ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Thursday 26 March 2020

ನೋಡಲೇಬೇಕಾದ ಸಿನಿಮಾಗಳ ಲಿಂಕ್

ಮನೇಲಿರಿ , ಸಿನಿಮಾ ನೋಡಿ!
ಮನೇಲಿರಿ , ಕ್ಷೇಮವಾಗಿರಿ. ಬೋರಾದ್ರೆ ಇಲ್ಲಿ ಒಂದಷ್ಟು ಒಳ್ಳೆಯ ಸಿನಿಮಾಗಳಿವೆ ಗಮನಿಸಿ. ಕ್ಲಾಸಿಕ್'ಗಳೆನಿಸಿದ, ವಸ್ತು, ವಿಷಯ, ನಿರೂಪಣೆಯ ದೃಷ್ಟಿಯಿಂದ ವಿಶೇಷವೆನಿಸಿದ ಆಯ್ದ 60 ಕನ್ನಡ ಸಿನಿಮಾಗಳಿವು. ಲಿಂಕ್ ಕ್ಲಿಕ್ಕಿಸಿ ನೀವು ಸಿನಿಮಾ ನೋಡಬಹುದು. ಲಿಂಕ್ ಕಾಪಿ ಮಾಡಿ ಒಂದ್ಕಡೆ ಇಟ್ಕಳಿ. ಸಾಧ್ಯವಾದರೆ ಪೋಸ್ಟ್ ಶೇರ್ ಮಾಡಿ, ಸಿನಿಮಾಸಕ್ತರಿಗೆ ಅನುಕೂಲವಾಗಬಹುದು.
---------
ಸಂಸ್ಕಾರ
https://youtu.be/yNKcP0yMKHw
---------------------------------------
ಕಾಡು
https://youtu.be/yS4TgOi4P1E
---------------------------------------
ಬೂತಯ್ಯನ ಮಗ ಅಯ್ಯು
https://youtu.be/aRJkkpOC12s
---------------------------------------
ಹಂಸಗೀತೆ
https://youtu.be/OwZu9W2qemU
---------------------------------------
ಬ್ಯಾಂಕರ್ ಮಾರ್ಗಯ್ಯ
https://youtu.be/_xS1HaWlAmc
---------------------------------------
ಭೂದಾನ
https://youtu.be/ADwtKDeuIR0
---------------------------------------
ವಂಶವೃಕ್ಷ
https://youtu.be/LoKh2Rjzx6U
---------------------------------------
ಕಾಕನ ಕೋಟೆ
https://youtu.be/DbJnCFab6Bc
---------------------------------------
ಗೆಜ್ಜೆಪೂಜೆ
https://youtu.be/Bw1SWdU-euY
---------------------------------------
ಕವಿರತ್ನ ಕಾಳಿದಾಸ
https://youtu.be/dmLSeye1KBY
---------------------------------------
ಚೋಮನ ದುಡಿ
https://youtu.be/Aqe1bp6WWn4
---------------------------------------
ಕಿತ್ತೂರು ರಾಣಿ ಚೆನ್ನಮ್ಮ
https://youtu.be/oaFfYLTNKrQ
---------------------------------------
ಒಂದಾನೊಂದು ಕಾಲದಲ್ಲಿ
https://youtu.be/91RkBA_BD48
---------------------------------------
ಬಂಗಾರದ ಮನುಷ್ಯ
https://youtu.be/Quvvj0Dw3tI
---------------------------------------
ಫಣಿಯಮ್ಮ
https://youtu.be/cvVEEEH9ErY
---------------------------------------
ಉಯ್ಯಾಲೆ
https://youtu.be/6vFyCSEtNmM
---------------------------------------
ಚಿತೆಗೂ ಚಿಂತೆ
https://youtu.be/O2KQ6Ryg-kM
---------------------------------------
ತಬರನ ಕತೆ
https://youtu.be/yqP4yJbx7dA
--------------------------------------
ಬರ
https://youtu.be/lnkkis1mz0Y
--------------------------------------
ತಬ್ಬಲಿಯು ನೀನಾದೆ ಮಗನೆ
https://youtu.be/Hj2199MGN-Q
--------------------------------------
ನಾಗರಹಾವು
https://youtu.be/8ou_5ozSqdQ
-------------------------------------
ಹೇಮಾವತಿ
https://youtu.be/rPVRzpzF6yc
-------------------------------------
ರಂಗನಾಯಕಿ
https://youtu.be/ezcoDEWrmEY
--------------------------------------
ಬೆಸುಗೆ
https://youtu.be/2jhz6kBEdAs
---------------------------------------
ಉದ್ಭವ
https://youtu.be/hzgqV6ujauo
----------------------------------------
ಸನಾದಿ ಅಪ್ಪಣ್ಣ
https://youtu.be/LIGU2GhkRbc
---------------------------------------
ಬೆಟ್ಟದ ಹೂವು
https://youtu.be/CVdPsgHz0aU
---------------------------------------
ಆಕ್ಸಿಡೆಂಟ್
https://youtu.be/7ZRBU0I6Oqg
--------------------------------------
ಸಂಗ್ಯಾ ಬಾಳ್ಯಾ
https://youtu.be/Iq8NlxJsG8g
--------------------------------------
ಕನಸೆಂಬೋ ಕುದುರೆಯನೇರಿ
https://youtu.be/rg2LiydJ0RI
--------------------------------------
ಮುನ್ನುಡಿ
https://youtu.be/waalUMouZ4g
--------------------------------------
ಮುತ್ತಿನ ಹಾರ
https://youtu.be/uM48tkAnNL0
--------------------------------------
ಗುಲಾಬಿ ಟಾಕೀಸ್
https://youtu.be/XnCsEs7OOYk
--------------------------------------
ಮೈಸೂರು ಮಲ್ಲಿಗೆ
https://youtu.be/2WpnzORm9gU
--------------------------------------
ಉಲ್ಟಾ ಪಲ್ಟಾ
https://youtu.be/N5-Q6luL6-k
--------------------------------------
ಚಿನ್ನಾರಿ ಮುತ್ತ
https://youtu.be/JacAbPfWKqA
--------------------------------------
ಅವಳೇ ನನ್ನ ಹೆಂಡ್ತಿ
https://youtu.be/nFY8SKej3pk
--------------------------------------
ಪ್ರೇಮಲೋಕ
https://youtu.be/mUa9yn62sco
--------------------------------------
ಚೈತ್ರದ ಪ್ರೇಮಾಂಜಲಿ
https://youtu.be/lHUglz4f03E
---------------------------------------
ಗಣೇಶನ ಮದುವೆ
https://youtu.be/kQu7yg-5VxQ
----------------------------------------
ನಾಗರ ಹೊಳೆ
https://youtu.be/b5nuJg4b734
----------------------------------------
ಪಂಚಮವೇದ
https://youtu.be/bhtDS46e5FY
----------------------------------------
ಬೆಳದಿಂಗಳ ಬಾಲೆ
https://youtu.be/W6qLG_EDB2M
----------------------------------------
ಜನುಮದ ಜೋಡಿ
https://youtu.be/fJ1lEU5XG4I
----------------------------------------
ಸಂತ ಶಿಶುನಾಳ ಶರೀಫ
https://youtu.be/340bQgYvbw4
----------------------------------------
ಓ ಮಲ್ಲಿಗೆ
https://youtu.be/J6tvRquhXIs
----------------------------------------
ದ್ವೀಪ
https://youtu.be/EY-qzjFtda8
----------------------------------------
ದುನಿಯಾ
https://youtu.be/pK9jPP045aE
----------------------------------------
ಸ್ಪರ್ಶ
https://youtu.be/dlL3ueXvmO0
----------------------------------------
ಕಾನೂರು ಹೆಗ್ಗಡತಿ
https://youtu.be/s06qNCLX54s
----------------------------------------
ಆಸ್ಫೋಟ
https://youtu.be/ONoiuWtsQwY
-----------------------------------------
ಸಯನೈಡ್
https://youtu.be/ae2sluNXbeQ
-----------------------------------------
ಪುಟ್ಟಕ್ಕನ ಹೈವೇ
https://youtu.be/rk5D3cS_rBg
-----------------------------------------
ಶ್!!!
https://youtu.be/OYGD_wRWYX8
-----------------------------------------
ಮಠ
https://youtu.be/vVx6W9tbyOc
-----------------------------------------
ಗಾಳಿಪಟ
https://youtu.be/UymDv8OjMvE
-----------------------------------------
ಜಟ್ಟ
https://youtu.be/UzDPQHuNsWg
-----------------------------------------
ಒಲವೇ ಮಂದಾರ
https://youtu.be/dkixoi5Gdxo
-----------------------------------------
ಕೆಂಡ ಸಂಪಿಗೆ
https://youtu.be/NwraFXKoMVU
-----------------------------------------
ಹರಿವು 
https://youtu.be/f4D3aOsAgvo

