ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Monday 18 February 2019

ಮೌನ ಯುದ್ಧಕ್ಕೆ ಕಾವ್ಯದ ಖಡ್ಗ

ಮೌನ ಯುದ್ಧಕ್ಕೆ ಕಾವ್ಯದ  ಖಡ್ಗ

"ಮೌನ ಯುದ್ಧ "ಇದು ಗೆಳೆಯ ಸುರೇಶ ರಾಜಮನೆ ಅವರ ಎರಡನೇ ಕೃತಿ.
ಸುಡುವ ಬೆಂಕಿ ಯಲ್ಲಿ ನಕ್ಕವನು ಈಗ ಯುದ್ಧಕ್ಕೆ ಇಳಿದಿದ್ದಾನೆ .

'ನೋವಿನ ನೊಗ ಹೊತ್ತು
ಬದುಕಿನ ಬಂಡಿ ಎಳಯುತ್ತಿರುವಾಗಲೂ ಎಳೆಯ ಮಕ್ಕಳಂತೆ ನಕ್ಕು
ಬದುಕಿನ ಪಾಠ ಹೇಳಿಕೊಡುವವಳು ನನ್ನವ್ವ..

ಎನ್ನುವ ರಾಜಮಾನೆ ಬಾವುಕರಾಗುತ್ತಲೇ  ವರ್ತಮಾನದ ತಲ್ಲಣಗಳಿಗೆ  ಲೇಖನಿ ಹಿಡಿದು ಸಿಡಿದಿದ್ದಾರೆ.

"ಹಾದಿ ಬೀದಿಯ ತುಂಬಾ ಬಾವುಟದ  ನೆರಳು
ಅದರೊಳಗೆ ಹಾರಾಡುವ ಹಸಿರು ತೆನೆಗಳ ಮೇಲಿನ ಹುಳುವಿನ ಹಸಿವು ಹಾರಿಹೋಗಿದೆ
ಬೆಳೆದ ಪೈರಿಗೆ ಸುರಿದ ವಿಷದ ಹಾಲು ಹುಬ್ಬೇರಿಸಿ ನಗುತ್ತಿದೆ
ಹಬ್ಬಗಳ ದಿಬ್ಬಣದ ತೇರಲಿ ಕುಳಿತು
ಗಾಲಿಗಡ್ಡ ಮಲಗಿ ನಾಲಿಗೆ ಚಾಚಿಕೊಂಡಿದೆ" ಎನ್ನುತ್ತಾ ವಿಷವರ್ತುಲ ಕವಿತೆಯಲ್ಲಿ ವರ್ತಮಾನದ ಕುರಿತು ಸಾಂಕೇತಿಕ ಪ್ರತಿಮೆಗಳಲ್ಲಿ ಸಾತ್ವಿಕವಾಗಿ ಸಿಡಿದಿದ್ದಾರೆ.

ಕೆಲವು ಕವಿತೆಗಳಲ್ಲಿ ಅವರದೇ ಬದುಕಿನ ಹೋರಾಟ ಇಣುಕಿದಂತೆ ಕಾಣುತ್ತದೆ. 56 ಕವಿತೆಗಳು ಇರುವ ಈ ಕೃತಿಯಲ್ಲಿ ಹಲವು ವಿಷಯ ವಸ್ತುಗಳು ಕವಿತೆಯಾಗಿ
ಸಂವಾದಿಸುತ್ತವೆ . ವರ್ತಮಾನದ ವಿಷಯ ವಸ್ತುವಿಗೆ ಸೃಜನಶೀಲ ಸಂವೇದನೆ ಹಲವು ಕವಿತೆಯಲ್ಲಿ ಕಂಡುಬರುತ್ತದೆ. ದೇಶಭಕ್ತ. ಬುಡ್ಡಿ ದೀಪದ ಕೆಳಗೆ ,ಹಗಲ ಹಸಿವು ,ನನ್ನ ಕವಿತೆ ,ನನ್ನವ್ವ ,ಹರಿದ ಕೌದಿ, ನಾನೊಂದು ಗುಡಿಸಲ ದೀಪ ,ನೀವು ಒಮ್ಮೆ ಓದಲೇಬೇಕು.
ವರ್ತಮಾನದ ಕುರಿತು ಸಂವೇದನಶೀಲ ನೊಬ್ಬ ಹೇಗೆ ಕವಿತೆಯಲ್ಲಿ  ಜಾಗೃತ ಸಂವಹನ ಕ್ರಿಯೆಗೆ ಹೇಗೆ ತೆರೆದುಕೊಳ್ಳಬಲ್ಲ ಎನ್ನುವುದಕ್ಕೂ ಇಲ್ಲಿ ಹಲವು ಉದಾಹರಣೆಗಳು ಕವಿತೆಯಾಗಿ ಓದಿಸಿಕೊಂಡು ಹೋಗುತ್ತದೆ.

ವಿಶ್ವ ಖುಶಿ ಪ್ರಕಾಶನ ಇದನ್ನು ಪ್ರಕಟಿಸಿದ್ದು ಕ್ರಿಯಾಶೀಲ ಬರಹಗಾರ್ತಿ ಲಲಿತಾ .ಕೆ ಹೊಸಪ್ಯಾಟಿ ಅವರು ಬೆನ್ನುಡಿ ಬರೆದು ಹರಸಿದ್ದಾರೆ. ಡಾ.ಟಿ ಯಲ್ಲಪ್ಪ ಅವರ ಮುನ್ನುಡಿ ಕೃತಿಯನ್ನು ಸಮರ್ಥವಾಗಿ ಪರಿಚಯಿಸುತ್ತದೆ. ಮೌನ ಯುದ್ಧಕ್ಕೆ ನೀವು ಸಜ್ಜಾಗಲು ಈ ಕೃತಿಯನ್ನು ಓದಬೇಕು.

