ಮೀನಿನ ಹೆಜ್ಜೆಯ ಚೋರಿ ..
ಸೂರ್ಯ ಇನ್ನೂ ಬಂದಿರಲಿಲ್ಲ, ..
ಚಂದ್ರ ಇನ್ನೂ ಹೋಗಿರಲಿಲ್ಲ...
ಆಗಸದ ಬೆಳ್ಳಿ ಕೂಡ ನನ್ನನ್ನೇದಿಟ್ಟಸುತಿರಲು ಹಸಿರು ಹೊನ್ನ ಮಲೆಗಳ ದಾಟಿ
ಕೋಟಿ ಚಂದ್ರನ ಕಾಂತಿಯ ತುಂಟಿ ಹಾಲುಗಡಲ ಇಬ್ಬನಿ ಮಿಂದು
ಮೆಲ್ಲಗೆ ಬಳುಕುತ ಬಂದಳೂ ಉಷೆ...!
ರವಿ ರಾಜನ ಅರಮನೆಗೇ...
ಮೌನ ಮೌನದ ಬರವಣಿಗೆ
ಕಣ್ಣು ಕಣ್ಣಲೇ ಮೆರವಣಿಗೆ
ನಾಚಿಕೆ ಗಡಿಯೂರ ದಾಟಿ
ಜಗದ ಎಲ್ಲಾ ಎಲ್ಲೇ ಮೀಟಿ..
ಎಸೆದಳು ಒಲವ ಬಾವದೀಟಿ
ಎಲ್ಲಾ ಆವರಿಸಿ...ನನ್ನೇ ಅಪಹರಿಸಿ...
ಮೆಲ್ಲ ಮೆಲ್ಲಗೆ ಮಲ್ಲಿಗೆಗಂಧ
ಮೈಮನಾ ಮರೆಸಿ
ಎಲ್ಲಾ ದೋಚಿದಳು..!
ಮೀನಿನ ಹೆಜ್ಜೆಯ ಚೋರಿ ಅವಳು ..
ಎಚ್ಚೆತ್ತು ನೋಡಲು ಅವಳಿಲ್ಲ...!
ನನಗಿನ್ನೂ ಗೊತ್ತಾಗಿಲ್ಲ..
ಇದು ಬೆಳಬೆಳಿಗ್ಗೆ ಬಿದ್ದ ಕನಸಲ್ವಾ..?
ಎಲ್ಲ ಹೇಳಲು ಸಾಕ್ಷಿ ಯಾರಿಲ್ವಾ..?!
ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ
- Home
- ಸಂಪಾದಕೀಯ
- ಮಕ್ಕಳು ಬರೆದ ಕತೆ /ಕವನಗಳು
- ನಮ್ಮೂರ ಸುದ್ದಿಗಳು
- ಮಕ್ಕಳ ಬರಹಗಳು
- ಬಾಲ ಸಾಧಕರು
- ಮಕ್ಕಳು ಬಿಡಿಸಿದ ಚಿತ್ರಗಳು
- ನಮ್ಮೂರ ಜಾನಪದ
- ಜ್ಞಾನ - ವಿಜ್ಞಾನ
- ಸಾಮಾನ್ಯ ಜ್ಞಾನ
- ನಮ್ಮ ಪತ್ರಿಕಾ ಅಭಿಯಾನಗಳು
- ಓದುಗರ ಓಲೆ
- ಅತಿಥಿ ಸಾಹಿತಿಗಳ ಅಂಕಣ
- ಮಕ್ಕಳ ಪುಸ್ತಕಗಳ ಪರಿಚಯ-ಆನ್ ಲೈನ್ ಬುಕ್ ಹೌಸ್
- ಶೈಕ್ಷಣಿಕ ಲೇಖನಗಳು
- ಶೈಕ್ಷಣಿಕ ಚಟುವಟಿಕೆಗಳು
- ಲಾಂಗ್ವೇಜ್ ಕಾರ್ನರ್
- 1ರಿಂದ -puc ತರಗತಿ ಈ ಶಾಲೆ
- ನನ್ನ ಶೈಕ್ಷಣಿಕ ವೀಡಿಯೋಗಳು
- ಸಾರ್ವಜನಿಕ ಶಿಕ್ಷಣ ಇಲಾಖೆ
- ಹಿಂದಿನ ಸಂಚಿಕೆಗಳು ಮತ್ತು ಪತ್ರಿಕೆ ಕುರಿತು ಮಾಧ್ಯಮ ವರದಿ ...
- ನಮ್ಮ ಕುರಿತು ಫೋಟೋ ಗ್ಯಾಲರಿ
- ಅಂಕಣ ಬರಹ- ಕನಸುಗಳೂರ ಶ್ರಮಿಕ
- ಆನ್ಲೈನ್ ಪುಸ್ತಕ ಮಳಿಗೆಗಳು
- ಪಿಡಿಎಫ್ ಪುಸ್ತಕಗಳು.