Wednesday 25 March 2020

ನಾಗೇಶ್ ಹೆಗಡೆಯವರ ಲೇಖನ-ಅಜ್ಞಾನಾಲಜಿ

*"ಅರಿವನ್ನು ಮರೆಮಾಚುವ ಮಾಯಾ ಪರದೆ"* 
 *_ಅಜ್ಞಾನಾಲಜಿ_* 
                             -ನಾಗೇಶ ಹೆಗಡೆ

 *(ಮೌಢ್ಯ ಬಿತ್ತನೆಯ ಈ ಕಾಲದಲ್ಲಿ ಕಣ್ತೆರೆಸುವ ಒಂದು ಅರ್ಥಪೂರ್ಣ ಬರಹ)* 


ಈಚೆಗೆ ಒಬ್ಬ ಟ್ಯಾಕ್ಸಿ ಚಾಲಕ ತನ್ನ ಕಾರನ್ನು ಹೊರಡಿಸುತ್ತಲೇ ಕಲ್ಕಿ ಭಗವತೇ ನಮಃ ಎಂಬ ಮಂತ್ರದ ಕಾರ್ಡನ್ನು ಒಳಗೆ ಕೂತ ನನ್ನ ಕೈಗೆ ಕೊಟ್ಟ. ನನಗೆ ರೇಗಿತು. ಈತನಲ್ಲೇ ಅಲ್ವೇನ್ರೀ ₹ 500 ಕೋಟಿ ಕಪ್ಪುಹಣ ಸಿಕ್ಕಿದ್ದು? ಎಂದು ಕೇಳಿದೆ. ಅದು ಆಶ್ರಮದ ಅಕೌಂಟ್ಸ್ ವಿಭಾಗದವರು ಮಾಡಿದ ತಪ್ಪು ಸಾರ್. ಭಗವಾನ್‌ಗೂ, ಅದಕ್ಕೂ ಸಂಬಂಧ ಇಲ್ಲ ಅಂದ. ಕಲ್ಕಿಯೇ ಎಲ್ಲಾ ದೇವರ, ಅಲ್ಲಾ-ಏಸುಗಳ ಮೂರ್ತರೂಪ ಎಂದೆಲ್ಲ ಆತ ಕೊಂಡಾಡುತ್ತಿದ್ದ. ನಮ್ಮಿಬ್ಬರ ಮಧ್ಯೆ ಜಟಾಪಟಿ ಶುರುವಾಯ್ತು. ಹಾಗಿದ್ದರೆ ಕೊರೊನಾ ವೈರಸ್ ಯಾಕೆ ಬಂತ್ರೀ? ಎಂದು ಕೇಳಿಬಿಟ್ಟೆ.

ಆಗ ನನಗೆ ಅಚ್ಚರಿ ಕಾದಿತ್ತು. ಅಖಿಲ ಭಾರತ ಹಿಂದೂ ಮಹಾಸಭಾದ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಮೂರು ದಿನಗಳ ಹಿಂದಷ್ಟೇ ದಿಲ್ಲಿಯಲ್ಲಿ ಹೇಳಿದ ಉತ್ತರವೇ ಈತನ ಬಾಯಲ್ಲೂ ಬಂತು: ಮೂಕಜೀವಿಗಳ ಸಂರಕ್ಷಣೆಗೆಂದೇ ದೇವರು ಅದನ್ನು ಸೃಷ್ಟಿಸಿದ್ದು. ಚೀನಿಯರು ಎಷ್ಟೊಂದು ವನ್ಯಜೀವಿಗಳನ್ನು ಕೊಂದು ತಿನ್ನುತ್ತಾರೆ. ಅವರಿಗೆ ಪಾಠ ಕಲಿಸಬೇಕಲ್ವಾ! ಎಂದ.

ದೇವರ ಅಸ್ತಿತ್ವ ಕುರಿತ ಎಲ್ಲಾ ಪ್ರಶ್ನೆಗಳಿಗೂ ಆತ ಉತ್ತರಗಳನ್ನು ಕಂಠಪಾಠ ಮಾಡಿಕೊಂಡಂತಿತ್ತು. ತೆರಿಗೆ ವಂಚಿಸುವ ಶತಕೋಟ್ಯಧೀಶರತ್ತ, ನೆರೆ ಪರಿಹಾರಕ್ಕೆ ಕಾದಿರುವ ಕೋಟ್ಯಂತರ ಬಡವರತ್ತ ದೇವರು ಯಾಕೆ ಕಣ್ಣು ಬಿಡ್ತಿಲ್ಲ? ಎಂದು ನಾನು ಕೇಳಿದಾಗ ಕೂಡ ಆತನಲ್ಲಿ ನುಣುಚು ಮಾತುಗಳಿದ್ದವು. ಶ್ಲೋಕಗಳನ್ನು ಪಟಪಟ ಉದುರಿಸುತ್ತಿದ್ದ. ಎಲ್ಲಿಂದ ಬಂತು ಈತನಿಗೆ ಅಷ್ಟೆಲ್ಲ ಮಾಹಿತಿ? ಅದೇನೋ ಸತ್ಸಂಗದ ಚಾನೆಲ್ ಇದೆಯಂತೆ. ಅದನ್ನು ಎಂದು ಬೇಕಾದರೂ, ಎಲ್ಲಿಂದ ಬೇಕಾದರೂ ಆಲಿಸಬಹುದಂತೆ. ಫಾರ್ವರ್ಡ್ ಮಾಡ್ಲಾ ಸಾರ್? ಕೇಳಿದ.

