ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Friday 31 July 2020

ನಮ್ಮೂರ ವಠಾರ ಶಾಲೆ/vataara shaale

ನಮ್ಮ ಶಾಲಾ ಮಕ್ಕಳಿಗಾಗಿ ವಠಾರ ಶಾಲೆ

https://youtu.be/WMu17wnfugA
ನಮ್ಮೂರ ವಠಾರ ಶಾಲೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಲ್ಕಾಪುರ. ಮಾನ್ವಿ ತಾಲೂಕು.
ಗ್ರಾಮದ ಹಿರಿಯ ವಿದ್ಯಾರ್ಥಿಗಳ ನೆರವಿನಿಂದ ಯಶಸ್ವಿ ಮಠರ ಶಾಲೆ. ಮೇಲಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ ವೀಕ್ಷಿಸಿ.

https://youtu.be/WMu17wnfugA

Monday 27 July 2020

ತಾರ್ಕಿಕ ಶುದ್ಧ ವೈಜ್ಞಾನಿಕ ಭಾಷೆ ಕನ್ನಡ

ಇಂದಿನ ವಿದ್ಯಾರ್ಥಿಗಳಿಗೆ ಭಾರತೀಯ ಭಾಷೆಗಳ ವರ್ಣಮಾಲೆ ವಿಜ್ಞಾನದಿಂದ ತುಂಬಿದೆ ಎಂದು ತಿಳಿದಿಲ್ಲದಿರಬಹುದು.  ವರ್ಣಮಾಲೆಯ ಪ್ರತಿಯೊಂದು ಅಕ್ಷರವು ತಾರ್ಕಿಕವಾಗಿದೆ ಮತ್ತು ನಿಖರವಾದ ಲೆಕ್ಕಾಚಾರಗಳೊಂದಿಗೆ ಅನುಕ್ರಮವಾಗಿ ಇರಿಸಲಾಗುತ್ತದೆ.  ಅಂತಹ ವೈಜ್ಞಾನಿಕ ದೃಷ್ಟಿಕೋನವು ಇತರ ವಿದೇಶಿ ಭಾಷೆಗಳ ವರ್ಣಮಾಲೆಯಲ್ಲಿ ಅಡಕವಾಗಿಲ್ಲ.  ಉದಾ.  ನೋಡಿ:

  *ಕಖಗಘಙ* - ಈ ಐದು ಅಕ್ಷರದ ಗುಂಪನ್ನು *ಕಾಂತವ್ಯ* ಎಂದು ಕರೆಯಲಾಗುತ್ತದೆ ಏಕೆಂದರೆ ಇದನ್ನು ಉಚ್ಚರಿಸುವಾಗ ಗಂಟಲಿನಿಂದ ಶಬ್ದ ಹೊರಬರುತ್ತದೆ.  ಉಚ್ಚರಿಸಲು ಪ್ರಯತ್ನಿಸಿ.


  *ಚಛಜಝಞ* - ಈ ಐದು ಅಕ್ಷರದ ಗುಂಪನ್ನು *ಅಂಗುಳ* ಎಂದು ಕರೆಯಲಾಗುತ್ತದೆ ಏಕೆಂದರೆ ಇದನ್ನು ಉಚ್ಚರಿಸುವಾಗ ನಾಲಿಗೆ ಅಂಗುಳನ್ನು ಅನುಭವಿಸುತ್ತದೆ.  ಉಚ್ಚರಿಸಲು ಪ್ರಯತ್ನಿಸಿ.

 *ಟಠಡಢಣ* : ಈ ಐದು ಅಕ್ಷರಗಳ ಗುಂಪನ್ನು *ಮುರ್ಧನ್ಯಾ* ಎಂದು ಕರೆಯಲಾಗುತ್ತದೆ ಏಕೆಂದರೆ ಇದನ್ನು ಉಚ್ಚರಿಸುವಾಗ ನಾಲಿಗೆ ಮುರ್ಧನ್ಯವನ್ನು ಅನುಭವಿಸುತ್ತದೆ.  ಉಚ್ಚರಿಸಲು ಪ್ರಯತ್ನಿಸಿ.

