣೆಗಳು)’* ಈ ಕಿರುಗ್ರಂಥದಲ್ಲಿ ಕೊಡಲಾಗಿದೆ.)
ಸಂಗ್ರಹ

Saturday 25 March 2017

ನೀವು ಹುಟ್ಟಿದ್ದು ಯಾವ ಸಂವತ್ಸರದಲ್ಲಿ ....ತಟ್ಟನೆ ಉತ್ತರ ನೋಡಿ..

📅📆📅📆📅📆📅📆📅📆

ನಾವೆಲ್ಲರೂ ನಮ್ಮ ಹುಟ್ಟಿದ ವರ್ಷವನ್ನು ಥಟ್ಟನೆ ಹೇಳುತ್ತೇವೆ. ಆದರೆ ಭಾರತೀಯ ಪಂಚಾಂಗ ರೀತ್ಯಾ ಹುಟ್ಟಿದ ಸಂವತ್ಸರದ ಹೆಸರು ಹೇಳಲು ಮಾತ್ರ ತಡಕಾಡುತ್ತೇವೆ . ಇಗೋ ಇಲ್ಲಿದೆ ನೋಡಿ ನಿಮ್ಮ ಹುಟ್ಟಿದ ವರ್ಷ ಯಾವ ಸಂವತ್ಸರದಲ್ಲಿದೆಯೆಂಬ ವಿವರ.ಯಾರೋ ಪುಣ್ಯಾತ್ಮರು ತಯಾರಿಸಿ ಕೊಟ್ಟಿರುವ ಈ ಮಾಹಿತಿ ರಕ್ಷಿಸಿಡಿ.

*( 1867, 1927,1987,)*: ಪ್ರಭವ
*(1868,1928,1988)*: ವಿಭವ
*(1869,1929,1989)*: ಶುಕ್ಲ
*(1870,1930,1990)*: ಪ್ರಮೋದೂತ
*(1871,1931, 1991)*: ಪ್ರಜೋತ್ಪತ್ತಿ
*(1872,1932,1992)*: ಅಂಗೀರಸ
*(1873,1933,1993)*: ಶ್ರೀಮುಖ
*(1874,1934,1994)*: ಭಾವ
*(1875,1935,1995)*:ಯುವ
*(1876,1936,1996)*: ధాత
*(1877,1937,1997)*:  ಈಶ್ವರ
*(1878,1938,1998)*: ಬಹುಧಾನ್ಯ
*(1879,1939,1999)*: ಪ್ರಮಾದಿ
*(1880,1940,2000)*: ವಿಕ್ರಮ
*(1881,1941,2001)*: ವೃಷ
*(1882,1942,2002)*: ಚಿತ್ರಭಾನು
*(1883,1943,2003)*: ಸ್ವಭಾನು
*(1884,1944,2004)*: ತಾರಣ
*(1885,1945,2005)*: ಪಾರ್ಥಿವ
*(1886,1946,2006)*: ವ್ಯಯ
*(1887,1947,2007)*: ಸರ್ವಜಿತ್
*(1888,1948,2008)*:
ಸರ್ವಧಾರಿ
*(1889,1949,2009)*: ವಿರೋಧಿ
*(1890,1950,2010)*: ವಿಕೃತಿ
*(1891,1951,2011)*: ಖರ
*(1892,1952,2012)*:  ನಂದನ
*(1893,1953,2013)*: ವಿಜಯ
*(1894,1954,2014)*: ಜಯ
*(1895,1955,2015)*: ಮನ್ಮಥ
*(1896,1956,2016)*: ದುರ್ಮುಖಿ
*(1897,1957,2017)*: ಹೇವಿಳಂಬಿ
*(1898,1958,2018)*: ವಿಳಂಬಿ
*(1899,1959,2019)*: ವಿಕಾರಿ
*(1900,1960,2020)*: ಶಾರ್ವರಿ
*(1901,1961,2021)*: ಪ್ಲವ
*(1902,1962,2022)*: ಶುಭಕೃತ
*(1903,1963,2023)*: ಶೋಭಕೃತ
*(1904,1964,2024)*: ಕ್ರೋಧಿ
*(1905,1965,2025)*: ವಿಶ್ವಾವಸು
*(1906,1966,2026)*: ಪರಾಭವ
*(1907,1967,2027)*: ಪ್ಲವಂಗ
*(1908,1968,2028)*: ಕೀಲಕ
*(1909,1969,2029)*: ಸೌಮ್ಯ
*(1910,1970,2030)*:  ಸಾಧಾರಣ
*(1911,1971,2031)*: ವಿರೋಧಿಕೃತ
*(1912,1972,2032)*: ಪರಿಧಾವಿ
*(1913,1973,2033)*: ಪ್ರಮಾದ
*(1914,1974,2034)*: ಆನಂದ
*(1915,1975,2035)*: ರಾಕ್ಷಸ
*(1916,1976,2036)*: ನಳ
*(1917,1977,2037)*: ಪಿಂಗಳ
*(1918,1978,2038)*: ಕಾಳಯುಕ್ತಿ
*(1919,1979,2039)*: ಸಿದ್ಧಾರ್ಥಿ
*(1920,1980,2040)*: ರೌದ್ರಿ
*(1921,1981,2041)*: ದುರ್ಮತಿ
*(1922,1982,2042)*: ದುಂದುಭಿ
*(1923,1983,2043)*: ರುಧಿರೋದ್ಗಾರಿ
*(1924,1984,2044)*: ರಕ್ತಾಕ್ಷಿ
*(1925,1985,2045)*: ಕ್ರೋಧನ
*(1926,1986,2046)*: ಅಕ್ಷಯ

ಶೇರ್ ಮಾಡಿಿ

*Don't see alone, pass it to all friends and relatives.*

📕📒📕📒📕📒📕📒📕📒

Thursday 16 March 2017

ಪ್ರೀತಿಯ ಅಂತಃರ್ದರ್ಶನ 'ಗಣೇಶ್ ಕೋಡೂರ'ರ "ನನಗೂ ಲವ್ವಾಗಿದೆ..."

ಪ್ರೀತಿಯ  ಅಂತಃರ್ದರ್ಶನ

ಪ್ರೀತಿಯೇ ಹಾಗೆ ...ಅದು ಕಲ್ಲು ಬಂಡೆಯಲ್ಲೂ ಬೆಳೆವ ಕಲ್ಲು ಹೂ..ಕೆಸರಲು ಅರಳಬಲ್ಲ ಮನಮೋಹಕ ತಾವರೆ.ಸಹಜವಾಗಿ ಬಾಡುವ ಹಸಿರುಬಳ್ಳಿಯ ಘಮ್ಮೆನ್ನುವ ಜಾಜಿ ಮಲ್ಲಿಗೆ ಇದ್ದಷ್ಟು ಸಮಯ ಪ್ರೀತಿ ಹಂಚುತ್ತದೆ...ಕಾರಣ ಇಲ್ಲದೆಯೂ ಹುಟ್ಟುತ್ತದೆ ,ಅದೇ ಪ್ರೀತಿ ಹುಟ್ಟಿದ ಎದೆಯಲ್ಲೇ ಮತ್ಯಾವುದೋ ಕಾರಣಕ್ಕೆ ದ್ವೇಷವೂ ಹುಟ್ಟಬಹುದು .ಪ್ರೀತಿಯನ್ನು ಅದೇ ದೇಹ ಸಾಯಿಸಲುಬಹುದು ಆದರೆ ಪ್ರೀತಿ ಜಗದಲ್ಲಿ ಸಾಯದು... ಬಾಡದು... ಅದು ಎಲ್ಲ ಜೀವ ಚರಾ ಚರಗಳಲ್ಲಿ ಇದ್ದೆ ಇರುತ್ತದೆ. ಇಂಥ ಪ್ರೀತಿ ಬಗ್ಗೆ ಪ್ರೀತಿಯ ಹಲವು ಮಜಲುಗಳ ಬಗ್ಗೆ ಮಾನಸದಂಗಳದಿಂದ ಮನಸಿನಾಳ ತಟ್ಟಿ ಕರುನಾಡ ಓದುಗರ ಹೃದಯ ತಟ್ಟುತ್ತಿರುವ ಗಣೇಶ್ ಕೊಡೋರ್ ...(ಅರುಡೋ ಗಣೇಶ್) ಅವರು ತಮ್ಮ  ಸರಳವಾದ  ನವಿರು ನಿರೂಪಣೆ ಒಂದಿಷ್ಟು  ಸ್ವಾನುಭವ ಹಾಗೂ ಭಾವನಾತ್ಮಕ ವಿಶ್ಲೇಷಣೆ ....ಮನ ಮುಟ್ಟುವ ಭಾವ ನಿರೂಪಣಾ ಸಾಲುಗಳಿಂದಲೇ ಓದಿಸಿಕೊಂಡು ಹೋಗುವಂತೆ ಮಾಡಬಲ್ಲ ಶಕ್ತ ಬರಹ ಕಸುಬುದಾರಿಕೆ ಅವರ
"ನನಗೂ ಲವ್ವಾಗಿದೆ " ಪುಸ್ತಕದಲ್ಲೂ ವಿಶೇಷವಾಗಿ ಗಮನಿಸಬಹುದು.  ಇನ್ನಷ್ಟು ಪುಟಗಳಲಿ ಪ್ರೀತಿ ಫಿಲಾಸಫಿ ಭೋದಿಸಿದ್ದರೆ
ಇನ್ನೊಂದಿಷ್ಟು ಗಂಭೀರವಾಗಿ ಪ್ರೀತಿ ಆಳಕ್ಕೆ ಇಳಿಯಬಹುದಿತ್ತು.