ಮೌಢ್ಯವನ್ನು ಅಥವಾ ಅಜ್ಞಾನವನ್ನು ವೈರಸ್ಸಿನಂತೆ ಪಸರಿಸುವ ಇಂಥ ತಂತ್ರಗಳ ಅಧ್ಯಯನಕ್ಕೆ ಅಗ್ನಾಥಾಲಜಿ ಎನ್ನುತ್ತಾರೆ. ಬೇಕಿದ್ದರೆ ನೀವದಕ್ಕೆ ಅಜ್ಞಾನಾಲಜಿ ಎನ್ನಿ. ವಿಜ್ಞಾನದ ಬಹುತೇಕ ಎಲ್ಲ ಪದಗಳ ಹಾಗೆ ಇದೂ ಗ್ರೀಕ್ ಭಾಷೆಯ ಅಗ್ನೊಸಿಸ್ (agnosis ಅಂದರೆ ಅಜ್ಞಾನ, ಗೊತ್ತಿಲ್ಲದ್ದು) ಎಂಬ ಮೂಲದಿಂದಲೇ ಬಂದಿದೆ. ಜನರನ್ನು ಬೇಕಂತಲೇ ದಾರಿ ತಪ್ಪಿಸುವುದು, ಭಯ-ಸಂಶಯ ಹುಟ್ಟಿಸುವ ವಿಧಾನಗಳು ಈಗೀಗ ವಿರಾಟ್ ರೂಪ ಪಡೆಯುತ್ತಿವೆ. ಚಿಂತಕರು ಇದನ್ನೊಂದು ಅಕಾಡೆಮಿಕ್ ಅಧ್ಯಯನದ ವಿಷಯವಾಗಿ ಕೈಗೆತ್ತಿಕೊಳ್ಳಲು ಒಂದು ಹಿನ್ನೆಲೆ ಇದೆ:

90ರ ದಶಕದಲ್ಲಿ ಪಶ್ಚಿಮದ ದೇಶಗಳಲ್ಲಿ ತಂಬಾಕಿನ ನಿಷೇಧಕ್ಕೆ ಸಿದ್ಧತೆ ನಡೆಸಿದಾಗ ಸಿಗರೇಟ್ ಕಂಪನಿಗಳು ತತ್ತರಿಸಿದವು. ವಿಜ್ಞಾನಿಗಳ ಸಂಶೋಧನೆಗಳೂ ತಂಬಾಕಿನ ಅಪಾಯಗಳ ಬಗ್ಗೆ ಸಾಕ್ಷ್ಯಗಳನ್ನು ಮುಂದಿಡುತ್ತಿದ್ದವು. ಆಗ ಖ್ಯಾತ ಸಿಗರೇಟ್ ಕಂಪನಿಯ ರಹಸ್ಯ ದಾಖಲೆಯೊಂದು ಸೋರಿಕೆಯಾಯಿತು. ನಾವು ಸಿಗರೇಟನ್ನಷ್ಟೇ ಅಲ್ಲ, ಸಂಶಯವನ್ನೂ ಉತ್ಪಾದಿಸಬೇಕು ಎಂಬ ಸುತ್ತೋಲೆಯನ್ನು ಕಂಪನಿ ತನ್ನ ಅಧಿಕಾರಿಗಳಿಗೆ ಕಳಿಸಿತ್ತು. ವಿಜ್ಞಾನಿಗಳ ಪ್ರಯೋಗ ಸರಿ ಇಲ್ಲ. ಅದರಲ್ಲಿ ದೋಷಗಳಿವೆ ಎನ್ನಬಲ್ಲ ಕೆಲವು ವಿಜ್ಞಾನಿಗಳನ್ನೇ ಎತ್ತಿಕಟ್ಟಿ, ಸರಣಿ ಜಾಹೀರಾತು ಪ್ರಕಟಿಸಿ, ದು-ಭಾರೀ ವಕೀಲರ ಮೂಲಕ ಖಟ್ಲೆ ಹಾಕಿಸಿ, ಸಂಸತ್ತಿನಲ್ಲಿ ಕೂಡ ಗಲಾಟೆ ಎಬ್ಬಿಸಿ, ಒಟ್ಟಾರೆ ಗೊಂದಲ ಹುಟ್ಟಿಸುವ ಪಿತೂರಿ ನಡೆಯಿತು.

ವೈದ್ಯಕೀಯ ಜ್ಞಾನದ ಬೆಳಕಿಗೆ ತಡೆ ಒಡ್ಡುವ, ಸಂಶಯದ ಬೀಜ ಬಿತ್ತುವ, ಕಾನೂನಿನ ದಾರಿ ತಪ್ಪಿಸುವ ಈ ಪ್ರಕರಣದ ಕೂಲಂಕಷ ಅಧ್ಯಯನ ನಡೆಸಿ, ಕಾರ್ನೆಲ್ ವಿಶ್ವವಿದ್ಯಾಲಯದ ವಿಜ್ಞಾನಿ ಡೇವಿಡ್ ಡನ್ನಿಂಗ್ ಎಂಬಾತ ಮೊದಲ ಬಾರಿಗೆ ಅಜ್ಞಾನ ಪ್ರಸಾರದ ಹೊಸ ಪರಿಕಲ್ಪನೆಗಳನ್ನು ಬೆಳಕಿಗೆ ತಂದ. ಧರ್ಮಪ್ರಸಾರಕ್ಕೆ ಮಾತ್ರ ಸೀಮಿತವಾಗಿದ್ದ ಈ ತಂತ್ರ ಹೇಗೆ ಈಗಿನ ಡೇಟಾ ಯುಗದಲ್ಲಿ ಉದ್ಯಮ ವಲಯಕ್ಕೆ, ರಾಜಕೀಯಕ್ಕೆ ಮತ್ತು ಸಾಂಸ್ಕೃತಿಕ ರಂಗಕ್ಕೆ ಲಗ್ಗೆ ಇಡುತ್ತಿದೆ ಎಂಬುದನ್ನು ವಿವರಿಸಿದ. ಅಜ್ಞಾನ ವಿತರಣಾ ತಂತ್ರಗಳ ಬಗ್ಗೆ ಈಗಂತೂ ವಿಜ್ಞಾನಿಗಳು, ಸಮಾಜ ವಿಜ್ಞಾನಿಗಳು, ರಾಜ್ಯಶಾಸ್ತ್ರ ಪರಿಣತರು ಅಧ್ಯಯನ ನಡೆಸುತ್ತಿದ್ದಾರೆ. ಇದರ ಹಾವಳಿ ಚರ್ಚಿಸಲು ಜಾಗತಿಕ ಸಮ್ಮೇಳನವೂ ನಡೆದಿದೆ.

ಯಾವುದೇ ಸಮಾಜದಲ್ಲಿ ಅಜ್ಞಾನ ಹಾಸು ಹೊಕ್ಕಾಗಿರಲು ಅನೇಕ ಕಾರಣಗಳಿರುತ್ತವೆ. ಚಾರಿತ್ರಿಕ ಮರೆವು ಒಂದು ಕಾರಣ ಇರಬಹುದು. ತಂಜಾವೂರಿನ ಬೃಹದೇಶ್ವರ ದೇಗುಲದ ಶಿಖರಕ್ಕೆ ಅಂದಿನ ಜನರು 180 ಟನ್ ತೂಕದ ಶಿಲೆಯನ್ನು ಹೇಗೆ ಏರಿಸಿದರು ಎಂಬುದು ಚರಿತ್ರೆಯಲ್ಲಿ ಮರೆತು ಹೋಗಿದೆ. ದೈವೀಶಕ್ತಿಯೇ ಭಕ್ತಿಯೇ ಮಹಾಶಕ್ತಿ ಎಂಬ ಅಜ್ಞಾನ ಮಾತ್ರ ಉಳಿದು ಬಂದಿದೆ.