ಕೊನೆ ಮಾತು. ನಾನೇಕೆ ಹೊಸ ಪುಸ್ತಕ ಪರಿಚಯಿಸುತ್ತೇನೆ ಎಂದರೆ   ಸ್ನೇಹಿತರನ್ನು ಪ್ರೋತ್ಸಾಹಿಸಲಿಕಾಗಿ. ಕಾಲೆಳೆಯುವದಕ್ಕಲ್ಲ.
ಪ್ರಸಿದ್ಧ ಪುಸ್ತಕಗಳ ಬಗ್ಗೆ ಮಾತ್ರ ಬರೆದು ವಿಮರ್ಶಕ ಅನಿಸಿಕೊಳ್ಳದೆ  ಯುವ ಬರಹಗಾರರನ್ನು ಪ್ರೋತ್ಸಾಹಿಸುವುದು ಅಗತ್ಯವಿದೆ. ಅವರು ಈಗ ಸಣ್ಣ ವೃಕ್ಷ ವಾಗಿದ್ದರು ಮುಂದೆ ಹೆಮ್ಮರವಾಗಿ ಬೆಳೆಯುವರೆಂದು ಆಶಿಸುತ್ತ  ನಾನು ಪುಸ್ತಕ ಪರಿಚಯ ಬರಹ ಮುಂದುವರಿಸುವೆ.

#ರವಿರಾಜ ಮಾರ್ಗ -ಪುಸ್ತಕ ಪರಿಚಯ









Monday 11 February 2019

ಕವಿತೆಯಾಗದ ಸಾಲ್ಗಳು

ಕವಿತೆಯಾಗದ ಸಾಲುಗಳು....ಪದ ಪುಂಜದ ಪದಗಳಿಗೆಲ್ಲ ಪ್ರೀತಿಯ ನಮನಗಳು. ಜಗದ ಕಾವ್ಯ ಲೋಕದಲ್ಲಿ ಅವಿತು ಕುಳಿತಕನಸುಗಾರನೇ ಭ್ರಮಲೋಕದ ಆದರ್ಶ ಪದಗಳೆಲ್ಲಯಾವ ಪಕ್ಷಕ್ಕೂ ಬೇಕೆನಿಸದೆ ಪಕ್ಷಾತೀತವಾಗಿ ಉಳಿಯಬೇಕಾದ ಅನಿವಾರ್ಯತೆಯ ಗೊಂದಲದ ಗೂಡಲ್ಲಿ ಯಾವ ಮೊಟ್ಟೆಯಿಟ್ಟು ಇನ್ಯಾವ ಮರಿ ತೆಗೆಯುವೆಯೋ ತಿಳಿಯೇ..ಹರಿತ ಲೇಖನಿ ಒಂಟಿಯಾಗಿಕಕ್ಕಲು ಇಂಕಿಲ್ಲದೆ ಸಾಯುವ ಅಪಾಯವೇನು ಇಲ್ಲ..ಗೀಚಲು ಚಡಪಡಿಸುವ ಚಿಂತಕರ ಬಾಯಿ ಬೆರಳು ಖಾಲಿ ಹಾಳೆ ಹೊದ್ದು ಎಚ್ಚರದಿಂದಲೇ ತೂಕಡಿಸುತ್ತ ಕುಂತಿವೆ.ಯಾವ ಪದವೋ... ಯಾವ ನುಡಿಗಟ್ಟೋ...ಹಸಿದ ಹೊಟ್ಟೆಗೆ ಅನ್ನ ಹಾಕಲಾಗದ ಖಾಲಿ ವೃತ್ತಿಯ ಕವಿ ಏಸು ಗೀಚಿ ಏಸು ಜನಗಳ ಬದಲಿಸಿ ಬಿಡುವೆಯೋ ಎಂದುಖಾಲಿ ಹಾಳೆಯ ಭಾರ ಹೊತ್ತ ಪ್ಯಾಡು ಪ್ರಶ್ನಿಸುವ ಮಟ್ಟ ತಲುಪಿದ್ದು ಯಾರಿಂದ ಹೇಳಿ...?ಇನ್ನೂ ಸಾಕ್ಷಿ ಬೇಕೇ..ಕವಿ ಕೊಟ್ಟ ಸಾಲಕ್ಕೆ ಚಕ್ರಬಡ್ಡಿಯೂ ಮೀಟರ್ ಬಡ್ಡಿಯೂ ವಸೂಲಾಗಿದೆಯೆಂದು ಹೇಳಲಿಕ್ಕೆ..ರವಿರಾಜ್ ಸಾಗರ್.ಮಂಡಗಳಲೆ.

ಸುಳ್ಳೂರ ಶಾಲೆಯಲ್ಲಿ ಪಾಲಕರಿಂದ ಸ್ವಚ್ಛತಾ ಸಪ್ತಾಹ

ಊರಿನ ಗ್ರಾಮಸ್ಥರಿಂದ ಸುಳ್ಳೂರು ಶಾಲೆಯಲ್ಲಿ ಸ್ವಚ್ಛತಾ ಸಪ್ತಾಹ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಳೂರಿನ ಹಿರಿಯ ವಿದ್ಯಾರ್ಥಿಗಳು , ಪಾಲಕರೆಲ್ಲರೂ ಸೇರ...