  ನಾನು ಓದಿ ಗ್ರಹಿಸಿದಂತೆ ಅದು ಒಂದು ಪ್ರೇಮಿಗಳ ಗೈಡ್... ಯುವ ಮನಸುಗಳ ಆಪ್ತ ಸಮಾಲೋಚನಾ ಮಿತ್ರ ಎಂದೇ ಹೇಳಬಹುದು. ಪ್ರೀತಿ ಹಂಚಿಕೊಳ್ಳುವ ಬಗ್ಗೆ ...ಉಳಿಸಿಕೊಳ್ಳುವ ಬಗ್ಗೆ ಪ್ರೀತಿ ಹೆಚ್ಚಿಸಿಕೊಳ್ಳುವ ಬಗ್ಗೆ ,ಪ್ರೀತಿ ಪಡೆದುಕೊಳ್ಳುವ ಬಗ್ಗೆ ಎಲ್ಲ ಮನಬಚ್ಚಿ ಮಾತಾಡಿ ಅಕ್ಷರ ರೂಪಕ್ಕಿಳಿಸಿ ಓದುಗರ ಎದೆಯಲ್ಲಿ ಪ್ರೀತಿ ವ್ಯಾಖ್ಯಾನ ಪಡೆದುಕೊಳ್ಳುತ್ತಾ ಸಾಗುವಂತೆ ಮಾಡಬಲ್ಲ ಹಲವು ಪುಟಗಳು ಆಪ್ತವಾಗುತ್ತ ಮತ್ತೆ ಮತ್ತೆ ಸೆಳೆದು  ಪುಟ ತೆರೆಸಿ ತೆರೆಸಿ ಓದಿಸಿಕೊಳ್ಳುತ್ತವೆ.

ಪ್ರೀತಿಯಿಂದಲೇ ನಿಮ್ಮ ಎದೆಯ ಕದ ತೆರೆಸುತ್ತಲೇ  "ಬದುಕೆಂದ ಮೇಲೆ ಲವ್ವಾಗಲೇಬೇಕು" ಎಂದು ಆರಂಭದಲ್ಲೇ ತೀರ್ಪು ನೀಡಿದ್ದಾರೆ. ಪ್ರೀತಿಯ ಬಗ್ಗೆ  ಈ ವರೆಗೆ  ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಸಿನಿಮಾಗಳಿಂದ ಒಂದಿಷ್ಟು ಪಾಠ ಕಲಿತಿದ್ದರೆ ಈಗ 'ನಿಮ್ಮೆಲ್ಲರ ಮಾನಸ' ಎಡಿಟರ್  ಗಣೇಶ್ ಅರುಡೋ ಅವರಿಂದಲೂ ಒಂದಿಷ್ಟು ಕಲಿಯಬಹುದು.. ಪ್ರೀತಿಯೇ ಸಿಕ್ಕಿಲ್ಲ ಎನ್ನುವವರಿಗೆ ತಮಗೇ  ಯಾಕೆ ಸಿಕ್ಕಿಲ್ಲ ಎಂದು ಕಂಡುಕೊಳ್ಳಲು, ಪ್ರೀತಿ ಸಿಕ್ಕವರು ಅದನ್ನು ಉಳಿಸಿಕೊಂಡು ಹೋಗಲು ಕೆಲವು ಮಾರ್ಗದರ್ಶನಗಳನ್ನು ಪಡೆಯಲು , ಪ್ರೀತಿ ಎಂದರೆ ಬರೀ ಬದನೆಕಾಯಿ ....ನಾನು ಪ್ರೀತಿಗೆ ಬೀಳೋಲ್ಲ ಎಂದುಕೊಂಡವರು.... ಪ್ರೀತಿ ಎಂದರೆ ಕೇವಲ ದೈಹಿಕ  ,ಲೈಂಗಿಕ ಮನೋಭಾವನೆಯಿಂದ ನೋಡುವವರು ಪ್ರೀತಿಸಿ ಪದೇ ಪದೇ ಕೈಕೊಟ್ಟು ಹೊಸ ಹೊಸ ದೇಹಗಳ ,ಮನಸುಗಳ ಪ್ರೀತಿಗೆ ಬಲೆ ಬೀಸುವವರು ಮತ್ತೆ ಎಲ್ಲಾ ವರ್ಗದ ಓದು ಬಲ್ಲವರು ಪ್ರೀತಿ ಬಗ್ಗೆ ಸರಳ ಫಿಲಾಸಫಿ ತಿಳಿಯಲು ಈ ಪುಸ್ತಕ ಓದಿದರೆ  ಕೊನೆಗೆ ಲೇಖಕರೆ ಹೇಳುವಂತೆ "ಈ ಬದುಕೆನ್ನುವುದೇ ಬಹು ದೊಡ್ಡ ಪ್ರೀತಿ '"ಎಂದು ನೀವೂ ನಿರ್ಣಯಿಸುವಿರಿ.

ಇನ್ನೂ ಹೆಚ್ಚು ವಿಮರ್ಶೆ ಮಾಡೋದಿಲ್ಲ... ಯಾಕೆಂದರೆ ಪ್ರೀತಿ ವಿಮರ್ಶೆಯಲ್ಲಿ ಮುಗಿಯುವುದಲ್ಲ... ಪ್ರೀತಿ ಮನಸುಗಳ ಸಾಮಿಪ್ಯದಲ್ಲಿ ಸಾನಿಧ್ಯ ದಲ್ಲಿ ಹುಟ್ಟಿ ಅರಳಿ ಘಮ ಘಮ ಘಮಿಸುವಂತದ್ದು... ಪುಸ್ತಕ ಪ್ರೀತಿಯೂ ಅಷ್ಟೇ.. ನೀವೂ ಆ ಪುಸ್ತಕದ ಸಾಮೀಪ್ಯ ಸಾನಿಧ್ಯ ಬಯಸಿ ಆಪ್ತ ಭಾವದಲ್ಲಿ ಹಿಡಿದುಕೊಂಡು ಓಡಿದಾಗಲೇ ಆ ಪುಸ್ತಕ
ಇಷ್ಟವಾಗೋದು... ಪುಸ್ತಕದ ಸಾಲುಗಳು ನಿಮ್ಮೆದೆಯಲಿ ನಾಟಿ   ಪ್ರೀತಿ ಅರ್ಥ ತೆರೆದುಕೊಳ್ಳುವುದು... ತಡ ಇನ್ಯಾಕೆ ನಿಮಗೂ ಲವ್ವಾಗಬೇಕೆ...??
ಅರುಡೋ ಗಣೇಶ್ ಅವರ "ನನಗೂ ಲವ್ವಾಗಿದೆ" ಪುಸ್ತಕ ಓದಿ..
......ನನಗಂತೂ ಸಿಕ್ಕಾಬಟ್ಟೆ ಲವ್ವಾಗಿದೆ !! ..ನಿಮ್ಮೆಲ್ಲರ ಮೇಲೆ.... ಕನ್ನಡ ಪುಸ್ತಕಗಳ ಮೇಲೆ.... ಹಸಿರು ಸಿರಿ.. ಅಲೆಗಳೂರ ಸಾಗರ ಎಲ್ಲ.... ಪ್ರೀತಿ ಉತ್ಸಾಹ ಹೆಚ್ಚಿಸಿವೆ. ಮತ್ತೆ ನಿಮಗೆ...??...
            
ರವಿರಾಜ್ ಸಾಗರ್..