ಅಪಾಯದ ಅತಿ ಎಚ್ಚರಿಕೆಯೂ ಅಜ್ಞಾನ ಪ್ರಸಾರಕ್ಕೆ ಕಾರಣವಾಗಿದೆ. ಹಾವಿನ ನಾಗದೋಷದ ಭಯ, ವಾಸ್ತುದೋಷದ ಭಯ, ಪಾಪದ ಭಯ ಹುಟ್ಟಿಸಿ ಅದೆಷ್ಟು ಜನ ಉದ್ಧಾರವಾಗುತ್ತಿಲ್ಲ? ಇತ್ತೀಚಿನ ಕೊರೊನಾ ವೈರಸ್ಸನ್ನೇ ನೋಡಿ (ವಿಶ್ವ ಆರೋಗ್ಯ ಸಂಸ್ಥೆ ಇದಕ್ಕೆ ಇನ್ಫೋಡೆಮಿಕ್=ಸುದ್ದಿಮಾರಿ ಎಂಬ ಪದವನ್ನೇ ಕೊಟ್ಟಿದೆ): ಭಯವನ್ನು, ಮುಖವಾಡಗಳನ್ನು, ಜ್ವರದ ಮಾತ್ರೆಗಳನ್ನು ಮಾರುವ ವಾಣಿಜ್ಯ ಶಕ್ತಿಗಳು ಅಪಾಯದ ಅತಿಪ್ರಚಾರಕ್ಕೆಂದೇ ಮಾಧ್ಯಮಗಳನ್ನು ಬಳಸಿಕೊಳ್ಳುತ್ತವೆ. ಭಯದ ಪ್ರಸಾರಕ್ಕೆಂದು ಅಜ್ಞಾನಿಗಳ ಸೈನ್ಯವನ್ನೇ ಸೃಷ್ಟಿಸುತ್ತವೆ. ಅತ್ತ ಗಡಿಯಲ್ಲಿನ ಸೈನಿಕರಿಗೆ ಸರಿಯಾದ ಬೂಟು-ಬಂದೂಕು ಇಲ್ಲದಿದ್ದರೂ ಪರವಾಗಿಲ್ಲ, ದೇಶಕ್ಕೆ ಅಪಾಯ ಬಂತೆಂದು ಗುಲ್ಲೆಬ್ಬಿಸಿ ಬಹುಕೋಟಿ ಫೈಟರ್ ಜೆಟ್‌ಗಳನ್ನು ಮಾರುವ ದಲ್ಲಾಳಿಗಳು ಮಜವಾಗಿರುತ್ತಾರೆ.

ಈ ವಿಶ್ವದ ಬಹಳಷ್ಟು ವಿದ್ಯಮಾನಗಳ ಬಗ್ಗೆ ನಮಗೆ ಅಜ್ಞಾನವಿದೆ, ಒಪ್ಪಿಕೊಳ್ಳೋಣ. ಜ್ಞಾನದ ಅಂಗಳ ದೊಡ್ಡದಾದಷ್ಟೂ ಅಜ್ಞಾನದ ಕ್ಷಿತಿಜ ವಿಸ್ತರಿಸುತ್ತಲೇ ಇರುತ್ತದೆ.

ಆದರೆ ತಮಾಷೆ ಎಂದರೆ, ಹಿಂದಿನ ಕಾಲದ ಜ್ಞಾನಿಗಳಿಗೆ ಎಲ್ಲವೂ ಗೊತ್ತಿತ್ತು! ಎಲ್ಲವನ್ನೂ ಆ ದೇವರೇ ಸೃಷ್ಟಿ ಮಾಡಿದ್ದು ಎಂದು ಹೇಳಿ ನಮ್ಮ ಬಾಯಿ ಮುಚ್ಚಿಸುತ್ತಿದ್ದರು. ಎಳೆ ಮಗುವೊಂದು ಸಿಡುಬು (ಮೈಲಿ) ರೋಗದಿಂದ ನರಳಿ ಸತ್ತರೆ, ಅದು ಪೂರ್ವಜನ್ಮದ ಪಾಪದ ಫಲ ಎಂದುಬಿಡುತ್ತಿದ್ದರು. ಪ್ರಶ್ನಿಸುವ ಮನೋಭಾವವೇ ಇರುತ್ತಿರಲಿಲ್ಲ. ಈಗ ಜೀವಾಣುಗಳ ಬಗ್ಗೆ ಸಾಕಷ್ಟು ಗೊತ್ತಾಗಿದೆ. ಇನ್ನೂ ಗೊತ್ತಾಗಬೇಕಾಗಿದ್ದು ತುಂಬಾ ಇದೆ ಎಂಬುದೂ ಗೊತ್ತಾಗಿದೆ. ವಿಜ್ಞಾನದ ದೊಡ್ಡ ರಗಳೆ ಏನೆಂದರೆ, ಒಂದು ಪ್ರಶ್ನೆಗೆ ಉತ್ತರ ಹುಡುಕಲು ಹೋಗಿ ಹತ್ತಾರು ಪ್ರಶ್ನೆಗಳನ್ನು ಮೈಮೇಲೆ ಎಳೆದುಕೊಳ್ಳುತ್ತದೆ. ಧರ್ಮದ ಮಟ್ಟಿಗೆ ಈ ರಗಳೆಯೇ ಇಲ್ಲ. ದೇವರು ದೊಡ್ಡವನು! ಗೋಮಾತೆಯಲ್ಲೂ ಆತ ಅವಿತು ಕೂತು, ಅದರ ಉಸಿರಿನಲ್ಲಿ ಆಮ್ಲಜನಕವನ್ನೂ, ಚಿನ್ನದ ಬಣ್ಣದ ಮೂತ್ರದಲ್ಲಿ ಕ್ಯಾನ್ಸರ್ ನಿವಾರಕ ಔಷಧವನ್ನೂ ಹಂಚುವವನು.

ಹಿಂದೆಲ್ಲ ಅಜ್ಞಾನ ಅಥವಾ ಮೌಢ್ಯ ಅನ್ನೋದು ಜ್ಞಾನದ ಕೊರತೆ ಎಂದಿಷ್ಟೇ ಆಗಿತ್ತು. ಈಗ ಅದು ಉದ್ದೇಶಪೂರ್ವಕವಾಗಿ ಉತ್ಪಾದಿಸಬಹುದಾದ, ಸಮಾಜದ ಮೇಲೆ ಹಾಸಿ ಹೊದೆಸಬಹುದಾದ ಮಾಯಾ ಪರದೆ ಆಗುತ್ತಿದೆ ಎನ್ನುತ್ತಾರೆ ಸ್ಟಾನ್‌ಫರ್ಡ್ ವಿವಿಯ ವಿಜ್ಞಾನ ಚರಿತ್ರೆಗಾರ್ತಿ ಲಿಂಡಾ ಶ್ಕೀಬಿಂಗರ್. ರಾಜಕೀಯ ಚಾಣಕ್ಯರು ಮತ್ತು ಕಾರ್ಪೊರೇಟ್ ತಂತ್ರಿಗಳು ಅದನ್ನು ಹೇಗೆಲ್ಲ ಬಳಸತೊಡಗಿದ್ದಾರೆ ಎಂಬ ಬಗ್ಗೆ ಈಕೆ ಒಂದು ಗ್ರಂಥವನ್ನೇ ಬರೆದಿದ್ದಾರೆ.