  *ತಥದಧನ* - ಈ ಐದು ಅಕ್ಷರದ ಗುಂಪನ್ನು *ದಂತವ್ಯ* ಎಂದು ಕರೆಯಲಾಗುತ್ತದೆ ಏಕೆಂದರೆ ಇದನ್ನು ಉಚ್ಚರಿಸುವಾಗ ನಾಲಿಗೆ ಹಲ್ಲುಗಳನ್ನು ಮುಟ್ಟುತ್ತದೆ.  ಒಮ್ಮೆ ಪ್ರಯತ್ನಿಸಿ

  *ಪಫಬಭಮ* - ಈ ಐದು ಅಕ್ಷರದ ಗುಂಪನ್ನು *ಆಷ್ಟವ್ಯ* ಎಂದು ಕರೆಯಲಾಗುತ್ತದೆ ಏಕೆಂದರೆ ಇದನ್ನು ಉಚ್ಚರಿಸಲು ಎರಡೂ ತುಟಿಗಳು ಭೇಟಿಯಾಗುತ್ತವೆ.  ಒಮ್ಮೆ ಪ್ರಯತ್ನಿಸಿ

  ವಿಶ್ವದ ಬೇರೆ ಯಾವುದೇ ಭಾಷೆಯಲ್ಲಿ ಇಂತಹ ವೈಜ್ಞಾನಿಕ ವಿಧಾನವಿದೆಯೇ?  ನಮ್ಮ ಭಾರತೀಯ ಭಾಷೆಯ ಬಗ್ಗೆ ನಮಗೆ ಹೆಮ್ಮೆ ಬೇಕು .
  
🙏 *ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ* 🙏

ವರ್ಗಾಕ್ಷರ ವರ್ಗಗಳ ಹೆಸರನ್ನು ಅನುಕ್ರಮವಾಗಿ ಕಂಠವ್ಯ, ಆಂಗುಲ್ಯ, ಮೂರ್ಧನ್ಯ, ತಾಲವ್ಯ, ಓಷ್ಠ್ಯ ಎಂದೂ ಕರೆಯುತ್ತಾರೆ

Tuesday 21 July 2020

ನಮ್ಮ ಶೈಕ್ಷಣಿಕ ಪ್ರಯೋಗಗಳ ವಿಡಿಯೋಗಳ ಲಿಂಕುಗಳು

ಚಲಿಸುವ ಪೇಪರ್ ಕೋಳಿ ತಯಾರಿಕೆಯ ಹಂತಗಳ ಬಗ್ಗೆ ಮಾಹಿತಿ ಗೆ ಈ ಲಿಂಕ್ ಕ್ಲಿಕ್ ಮಾಡಿ.
https://youtu.be/1pmiPQNBOmc


ಕನ್ನಡ ಸಂಧಿಗಳ ಪರಿಚಯಕ್ಕಾಗಿ ಈ ಲಿಂಕ್ ಕ್ಲಿಕ್ ಮಾಡಿ

https://youtu.be/VxpuNmqiEnQ

ಸಂಸ್ಕೃತ ವ್ಯಂಜನ ಸಂಧಿಗಳು ಪರಿಚಯಕ್ಕಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

https://youtu.be/p05X0r2-7ZI

ಸಂಸ್ಕೃತ ಸಂಧಿಗಳ ಪರಿಚಯಕ್ಕಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
https://youtu.be/gRgOlPoj4t4

ಮಕ್ಕಳ ಶೈಕ್ಷಣಿಕ ನಾಟಕಕ್ಕಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

https://youtu.be/wKXUbyCgH1c

ಶಾಲಾ ಮಕ್ಕಳಿಗಾಗಿ ಜಾನಪದ ಪಠ್ಯಂತರ್ಗತ ಪ್ರಯೋಗಗಳ ಬಗ್ಗೆ ತಿಳಿಯಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
https://youtu.be/SbF7FvBQgBY