Saturday 11 February 2017

ಕಳೆದು ಹೋದ ಮೊಬೈಲ್ ಸಿಗಲು ಹೀಗೆ ಮಾಡಿ

*_ನಿಮ್ಮ ಮೊಬೈಲ್ ಕಳೆದುಹೋದರೆ ಅದನ್ನು ಪತ್ತೆ ಮಾಡಲು ಏನು ಮಾಡಬೇಕು?_*

```ನಾವು ಎಷ್ಟೇ ಹುಷಾರಾಗಿದ್ದರೂ ಕೆಲವೊಮ್ಮೆ ಮೊಬೈಲ್'ಗಳು ಕಳುವಾಗಿಬಿಡುತ್ತವೆ. ಅಥವಾ ಕಳೆದುಕೊಂಡುಬಿಡುವ ಸಾಧ್ಯತೆ ಇದ್ದೇ ಇರುತ್ತದೆ. ಈ ಸಂದರ್ಭದಲ್ಲಿ ಏನು ಮಾಡಬೇಕು ಎಂದು ಗೊತ್ತಾಗದೇ ಹತಾಶರಾಗುತ್ತೇವೆ. ಪೊಲೀಸ್'ಗೆ ದೂರು ಕೊಟ್ಟರೆ ಮೊಬೈಲನ್ನು ಹುಡುಕಿಕೊಡುವ ಗ್ಯಾರಂಟಿ ಇರುವುದಿಲ್ಲ. ಆದರೆ, ನಿಮ್ಮ ಮೊಬೈಲನ್ನು ಒಂದೇ ದಿನದಲ್ಲಿ ಹುಡುಕಲು ಸಾಧ್ಯವಿದೆ. ಅದಕ್ಕೆ ನೀವು ಮಾಡಬೇಕಿರುವುದು ಇಷ್ಟೇ.

ನಿಮ್ಮ ಮೊಬೈಲ್'ನಲ್ಲಿ ಐಎಂಇಐ ಎಂಬ ವಿಶೇಷ ನಂಬರ್ ಇರುತ್ತದೆ. ಈ ಇಂಟರ್'ನ್ಯಾಷನಲ್ ಮೊಬೈಲ್ ಎಕ್ವಿಪ್ಮೆಂಟ್ ಐಡೆಂಟಿಟಿ ನಂಬರನ್ನು ಮೊದಲು ಗುರುತು ಮಾಡಿಟ್ಟುಕೊಂಡಿರಿ. ಇದು ಬಹಳ ಮುಖ್ಯ. ಈ ನಂಬರನ್ನು ಪಡೆಯಲು ನಿಮ್ಮ ಮೊಬೈಲ್'ನಿಂದ *#06# ಅನ್ನು ಡಯಲ್ ಮಾಡಿದರೆ ನಿಮಗೆ 15 ಅಕ್ಷರದ ಐಎಂಇಐ ನಂಬರ್ ಸಿಗುತ್ತದೆ. ಇದನ್ನು ನಿಮ್ಮ ಡೈರಿಯಲ್ಲಿ ಗುರುತು ಮಾಡಿಟ್ಟುಕೊಳ್ಳಿ.

ಅಕಸ್ಮಾತ್ ನಿಮ್ಮ ಮೊಬೈಲ್ ಕಳುವಾದಾಗ ಈ ಕೆಳಗಿನ ವಿವರಗಳೊಂದಿಗೆ copy@vsnl.net ಎಂಬ ವಿಳಾಸಕ್ಕೆ ಇ-ಮೇಲ್ ಮಾಡಿ.

ನಿಮ್ಮ ಹೆಸರು:
ವಿಳಾಸ:
ಫೋನ್ ಮಾಡೆಲ್:
ಮೇಕ್:
ಕೊನೆಯ ಬಾರಿ ಬಳಸಿದ ನಂಬರ್:
ನಿಮ್ಮ ಇಮೇಲ್ ವಿಳಾಸ:
ನಾಪತ್ತೆಯಾದ ದಿನಾಂಕ:
ಐಎಂಇಐ ನಂಬರ್:

ಮುಂದಿನ 24 ಗಂಟೆಯೊಳಗೆ ನಿಮ್ಮ ಮೊಬೈಲನ್ನು ಟ್ರೇಸ್ ಮಾಡಲಾಗುತ್ತದೆ. ಪೊಲೀಸ್ ಠಾಣೆಗೆ ಹೋಗುವ ಅಗತ್ಯವಿರುವುದಿಲ್ಲ. ಕಳೆದುಹೋದ ಮೊಬೈಲ್'ನಲ್ಲಿ ನಿಮ್ಮ ಸಿಮ್ ಕಾರ್ಡ್ ಬದಲಾಯಿಸಿದ್ದರೂ ಫೋನ್'ನ ಜಿಪಿಆರ್ಎಸ್ ಮೂಲಕ ಮೊಬೈಲನ್ನು ಪತ್ತೆಹಚ್ಚುವ ತಂತ್ರಜ್ಞಾನ ಇದೆ.

ಒಳ್ಳೆಯದಕ್ಕಾಗಿ

-ಶೇರ್ ಮಾಡಿ```

Wednesday 8 February 2017

ಕನ್ನಡದಲ್ಲಿ ಮಕ್ಕಳ ಸಾಹಿತ್ಯ ಕುರಿತು ಪಕ್ಷಿ ನೋಟ

ಕನ್ನಡದಲ್ಲಿ ಮಕ್ಕಳ ಸಾಹಿತ್ಯ ಕುರಿತ ಒಂದು ಪಕ್ಷಿನೋಟ
ಕೃತಿ : ಮಕ್ಕಳ ಸಾಹಿತ್ಯ : ಅಂದು - ಇಂದು
ಲೇಖಕರು : ಟಿ.ಎಸ್. ನಾಗರಾಜ ಶೆಟ್ಟಿ ಮತ್ತು ಎಂ.ಜಿ. ಗೋವಿಂದರಾಜು
ಪ್ರಕಾಶಕರು : ನಿರ್ಮಲ ಪ್ರಕಾಶನ, ಗೋವಿನಪುರ ಬಡಾವಣೆ, ತಿಪಟೂರು
ಪುಟಗಳು : 8 + 48 ಬೆಲೆ : ರೂ. 50-00

ಮಕ್ಕಳ ಸಾಹಿತ್ಯ ನಿರಂತರ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಈ ದಿನಗಳಲ್ಲಿ ಮಕ್ಕಳಿಗಾಗಿ ಬರೆಯುವವರು 'ವೈಯಕ್ತಿಕವಾಗಿ ನಷ್ಟವಾದರೂ ಚಿಂತಿಲ್ಲ ಒಂದಷ್ಟು ಏನಾದರೂ ಮಾಡೋಣ' ಎಂಬ ಹಂಬಲದಿಂದ ಅಲ್ಲಲ್ಲಿ ಕೃತಿ ಪ್ರಕಟಣೆಯನ್ನು ಮಾಡುತ್ತಲೇ ಬಂದಿದ್ದಾರೆ. ಕಥೆ, ಕವನ, ಚುಟುಕ, ನಾಟಕ, ಚಿಣ್ಣರ ಕಥೆಗಳು ಹಾಗೋ ಹೀಗೋ ಖರ್ಚಾಗಬಹುದು. ಮಕ್ಕಳ ಬಗ್ಗೆ ಪ್ರಬಂಧ, ಸಂಶೋಧನಾ ಲೇಖನಗಳು ಪ್ರಕಟವಾಗುವುದು, ಪ್ರಕಟವಾದರೂ ಖgïಗುವುದು ಅನುಮಾನವೇ. ಆದರೂ ಒಳಗಿನ ತುಡಿತ, ಮಕ್ಕಳ ಸಾಹಿತ್ಯದ ದಾಖಲೀಕರಣ ಎಂಬ ಸೇವೆಯನ್ನು ಪ್ರಾಂಜಲವಾಗಿ ಮಾಡುವ ಕೆಲವರು ಅಲ್ಲಲ್ಲಿ ಇದ್ದಾರೆ. ಈ ಸಾಲಿಗೆ ತೀರಾ ಇತ್ತೀಚೆಗೆ ಸೇರ್ಪಡೆಯಾದ ತಿಪಟೂರಿನ ನಿರ್ಮಲ ಪುಸ್ತಕ ಮಾಲೆಯ 26ನೇ ಹೂ 'ಮಕ್ಕಳ ಸಾಹಿತ್ಯ : ಅಂದು - ಇಂದು'. 'ಕನ್ನಡದಲ್ಲಿ ಮಕ್ಕಳ ಸಾಹಿತ್ಯ' ಎಂಬ ಎಂ.ಜಿ. ಗೋವಿಂದರಾಜು ಅವರ ಬಹುಮಾನಿತ ಪ್ರಬಂಧ ಮತ್ತು 'ಕನ್ನಡದಲ್ಲಿ ಮಕ್ಕಳ ಸಾಹಿತ್ಯ : ಇಂದು' (ಸ್ವಾತಂತ್ರ್ಯೋತ್ತರ ಅವಧಿ) ಎಂಬ ಟಿ.ಎಸ್. ನಾಗರಾಜ ಶೆಟ್ಟಿಯವರ ಲೇಖನಗಳನ್ನು ಒಳಗೊಂಡ ಈ ಕೃತಿ ಕನ್ನಡದಲ್ಲಿರುವ ಮಕ್ಕಳ ಸಾಹಿತ್ಯ ಕೃತಿಗಳು, ಕೃತಿಕಾರರು ಮತ್ತು ಪ್ರಕಾಶನಗಳ ಪಕ್ಷಿನೋಟ ನೀಡುವಲ್ಲಿ ಯಶಸ್ವಿಯಾಗಿದೆ.

