ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Wednesday 1 July 2020

ನಿಮ್ಮ ಕತೆ ಮಕ್ಕಳ ಜೊತೆ ಮಕ್ಕಳ ಕತಾ ಅಭಿಯಾನಕ್ಕೆ ಯಶಸ್ವಿ ಸ್ಪಂದನೆ, ಫೇಸ್ಬುಕ್ನಲ್ಲಿ ವೈರಲ್.

ಕೋರೋನಾ ವಿಪತ್ತಿನ ಈ ಕಾಲದಲ್ಲಿ  ಸುದೀರ್ಘ ರಜೆ ಯನ್ನು ಅನುಭವಿಸಿದ ಮಕ್ಕಳಿಗೆ  ರಜೆಯ ಮಜವಿಲ್ಲ, ಸಂಬಂಧಿಕರ ಮನೆಗೆ ಹೋಗುವಂತಿಲ್ಲ , ಗೆಳೆಯರೆಲ್ಲಾ ಸೇರಿ ಆಡುವಂತಿಲ್ಲ, ಒತ್ತಾಯದ ಆನ್ಲೈನ್ ತರಗತಿಗಳು, ಮೊಬೈಲ್ ಗೀಳು, ಟೀವಿ ಒಂದೆಡೆ ,ಹೀಗಾಗಿ ಮಕ್ಕಳು ಖಿನ್ನರಾಬಿಡುವ ಸಾಧ್ಯತೆ ಇದೆ. ಅಲ್ಲದೆ ಪಾಲಕರು ಟೀವಿ ಮೊಬೈಲ್ ನ ,ಮೊರೆ ಹೋಗುತ್ತಿದ್ದು ಮಕ್ಕಳಿಗೆ ಕಥೆ ಹೇಳುವ ಪರಂಪರೆ ಕಡಿಮೆಯಾಗಿದೆ. ಅವರ ಜೊತೆ ಸೃಜನಶೀಲವಾಗಿ ಸಮಯ ಕಳೆಯುವುದು ತುಂಬಾ ಕಡಿಮೆ.
ಹಾಗಾಗಿ "ನಿಮ್ಮ ಕಥೆ ಮಕ್ಕಳ ಜೊತೆ " ಸ್ಪರ್ಧೆ ಒಂದು ತಿಂಗಳಕಾಲ ಮಕ್ಕಳ ಕಥಾ ಅಭಿಯಾನವನ್ನು ಮಕ್ಕಳ ಮಂದಾರ ಪತ್ರಿಕಾ ಬಳಗದಿಂದ ಏರ್ಪಡಿಸಲಾಗಿದೆ.

ಮನೆಯಲ್ಲಿಯೇ ಇರುವ ಮಕ್ಕಳು ಹಾಗೂ ಪಾಲಕರು, ಶಿಕ್ಷಕರು ಸಾಹಿತಿಗಳ ನಡುವೆ ವಾಟ್ಸಪ್ ಗ್ರೂಪ್ ಹಾಗೂ ಮಕ್ಕಳ ಮಂದಾರ ಫೇಸ್ಬುಕ್ ಪೇಜ್ ಮೂಲಕ ಸಂಪರ್ಕ ಏರ್ಪಡಿಸಿ  ಸೃಜನಶೀಲ ಸಂಭ್ರಮವನ್ನು ಸೃಜಿಸಲು  ಮಕ್ಕಳಿಗಾಗಿ ಪಾಲಕರಿಗಾಗಿ ಈ ವಿನೂತನ ಮಕ್ಕಳ ಕಥಾ ಅಭಿಯಾನವನ್ನು ಆನ್ಲೈನ್ ಮೂಲಕ ಈ ರಜಾಕಾಲದಲ್ಲಿ ನಡೆಸಿದೆ.
ಪಾಲಕರು . ಮೊಬೈಲ್ ಟಿವಿಯ ಮೊರೆ ಹೋಗುತ್ತಿರುವ ಇಂದು ಮಕ್ಕಳಿಗೆ ಕತೆ ಹೇಳುವ ಪರಂಪರೆ ಕಡಿಮೆಯಾಗಿದೆ.  ಕಥೆ ಹೇಳುವ ಪರಂಪರೆಯನ್ನು ಪೋಷಿಸಿ ಪ್ರೋತ್ಸಾಹಿಸಲು
ಮಕ್ಕಳ ಮಂದಾರ ಪತ್ರಿಕಾ ಸಂಪಾದಕರಾದ ರವಿಚಂದ್ರ (ರವಿರಾಜ್) ಅವರು  ಮಕ್ಕಳ ಸಾಹಿತ್ಯ ಪರಿಷತ್ತು  ಮತ್ತು ಸೃಜನ ಶಿಕ್ಷಣ ಸಂಶೋಧನಾ ಟ್ರಸ್ಟ್  ಬಳಗದ ಗೆಳೆಯರ ಜೊತೆ ಕೂಡಿಕೊಂಡು ಅಭಿಯಾನ ಯಶಸ್ವಿಗೊಳಿಸಿದ್ದಾರೆ.