- Ravichandra
- ಆನ್ಲೈನ್ ಪಾಠಗಳು - ದೀಕ್ಷಾ ಪೊರ್ಟಲ್
- ಇನ್ನೋವೇಟಿವ್ ಎಜ್ಯುಕೇಶನ್
Monday, 21 September 2015
ಮೀನಿನ ಹೆಜ್ಜೆಯ ಚೋರಿ ಅವಳು..
Friday, 11 September 2015
ರೈತನ ಎದೆಯಿಂದ ಸಿಡಿಲು ಬಡಿವ ಮುನ್ನ. ..
ಬರೀ ಚಿಲ್ಲರೆ ದಕ್ಷಿಣೆ ಹಾಕೋ ರೈತರ ಮೇಲೆ ದೇವರಿಗಂತೂ ಕರುಣೆ ಇಲ್ಲ. ಕೇಳಿದಾಗೆಲ್ಲ ಪ್ರಶ್ನೆ ಮಾಡದೆ ಕಣ್ಣು ಮುಚ್ಚಕೊಂಡು ಜಾತಿ ಮಗಾ ಅಂತಾ ಓಟು ಹಾಕೋ ಪ್ರಜೆಗಳ ಮೇಲೆ ಈ ರಾಜಕೀಯ ದೇವರುಗಳಿಗಾದರೂ ಕರುಣೆ ಬೇಡವೇ...?. ಈಚಿನ ದಶಕಗಳಲ್ಲಿ 15 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ದಾಖಲಾಗಿದೆ ..ಇನ್ನು ದಾಖಲಾಗದೆ ಉಳಿದವು ಅದೆಷ್ಟೋ. ..?
ದೇವರು, ಧರ್ಮದ ಉಳಿಸುವಿಕೆಗೆ ,ಉತ್ಸವಕ್ಕೆ ಜಾತ್ರೆಗೆ ಪಟ್ಟಿ ಎತ್ತೋಕೆ ಮನೆ ಮನೆ ಸುತ್ತೋ ಧರ್ಮಗಳ ಗುಂಪುಗಳ ಪಾಳೇಗಾರರೂ ಕೂಡ ರೈತನ ನೋವು ಆಲಿಸುತ್ತಿಲ್ಲ.. ಅವರೂ ಸಹ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ ಅಷ್ಟೇ. .!. ರೈತರ ನೋವಿಗೆ ಸ್ಪಂದಿಸದ ಧರ್ಮದ ಮುಖಂಡರು, ದೇವರು ಯಾಕೆ ಬೇಕು.? ಅವರಿಗೇಕೆ ರೈತ ಕಷ್ಟದಲ್ಲೂ ದೇವರಿಗಂತ ಹಣ ಕೊಡಬೇಕೂ...?
ಎಲ್ಲೊ ಸುನಾಮಿ, ಭೂಕಂಪ ಆದಾಗ ದಾನ ಮಾಡುವ ..ಬಿಕ್ಷಗೆ ಇಳಿವವರು ನಮ್ಮ ರೈತರ ನೆರವಿಗೆ ಎಂದಾದರೂ ದಾವಿಸಿದ್ದಾರಾ....? ಯೋಚಿಸಿ. .. ! ನೌಕರರ ಸಂಬಳ ಏರಿಸಿ ಅಂತಾ ಸ್ಟೈಕು ಬಂದ್ ಈ ದೇಶದಲ್ಲಿ ಸಹಜ. ಆದರೆ ರೈತರಿಗಾಗಿ ಯಾವ ಬಂದ್ ನಡೆದಿದೆ... ? ರೈತರೆಲ್ಲ ತಿರುಗಿ ಬಿದ್ದರೆ ರೈತರ ರೋಷಾಗ್ನಿ ಜ್ವಾಲೆಗೆ ಇವರೆಲ್ಲ ಉಳಿದಾರೆಯೇ...? ರೈತ ಸಿಡಿದರೆ ಸಿಡಿಲು. ಬಡಿಬಡವ ಮುಮುನ್ನ ಎಲ್ಲಾ ಎಚ್ಚರ ವಹಿಸಬೇಕು. ಅವನಿಲ್ಲದೆರೆ ನಿಮ್ಮ ಹಣ ನಿಮ್ಮ ಹೆಣದ ಮೇಲೆ ಕೇಕೆ ಹಾಕುವ ದಿನ ದೂರವಿಲ್ಲ... ಏನಂತೀರಿ. .?
Saturday, 5 September 2015
ದಿವ್ಯ ಜ್ಯೋತಿ.
