ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Sunday 2 August 2015

ಮೌನ ಮೋಹಿ ಅವಳು

ಮೌನ ಮೋಹಿ ಅವಳು. .
"""""""""""""
ನಾನು ಜಾಲಿಯಲ್ಲ ...
ಅವಳು ಪೋಲಿಯಲ್ಲ.
ನಾವಿಬ್ಬರೂ  ಮೌನ ಮೋಹಿ..!
      ಮೌನ ಮೌನ ನುಂಗಿ
       ಮಾತಿಲ್ಲದೇ   ಪ್ರೀತಿ ಕಡಲು ಕಂಪಿಸಿ
      ತೀರದಲ್ಲಿ ತೀರದ ಪ್ರೇಮ
      ಆವರಿಸಿತು  ಹುಣ್ಹಿಮೆ ರಾತ್ರಿ.
ನನ್ನ ಖಾಲಿ ಎದೆಗೆ ಕಲ್ಲು ಹೊಡೆದು
ಮಜ ನೋಡುವ ಲಗೋರಿ ಚಲಾಕಿ.
ಮತ್ತೆ ಅವಳೇ ಒಲವ ಕನಸಿನ ಕಲ್ಲು ಜೋಡಿಸಿ
ಒಲವ ಲಗೋರಿ ಗೆಲ್ಲುವಾಕೆಯೂ ಅವಳೆ..!
    ಮಾತು ಮೀರಿದ ಮೌನ ಮೋಹ
   ಹೆಚ್ಚಿದೆ ಒಲವ ದಾಹ
   ಕುಡಿಸಿದಳು  ಕೇಳದೇ...!
    ನಾನೀಗ  ಅಮಲು ಪರ್ವತದಲಿ ಅಲೆಯುತಿರುವೆ.
    ನಾ..ಒಲವ ಬಲೆಯಲಿ ಬಂದಿ
    ಆದರೂ ಅಲ್ಲಿದೆ ಸುಖ ಸಮೃದ್ಧಿ.    

ಕತ್ತಲೆ ಕರೆದಾಗ

ಕತ್ತಲೆ ಕರೆದಾಗ..
"""""""""""""""
ಹಗಲು ಓಡಿ ಬಂತು
ಕತ್ತಲೆ ಕರೆದಾಗ...
ಪಾಪ..ಕತ್ತಲೆ ಮಾಯವಾದಳು.
         ಕನವರಿಕೆಯಲಿ ಕತ್ತಲೆ..
          ಹಗಲುಗನಸು ಕಂಡಳು.
           ರವಿ-ಚಂದ್ರರು ಸ್ಪರ್ಧೆಗೆ ಇಳಿದರು.
             ಧರಣಿ ನಗದೆ ಅಳದೆ...
             ಮಳೆ. ಚಳಿ.ಬಿಸಿಲಿಗೆ ಮೈವೂಡ್ಡಿ
             ಹಸಿರಾದಳು.
ಕತ್ತಲೆ ಕರೆದಾಗೆಲ್ಲ
  ಬೆಳಕು ಕದ್ದು ಓಡಿ ಬಂದರೂ ..
ಇನ್ನೂ ಸೇರಲಾಗಿಲ್ಲ. .

Monday 20 July 2015

ಪ್ರೇಮ ಚಿಕಿತ್ಸೆ

ಪ್ರೇಮ ಚಿಕಿತ್ಸೆ
'''''''''"""""'''
ಬನದ ತುಂಬಾ
ಬಣ್ಣ ಬಣ್ಣದ ಹೂವು. ..
ವಿಧವಿಧದ  ದುಂಬಿ .
ಯಾವ ಹೂವಿಗೆ
ಯಾವ ದುಂಬಿಯೋ...
ಯಾವ ದುಂಬಿಗೆ
ಎಲ್ಲಿಯ ಹೂವೋ....!
ಬೆಸೆದವರಾರೋ...ಹೊಸೆದವರಾರೊ....?
ಆದಿ ಅಂತ್ಯ ಅರಿಯದ ಮುಗ್ಧ ಪ್ರೇಮ ಸಂಬಂಧ.
            ನೂರು ಬಣ್ಣದ ಹೂ ಚೆಲುವು
            ಮೈದುಂಬಿದೆ ನನ್ನ ಮನವು..
             ಎಲ್ಲ ಹೇಗೆ ಹೇಳಲಿ...
       ಹೂ ದುಂಬಿಯ
       ಒಲವ ಸೆಳೆತ
        ಬಾವ ಮಿಳಿತ...
       ಅಂಟು ರೋಗ ನನಗೂ... ತಗುಲಿದೆ.!
       ಪ್ರೇಮ ಚಿಕಿತ್ಸೆ ಬೇಕಿದೆ.
       ಮನವಿ  ಮಾಡುವೆ
        ಅನುಮತಿಸಿ....
        ಒಲವ ವೈಧ್ಯಾಲಯದ ವಿಳಾಸ ತಿಳಿಸಿ.
( ನನ್ನ " ರವಿರಾಜಮಾರ್ಗ " ಬಾವ ಸಂಕಲನ ದಿಂದ)

Wednesday 22 April 2015

ಹೇಳಲಾರೆ ಕಾರಣ. .!