'ಕನ್ನಡದಲ್ಲಿ ಮಕ್ಕಳ ಸಾಹಿತ್ಯ' ಎಂಬ ಎಂ.ಜಿ. ಗೋವಿಂದರಾಜು ಅವರ ಸುದೀರ್ಘ ಪ್ರಬಂಧ 1977ರಲ್ಲಿ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ದಿ. ಶೇಷಮ್ಮ ಭಾಸ್ಕರರಾಯರ ದತ್ತಿನಿಧಿ ಪ್ರಬಂಧ ಸ್ಪಧರ್ೆಯಲ್ಲಿ ಪ್ರಥಮ ಬಹುಮಾನ ಗಳಿಸಿತ್ತು. ದುರ್ಗಸಿಂಹನ ಕನ್ನಡ ಪಂಚತಂತ್ರ ಕೃತಿಯಿಂದ ಹಿಡಿದು ಸ್ವಾತಂತ್ರ್ಯ ಪೂರ್ವದ ಪ್ರಮುಖ ಮಕ್ಕಳ ಕೃತಿಗಳ ಕಿರುಚಿತ್ರಣ ನೀಡುವ ಈ ಪ್ರಬಂಧ ಅಂದಿನ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಮಕ್ಕಳಿಗಾಗಿ ದುಡಿದವರ ಪರಿಚಯವನ್ನೂ ಮಾಡಿಕೊಡುತ್ತದೆ. ನವೋದಯ ಪಂಥದ ಅನೇಕ ಹಿರಿಯರು, ಪಂಜೆ ಮಂಗೇಶರಾಯರು, ಕುವೆಂಪು, ಜಿ.ಪಿ. ರಾಜರತ್ನಂ, ಹೊಯಿಸಳ, ದಿನಕರ ದೇಸಾಯಿ ಮೊದಲಾದವರು, ಮಕ್ಕಳಿಗಾಗಿ ಕಥನ ಕವನ, ಪದ್ಯಗಳು, ನಾಟಕ, ಕಥೆಗಳನ್ನು ರಚಿಸಿದ್ದು ಮಕ್ಕಳ ಮೇಲಿನ ಅವರ ಕಳಕಳಿಗೆ ಸಾಕ್ಷಿಯಾಗಿದ್ದರೆ, ಮಕ್ಕಳ ನಾಲಿಗೆಯ ಮೇಲೆ ಅವು ನಲಿದಾಡುತ್ತಿರುವುದು ಅವುಗಳ ಜನಪ್ರಿಯತೆ ತೋರಿಸಿದೆ. 1977ರವರೆಗೆ ಲಭ್ಯವಿದ್ದ ಮಾಹಿತಿಯನ್ನಷ್ಟೇ ಆಧರಿಸಿ ರಚಿಸಿದ ಪ್ರಬಂಧ ಕೇವಲ ಪರಿಚಯಾತ್ಮಕ ನೆಲೆಯಲ್ಲಿ ನಿಲ್ಲುತ್ತದೆ. ಮೂವತ್ತು ವರ್ಷಗಳ ನಂತರ ಪುಸ್ತಕ ರೂಪದಲ್ಲಿ ಬರುವಾಗ ಒಮ್ಮೆ ಪರಿಷ್ಕರಿಸಲ್ಪಡುವ ಅಗತ್ಯವಿತ್ತು. ಕನ್ನಡ ವಿಶ್ವಕೋಶದಲ್ಲಿ ಚೂರು ಇಣುಕಿದ್ದರೂ ಇನ್ನಷ್ಟು ಮಾಹಿತಿ ಸಿಗುತ್ತಿತ್ತು. ಕೇವಲ ದಾಖಲೆಗಾಗಿ ಮಾತ್ರ ಮೂಲ ಪ್ರಬಂಧವನ್ನು ಉಳಿಸಿಕೊಂಡು ಕೊನೆಯಲ್ಲಿ 'ಅಪ್ಡೇಟ್' ಎಂಬ ಪರಿಷ್ಕರಣ ಪುಟ ಸೇರಿಸಿದ್ದರೆ ಇನ್ನಷ್ಟು ಸಮಕಾಲೀನವಾಗುತ್ತಿತ್ತು. ಉತ್ತರ ಕನ್ನಡ, ದಕ್ಷಿಣ ಕನ್ನಡ, ಹೈದರಾಬಾದ್ ಕನ್ನಡ, ಮುಂಬೈ ಕನ್ನಡದ ನೆಲದಲ್ಲಿ ಮಕ್ಕಳ ಸಾಹಿತ್ಯ ಬೇರೆ ಬೇರೆ ಪ್ರಭಾವಗಳಿಗೆ ಒಳಗಾದರೂ ಚೆನ್ನಾಗಿ ಬೆಳೆದು ಹೂ ಬಿಟ್ಟಿತ್ತು ಎನ್ನುವುದನ್ನು ದಾಖಲಿಸಲು ಅಂದಿನ ಮಾಹಿತಿ ಲಭ್ಯತೆಯ ಕೊರತೆ ಕಾರಣವಾಗಿದ್ದಿರಬಹುದು. ಆದರೆ ಮೂವತ್ತು ವರ್ಷಗಳ ನಂತರ ಮಾಹಿತಿ ಬೆರಳುಗಳ ತುದಿಯಲ್ಲಿ ಕುಣಿಯುತ್ತಿರುವಾಗ ಮೂಲಕ್ಕೆ ಒಂದಷ್ಟು ಪೂರಕವೂ ಪೋಷಕವೂ ಆಗುವ ಮಾಹಿತಿಯನ್ನು ಕಲೆಹಾಕುವುದು ಅಗತ್ಯವಾಗಿತ್ತು ಎನಿಸುತ್ತದೆ.

'ಕನ್ನಡದಲ್ಲಿ ಮಕ್ಕಳ ಸಾಹಿತ್ಯ : ಇಂದು' (ಸ್ವಾತಂತ್ರ್ಯೋತ್ತರ ಅವಧಿ) ಎಂಬ ಟಿ.ಎಸ್. ನಾಗರಾಜ ಶೆಟ್ಟಿಯವರ ಲೇಖನ 2007 ರವರೆಗೆ ಲಭ್ಯವಿರುವ ಮಾಹಿತಿಯ ಸಂಗ್ರಹದಂತಿದೆ. ಮಕ್ಕಳ ಸಾಹಿತಿಗಳ ಬೃಹತ್ ಕೋಶ ಸಿದ್ಧಪಡಿಸುತ್ತಿರುವ ನಾಗರಾಜ ಶೆಟ್ಟಿ ಅವರಲ್ಲಿ ನೂರಾರು ಮಕ್ಕಳ ಸಾಹಿತಿಗಳ ಮಾಹಿತಿ ಲಭ್ಯವಿದ್ದರೂ ಬಹುತೇಕ ಕೃತಿಗಳ ಮತ್ತು ಕೃತಿಕಾರರ ಹೆಸರು ಉಲ್ಲೇಖವಾಗಿಲ್ಲ. ಮಕ್ಕಳ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಲ್ಲಿ ತೊಡಗಿರುವ ನೂರಾರು ಲೇಖಕರ ಒಂದಾದರೂ ಕೃತಿಯನ್ನು ಹೆಸರಿಸಬೇಕು ಎಂಬ ಆತುರದಲ್ಲಿ ಸುದೀರ್ಘ ಪಟ್ಟಿಯನ್ನಷ್ಟೇ ನೀಡಿದಂತಿದೆ. ವಿಮಶರ್ಾತ್ಮಕ ದೃಷ್ಟಿಕೋನದಿಂದ ಸಮಕಾಲೀನ ಮಕ್ಕಳ ಸಾಹಿತ್ಯ ಕೃತಿಗಳನ್ನು ಅವಲೋಕಿಸಿರುವ ಎನ್.ಎಸ್. ರಘುನಾಥ್, ಆನಂದ ಪಾಟೀಲರ ಹೇಳಿಕೆಗಳನ್ನು ಬಿಟ್ಟರೆ ತುಲನಾತ್ಮಕವಾಗಿ ಏನನ್ನೂ ಹೇಳಿಲ್ಲ.