ಹವಾಗುಣ ಬದಲಾಗುತ್ತಿದೆ ಎಂದು ವಿಜ್ಞಾನಿಗಳು ಅದೆಷ್ಟೇ ಸಾಕ್ಷ್ಯವನ್ನು ಒದಗಿಸಿದರೂ ಅವೆಲ್ಲವೂ ಸಂಶಯಾತೀತವಲ್ಲ, ಅದರಲ್ಲಿ ಪಟ್ಟಭದ್ರರ ವ್ಯೂಹವಿದೆ ಎಂದೆಲ್ಲ ಶಂಕಾಪ್ರಚಾರ ನಡೆಸಿ, ಸಮಾಜವನ್ನೇ ಇಬ್ಭಾಗಿಸಬಲ್ಲ ಜಾಣ ಹುನ್ನಾರಗಳನ್ನು ಎತ್ತಿ ತೋರಿಸಿದ್ದಾರೆ.

ಸಂಶಯದ ಹೊಗೆ ಎಬ್ಬಿಸಿ, ಮೌಢ್ಯದ ಪರದೆಯನ್ನು ಬೀಸುವಲ್ಲಿ ವಾಣಿಜ್ಯಶಕ್ತಿಗಳ ಜೊತೆ ಸಾಂಸ್ಕೃತಿಕ, ರಾಜಕೀಯ ತಂತ್ರಗಾರರು ಪೈಪೋಟಿಗೆ ನಿಂತಿದ್ದಾರೆ. ಒಬಾಮ ಅಮೆರಿಕದಲ್ಲಿ ಹುಟ್ಟಲೇ ಇಲ್ಲ ಎಂತಲೋ, ರಾಹುಲ್ ಗಾಂಧಿ ಇಟಲಿಯ ಪ್ರಜೆ ಎಂತಲೋ, ದೊರೆಸ್ವಾಮಿ ಫೇಕ್ ಎಂತಲೋ ಎಷ್ಟೊಂದು ಜನರನ್ನು ಆಗಲೇ ನಂಬಿಸಿಯಾಗಿದೆ. ನೆಹರೂ ಒಬ್ಬ ಅಂತರರಾಷ್ಟ್ರೀಯ ಮಾನ್ಯತೆ ಪಡೆದ ಮುತ್ಸದ್ದಿ ಆಗಿದ್ದರು ಎಂಬುದನ್ನು ಈಗಿನ ವಾಟ್ಸ್ಆ್ಯಪ್‌ ವಿವಿಯ ಬಹುತೇಕ ಯುವಜನರು ನಂಬುತ್ತಿಲ್ಲ. ಗಾಂಧೀಜಿಯ ಗೊಂಬೆಗೆ ಪಿಸ್ತೂಲಿನಿಂದ ಗುಂಡಿಕ್ಕಿ ನಕಲಿ ನೆತ್ತರಿನ ಹೊಳೆ ಹರಿಸಿದಾಕೆಯೇ ಅಸಲೀಗಂಡು ಎನ್ನುವಂತಾಗಿದೆ.

ಸ್ಥಾಪಿತ ಮೌಲ್ಯಗಳನ್ನೆಲ್ಲ ಪಲ್ಟಿ ಹೊಡೆಸಿ, ಪುರಾತನ ಜ್ಞಾನವೇ ಶ್ರೇಷ್ಠ ಎಂಬುದನ್ನು ಬಿತ್ತಲಾಗುತ್ತಿದೆ. ಹಿಂದೊಂದು ಕಾಲದಲ್ಲಿ ನಮಗೆ ಎಲ್ಲವೂ ಗೊತ್ತಿತ್ತು- ರಾಕೆಟ್ ಇತ್ತು, ವಿಮಾನಗಳಿದ್ದವು, ಸುರೂಪಿ ಚಿಕಿತ್ಸೆ ಗೊತ್ತಿತ್ತು, ಬೆಳಕಿನ ವೇಗ ಗೊತ್ತಿತ್ತು, ಸಾಪೇಕ್ಷ ಸಿದ್ಧಾಂತ ಗೊತ್ತಿತ್ತು ಎಂಬಿತ್ಯಾದಿ ಬುರುಡೆಗಳನ್ನು ವಿಜ್ಞಾನ ಸಮ್ಮೇಳನದಲ್ಲೇ ಹಾರಿಬಿಡುವ ತಜ್ಞರು ಜಾಸ್ತಿ ಫಾರ್ವರ್ಡ್‌ಗಳನ್ನು ಗಿಟ್ಟಿಸುತ್ತಾರೆ. ಜ್ಞಾನ ವಿಸ್ತರಣೆಗಿಂತ ಅಜ್ಞಾನ ವಿತರಣೆಗೇ ಹೆಚ್ಚಿನ ಪ್ರಾಮುಖ್ಯ ಸಿಗತೊಡಗಿದೆ. ಹಳತಿಗೆ ಹೊಳಪು ಕೊಟ್ಟು ಮೆರವಣಿಗೆ ನಡೆಸುವವರೇ ಮೆರೆಯತೊಡಗಿದ್ದಾರೆ.

ಅರಿವನ್ನು ಮರೆಮಾಚುವುದೂ ಅಂಧಃಕಾರವನ್ನು ಪಸರಿಸುವ ಒಂದು ತಂತ್ರವೇ ಆಗಿರುತ್ತದೆ. ಆಧಾರ್‌ನಲ್ಲಿ ಶೇಖರವಾಗಿರುವ ಖಾಸಗಿ ವಿವರಗಳೆಲ್ಲ ಲಾಭಕೋರ ಕಂಪನಿಗಳ ತೆಕ್ಕೆಗೆ ಸೇರುತ್ತಿರುವ ಬಗ್ಗೆ ಸರಣಿ ತನಿಖಾ ವರದಿಗಳನ್ನು ಪ್ರಕಟಿಸುತ್ತಿದ್ದ ಟ್ರಿಬ್ಯೂನ್ ಸಂಪಾದಕ ಹರೀಶ್ ಖರೆ ತನ್ನ ಹುದ್ದೆಗೆ ರಾಜೀನಾಮೆ ಕೊಡಬೇಕಾಯಿತು. ಆದಿವಾಸಿ ಮಕ್ಕಳನ್ನು ಪಾಲಕರಿಂದ ಬೇರ್ಪಡಿಸಿ ಒಯ್ದು ಸಂಸ್ಕಾರ ಕೊಡಿಸುವ ಜಾಲದ ಬಗ್ಗೆ ಔಟ್‌ಲುಕ್ ಪತ್ರಿಕೆ ಸರಣಿ ವರದಿಗಳನ್ನು ಪ್ರಕಟಿಸುತ್ತಿದ್ದಾಗಲೇ ಅದರ ಸಂಪಾದಕ (ಕನ್ನಡಿಗ) ಕೃಷ್ಣಪ್ರಸಾದ್ ರಾಜೀನಾಮೆ ಕೊಡಬೇಕಾಯಿತು. ಹೀಗೆ ಕೆಲಸ ಬಿಟ್ಟು ಮನೆಗೆ ಹೋಗಬೇಕಾದ ಅಥವಾ ಮಸಿ ಬಳಿಸಿಕೊಳ್ಳಬೇಕಾದ ಖ್ಯಾತ ಪತ್ರಕರ್ತರ ಪಟ್ಟಿ ದಿನದಿನಕ್ಕೆ ಉದ್ದವಾಗುತ್ತಿದೆ. ಕರಣ್ ಥಾಪರ್, ಬಾಬ್ಬಿ ಘೋಷ್, ಪರಂಜಯ್ ಗುಹಾ ಠಾಕುರ್ತಾ, ಪ್ರಣೊಯ್ ರಾಯ್, ರವೀಶ್ ಕುಮಾರ್, ಆತಿಷ್ ತಸ್ಸೀರ್ ಒಬ್ಬಿಬ್ಬರೆ?