ಕಲಿತವರು ಮಕ್ಕಳ ಶೈಕ್ಷಣಿಕ ನಾಟಕಕ್ಕಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

https://youtu.be/mYqVczy2y0M

ಕಲಿ ಕಲಿಸು ಯೋಜನೆ ಕುರಿತು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

https://youtu.be/QU7aQYy4Z7g

ನಾಳೆಗಳು ನಮ್ಮವು ವು . ನಿಮ್ಮ ಪ್ಲಾಸ್ಟಿಕ್ ಕಸ ನಿಮಗೆ ಆಂದೋಲನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.


https://youtu.be/j38ms2vlg78

ಕರ್ನಾಟಕದ ನೆಲಮೂಲದ ಹಸೆಚಿತ್ತಾರ ಕಲೆಯ ಕುರಿತು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

https://youtu.be/vyj6n6i6_hY

ಹೆಚ್ಚಿನ ಶೈಕ್ಷಣಿಕ, ಸಾಂಸ್ಕೃತಿಕ, ಜಾನಪದ, ಮಕ್ಕಳ ಸಾಹಿತ್ಯ'ದ ವಿಡಿಯೋಗಳಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ .. ವಿಡಿಯೋ ವಿಭಾಗದಲ್ಲಿ ತೆರೆದು ಹೆಚ್ಚಿನ ವಿಡಿಯೋ ವೀಕ್ಷಿಸಿ. ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿ. ಹೆಚ್ಚಿನ ಮಾಹಿತಿ ಪಡೆಯಿರಿ.

https://www.youtube.com/channel/UCUbMX1tX-B98G-Nc0FUxBRg

ನಿಮ್ಮ ರವಿರಾಜ್  ಸಾಗರ್ /ರವಿಚಂದ್ರ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಲ್ಕಾಪುರ.
9980952630

ಕಲಿಕಾ ಬೋಧನೋಪಕರಣಗಳು




Wednesday 1 July 2020

ನಿಮ್ಮ ಕತೆ ಮಕ್ಕಳ ಜೊತೆ ಮಕ್ಕಳ ಕತಾ ಅಭಿಯಾನಕ್ಕೆ ಯಶಸ್ವಿ ಸ್ಪಂದನೆ, ಫೇಸ್ಬುಕ್ನಲ್ಲಿ ವೈರಲ್.

ಕೋರೋನಾ ವಿಪತ್ತಿನ ಈ ಕಾಲದಲ್ಲಿ  ಸುದೀರ್ಘ ರಜೆ ಯನ್ನು ಅನುಭವಿಸಿದ ಮಕ್ಕಳಿಗೆ  ರಜೆಯ ಮಜವಿಲ್ಲ, ಸಂಬಂಧಿಕರ ಮನೆಗೆ ಹೋಗುವಂತಿಲ್ಲ , ಗೆಳೆಯರೆಲ್ಲಾ ಸೇರಿ ಆಡುವಂತಿಲ್ಲ, ಒತ್ತಾಯದ ಆನ್ಲೈನ್ ತರಗತಿಗಳು, ಮೊಬೈಲ್ ಗೀಳು, ಟೀವಿ ಒಂದೆಡೆ ,ಹೀಗಾಗಿ ಮಕ್ಕಳು ಖಿನ್ನರಾಬಿಡುವ ಸಾಧ್ಯತೆ ಇದೆ. ಅಲ್ಲದೆ ಪಾಲಕರು ಟೀವಿ ಮೊಬೈಲ್ ನ ,ಮೊರೆ ಹೋಗುತ್ತಿದ್ದು ಮಕ್ಕಳಿಗೆ ಕಥೆ ಹೇಳುವ ಪರಂಪರೆ ಕಡಿಮೆಯಾಗಿದೆ. ಅವರ ಜೊತೆ ಸೃಜನಶೀಲವಾಗಿ ಸಮಯ ಕಳೆಯುವುದು ತುಂಬಾ ಕಡಿಮೆ.
ಹಾಗಾಗಿ "ನಿಮ್ಮ ಕಥೆ ಮಕ್ಕಳ ಜೊತೆ " ಸ್ಪರ್ಧೆ ಒಂದು ತಿಂಗಳಕಾಲ ಮಕ್ಕಳ ಕಥಾ ಅಭಿಯಾನವನ್ನು ಮಕ್ಕಳ ಮಂದಾರ ಪತ್ರಿಕಾ ಬಳಗದಿಂದ ಏರ್ಪಡಿಸಲಾಗಿದೆ.