'ಮಕ್ಕಳಿಗಾಗಿ ಮಾಹಿತಿ ಸಾಹಿತ್ಯ', 'ಸಾಹಸ ಸಾಹಿತ್ಯ' ಎಂಬ ವಿಶಿಷ್ಟ ಪ್ರಕಾರಗಳ ಜೊತೆ ಚಟುವಟಿಕೆಗಳಿಂದ ಕೂಡಿದ 'ಮಕ್ಕಳ ಶೈಕ್ಷಣಿಕ ಹಾಗೂ ವಿಜ್ಞಾನ ಸಾಹಿತ್ಯ' ಸಮೃದ್ಧವಾಗಿ ಬೆಳೆದಿದೆ. ಮಕ್ಕಳ ಪತ್ರಿಕೆಗಳಲ್ಲಿ ಮತ್ತು ಪ್ರಕಾಶನಗಳಲ್ಲಿ ಮಕ್ಕಳಿಗಾಗಿಯೇ ಹೊಸ ಚಟುವಟಿಕೆ ಆಧರಿತ ಪುಟಾಣಿ ಪುಸ್ತಕಗಳ ರಾಶಿಯೇ ಬಿದ್ದಿದೆ. ಅಂತರಜಾಲದಲ್ಲಿ 'ಪುಟಾಣಿಗಳ ಇ-ಪತ್ರಿಕೆಗಳು, ಶಾಲಾ ಗೋಡೆ ಪತ್ರಿಕೆ'ಗಳು, ಪ್ರಮುಖ ಪತ್ರಿಕೆಗಳ ಮಕ್ಕಳ ಪುರವಣಿಗಳು ಮಕ್ಕಳ ಸಾಹಿತ್ಯಕ್ಕೆ, ಮಕ್ಕಳೇ ರಚಿಸಿದ ಸಾಹಿತ್ಯಕ್ಕೆ ನೀಡಿರುವ ಕೊಡುಗೆಗಳು, ಚಿಲಿಪಿಲಿ ಪ್ರಕಾಶನ ಮತ್ತು 'ಸಂಧ್ಯಾ' ಮಕ್ಕಳ ಪತ್ರಿಕೆ ಕೊಡಮಾಡುತ್ತಿರುವ ಮಕ್ಕಳ ಪ್ರಶಸ್ತಿಗಳ ವಿವರಗಳು ಇಲ್ಲದೆ ಈ ಕೃತಿ ಸೊರಗಿದೆ. ದೆಹಲಿಯ ರತನ್ ಟಾಟಾ ಫೌಂಡೇಶನ್ ನವರು ಕನ್ನಡದಲ್ಲಿ ಮಕ್ಕಳ ಸಾಹಿತ್ಯ ಕುರಿತಂತೆ ಸಮಗ್ರವಾದ ಅಧ್ಯಯನವೊಂದನ್ನು ಕೈಗೆತ್ತಿಕೊಂಡಿದ್ದು ಇದುವರೆಗೆ ಲಭ್ಯವಿರುವ ಎಲ್ಲ ಮಾಹಿತಿ ಅದರಲ್ಲಿ ಅಡಕಗೊಳ್ಳಲಿದೆ. ಅಲ್ಲಿಯವರೆಗೆ ಮಾರುಕಟ್ಟೆಯಲ್ಲಿ ಸಿಗುತ್ತಿರುವ ಕೊರತೆಗಳಿಂದ ಕೂಡಿರುವ ಕೃತಿಗಳನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಕನ್ನಡ ಮಕ್ಕಳ ಸಾಹಿತ್ಯದ ಪಾಲಿಗಿದೆ!
ಸಂಗ್ರಹ..
Raviraj sagar

Friday 13 January 2017

ಸೋತವರ ಗೆಲ್ಲಿಸಿ

ಸೋತವರ ಗೆಲ್ಲಿಸಿ ಗೆಲ್ಲಿರಿ
ಅದು ನೈಜ ಮಾನವೀಯತೆಯ ಗೆಲುವು;
ಕತ್ತಲೆಗೆ ಬೆಳಕಾಗಿ ನಡೆಯಿರಿ
ಬೆಳಕಿದ್ದೆಡೆ ನಡೆದರೆನು ವಿಶೇಷವಲ್ಲ.
ರವಿರಾಜ ಮಾರ್ಗ.

Saturday 7 January 2017

2016 ರಲ್ಲಿ ನೀವು ನೆನಪಿಡಲೇಬೇಕಾದ ಘಟನೆಗಳು

*2016 ಮೆಲುಕು: ಸದ್ದು ಮಾಡಿದ ಸುದ್ದಿಗಳು*

ಏಳು ಬೀಳುಗಳಿಂದ ಕೂಡಿದ 2016 ವರ್ಷ ಮುಗಿಯಲು ಇನ್ನೇನು ಕೆಲವೇ ಗಂಟೆಗಳು ಬಾಕಿ ಇವೆ. ವರ್ಷಾರಂಭದಲ್ಲೇ ಪಠಾಣ್ ಕೋಟ್ ವಾಯುನೆಲೆ ಮೇಲೆ ನಡೆದ ಉಗ್ರರ ದಾಳಿ ದೇಶವನ್ನೇ ನಡುಗಿಸಿ ಬಿಟ್ಟಿತ್ತು. ವಿಜ್ಞಾನ- ತಂತ್ರಜ್ಞಾನ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಭಾರತ ಮಿಂಚಿದಾಗ, ನವೆಂಬರ್ ತಿಂಗಳು ನೋಟು ಸಮಸ್ಯೆಯನ್ನೆದುರಿಸಬೇಕಾದ ಪರಿಸ್ಥಿತಿ ದೇಶದ ಜನರದ್ದಾಗಿತ್ತು
.
*2016ರಲ್ಲಿ ಸದ್ದು ಮಾಡಿದ ಸುದ್ದಿಗಳ ಪಟ್ಟಿ ಇಲ್ಲಿದೆ.*

*ಜನವರಿ*
* ಜನವರಿ 2 - ಪಠಾಣ್ ಕೋಟ್ ವಾಯು ನೆಲೆ ಮೇಲೆ ಉಗ್ರರ ದಾಳಿ
* ಇಸ್ರೋ ದಿಂದ ಐಆರ್ಎನ್ಎಸ್ಎಸ್-1ಇ ಉಪಗ್ರಹ ಯಶಸ್ವಿ ಉಡಾವಣೆ
* ಅಂತರ ಶಾಲಾ ಕ್ರಿಕೆಟ್ ಟೂರ್ನಿಯಲ್ಲಿ 1000 ರನ್ ಗಳಿಸಿ ಪ್ರಣವ್ ಧನಾವಡೆ ವಿಶ್ವ ದಾಖಲೆ

*ಫೆಬ್ರವರಿ*
* ನಿಜವಾಯಿತು ಐನ್ಸ್ಟೀನ್ ಭವಿಷ್ಯ ನುಡಿ; ಪತ್ತೆಯಾಯಿತು ಗುರುತ್ವಾಕರ್ಷಣ ಅಲೆ
* ರಸೂಲ್ ಪೂಕುಟ್ಟಿಗೆ ಗೋಲ್ಡನ್ ರೀಲ್ ಪ್ರಶಸ್ತಿ
* ಸಿಯಾಚಿನ್ ಹಿಮಪಾತದಲ್ಲಿ ಸಿಲುಕಿ ಹುತಾತ್ಮರಾದ ಯೋಧ ಹನುಮಂತಪ್ಪ ಕೊಪ್ಪದ್

*ಮಾರ್ಚ್*
* ಉದ್ದೀಪನ ಮದ್ದು ಸೇವನೆ ಆರೋಪದಲ್ಲಿ ಟೆನ್ನಿಸ್ ತಾರೆ ಮರಿಯಾ ಶರಪೋವಾಗೆ ನಿಷೇಧ
* ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಬಾಹುಬಲಿ ಅತ್ಯುತ್ತಮ ಚಿತ್ರ
* ಮಲಯಾಳಂ ನಟ ಕಲಾಭವನ ಮಣಿ ನಿಧನ

*ಏಪ್ರಿಲ್*
* ದೇಶದ ಅತಿ ವೇಗದ ರೈಲು ''ಗತಿಮಾನ್ ಎಕ್ಸ್ಪ್ರೆಸ್'ಗೆ ಚಾಲನೆ
* ಮಹಿಳೆಯರಿಂದ ಶನಿ ಶಿಂಗ್ಣಾಪುರ ದೇಗುಲ ಪ್ರವೇಶ
ಇಕ್ವಿಡಾರ್ನಲ್ಲಿ ಭೂಕಂಪ: 500ಕ್ಕೂ ಹೆಚ್ಚು ಮಂದಿ ಸಾವು

*ಮೇ*
* ಹೈದರಾಬಾದ್ನ ಹುಸೇನ್ ಸಾಗರ್ ಸರೋವರ ಬಳಿ ದೇಶದ ಅತಿದೊಡ್ಡ ತ್ರಿವರ್ಣ ಧ್ವಜಾರೋಹಣ