ಮಾಯಾ ಪರದೆಯ ಎದುರಿನ ನಾಟಕವನ್ನು ಮಾತ್ರ ನೋಡುತ್ತಿರಿ, ನೇಪಥ್ಯದ ಕತ್ತಲತ್ತ ಇಣುಕಬೇಡಿ ಎಂಬ ಎಚ್ಚರಿಕೆ ಎಲ್ಲೆಡೆ ಸೂಸುತ್ತಿದೆ. ಪ್ರಭುತ್ವದ ಕುಣಿತಕ್ಕೆ ತಾಳ ಹಾಕುವ ಮಡಿಲು ಮಾಧ್ಯಮಗಳು ಮಾತ್ರ ವಿಜೃಂಭಿಸುತ್ತಿವೆ.

ಅಜ್ಞಾನ ವಿತರಣೆಯ ಜಾಗತಿಕ ಆಯಾಮ ಹೇಗೂ ಇರಲಿ, ಲಂಗುಲಗಾಮಿಲ್ಲದ ಸಾಮಾಜಿಕ ಮಾಧ್ಯಮಗಳಿಂದಾಗಿ ಪ್ರತಿ ವ್ಯಕ್ತಿಯೂ ತನಗೆ ತಾನೇ ತಜ್ಞ ಆಗಿಬಿಡುತ್ತಾನೆ/ಳೆ. ತೂಕ ತಗ್ಗಿಸುವ ವಿಧಾನಗಳ ಬಗ್ಗೆ ಯೂಟ್ಯೂಬ್ ವಿಡಿಯೊಗಳನ್ನು ನೋಡುತ್ತ ಯಾರು ಬೇಕಾದರೂ ಪೋಷಕಾಂಶಗಳ ಎಕ್ಸ್‌ಪರ್ಟ್ ಆಗಿಬಿಡಬಹುದು; ಆಗುತ್ತಿದ್ದಾರೆ. ಅಂಥವರು ಯಾವ ಅರ್ಹತೆ ಇಲ್ಲದಿದ್ದರೂ ತಮ್ಮದೇ ಯೂಟ್ಯೂಬ್ ಚಾನೆಲ್ಲನ್ನು ಆರಂಭಿಸಬಹುದು; ಆರಂಭಿಸುತ್ತಿದ್ದಾರೆ. ಆರೋಗ್ಯ ವಿಜ್ಞಾನದ ಬಗ್ಗೆ ಅಆಇಈ ಗೊತ್ತಿಲ್ಲದವನೂ ಕೊರೊನಾ ವೈರಸ್ಸಿಗೆ ಗಿಡಮೂಲಿಕೆಗಳನ್ನು ಶಿಫಾರಸು ಮಾಡುತ್ತಾನೆ. ಜಿಮ್‌ಗೆ ಹೋಗುವ ಟೆಕಿಯೊಬ್ಬ ತನಗೆ ನೆಟ್‌ನಲ್ಲಿ ಸಿಗುವ ಅರೆಬರೆ ಮಾಹಿತಿಗಳನ್ನು ಸೇರಿಸಿ ತನ್ನದೇ ಫಾರ್ಮುಲಾವನ್ನು ಮಾರಾಟ ಮಾಡುವ ತಜ್ಞನಾಗುತ್ತಾನೆ. ಕಾಫಿಗೆ ಕಾಸಿಲ್ಲದವನೂ ಹಣ ಹೂಡಿಕೆಯ ಸಲಹಾಕಾರ ಆಗಿಬಿಡುತ್ತಾನೆ. ಟ್ಯಾಕ್ಸಿ ಚಾಲಕನೂ ಅಧ್ಯಾತ್ಮದ ಪಾಠ ಹೇಳುವ ಪಂಡಿತನಾಗುತ್ತಾನೆ.

 *ಹೊಳಪಿನ ಹೊಸಯುಗವನ್ನು ತೋರಿಸುವ ಬದಲು ಈಗಿನ ಬಹುತೇಕ ಮಾಧ್ಯಮಗಳು ಕೊರಕಲು ಪ್ರಪಾತದ ಅಂಧಯುಗಕ್ಕೆ ನಮ್ಮನ್ನು ಕೊಂಡೊಯುತ್ತಿವೆ.*

Wednesday 4 March 2020

ನಮ್ಮೂರ ಜಾನಪದ ಅನುಸಂಧಾನ

ಹತ್ತಿ ಕಟಗಿ, ಬತ್ತಿ ಕಟಗಿ

ಹತ್ತಿ ಕಟಗಿ
ಬತ್ತಿ ಕಟಗಿ
ಬಾವಣ್ಣವರ
ಬಸಪ್ಪನವರ
ಕೈ ಕೈ ದೂಳಗೈ
ಪಂಚಂ ಪಗಡಂ
ನೆಲಕಡಿ ಹನುಮ
ದಾತರ ದರ‍್ಮ
ತಿಪ್ಪಿ ಮೇಲೆ ಕೋಳಿ
ರಗತ ಬೋಳಿ