ಮನೆಯಲ್ಲಿಯೇ ಇರುವ ಮಕ್ಕಳು ಹಾಗೂ ಪಾಲಕರು, ಶಿಕ್ಷಕರು ಸಾಹಿತಿಗಳ ನಡುವೆ ವಾಟ್ಸಪ್ ಗ್ರೂಪ್ ಹಾಗೂ ಮಕ್ಕಳ ಮಂದಾರ ಫೇಸ್ಬುಕ್ ಪೇಜ್ ಮೂಲಕ ಸಂಪರ್ಕ ಏರ್ಪಡಿಸಿ  ಸೃಜನಶೀಲ ಸಂಭ್ರಮವನ್ನು ಸೃಜಿಸಲು  ಮಕ್ಕಳಿಗಾಗಿ ಪಾಲಕರಿಗಾಗಿ ಈ ವಿನೂತನ ಮಕ್ಕಳ ಕಥಾ ಅಭಿಯಾನವನ್ನು ಆನ್ಲೈನ್ ಮೂಲಕ ಈ ರಜಾಕಾಲದಲ್ಲಿ ನಡೆಸಿದೆ.
ಪಾಲಕರು . ಮೊಬೈಲ್ ಟಿವಿಯ ಮೊರೆ ಹೋಗುತ್ತಿರುವ ಇಂದು ಮಕ್ಕಳಿಗೆ ಕತೆ ಹೇಳುವ ಪರಂಪರೆ ಕಡಿಮೆಯಾಗಿದೆ.  ಕಥೆ ಹೇಳುವ ಪರಂಪರೆಯನ್ನು ಪೋಷಿಸಿ ಪ್ರೋತ್ಸಾಹಿಸಲು
ಮಕ್ಕಳ ಮಂದಾರ ಪತ್ರಿಕಾ ಸಂಪಾದಕರಾದ ರವಿಚಂದ್ರ (ರವಿರಾಜ್) ಅವರು  ಮಕ್ಕಳ ಸಾಹಿತ್ಯ ಪರಿಷತ್ತು  ಮತ್ತು ಸೃಜನ ಶಿಕ್ಷಣ ಸಂಶೋಧನಾ ಟ್ರಸ್ಟ್  ಬಳಗದ ಗೆಳೆಯರ ಜೊತೆ ಕೂಡಿಕೊಂಡು ಅಭಿಯಾನ ಯಶಸ್ವಿಗೊಳಿಸಿದ್ದಾರೆ.

ನೂರಾರು ಕಥೆಗಳು ರಾಜ್ಯದ ವಿವಿಧ ಭಾಗಗಳಿಂದ , ಅಲ್ಲದೆ ಮುಂಬೈ ,ಸೋಲಾಪುರ, ಕಾಸರಗೋಡಿನಿಂದ ಸಹ ಪಾಲಕರು ಮಕ್ಕಳ ಕತೆಗಳ ವಿಡಿಯೋಗಳನ್ನು ಕಳುಹಿಸಿದ್ದಾರೆ.
ಅಂತರ್ಜಾಲದಲ್ಲಿ  ಈಗಾಗಲೇ 29000 ಜನ ವೀಕ್ಷಿಸಿದ್ದಾರೆ.