ದಿವ್ಯ ಜ್ಯೋತಿ
,,,,,,,,,,,,,,,,,,,,,
ಕತ್ತಲೂ ಸುತ್ತಲೂ
ಹಿಂಬಾಲಿಸಿದೆ ಎತ್ತಲೂ...
ಹಣವಿದ್ದಾಗ ಮಾತ್ರ ಸುಳಿದಾಡುವ ಬಂಧು ಬಳಗದಂತೆ
ಬೆಳಕಿದ್ದಾಗ ಮಾತ್ರ ಜೊತೆ ಇಣುಕುವ
ನೆರಳು ಕೂಡ ಮಾಯ....!
ಕತ್ತಲು ನುಂಗಿದ ನನ್ನ ಸಹಾಯಕ್ಕೆ
ಬೆಳಕು ಕೂಡ ವಿಧಿ ಜೊತೆಸೇರಿ ಬೆದರಿ ನಿಂತಿತ್ತು.
ಆದರೆ. ...
ಅದ್ಯಾವುದೋ ಮಾಯಾ ಶಿಖರದಿಂದ
ಬಂದಳು ಸಿಂಹಿಣಿ....!
ಕತ್ತಲನು ಬೆನ್ನಟ್ಟಿ ಬೇಟಿಯಾಡಿದಳು ನನ್ನ.
ನಾನೀಗ ಅವಳ ಪಾಲು...!
ಅವಳ ಕಣ್ಣ ವಜ್ರ ಶೋಭೆಗೆ
ಆಂಗ್ಲರಂತೆ ನಡುರಾತ್ರಿಯೇ ಇದ್ದಕಿದ್ದಂತೆ
ನಮಗೆ ಸ್ವತಂತ್ರ ನೀಡಿ ಓಡಿತು.
ಅವಳು ನನಗೆ ದಿವ್ಯ ಜ್ಯೋತಿ,
ಬದುಕಿಗೆಲ್ಲ ಅವಳೇ ಸ್ಪೂರ್ತಿ.
ಅವಳು ಕಾಂತಿ
ಕತ್ತಲಲಿದ್ದ ನನಗೆ ನವ ಬರವಸೆಯ ಕ್ರಾಂತಿ.
Tuesday, 25 August 2015
ಸತ್ಯವತಿ
ಸತ್ಯವತಿ
...........
ನನಗೆ ಅವಳ ಕೆಣಕುವ ಹಠ
ಅವಳಿಗೆ ಸುಳ್ಳುಗಳ ಪೋಣಿಸುವ ಚಟ
ಹೆಸರು ಸತ್ಯವತಿ. ..!
ಇಷ್ಟು ಹೊತ್ತು ಹೋಗಿದ್ದು ಎಲ್ಲಿಗೆ ಎಂದರೆ....
ಅವಳು ಅಂತಾಳೆ.....
ನೀಲ ಗಗನದಲಿ ಹರಿದು ಮುರಿದು
ಹಪ್ಪಳ ವಾಗಿರುವ ಮೋಡಗಳ ಎಳೆದು ತಂದು
ಜೇಡರ ಬಲೆಯ ನೂಲಲಿ ಹೊಲೆದು
ಬಿರಿದ ನಮ್ಮ ಹೊಲದಲ್ಲಿ ಕಟ್ಟಿ ಹಾಕಿ
ಕೆಳಗೆ ಬೆಂಕಿ ಮಾಡಿ ಕಾಯಿಸಿ
ಮೋಡಗಳೆಲ್ಲ ನಮ್ಮ ಹೊಲದಲ್ಲಿ ಕರಗಿ ಮಳೆ ಸುರಿವವರೆಗೆ ಬಿಡುಗಡೆ ಮಾಡದಂತೆ
ಗಾಳಿಗೆ ಹೇಳಿ ಬರಲು ಹೋಗಿದ್ದೆ ಎಂದಳು...
Sunday, 2 August 2015
ಮೌನ ಮೋಹಿ ಅವಳು
ಮೌನ ಮೋಹಿ ಅವಳು. .
"""""""""""""
ನಾನು ಜಾಲಿಯಲ್ಲ ...
ಅವಳು ಪೋಲಿಯಲ್ಲ.
ನಾವಿಬ್ಬರೂ ಮೌನ ಮೋಹಿ..!
ಮೌನ ಮೌನ ನುಂಗಿ
ಮಾತಿಲ್ಲದೇ ಪ್ರೀತಿ ಕಡಲು ಕಂಪಿಸಿ
ತೀರದಲ್ಲಿ ತೀರದ ಪ್ರೇಮ
ಆವರಿಸಿತು ಹುಣ್ಹಿಮೆ ರಾತ್ರಿ.