ಕೈ ಕೈ ಎಲ್ಲಿ ಹೋಯ್ತು ?
ಕದದ ಸಂದ್ಯಾಗ !
ಕದ ಏನ್ ಕೊಟ್ತು ?
ಚೆಕ್ಕಿ ಕೊಟ್ತು !
ಚೆಕ್ಕಿ ಏನ್ ಮಾಡ್ದಿ ?
ಒಲಿಯಾಗ ಹಾಕ್ದೆ !
ಒಲಿ ಏನ್ ಕೊಟ್ತು ?
ಬೂದಿ ಕೊಟ್ತು !
ಬೂದಿ ಏನ್ ಮಾಡ್ದಿ ?
ತಿಪ್ಪಿಗಾಕಿದೆ !
ತಿಪ್ಪಿ ಏನ್ ಕೊಟ್ತು ?
ಗೊಬ್ಬರ ಕೊಟ್ತು !
ಗೊಬ್ಬರ ಏನ್ ಮಾಡ್ದಿ ?
ಹೊಲಕ ಹಾಕಿದೆ !
ಹೊಲ ಏನ್ ಕೊಟ್ತು ?
ಜೋಳ ಕೊಟ್ತು !
ಜೋಳ ಏನ್ ಮಾಡ್ದಿ ?
ಚೊಲೊ ಚೊಲೊ ನಾ ತಗಂಡೆ
ಸೆರಗ ಮುರಗ(ಕೆಟ್ಟಿದ್ದೆಲ್ಲಾ) ಕುಂಬಾರಗ ಕೊಟ್ಟೆ !
ಕುಂಬಾರ ಏನ್ ಕೊಟ್ಟ ?
ಗಡಿಗಿ ಕೊಟ್ಟ !
ಗಡಿಗಿ ಏನ್ ಮಾಡ್ದಿ ?
ಬಾವ್ಯಾಗ ಬಿಟ್ಟೆ !
ಬಾವಿ ಏನ್ ಕೊಟ್ತು ?
ನೀರು ಕೊಟ್ತು !
ನೀರು ಏನ್ ಮಾಡ್ದಿ ?
ಗಿಡಕ್ಕ ಹಾಕ್ದೆ !
ಗಿಡ ಏನ್ ಕೊಟ್ತು ?
ಹೂವು ಕೊಟ್ತು !
ಹೂವು ಏನ್ ಮಾಡ್ದೆ ?
ದೇವ್ರಿಗೆ ಏರಿಸಿದೆ… !

ಉತ್ತರ ಕರ್ನಾಟಕದ ಊರುಗಳಲ್ಲಿ ಚಿಕ್ಕ ಮಕ್ಕಳು ಒಂದೆಡೆ ಸೇರಿದಾಗ ಮೇಲಿನ ಸಾಲುಗಳನ್ನು ಹೇಳುತ್ತಾ ಆಟ ಆಡುವ ದೃಶ್ಯ ಸಾಮಾನ್ಯ. ನಾಕೆಂಟು ಮಕ್ಕಳು ಸುತ್ತಲೂ ಕುಳಿತು ಅಂಗೈ ಕೆಳಮುಕ ಮಾಡಿ, ನೆಲಕ್ಕೆ ಹಚ್ಚಿ, ಒಂದನೆಯ ಕೈಯಿಂದ ಆರಂಬಿಸಿ-ಹತ್ತಿಕಟಗಿ..ಬತ್ತಿಕಟಗಿ ಎನ್ನುತ್ತಾ ಆಟವಾಡುತ್ತಾರೆ. ಇಲ್ಲಿರುವ ಆಟದ ಸ್ವರೂಪ ಕುರಿತು ಹೇಳುವುದು ನನ್ನ ಉದ್ದೇಶವಲ್ಲ. ಕೂಡಿ ಆಡುವದರೊಂದಿಗೆ ಮಕ್ಕಳು ಪಡುವ ಸಂತೋಷದ ಕುರಿತು ಹೇಳುವ ಇರಾದೆಯೂ ನನಗಿಲ್ಲ. ಅದ್ಬುತ ಲಯ ವಿನ್ಯಾಸದ ವಿವರಣೆಗೂ ನಾ ಕೈ ಹಾಕುವುದಿಲ್ಲ. ಆಟದ ನಿಯಮ ಕುರಿತು ಒಣ ವಿವರಣೆ ನೀಡುವ ಗೋಜಿಗೂ ನಾನು ಹೋಗುವುದಿಲ್ಲ.

ನಾವೆಲ್ಲ ಚಿಕ್ಕಂದಿನಲ್ಲಿ ಹಾಡಿದ ಈ ಹಾಡು ಇಂದಿಗೂ ಹಚ್ಚ ಹಸಿರು! 

ಹತ್ತಿ ಕಟಗಿ ಎಂದರೆ ಜೀವವಿದ್ದ ಮನುಷ್ಯ. ಬತ್ತಿ ಕಟಗಿಯಾಗುವುದೆಂದರೆ ಸಾಯುವುದು. ಸತ್ತ ಮೇಲೆ ಕೆಲ ಹೊತ್ತಿನಲ್ಲಿಯೆ ದೇಹ(ಹೆಣ) ಬಾಯುತ್ತದೆ. ಅದಕ್ಕೆ ಬಾಯುವ ಅಣ್ಣನವರು ಅವರು(ಬಾವಣ್ಣವರ). ಎರಡು ದಿನ ಹಾಗೆಯೇ ಇಟ್ಟರೆ ಬಸಿಯಪ್ಪನವರೂ ಹೌದು(ಬಸಪ್ಪನವರು). ಆದ್ದರಿಂದಲೇ ಅದು ಧೂಳಾಗುವ ಕಾಯ(ಕೈ ಅಲ್ಲ ಅದು ಕಾಯ – ಕಾಯ ಕಾಯ ದೂಳ ಕಾಯ) ಪಂಚಭೂತಗಳಲ್ಲಿ ಕರಗಿ ಹೋಗುವ ಕಾಯ(ಪಂಚಂ ಪಗಡಂ). ಆ ದೇಹಕ್ಕೆ ಸಂಸ್ಕಾರ ಕೊಡಬೇಕಲ್ಲವೆ? ನೆಲ ಕಡಿಯಲು ಹನುಮನಿಗೆ ಹೇಳಬೇಕಾಗುತ್ತದೆ(ನೆಲ ಕಡಿ ಹನುಮ). ಧನವಂತರಾದವರು ದರ‍್ಮವನ್ನೂ ದಾನವನ್ನೂ ಮಾಡಬೇಕಾಗುತ್ತದೆ. ಮಾಡುತ್ತಾರೆ(ದಾತರ ಧರ್ಮ).

ಆದರೆ ಈವರೆಗಿನ ಅವನ ಜೀವನ ತಿಪ್ಪೆಯ ಮೇಲಿನ ಕೋಳಿಯಂತೆ. ಸಂಸಾರದ ಹೊಲಸನ್ನೇ ಕೆದರಿದೆ (ಕೋಳಿ ಕಾಲಿಗೆ ಗೆಜ್ಜೆ ಕಟ್ಟಿದರೂ ತಿಪ್ಪೆ ಕೆದರೂದ ಬಿಡೂದಿಲ್ಲ – ಎಂಬ ಗಾದೆ ಮಾತು ಇದನ್ನೇ ಹೇಳುತ್ತದೆ ಎನಿಸುತ್ತದೆ). ಇದರ ಫಲವಾಗಿ ರಕ್ತದಲ್ಲಿಯೇ ಹುಟ್ಟಿ ಹುಟ್ಟಿ ಬರುವ ಜನ್ಮಾಂತರವನ್ನು ಪಡೆದಿದೆ. ಇದೇ ತಿಪ್ಪೆಮೇಲೆ ಕೋಳಿ ರಗತಬೋಳಿ.