ನೂರಾರು ಕಥೆಗಳು ರಾಜ್ಯದ ವಿವಿಧ ಭಾಗಗಳಿಂದ , ಅಲ್ಲದೆ ಮುಂಬೈ ,ಸೋಲಾಪುರ, ಕಾಸರಗೋಡಿನಿಂದ ಸಹ ಪಾಲಕರು ಮಕ್ಕಳ ಕತೆಗಳ ವಿಡಿಯೋಗಳನ್ನು ಕಳುಹಿಸಿದ್ದಾರೆ.
ಅಂತರ್ಜಾಲದಲ್ಲಿ  ಈಗಾಗಲೇ 29000 ಜನ ವೀಕ್ಷಿಸಿದ್ದಾರೆ.

ನೀವು ಕಥೆಗಳನ್ನು ವೀಕ್ಷಿಸಲು 
ಮಕ್ಕಳ ಮಂದಾರ ಫೇಸ್ಬುಕ್ ಪೇಜ್ ಸರ್ಚ್ ಮಾಡಿ.
 https://www.facebook.com/makkalamandara
ಕಥಾ ಅಭಿಯಾನವನ್ನು ಬೆಂಬಲಿಸಿದವರ ಅಭಿಪ್ರಾಯಗಳು:
"ಕಥೆಗಳನ್ನು ಮಕ್ಕಳಿಗೆ ಹೇಳುವುದರಿಂದ  ಆಲಿಸುವಿಕೆ ಕೌಶಲ, ಹಾಗೂ ಮಾತನಾಡುವ ಕೌಶಲ ಮಕ್ಕಳಲ್ಲಿ ಬೆಳೆಯುವ ಜೊತೆಗೆ ಅವರ ಕಲ್ಪನಾ ಶೀಲತೆ ಗ್ರಹಿಕೆ ಹೆಚ್ಚುತ್ತದೆ. ಹಾಗಾಗಿ ದೃಶ್ಯಮಾಧ್ಯಮಕ್ಕೆ ಮೊರೆ ಹೋಗುವುದಕ್ಕಿಂತ ಮಕ್ಕಳಿಗೆ ಕಥೆ ಹೇಳುವ ಮೂಲಕ  ಅವರ ಸೃಜನಶೀಲತೆ ಹೆಚ್ಚಿಸುವ ಕೆಲಸ ಮಾಡಿದ ಮಕ್ಕಳ ಮಂದಾರ ಬಳಗಕ್ಕೆ ಅಭಿನಂದನೆಗಳು 
ಎಂದಿದ್ದಾರೆ ಸುಜಯ್ ಲಿಂಗಪ್ಪ . ಇನ್ಫೋಸಿಸ್ ಸಂಸ್ಥೆಯ ಆರ್ಟ ಡಿಸೈನ್ ಮುಖ್ಯಸ್ಥರು.

ಮನೆ ಮನೆಯಲ್ಲಿ ಮಕ್ಕಳೊಂದಿಗೆ ಸೃಜನಶೀಲ ಸಂಭ್ರಮವನ್ನು ಕಳೆಯುವಂತೆ ಮಾಡಿದ ಮಕ್ಕಳ ಮಂದಾರ ಬಳಗ ದ ಕಾರ್ಯ ಶ್ಲಾಘನೀಯ.
-ಮತ್ತೂರು ಸುಬ್ಬಣ್ಣ . ಮಕ್ಕಳ ಕಥೆಗಾರರು.

 ದೃಶ್ಯ ಮಾಧ್ಯಮಗಳಿಗೆ ಮೊರೆಹೋಗಿ ಮಕ್ಕಳ ಕಲ್ಪನಾ ಶೀಲತೆಯನ್ನು ಒಂದು ಚೌಕಟ್ಟಿನೊಳಗೆ ಈ ಹಾಕುತ್ತಿರುವ ಇಂದು ಅವರ ಕಲ್ಪನೆಗಳ ವಿಸ್ತರಣೆಗೆ ಮಕ್ಕಳಿಗೆ ಕಥೆ ಹೇಳುವುದು, ಕಥಾ ಪರಂಪರೆಯನ್ನು ಮುಂದುವರಿಸುವುದು ಅತಿ ಅಗತ್ಯವಿದೆ.
-ನೀಲಮ್ಮ ಕೆ ಬಳ್ಳಾರಿ

No comments:

Post a Comment