ನನ್ನ ಖಾಲಿ ಎದೆಗೆ ಕಲ್ಲು ಹೊಡೆದು
ಮಜ ನೋಡುವ ಲಗೋರಿ ಚಲಾಕಿ.
ಮತ್ತೆ ಅವಳೇ ಒಲವ ಕನಸಿನ ಕಲ್ಲು ಜೋಡಿಸಿ
ಒಲವ ಲಗೋರಿ ಗೆಲ್ಲುವಾಕೆಯೂ ಅವಳೆ..!
ಮಾತು ಮೀರಿದ ಮೌನ ಮೋಹ
ಹೆಚ್ಚಿದೆ ಒಲವ ದಾಹ
ಕುಡಿಸಿದಳು ಕೇಳದೇ...!
ನಾನೀಗ ಅಮಲು ಪರ್ವತದಲಿ ಅಲೆಯುತಿರುವೆ.
ನಾ..ಒಲವ ಬಲೆಯಲಿ ಬಂದಿ
ಆದರೂ ಅಲ್ಲಿದೆ ಸುಖ ಸಮೃದ್ಧಿ.
ಕತ್ತಲೆ ಕರೆದಾಗ
ಕತ್ತಲೆ ಕರೆದಾಗ..
"""""""""""""""
ಹಗಲು ಓಡಿ ಬಂತು
ಕತ್ತಲೆ ಕರೆದಾಗ...
ಪಾಪ..ಕತ್ತಲೆ ಮಾಯವಾದಳು.
ಕನವರಿಕೆಯಲಿ ಕತ್ತಲೆ..
ಹಗಲುಗನಸು ಕಂಡಳು.
ರವಿ-ಚಂದ್ರರು ಸ್ಪರ್ಧೆಗೆ ಇಳಿದರು.
ಧರಣಿ ನಗದೆ ಅಳದೆ...
ಮಳೆ. ಚಳಿ.ಬಿಸಿಲಿಗೆ ಮೈವೂಡ್ಡಿ
ಹಸಿರಾದಳು.
ಕತ್ತಲೆ ಕರೆದಾಗೆಲ್ಲ
ಬೆಳಕು ಕದ್ದು ಓಡಿ ಬಂದರೂ ..
ಇನ್ನೂ ಸೇರಲಾಗಿಲ್ಲ. .
Friday, 31 July 2015
ಜಾನಪದ ವಿಶ್ವವಿದ್ಯಾಲಯದ ಡಿಪ್ಲೋಮಾ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ ..
ಜಾನಪದ ವಿಶ್ವವಿದ್ಯಾಲಯದ ಡಿಪ್ಲೋಮಾ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ . ಹಸೆ ಚಿತ್ತಾರ , ನಾಟಿ ವೈದ್ಯ ,ವಿವಿಧ ಜಾನಪದ ನಿಕಾಯಗಳಲ್ಲಿ ಸ್ನಾತಕೋತ್ತರ ಡಿಪ್ಲೋಮಾ ,ಡಿಪ್ಲೋಮಾ ...
-
ಚಿಕ್ಕಂದಿನಲ್ಲಿ ನಮಗೆ ಬರುತ್ತಿದ್ದ, ನಾವೆಲ್ಲಾ ಹಾಡುತ್ತಿದ್ದ ಮರೆಯಲಾಗದ ಪದ್ಯಗಳು.. ಇವುಗಳಲ್ಲಿ ನಿಮಗೆಷ್ಟು ಗೊತ್ತು.. ತಿಳಿಸಿ..* ❤️❤️❤️...
-
ಕನ್ನಡ ವ್ಯಾಕರಣ @EDUCATIONGKNEWS. •ಕನ್ನಡ ವರ್ಣಮಾಲೆ •ಸಂಧಿ ಪ್ರಕರಣ •ನಾಮ ಪದ ಪ್ರಕರಣ •ಲಿಂಗಳು •ವಚನಗಳು •ವಿಭಕ್ತಿ ಪ್ರತ್ಯಯಗಳು •ಕ್ರಿಯಾಪದ ಪ್ರಕರಣ •ಕ...
-
*ಛಂದಸ್ಸು* ಛಂದಸ್ಸು - ಪದ್ಯವನ್ನು ರಚಿಸುವ ಶಾಸ್ತ್ರ. ಛಂದಸ್ಸಿನ ಶಾಸ್ತ್ರದ ಪ್ರಕಾರ ರಚಿತವಾದ ಪದ್ಯವನ್ನು ಛಂದೋಬದ್ಧ ಪದ್ಯ ಎನ್ನುವರು. ಛಂದಸ್ಸು ಕನ್ನಡ ಸಾಹಿತ್ಯ, ಸ...