* ಮೇ -7 ಆಯಪಲ್ ಕಂಪನಿಯ ಇಂಡಿಯಾ ಸಿಇಒ ಸಂಜಯ್ ಕೌಲ್ ನೇಮಕ
* ಮೇ 10 - ಉತ್ತರಾಖಂಡ್ ನಲ್ಲಿ ಹರೀಶ್ ರಾವುತರ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ
* ಮೇ 16- ಕೇರಳದಲ್ಲಿ ಎಲ್ ಡಿ ಎಫ್ ಸರ್ಕಾರ ಅಧಿಕಾರಕ್ಕೆ
* ಮೇ 23 ಶ್ರೀಹರಿಕೋಟಾದಲ್ಲಿ ಆರ್ ಎಲ್ ವಿ ( ರೀಯೂಸೆಬಲ್ ಲಾಂಚ್ ವೆಹಿಕಲ್ )ಟೆಕ್ನಾಲಜಿ ಡೆಮಾನ್ ಸ್ಟ್ರೇಟರ್ ಯಶಸ್ವೀ ಪರೀಕ್ಷೆ
* ಮೇ 29- ಅತೀ ವೇಗದ ರೈಲು ಟಾಲ್ಗೋ ಯಶಸ್ವಿ ಪರೀಕ್ಷೆ
* ಹೈದರಾಬಾದ್ನ ಹುಸೇನ್ ಸಾಗರ್ ಸರೋವರ ಬಳಿ ದೇಶದ ಅತಿದೊಡ್ಡ ತ್ರಿವರ್ಣ ಧ್ವಜಾರೋಹಣ
* ಮೇ 29- ಅತೀ ವೇಗದ ರೈಲು ಟಾಲ್ಗೋ ಯಶಸ್ವಿ ಪರೀಕ್ಷೆ

*ಜೂನ್*
* ಜೂನ್ 5- ಫ್ರೆಂಚ್ ಓಪನ್ ಟೆನಿಸ್ ಕಿರೀಟ ಗೆದ್ದ ನೋವಾಕ್ ಜೊಕೊವಿಕ್
* ಸೈನಾ ನೆಹ್ವಾಲ್ ಮುಡಿಗೆ ಆಸ್ಟ್ರೇಲಿಯನ್ ಬ್ಯಾಡ್ಮಿಂಟನ್ ಕಿರೀಟ
* ಮೈಕ್ರೋಸಾಫ್ಟ್ ನಿಂದ ಲಿಂಕ್ಡ್ ಇನ್ ಖರೀದಿ- ₹1,75000 ಕೋಟಿಗೆ ಖರೀದಿ
* ಮೋಹನ ಸಿಂಗ್, ಅವನಿ ಚೌಧರಿ, ಭಾವನಾ ಕಾಂತ್ - ಯುದ್ಧ ವಿಮಾನ ಪೈಲೆಟ್ ಗಳಾದ ಮಹಿಳೆಯರು
* ಜೂನ್ 22 ಏಕಕಾಲಕ್ಕೆ 20 ಉಪಗ್ರಹಗಳ ಉಡ್ಡಯನ
* ಬ್ರೆಕ್ಸಿಟ್ -ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಕ್ಕೆ
* ಭಾರತಕ್ಕೆ ದಕ್ಕದ ಎನ್ಎಸ್ಜಿ ಸದಸ್ಯತ್ವ
* ಕೋಪಾ ಅಮೆರಿಕಾ ಫುಟ್ಬಾಲ್ ಫೈನಲ್ ನಲ್ಲಿ ಅರ್ಜೆಂಟಿನಾ ವಿರುದ್ಧ ಗೆದ್ದ ಚಿಲಿ
* ಮಿಸೈಲ್ ಟೆಕ್ನಾಲಜಿ ಕಂಟ್ರೋಲ್ ರೆಜಿಮ್ (ಎಂಟಿಸಿಆರ್ ) ನಲ್ಲಿ ಸದಸ್ಯತ್ವ ಪಡೆದ ಭಾರತ
* ಜೂನ್ 29 -ನೌಕಾ ಸೇನೆಗೆ ವರುಣಾಸ್ತ್ರ ಸೇರ್ಪಡೆ
* ಜೂನ್ 30 - ಸಲಿಂಗಕಾಮಿಗಳು ಟ್ರಾನ್ಸ್ ಜೆಂಡರ್ ಗಳೆಂದು ಪರಿಗಣಿಸಲ್ಪಡುವುದಿಲ್ಲ - ಸುಪ್ರೀಂ ಕೋರ್ಟ್
* ಜೂನ್ 4- ಬಾಕ್ಸಿಂಗ್ ದಂತ ಕತೆ ಮುಹಮ್ಮದ್ ಅಲಿ ನಿಧನ

*ಜುಲೈ*
* ಸ್ವದೇಶಿ ನಿರ್ಮಿತ ಯುದ್ಧ ವಿಮಾನ ತೇಜಸ್ ವಾಯುಪಡೆದೆ ಸೇರ್ಪಡೆ
* ಗುರು ಗ್ರಹದ ಕಕ್ಷೆಗೆ ಸೇರಿದ ಜೂನೋ ಗಗನ ನೌಕೆ
* ಜುಲೈ 8- ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವಾನಿ ಹತ್ಯೆ
* ಜುಲೈ 10 - ಫ್ರಾನ್ಸ್ ಪರಾಭವಗೊಳಿಸಿದ ಪೋರ್ಚುಗಲ್ಗೆ ಯೂರೋ ಕಪ್
* ಏಷ್ಯಾ ಫೆಸಿಪಿಕ್ ಸೂಪರ್ ಮಿಡಲ್​ವೇಟ್ ಪ್ರಶಸ್ತಿ ಗೆದ್ದ ಬಾಕ್ಸರ್ ವಿಜೇಂದರ್ ಸಿಂಗ್
* ತೆರೆಸಾ ಮೇ ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ
* ಟರ್ಕಿ ಸೇನಾ ದಂಗೆ: 200ಕ್ಕಿಂತಲೂ ಹೆಚ್ಚು ಸಾವು- ಸೇನೆ ಕೈಯಿಂದ ಅಧಿಕಾರ ಮರಳಿ ಪಡೆದು ದೇಶದ ಆಡಳಿತದ ಮೇಲೆ ಮತ್ತೆ ನಿಯಂತ್ರಣ
* ಸೇನಾಪಡೆ ಅಧಿಕಾರಿಗಳು ಸೇರಿದಂತೆ 29 ಮಂದಿ ಪ್ರಯಾಣಿಸುತ್ತಿದ್ದ ವಾಯುಸೇನೆಯ ವಿಮಾನ ನಾಪತ್ತೆ
* ಕರ್ನಾಟಕದ ಮಾನವ ಹಕ್ಕು ಹೋರಾಟಗಾರ ಬೆಜವಾಡ ವಿಲ್ಸನ್, ದಕ್ಷಿಣ ಭಾರತೀಯ ಶಾಸ್ತ್ರೀಯ ಸಂಗೀತ ವಿದ್ವಾಂಸ ಚೆನ್ನೈನ ಟಿ.ಎಂ ಕೃಷ್ಣ ಅವರಿಗೆ ಮ್ಯಾಗ್ಸೆಸ್ಸೆ ಪ್ರಶಸ್ತಿ

*ಅಗಸ್ಟ್*
* ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಆನಂದಿ ಬೆನ್
* ನೇಪಾಳದ ನೂತನ ಪ್ರಧಾನಿಯಾಗಿ ಪುಷ್ಪಕಮಲ್ ದಹಲ್ (ಪ್ರಚಂಡ) ಆಯ್ಕೆ
* ಅಗಸ್ಟ್ 7- ವಿಜಯ್ ರೂಪಾಣಿ ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ
* 16 ವರ್ಷಗಳ ದೀರ್ಘ ಉಪವಾಸ ಅಂತ್ಯಗೊಳಿಸಿದ ಇರೋಮ್ ಚಾನು ಶರ್ಮಿಳಾ
* ಐತಿಹಾಸಿಕ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಮಸೂದೆ ಪಾಸ್
* ಹವಿಲ್ದಾರ್ ಹಂಗ್ಪನ್ ದಾದಾಗೆ ಅಶೋಕ ಚಕ್ರ
