ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Thursday 16 March 2017

ಪ್ರೀತಿಯ ಅಂತಃರ್ದರ್ಶನ 'ಗಣೇಶ್ ಕೋಡೂರ'ರ "ನನಗೂ ಲವ್ವಾಗಿದೆ..."

ಪ್ರೀತಿಯ  ಅಂತಃರ್ದರ್ಶನ

ಪ್ರೀತಿಯೇ ಹಾಗೆ ...ಅದು ಕಲ್ಲು ಬಂಡೆಯಲ್ಲೂ ಬೆಳೆವ ಕಲ್ಲು ಹೂ..ಕೆಸರಲು ಅರಳಬಲ್ಲ ಮನಮೋಹಕ ತಾವರೆ.ಸಹಜವಾಗಿ ಬಾಡುವ ಹಸಿರುಬಳ್ಳಿಯ ಘಮ್ಮೆನ್ನುವ ಜಾಜಿ ಮಲ್ಲಿಗೆ ಇದ್ದಷ್ಟು ಸಮಯ ಪ್ರೀತಿ ಹಂಚುತ್ತದೆ...ಕಾರಣ ಇಲ್ಲದೆಯೂ ಹುಟ್ಟುತ್ತದೆ ,ಅದೇ ಪ್ರೀತಿ ಹುಟ್ಟಿದ ಎದೆಯಲ್ಲೇ ಮತ್ಯಾವುದೋ ಕಾರಣಕ್ಕೆ ದ್ವೇಷವೂ ಹುಟ್ಟಬಹುದು .ಪ್ರೀತಿಯನ್ನು ಅದೇ ದೇಹ ಸಾಯಿಸಲುಬಹುದು ಆದರೆ ಪ್ರೀತಿ ಜಗದಲ್ಲಿ ಸಾಯದು... ಬಾಡದು... ಅದು ಎಲ್ಲ ಜೀವ ಚರಾ ಚರಗಳಲ್ಲಿ ಇದ್ದೆ ಇರುತ್ತದೆ. ಇಂಥ ಪ್ರೀತಿ ಬಗ್ಗೆ ಪ್ರೀತಿಯ ಹಲವು ಮಜಲುಗಳ ಬಗ್ಗೆ ಮಾನಸದಂಗಳದಿಂದ ಮನಸಿನಾಳ ತಟ್ಟಿ ಕರುನಾಡ ಓದುಗರ ಹೃದಯ ತಟ್ಟುತ್ತಿರುವ ಗಣೇಶ್ ಕೊಡೋರ್ ...(ಅರುಡೋ ಗಣೇಶ್) ಅವರು ತಮ್ಮ  ಸರಳವಾದ  ನವಿರು ನಿರೂಪಣೆ ಒಂದಿಷ್ಟು  ಸ್ವಾನುಭವ ಹಾಗೂ ಭಾವನಾತ್ಮಕ ವಿಶ್ಲೇಷಣೆ ....ಮನ ಮುಟ್ಟುವ ಭಾವ ನಿರೂಪಣಾ ಸಾಲುಗಳಿಂದಲೇ ಓದಿಸಿಕೊಂಡು ಹೋಗುವಂತೆ ಮಾಡಬಲ್ಲ ಶಕ್ತ ಬರಹ ಕಸುಬುದಾರಿಕೆ ಅವರ
"ನನಗೂ ಲವ್ವಾಗಿದೆ " ಪುಸ್ತಕದಲ್ಲೂ ವಿಶೇಷವಾಗಿ ಗಮನಿಸಬಹುದು.  ಇನ್ನಷ್ಟು ಪುಟಗಳಲಿ ಪ್ರೀತಿ ಫಿಲಾಸಫಿ ಭೋದಿಸಿದ್ದರೆ
ಇನ್ನೊಂದಿಷ್ಟು ಗಂಭೀರವಾಗಿ ಪ್ರೀತಿ ಆಳಕ್ಕೆ ಇಳಿಯಬಹುದಿತ್ತು.

  ನಾನು ಓದಿ ಗ್ರಹಿಸಿದಂತೆ ಅದು ಒಂದು ಪ್ರೇಮಿಗಳ ಗೈಡ್... ಯುವ ಮನಸುಗಳ ಆಪ್ತ ಸಮಾಲೋಚನಾ ಮಿತ್ರ ಎಂದೇ ಹೇಳಬಹುದು. ಪ್ರೀತಿ ಹಂಚಿಕೊಳ್ಳುವ ಬಗ್ಗೆ ...ಉಳಿಸಿಕೊಳ್ಳುವ ಬಗ್ಗೆ ಪ್ರೀತಿ ಹೆಚ್ಚಿಸಿಕೊಳ್ಳುವ ಬಗ್ಗೆ ,ಪ್ರೀತಿ ಪಡೆದುಕೊಳ್ಳುವ ಬಗ್ಗೆ ಎಲ್ಲ ಮನಬಚ್ಚಿ ಮಾತಾಡಿ ಅಕ್ಷರ ರೂಪಕ್ಕಿಳಿಸಿ ಓದುಗರ ಎದೆಯಲ್ಲಿ ಪ್ರೀತಿ ವ್ಯಾಖ್ಯಾನ ಪಡೆದುಕೊಳ್ಳುತ್ತಾ ಸಾಗುವಂತೆ ಮಾಡಬಲ್ಲ ಹಲವು ಪುಟಗಳು ಆಪ್ತವಾಗುತ್ತ ಮತ್ತೆ ಮತ್ತೆ ಸೆಳೆದು  ಪುಟ ತೆರೆಸಿ ತೆರೆಸಿ ಓದಿಸಿಕೊಳ್ಳುತ್ತವೆ.