    1    .ದಿಗಿಲು. ..!
    ..........
    ತೆರೆದಿದೆ ಬಯಕೆಯ ಬಾಗಿಲು
    ಸೆಳೆಯುತಿದೆ ತಾರೆಗಳ ಮುಗಿಲು
    ಕೆಣಕುತಿದೆ ಕಣ್ಣೊಳಗೆ...
    ಆಸೆಯ ಕಡಲು
    .... ಕ್ಷಮಿಸಿ ..!
    ಎಲ್ಲ ಹೇಳಲು
    ಕೊಂಚ ದಿಗಿಲು. .!
    ಜಾಲದೊಳಗೆ ಜಾಲಿ ನಾನು
    ಜಾರಿ ಬೀಳುವ ಮುನ್ನ
    ಜಿಗಿದು ಮಬ್ಬು ಕೊಡವಿದೆ.
    ಬುದ್ಧಿ ಹೇಳಿದೆ
    ಮನಸಿಗೆ...!
    ( ಇನ್ನೂ ಇದೆ. . "ಹೇಳಲಾರೆ ಕಾರಣ. ".. ಬಾವ ಸಂಕಲನದಿಂದ ನಿಮಗಾ..
      2.   ಛಲ. .ಫಲ. ..
      ..................
      ಏಸೊಂದು ಕನಸುಗಳೊಂದಿಗೆ ಈಜಿದೆ....
      ಆಕಾಶವ ಮುಟ್ಟಿ ಬಿಡಲೆಂದು
      ಅವಕಾಶಗಳ ಸೃಷ್ಟಿಸಿಕೊಂಡು ...
      ಕನಸುಗಳ ಮುಂಗಾರಲಿ ವರ್ಷವಿಡೀ ನೆನೆದೆ.
      ಶ್ರಮದ ವೃಕ್ಷದಡಿ
      ಛಲ ನನ್ನದು...
      ಫಲ ... ಪರಿಣಾಮದ ಚಿಂತೆಯಿಲ್ಲ..!
      ಗೆಲ್ಲುವ ಹಂಬಲ...ಚಫಲ...
      ಹೂಮಾಲೆಯೂ ಇದೆ.
      3.ನನ್ನ ಪ್ರೇಮ ಪತ್ರ
        ಎಣಿಸಿರಲಿಲ್ಲ ನಾನು...
        ನನ್ನ ಪ್ರೇಮ ಪತ್ರಕೆ
        ಕಣ್ಣೀರ ಉತ್ತರ ಸಿಗಬಹುದೆಂದು...!
        ಕಾರಣ ಕೇಳಿದರೆ ಅವಳಂದಳು...
        ಕಣ್ಣೀರಲ್ಲ... ಪನೀರಿದು......
        ನನಗೀಗ ನಿನ್ನದು
        ನೂರನೆಯ ಪ್ರೇಮ ಪತ್ರ. ....!
        ಅಂದಾಗ ಜೋಗ ಜಲಧಾರೆ ಹರಿಯಿತು
        ನನ್ನ ಕಣ್ಣಲ್ಲಿ. .,!

Monday 20 April 2015

ಚಿನ್ನದ ಗೋರಿಯಲಿ ಮಲಗಿದಾರೆ ಮಾರ್ರೇ..!

ಚಿನ್ನದ ಗೋರಿಯಲಿ ಮಲಗಿದಾರೆ.....!
...................................
ಚಿನ್ನದ ಕಣಗಳ ರಾಸಿಯ
ಮರುಭೂಮಿಯಲಿ...
ನೀರಿಗಾಗಿ ಅಲೆದೆ..!
ನೀರಿರಲಿ... ಮರೀಚಿಕೆಯೂ ಕಾಣಲಿಲ್ಲ. ...!
ಮಡಿದ  ಹಲವರ ಅಸ್ಥಿಗಳು
ಆ ಚಿನ್ನದ ರಾಶಿಯ ಮೇಲೆಯೇ ಇವೆ.
     ಧರೆಯ ಬಗೆದು
     ಚಿನ್ನ ಕೂಡಿಟ್ಟ
     ಕೋಟಿ ಕೋಟಿ ಕುಳದವರ ಅಸ್ಥಿಗಳೂ
    ಸಾಮಾನ್ಯ ಅನಾಥರ ಅಸ್ಥಿಗಳ ನಡುವೆಯೇ ನರಳುತಿವೆ.
ಕೋಟಿ ಪಾಪಗಳೂಂದಿಗೆ ಕೊರಗುತ....!
        ಎಂತಹ ಅದೃಷ್ಟ. .!
ಚಿನ್ನದ ಗೋರಿಯಲಿ ಮಲಗಿದಾರೆ ಮಾರ್ರೇ....!

Wednesday 1 April 2015

ಚಂದ್ರ ಮತ್ತು ತಾವರೆ

ಚಂದ್ರ ಮತ್ತು ತಾವರೆ
.....................
ಮಲಗಬೇಕು. ....
ಆದ್ರೆ ನಿದ್ರೆ ಬರದು ಕಣೇ. ..
      ಮುಂಜಾವಲಿ ಕವಿದ
     ಒಂಚೂರು ನಿದಿರೆಯಲಿ
      ಮತ್ತೆ ನೀನೇ ಕಣೇ. ..
      ಕನಸಲೆಲ್ಲಾ ಆವರಿಸಿ
       ಕಾಯಕ ಮರೆಸಿ
       ಕಾಡುವ ನೀನು
       ಕಾದಿದ್ದು ನನಗೇ ತಾನೇ...?
ಎಂದು ರಾತ್ರಿಯೆಲ್ಲ ಅಲೆದ ಚಂದ್ರ
ತಾವರೆಯ ಕೇಳಿದ. !..
       ಕೆಸರಲರಳಿದ ತಾವರೆ
      ನೀರಲೆಗಳ ನಡುವೆ ನಾಚಿ
      ಕೆಂಪೇರಿತು....!
ಧರೆಗಿಳಿದು ಬರುವಂತೆ
ಸಂದೇಶ ಕಳುಹಿಸಿದ್ದ ಕಂಡು
ಚಂದ್ರ ನಲಿದು ಬೆಳದಿಂಗಳ ಸುರಿದನು.