* ಲೆ.ಕರ್ನಲ್ ಇ.ಕೆ.
ನಿರಂಜನ್ ಅವರಿಗೆ ಶೌರ್ಯ ಚಕ್ರ
* ಚೀನಾದಲ್ಲಿ ಅತೀ ದೊಡ್ಡ ಗಾಜಿನ ಸೇತುವೆ ಅನಾವರಣ
* ರಿಯೊ ಒಲಿಂಪಿಕ್ಸ್ : ಬ್ಯಾಡ್ಮಿಂಟನ್ (ಮಹಿಳಾ ವಿಭಾಗ)ದಲ್ಲಿ ಪಿವಿ ಸಿಂಧುವಿಗೆ ಬೆಳ್ಳಿ ಪದಕ
* ಮಹಿಳಾ ಕುಸ್ತಿ ವಿಭಾಗದಲ್ಲಿ ಸಾಕ್ಷಿ ಮಲಿಕ್ಗೆ ಕಂಚಿನ ಪದಕ
* ಮಹಿಳಾ ಜಿಮ್ನಾಸ್ಟಿಕ್ಸ್ನಲ್ಲಿ ದೀಪಾ ಕರ್ಮಾಕರ್ಗೆ ನಾಲ್ಕನೇ ಸ್ಥಾನ
* ಅಗಸ್ಟ್ 24 -ಇಟೆಲಿಯಲ್ಲಿ ಭೂಕಂಪ ; 250ಕ್ಕಿಂತಲೂ ಹೆಚ್ಚು ಸಾವು
* ಅಗಸ್ಟ್ 28 - ಶೀಲಂಕಾ ಕ್ರಿಕೆಟಿಗ ತಿಲಕೇರತ್ನ ದಿಲ್ಶಾನ್ ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ

*ಸಪ್ಟೆಂಬರ್*
* ಮದರ್ ತೆರೆಸಾಗೆ ಸಂತ ಪದವಿ
* ಶೂಟರ್ ಅಭಿನವ್ ಬಿಂದ್ರಾ ವಿದಾಯ
* ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ಅಧಿಕಾರವಾಧಿ ಅಂತ್ಯ
* ಸೆಪ್ಟೆಂಬರ್ 5- ಭಾರತೀಯ ರಿಸರ್ವ್ ಬ್ಯಾಂಕ್ ನೂತನ ಗವರ್ನರ್ ಆಗಿ ಉರ್ಜಿತ್ ಪಟೇಲ್ ಅಧಿಕಾರ ಸ್ವೀಕಾರ
* ಕಕ್ಷೆ ಸೇರಿದ ಇನ್ಸ್ಯಾಟ್ 3 ಡಿ ಆರ್
* ಮಸ್ವಿಜರ್ಲೆಂಡ್ನ ಸ್ಟಾನಿಸ್ಲಾಸ್ ವಾವರಿಂಕಾ ಮುಡಿಗೆ ಯುಎಸ್ ಓಪನ್ ಕಿರೀಟ
* ಯುಎಸ್ ಓಪನ್ ಮಹಿಳಾ ಟೆನಿಸ್ ಕಿರೀಟ ಗೆದ್ದ ಜರ್ಮನಿಯ ಆಯಂಜಲಿಕ್ ಕೆರ್ಬರ್
* ಗ್ರ್ಯಾಂಡ್ ಸ್ಲಾಮ್ ಇತಿಹಾಸದಲ್ಲಿ ಅತೀ ಹೆಚ್ಚು ಪಂದ್ಯ (308) ಗೆದ್ದ ದಾಖಲೆ ತನ್ನದಾಗಿಸಿಕೊಂಡ ಸೆರೀನಾ ವಿಲಿಯಮ್ಸ್
* ರಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಮರಿಯಪ್ಪನ್ ತಂಗವೇಲು (ಹೈಜಂಪ್), ವರುಣ್ ಸಿಂಗ್ ಭಾಟಿಗೆ ಕಂಚು
* ಜ್ಯಾವೆಲಿನ್ ಥ್ರೋ ವಿಭಾಗದಲ್ಲಿ ದೇವೇಂದ್ರ ಜಜಾರಿಯಾಗೆ ಚಿನ್ನ
* ಶಾಟ್ಪುಟ್ ಮಹಿಳಾ ವಿಭಾಗದಲ್ಲಿ ದೀಪಾ ಮಲಿಕ್ಗೆ ಬೆಳ್ಳಿ
* ಸಪ್ಟೆಂಬರ್ 18- ಉರಿ ಸೇನಾ ಶಿಬಿರದ ಮೇಲೆ ಉಗ್ರರ ದಾಳಿ: 19 ಸೈನಿಕರು ಹುತಾತ್ಮ
* ನವದೆಹಲಿಯಲ್ಲಿರುವ ಪ್ರಧಾನಿ ಅಧಿಕೃತ ನಿವಾಸವಿರುವ ರೇಸ್ ಕೋರ್ಸ್ ರಸ್ತೆಯ ಹೆಸರು ಕಲ್ಯಾಣ್ ಮಾರ್ಗ್ ಎಂದು ಬದಲಾವಣೆ
* ಅನ್ಯಗ್ರಹ ಜೀವಿಗಳನ್ನು ಪತ್ತೆ ಹಚ್ಚಲಿರುವ ಅತೀ ದೊಡ್ಡ ದೂರದರ್ಶಕ ಚೀನಾದಲ್ಲಿ ಕಾರ್ಯಾರಂಭ
* ಸೆಪ್ಟೆಂಬರ್ 23ರಿಂದ 27ರವರೆಗೆ ನಡೆದ ಭಾರತದ 500ನೇ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತಕ್ಕೆ ಐತಿಹಾಸಿಕ ಗೆಲವು
* ಸಪ್ಟೆಂಬರ್ 29 - ಪಾಕ್ ಆಕ್ರಮಿತ ಕಾಶ್ಮೀರದ ಉಗ್ರ ನೆಲೆಗಳ ಮೇಲೆ ಭಾರತದ ಸೇನೆಯಿಂದ ನಿರ್ದಿಷ್ಟ ದಾಳಿ

*ಅಕ್ಟೋಬರ್*
* ಪ್ಯಾರಿಸ್ ಹವಾಮಾನ ಒಪ್ಪಂದ ಸೇರಿದ ಭಾರತ
* ಅಮೆರಿಕದ ಹೈಟಿ ರಾಜ್ಯಕ್ಕೆ ಅಪ್ಪಳಿಸಿದ ಮ್ಯಾಥ್ಯೂ ಚಂಡಮಾರುತ
* ಕಕ್ಷೆ ಸೇರಿದ ಜಿಸ್ಯಾಟ್ 18
* ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಸಾರ್ಕ್ ಶೃಂಗಸಭೆ ರದ್ದು
*ಭಾರತದ ಶೂಟರ್ ಜಿತು ರಾಯ್ ಚಾಂಪಿಯನ್ಸ್ ಆಫ್ ಚಾಂಪಿಯನ್ಸ್ ಪಟ್ಟ
* ಅಕ್ಟೋಬರ್ 15, 16ರಂದು 8ನೇ ಬ್ರಿಕ್ಸ್ ಶೃಂಗಸಭೆ ಗೋವಾದಲ್ಲಿ ನಡೆಯಿತು
*ಕೊಲಂಬಿಯಾದ ಅಧ್ಯಕ್ಷ ಜಾನ್ ಮ್ಯಾನುವೆಲ್ ಸ್ಯಾಂಟೋಸ್ ಅವರು 2016ನೇ ಸಾಲಿನ ನೊಬೆಲ್ ಶಾಂತಿ ಪುರಸ್ಕಾರ
*ಅಮೆರಿಕದ ಲೇಖಕ, ಹಾಡುಗಾರ, ಗೀತ ರಚನೆಕಾರ ಬಾಬ್ ಡೈಲನ್ 2016ನೇ ಸಾಲಿನ ಸಾಹಿತ್ಯ ನೊಬೆಲ್
*ಡೇವಿಡ್ ಜೆ. ಥೌಲೆಸ್, ಎಫ್.ಡಂಕನ್ ಎಂ.ಹಲ್ಡೇನ್, ಜೆ.ಮೈಕೆಲ್ ಕೋಸ್ಟೆರ್ಲಿಟ್ಸ್ - 2016ನೇ ಸಾಲಿನ ಭೌತಶಾಸ್ತ್ರ ನೊಬೆಲ್
*ಜಪಾನಿನ ಯೋಶಿನೋರಿ ಒಸೂಮಿ - ವೈದ್ಯಕೀಯ ವಿಭಾಗದ ನೊಬೆಲ್ ಪ್ರಶಸ್ತಿ