ಈ ಶಿಶುಪ್ರಾಸದ ಮೊದಲ ಭಾಗ ಇಲ್ಲಿಗೆ ಮುಗಿಯಿತು. ಇನ್ನು ಮುಂದಿನ ಭಾಗ ಏನನ್ನು ಹೇಳುತ್ತದೆ? ಪ್ರಶ್ನೋತ್ತರ ರೂಪದಲ್ಲಿರುವ ಇದು ವಸ್ತುವಿನ ಪರಿವರ್ತನೆಯ ಸತ್ಯವನ್ನು ಸಾಂಕೇತಿಕವಾಗಿ ತಿಳಿಸುತ್ತದೆ. ಜಗತ್ತಿನ ಯಾವ ವಸ್ತುವಿಗೂ ಜೀವಿಗೂ ನಿಜ ಅ‍ರ್ಥದಲ್ಲಿ ಸಾವಿಲ್ಲ. ಅದು ರೂಪಾಂತರ ಹೊಂದುತ್ತಿರುತ್ತದೆ ಅಷ್ಟೆ.

ಕಾಯ ಎಲ್ಲಿ ಹೋಯಿತು?(ಕೈ ಕೈ ಎಲ್ಲಿ ಹೋಯಿತು?) ಕದದ ಸಂಧಿಯಲ್ಲಿ. ಕದದ ಸಂದಿ ಎಂಬುದು ಮತ್ತೆ ಸಂಸಾರದ ಸಂಗತಿ ಕಡೆಗೆ ಬೊಟ್ಟು ಮಾಡುತ್ತದೆ. ಅಲ್ಲಿಂದ ಹೊಲ ಏನ್ ಕೊಟ್ಟಿತು? ಎನ್ನುವವರೆಗೆ ಚಕ್ಕಿ, ಬೂದಿ, ಗೊಬ್ಬರ ಮುಂತಾದವು ರೂಪಾಂತರದ ಸಂಗತಿಗಳನ್ನೇ ಹೇಳುತ್ತವೆ . ಜೊತೆಗೆ ಬೂದಿ ,ಗೊಬ್ಬರ, ಹೊಲ ಇವು ಬೇಸಾಯ ಸಂಬಂಧದ ಕ್ರಿಯೆಗಳನ್ನು ಸೂಚಿಸುತ್ತವೆ. ಕುತೂಹಲಕರ ಸಂಗತಿಯೆಂದರೆ, ಹೊಲ ಕೊಟ್ಟ ಜೋಳದಲ್ಲಿ, ಚಲೊ(ಒಳ್ಳೆದು) ಇದ್ದವನ್ನು ತಾ ತಿಂದು ಸೆರಗು ಮುರಗನ್ನು ಕುಂಬಾರನಿಗೆ ಕೊಡುವ ವಿಧಾನ.

ಕುಂಬಾರ ಗಡಿಗೆ ಸೃಷ್ಟಿ ಮಾಡುವ ಸೃಷ್ಟಿಕರ್ತ( ದೇಹಕ್ಕೆ ಗಡಿಗೆ ಎನ್ನುವ ಪರಂಪರೆ ಅನುಬಾವ ಸಾಹಿತ್ಯದಲ್ಲಿದೆ). ಅವನಿಗೆ ಸೆರಗು ಜೋಳವನ್ನು ಮಾತ್ರ ಕೊಡುತ್ತಾನೆ!(ನಮ್ಮ ವರ್ತನೆಗೆ ಈ ಸಂಗತಿಯನ್ನು ಹೋಲಿಸಿ ನೋಡಬಹುದು. ದೇವರಿಗೆ ಮಾಡುವ ಕಡಬು ನೈವೇದ್ಯಗಳೆಲ್ಲಾ ಚಿಕ್ಕವಿರುತ್ತವೆ ಇಲ್ಲವೇ ನೆಪಮಾತ್ರಕ್ಕೆ ಇರುತ್ತವೆ). ಭೋಗ ಜೀವನಕ್ಕೆ ಮೊದಲ ಮಣೆ ಹಾಕಿದ ಮನುಷ್ಯ ಕೊನೆಗೂ ಎಚ್ಚರಗೊಳ್ಳುತ್ತಾನೆ (ಗಡಿಗೆ ಏನ್ ಮಾಡಿದಿ?). ಹಾಗೆ ಎಚ್ಚರಗೊಂಡ ಮನುಷ್ಯ ಗಡಿಗೆಯನ್ನು ಭಕ್ತಿಜಲ ತುಂಬಿಕೊಳ್ಳಲು ಬಾವಿಗೆ ಬಿಡುತ್ತಾನೆ(ಬಾವ್ಯಾಗ ಬಿಟ್ಟೆ). ಆ ಜಲವನ್ನೇ(ಬಾವಿ ಏನ್ ಕೊಟ್ಟಿತು? -ನೀರ ಕೊಟ್ಟಿತು) ಗಿಡಕ್ಕೆ ಹಾಕಿ ಜೀವಾತ್ಮ ಪುಷ್ಪ ಅರಳಲು ಕಾರಣವಾಗುತ್ತಾನೆ. ಹಾಗೆ ಅರಳಿದ ಹೂವನ್ನು ದೇವರಿಗೆ ಅರ್ಪಿಸಿ ಧನ್ಯನಾಗುತ್ತಾನೆ (ಹೂವು ಏನ್ ಮಾಡಿದಿ ?- ದೇವರಿಗೆ ಏರಿಸಿದೆ).

ಇಲ್ಲಿಗೆ ಜೀವನ ಕತೆಗೆ ಒಂದು ‍ಅರ್ಥ ಬರುತ್ತದೆ. ಜೀವನ ಸಾರ್ಥಕವಾಗುತ್ತದೆ. ಮೊದಲ ಭಾಗದ ಅಪೂರ್ಣತೆ ಇಲ್ಲಿ ಪೂರ್ಣವಾಗುತ್ತದೆ. ಇಡೀ ಬದುಕಿನ ಚಿತ್ರಣವನ್ನು ಇಷ್ಟೊಂದು ಅಡಕವಾಗಿ, ‍ಅರ್ಥಪೂರ್ಣವಾಗಿ ಹೇಳಿದ ರೀತಿ ಬೆರಗು ಹುಟ್ಟಿಸುತ್ತದೆ! ರಚನೆಯ ಸ್ವರೂಪದಲ್ಲಿ ಒಂದು ಸಂಗತಿಯಿಂದ ಇನ್ನೊಂದು ಸಂಗತಿಗೆ ಕೋ ಕೊಡುತ್ತ ಸಾಗುವ ಈ ಶಿಶುಪ್ರಾಸ ರಂಜನೆಯ ಜೊತೆಗೆ ನೆನಪಿನ ಶಕ್ತಿಯನ್ನು ಹರಿತಗೊಳಿಸಲು, ಸಹ ಸಂಬಂಧವನ್ನು ಕಲ್ಪಿಸಲು ನೆರವಾಗುತ್ತದೆ. ಮಕ್ಕಳ ಮನೋವಿಕಾಸಕ್ಕೆ ಕಾರಣವಾಗುತ್ತದೆ.

ಸುಳ್ಳೂರ ಶಾಲೆಯಲ್ಲಿ ಪಾಲಕರಿಂದ ಸ್ವಚ್ಛತಾ ಸಪ್ತಾಹ

ಊರಿನ ಗ್ರಾಮಸ್ಥರಿಂದ ಸುಳ್ಳೂರು ಶಾಲೆಯಲ್ಲಿ ಸ್ವಚ್ಛತಾ ಸಪ್ತಾಹ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಳೂರಿನ ಹಿರಿಯ ವಿದ್ಯಾರ್ಥಿಗಳು , ಪಾಲಕರೆಲ್ಲರೂ ಸೇರ...