ನೀವು ಕಥೆಗಳನ್ನು ವೀಕ್ಷಿಸಲು 
ಮಕ್ಕಳ ಮಂದಾರ ಫೇಸ್ಬುಕ್ ಪೇಜ್ ಸರ್ಚ್ ಮಾಡಿ.
 https://www.facebook.com/makkalamandara
ಕಥಾ ಅಭಿಯಾನವನ್ನು ಬೆಂಬಲಿಸಿದವರ ಅಭಿಪ್ರಾಯಗಳು:
"ಕಥೆಗಳನ್ನು ಮಕ್ಕಳಿಗೆ ಹೇಳುವುದರಿಂದ  ಆಲಿಸುವಿಕೆ ಕೌಶಲ, ಹಾಗೂ ಮಾತನಾಡುವ ಕೌಶಲ ಮಕ್ಕಳಲ್ಲಿ ಬೆಳೆಯುವ ಜೊತೆಗೆ ಅವರ ಕಲ್ಪನಾ ಶೀಲತೆ ಗ್ರಹಿಕೆ ಹೆಚ್ಚುತ್ತದೆ. ಹಾಗಾಗಿ ದೃಶ್ಯಮಾಧ್ಯಮಕ್ಕೆ ಮೊರೆ ಹೋಗುವುದಕ್ಕಿಂತ ಮಕ್ಕಳಿಗೆ ಕಥೆ ಹೇಳುವ ಮೂಲಕ  ಅವರ ಸೃಜನಶೀಲತೆ ಹೆಚ್ಚಿಸುವ ಕೆಲಸ ಮಾಡಿದ ಮಕ್ಕಳ ಮಂದಾರ ಬಳಗಕ್ಕೆ ಅಭಿನಂದನೆಗಳು 
ಎಂದಿದ್ದಾರೆ ಸುಜಯ್ ಲಿಂಗಪ್ಪ . ಇನ್ಫೋಸಿಸ್ ಸಂಸ್ಥೆಯ ಆರ್ಟ ಡಿಸೈನ್ ಮುಖ್ಯಸ್ಥರು.

ಮನೆ ಮನೆಯಲ್ಲಿ ಮಕ್ಕಳೊಂದಿಗೆ ಸೃಜನಶೀಲ ಸಂಭ್ರಮವನ್ನು ಕಳೆಯುವಂತೆ ಮಾಡಿದ ಮಕ್ಕಳ ಮಂದಾರ ಬಳಗ ದ ಕಾರ್ಯ ಶ್ಲಾಘನೀಯ.
-ಮತ್ತೂರು ಸುಬ್ಬಣ್ಣ . ಮಕ್ಕಳ ಕಥೆಗಾರರು.

 ದೃಶ್ಯ ಮಾಧ್ಯಮಗಳಿಗೆ ಮೊರೆಹೋಗಿ ಮಕ್ಕಳ ಕಲ್ಪನಾ ಶೀಲತೆಯನ್ನು ಒಂದು ಚೌಕಟ್ಟಿನೊಳಗೆ ಈ ಹಾಕುತ್ತಿರುವ ಇಂದು ಅವರ ಕಲ್ಪನೆಗಳ ವಿಸ್ತರಣೆಗೆ ಮಕ್ಕಳಿಗೆ ಕಥೆ ಹೇಳುವುದು, ಕಥಾ ಪರಂಪರೆಯನ್ನು ಮುಂದುವರಿಸುವುದು ಅತಿ ಅಗತ್ಯವಿದೆ.
-ನೀಲಮ್ಮ ಕೆ ಬಳ್ಳಾರಿ

ಸುಳ್ಳೂರ ಶಾಲೆಯಲ್ಲಿ ಪಾಲಕರಿಂದ ಸ್ವಚ್ಛತಾ ಸಪ್ತಾಹ

ಊರಿನ ಗ್ರಾಮಸ್ಥರಿಂದ ಸುಳ್ಳೂರು ಶಾಲೆಯಲ್ಲಿ ಸ್ವಚ್ಛತಾ ಸಪ್ತಾಹ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಳೂರಿನ ಹಿರಿಯ ವಿದ್ಯಾರ್ಥಿಗಳು , ಪಾಲಕರೆಲ್ಲರೂ ಸೇರ...