*ಫ್ರಾನ್ಸ್ ನ ಜೀನ್ ಪಿಯರ್ ಸಾವೇಜ್, ಅಮೆರಿಕದ ಫ್ರೇಸರ್ ಸ್ಟೋಡರ್ಟ್, ನೆದರ್ ಲ್ಯಾಂಡ್ನ ಬರ್ನಾರ್ಡ್ ಫೆರಿಂಗ - ರಸಾಯನ ಶಾಸ್ತ್ರದ ನೊಬೆಲ್
*ಅಮೆರಿಕದ ಅರ್ಥಶಾಸ್ತ್ರಜ್ಞ ಆಲಿವರ್ ಹಾರ್ಟ್ ಮತ್ತು ಫಿನ್ಲೆಂಡ್ನ ಬೆಂಗ್ಟ್ ಹೋಲ್ಮಸ್ಟ್ರಾಮ್ - ಅರ್ಥಶಾಸ್ತ್ರ ನೊಬೆಲ್
* ಅಕ್ಟೋಬರ್ 17- ನೌಕಾಪಡೆಗೆ 'ಅರಿಹಂತ್' ಸೇರ್ಪಡೆ
* 'ಪ್ರಜಾ'ಎಂಬ ಹೊಸ ಪಕ್ಷ ಹುಟ್ಟುಹಾಕಿದ ಮಣಿಪುರದ ಐರನ್ ಲೇಡಿ ಇರೋಮ್ ಶರ್ಮಿಳಾ
* ಐಎನ್ಎಸ್ ತಿಹಾಯು ನೌಕಾಪಡೆಗೆ ಸೇರ್ಪಡೆ
* ಕಬಡ್ಡಿ ವಿಶ್ವಕಪ್ನಲ್ಲಿ ಭಾರತಕ್ಕೆ ಹ್ಯಾಟ್ರಿಕ್ ಕಿರೀಟ
* ಟಾಟಾ ಸನ್ಸ್ ಸಮೂಹ ಸಂಸ್ಥೆಯ ಅಧ್ಯಕ್ಷ ಸ್ಥಾನದಿಂದ ಸೈರಸ್ ಮಿಸ್ತ್ರಿಗೆ ಕೊಕ್
* ಅಮೆರಿಕದ ಖ್ಯಾತ ಸಾಹಿತಿ ಪಾಲ್ ಬೇಟ್ಟಿ ಅವರಿಗೆ ಮ್ಯಾನ್ ಬೂಕರ್ ಪ್ರಶಸ್ತಿ
* ಏಷ್ಯನ್ ಚಾಂಪಿಯನ್ಸ್ ಹಾಕಿ ಟ್ರೋಫಿ ಗೆದ್ದ ಭಾರತ

*ನವೆಂಬರ್*
* ನವೆಂಬರ್ 5- ಮೊದಲ ಬಾರಿ ವನಿತಾ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ
* 100 ಕೋಟಿ ಕ್ಲಬ್ ಗೆ ಪುಲಿಮುರುಗನ್ - ₹100 ಕೋಟಿ ಕ್ಲಬ್ ಸೇರಿದ ಮೊದಲ ಮಲಯಾಳಂ ಚಿತ್ರ ಎಂಬ ಹೆಗ್ಗಳಿಕೆ
* ನವೆಂಬರ್ 8- ₹500 ಮತ್ತು ₹1000 ಮುಖಬೆಲೆಯ ನೋಟುಗಳು ರದ್ದು
* ನವೆಂಬರ್ 8 - ಅಮೆರಿಕ ಅಧ್ಯ ಕ್ಷರಾಗಿ ರಿಪಬ್ಲಿಕ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಆಯ್ಕೆ
* ನವೆಂಬರ್ 9 - ಭಾರತ- ಜಪಾನ್ ಅಣು ಒಪ್ಪಂದಕ್ಕೆ ಸಹಿ
* ನವೆಂಬರ್ 20 - ಉತ್ತರ ಪ್ರದೇಶದಲ್ಲಿ ರೈಲು ಅವಘಡ; 150ಕ್ಕಿಂತಲೂ ಹೆಚ್ಚು ಮಂದಿ ಸಾವು
* ನವೆಂಬರ್ 20 - ಚೀನಾ ಸೂಪರ್ ಸೀರಿಸ್ ಕಿರೀಟ ಗೆದ್ದ ಪಿವಿ ಸಿಂಧು
* ನವೆಂಬರ್ 21- ಐಎನ್ಎಲ್ ಚೆನ್ನೈ ಯುದ್ಧನೌಕೆ ನೌಕಾ ಸೇನೆಗೆ ಸೇರ್ಪಡೆ
*ರಣಜಿ ಕ್ರಿಕೆಟ್ ಪಂದ್ಯದಲ್ಲಿ ದೆಹಲಿಯ ರಿಷಬ್ ಪಂತ್ ಅತಿ ವೇಗದ ಶತಕ ದಾಖಲೆ (48 ಎಸೆತಗಳಲ್ಲಿ 100 ರನ್)ನಿಧನ
* ಖ್ಯಾತ ಶಾಸ್ತ್ರೀಯ ಸಂಗೀತ ಗಾಯಕ ಡಾ ಎಂ ಬಾಲ ಮುರಳಿ ಕೃಷ್ಣ ವಿಧಿವಶ

*ಡಿಸೆಂಬರ್*
* ಉಸೇನ್ ಬೋಲ್ಟ್ ಅವರಿಗೆ ಅಂತರ ರಾಷ್ಟ್ರೀಯ ಅಥ್ಲೆಟಿಕ್ ಫೆಡರೇಷನ್ ನೀಡುವ ಶ್ರೇಷ್ಠ ಕ್ರೀಡಾಪಟು ಪುರಸ್ಕಾರ
* ವಿಶ್ವ ಚೆಸ್ ಚಾಂಪಿಯನ್ಶಿಪ್ ನಲ್ಲಿ ಮಾಗ್ನಸ್ ಕಾರ್ಲ್ಸನ್ ಗೆಲುವು
* ಡಿಸೆಂಬರ್ 6- ತಮಿಳುನಾಡು ಮುಖ್ಯಮಂತ್ರಿಯಾಗಿ ಪನ್ನೀರ್ ಸೆಲ್ವಂ ಪ್ರಮಾಣ ವಚನ
* ರಿಸೋರ್ಸ್ಸ್ಟಾಟ್ 2ಎ ಉಪಗ್ರಹ ಯಶಸ್ವಿ ಉಡಾವಣೆ
* ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೈಮ್ ನಿಯತಕಾಲಿಕದ ವರ್ಷದ ವ್ಯಕ್ತಿಯಾಗಿ ಆಯ್ಕೆ
*ತಮಿಳುನಾಡು- ಆಂಧ್ರ ಪ್ರದೇಶ ಕರಾವಳಿಗೆ ಅಪ್ಪಳಿಸಿದ ವಾರ್ದಾ ಚಂಡ ಮಾರುತ
* ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳಲ್ಲಿ ಮದ್ಯದ ಅಂಗಡಿಗಳಿಗೆ ನಿಷೇಧ ವಿಧಿಸಿದ ಸುಪ್ರೀಂಕೋರ್ಟ್
* ಇಂಡಿಯನ್ ಸೂಪರ್ ಲೀಗ್ ಪಂದ್ಯಾವಳಿಯಲ್ಲಿ ಅಟ್ಲೆಟಿಕೊ ಡಿ ಕೋಲ್ಕತ್ತ ಚಾಂಪಿಯನ್
* ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್ನಲ್ಲಿ ಕರುಣ್ ನಾಯರ್ ಗೆ ತ್ರಿಶತಕ ದಾಖಲೆ
* ಬೌಲರ್ ಆರ್.ಅಶ್ವಿನ್ಗೆ ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿ
ನಿಧನ
* ಡಿಸೆಂಬರ್ 5- ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ನಿಧನ
* ಡಿಸೆಂಬರ್ 7- ಪತ್ರಕರ್ತ, ರಾಜಕೀಯ ವಿಶ್ಲೇಷಕ, ನಾಟಕ, ಸಿನಿಮಾ ಕಲಾವಿದ ಚೋ ರಾಮಸ್ವಾಮಿ ನಿಧನ