ಪ್ರೀತಿಯಿಂದಲೇ ನಿಮ್ಮ ಎದೆಯ ಕದ ತೆರೆಸುತ್ತಲೇ  "ಬದುಕೆಂದ ಮೇಲೆ ಲವ್ವಾಗಲೇಬೇಕು" ಎಂದು ಆರಂಭದಲ್ಲೇ ತೀರ್ಪು ನೀಡಿದ್ದಾರೆ. ಪ್ರೀತಿಯ ಬಗ್ಗೆ  ಈ ವರೆಗೆ  ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಸಿನಿಮಾಗಳಿಂದ ಒಂದಿಷ್ಟು ಪಾಠ ಕಲಿತಿದ್ದರೆ ಈಗ 'ನಿಮ್ಮೆಲ್ಲರ ಮಾನಸ' ಎಡಿಟರ್  ಗಣೇಶ್ ಅರುಡೋ ಅವರಿಂದಲೂ ಒಂದಿಷ್ಟು ಕಲಿಯಬಹುದು.. ಪ್ರೀತಿಯೇ ಸಿಕ್ಕಿಲ್ಲ ಎನ್ನುವವರಿಗೆ ತಮಗೇ  ಯಾಕೆ ಸಿಕ್ಕಿಲ್ಲ ಎಂದು ಕಂಡುಕೊಳ್ಳಲು, ಪ್ರೀತಿ ಸಿಕ್ಕವರು ಅದನ್ನು ಉಳಿಸಿಕೊಂಡು ಹೋಗಲು ಕೆಲವು ಮಾರ್ಗದರ್ಶನಗಳನ್ನು ಪಡೆಯಲು , ಪ್ರೀತಿ ಎಂದರೆ ಬರೀ ಬದನೆಕಾಯಿ ....ನಾನು ಪ್ರೀತಿಗೆ ಬೀಳೋಲ್ಲ ಎಂದುಕೊಂಡವರು.... ಪ್ರೀತಿ ಎಂದರೆ ಕೇವಲ ದೈಹಿಕ  ,ಲೈಂಗಿಕ ಮನೋಭಾವನೆಯಿಂದ ನೋಡುವವರು ಪ್ರೀತಿಸಿ ಪದೇ ಪದೇ ಕೈಕೊಟ್ಟು ಹೊಸ ಹೊಸ ದೇಹಗಳ ,ಮನಸುಗಳ ಪ್ರೀತಿಗೆ ಬಲೆ ಬೀಸುವವರು ಮತ್ತೆ ಎಲ್ಲಾ ವರ್ಗದ ಓದು ಬಲ್ಲವರು ಪ್ರೀತಿ ಬಗ್ಗೆ ಸರಳ ಫಿಲಾಸಫಿ ತಿಳಿಯಲು ಈ ಪುಸ್ತಕ ಓದಿದರೆ  ಕೊನೆಗೆ ಲೇಖಕರೆ ಹೇಳುವಂತೆ "ಈ ಬದುಕೆನ್ನುವುದೇ ಬಹು ದೊಡ್ಡ ಪ್ರೀತಿ '"ಎಂದು ನೀವೂ ನಿರ್ಣಯಿಸುವಿರಿ.

ಇನ್ನೂ ಹೆಚ್ಚು ವಿಮರ್ಶೆ ಮಾಡೋದಿಲ್ಲ... ಯಾಕೆಂದರೆ ಪ್ರೀತಿ ವಿಮರ್ಶೆಯಲ್ಲಿ ಮುಗಿಯುವುದಲ್ಲ... ಪ್ರೀತಿ ಮನಸುಗಳ ಸಾಮಿಪ್ಯದಲ್ಲಿ ಸಾನಿಧ್ಯ ದಲ್ಲಿ ಹುಟ್ಟಿ ಅರಳಿ ಘಮ ಘಮ ಘಮಿಸುವಂತದ್ದು... ಪುಸ್ತಕ ಪ್ರೀತಿಯೂ ಅಷ್ಟೇ.. ನೀವೂ ಆ ಪುಸ್ತಕದ ಸಾಮೀಪ್ಯ ಸಾನಿಧ್ಯ ಬಯಸಿ ಆಪ್ತ ಭಾವದಲ್ಲಿ ಹಿಡಿದುಕೊಂಡು ಓಡಿದಾಗಲೇ ಆ ಪುಸ್ತಕ
ಇಷ್ಟವಾಗೋದು... ಪುಸ್ತಕದ ಸಾಲುಗಳು ನಿಮ್ಮೆದೆಯಲಿ ನಾಟಿ   ಪ್ರೀತಿ ಅರ್ಥ ತೆರೆದುಕೊಳ್ಳುವುದು... ತಡ ಇನ್ಯಾಕೆ ನಿಮಗೂ ಲವ್ವಾಗಬೇಕೆ...??
ಅರುಡೋ ಗಣೇಶ್ ಅವರ "ನನಗೂ ಲವ್ವಾಗಿದೆ" ಪುಸ್ತಕ ಓದಿ..
......ನನಗಂತೂ ಸಿಕ್ಕಾಬಟ್ಟೆ ಲವ್ವಾಗಿದೆ !! ..ನಿಮ್ಮೆಲ್ಲರ ಮೇಲೆ.... ಕನ್ನಡ ಪುಸ್ತಕಗಳ ಮೇಲೆ.... ಹಸಿರು ಸಿರಿ.. ಅಲೆಗಳೂರ ಸಾಗರ ಎಲ್ಲ.... ಪ್ರೀತಿ ಉತ್ಸಾಹ ಹೆಚ್ಚಿಸಿವೆ. ಮತ್ತೆ ನಿಮಗೆ...??...
            
ರವಿರಾಜ್ ಸಾಗರ್..

No comments:

Post a Comment