ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Monday 31 December 2018

ಬೀರು ದೇವರ ಮನಿ ಅವರ ಬೆಳಕಿನ ಒಂಟಿ ನಡಿಗೆ

ಕಾವ್ಯ ಬೆಳಕಿನತ್ತ "ಬೆಳಕಿನ ಒಂಟಿ  ನಡಿಗೆ

ಸಾಹಿತ್ಯ ಸನ್ಮಿತ್ರ ಬೀರು ದೇವರಮನಿಯವರ ಮೊದಲ ಪ್ರಯತ್ನದಲ್ಲೇ ಕಾವ್ಯ ಬೆಳಕಿನ ಜಾಡು ಹಿಡಿದು ಪಯಣಿಸಿದ್ದಾರೆ.ಅವರ ಬೆಳಕಿನ ಒಂಟಿ ನಡಿಗೆ ಕವನ ಸಂಕಲನ ಇತ್ತೀಚೆಗೆ ಬಿಡುಗಡೆ ಆಗಿದೆ.ನಮ್ಮ ರಾಯಚೂರಿನ ಮತ್ತೊಬ್ಬ ಭರವಸೆಯ ಕವಿಯಾಗಿ ಸಾಹಿತ್ಯ ಕೃಷಿಗೆ ಇಳಿದಿದ್ದಾರೆ.
ಕನ್ನಡ ಪುಸ್ತಕ ಪ್ರಾಧಿಕಾರದ ಸಹಾಯಧನವನ್ನು ಪಡೆದುಕೊಂಡಿರುವ ಈ ಕೃತಿ ಹಲವು ವೈವಿಧ್ಯಮಯ ಕವಿತೆಗಳನ್ನು ಒಳಗೊಂಡಿದೆ .ಸದಾ  ಕ್ರಿಯಾಶೀಲವಾಗಿರುವ ದೇವರಮನಿ ಅವರು  ತಮ್ಮ ಕವಿತೆಗಳಲ್ಲಿ ಅವ್ವ ಅಣ್ಣ ಮತ್ತಿತರ ಸಂಬಂಧಗಳು ಕುರಿತು ಭಾವನಾತ್ಮಕ ನುಡಿಗಳಲ್ಲಿ ಕವಿತೆಯನ್ನು ಕಟ್ಟಿದ್ದಾರೆ .ಹಲವು ಕವಿತೆಗಳು ಮನುಷ್ಯ ಸಂಬಂಧ ಕುರಿತು ಹೇಳುತ್ತವೆ .ಬದುಕಿನ ವಿವಿಧ ಮಜಲುಗಳು ಅವರ ಕವಿತೆಯ ವಸ್ತುವಾಗಿದೆ . ಕಳೆದುಕೊಂಡ ಬಾಲ್ಯ ಕವಿತೆಯಲ್ಲಿ  ಬಾಲ್ಯಕ್ಕೆ ೆ ಬಾಲ್ಯಕ್ಕೆ ಹೊರಳಿದ್ದಾರೆ. ಬಿಸಿಲು ನಾಡು ರಾಯಚೂರು ನಿಂದ ಬೆಂಗಳೂರು ಸೇರಿರುವ ಅವರು ತಮ್ಮ ಕವಿತೆಯಲ್ಲಿ ತಮ್ಮ ಭಾಷೆಯನ್ನು ಕೆಲವು ಕವಿತೆಗಳಿಗೆ ಬಳಸಿದ್ದರೆ ಅವರ ಕವಿತೆಗೆ ಇನ್ನಷ್ಟು ಕಾವ್ಯಲಯ ಬರುತಿತ್ತು ಎನಿಸಿತು. ಅದನ್ನು ನನ್ನವ್ವ ಕವಿತೆಯಲ್ಲಿ ಗುರುತಿಸಬಹುದು.ನನ್ನಾಕೆ ಕವಿತೆ ಕಾಡುವಂತಿದೆ. ಆಕೆ ಸುಗಂಧ ಭರಣಿಯ ಸಂಮ್ಮೋಹಿತೆ ಎಂದೇ ಅವರೇ ಹೇಳಿದ್ದಾರೆ.

ಹೊಸ ಭರವಸೆ ಹೊತ್ತ ಅವರ ಕವಿತೆಗಳಲ್ಲಿ ಅವರು ಸಾಹಿತ್ಯ ಕೃಷಿಗೆ ಭರವಸೆಯ ಬೆಳೆಗಾರಾಗಿ ಕಾಣಿಸುತ್ತಾರೆ. ಹೊಸ ಬರಹಗಾರರನ್ನು ಸ್ವಾಗತಿಸಿ ಪ್ರೊತ್ಸಾಹಿಸುವ
ಕಾರ್ಯ ನಮ್ಮದಾಗಬೇಕಾಷ್ಠೆ .  ಕವಿತೆ ಗಳು ಅತ್ಯಂತ ಉತ್ತಮ ಎಂದು ಪಂಡಿತರು ಹೇಳಿದ ಪುಸ್ತಕ ಮಾತ್ರ ಬೆಂಬಲಿಸುವ ಅತ್ವಾ ಹೊಸತನ್ನು ಅಸಡ್ಡೆಯಿಂದ ನೋಡದೆ ಒಂದಿಷ್ಟು ಮುಕ್ತವಾಗಿ ವಿಶಾಲವಾಗಿ ಯೋಚಿಸಿ ಕೈಹಿಡಿದು ನಡೆಸಿ.  ಒಂದು ಕೃತಿ ಹೇಗೆ ಇರಲಿ ಒಂದಿಷ್ಟು ಧನಾತ್ಮಕವಾಗಿ ಪ್ರೋತ್ಸಾಹಿಸಿದರೆ ಯಾರು ಏನನ್ನು ಕಳೆದುಕೊಳ್ಳುವುದಿಲ್ಲ.. ಅತ್ವಾ ಕೇವಲ ಪ್ರಸಿದ್ದರ ಪುಸ್ತಕದ ಬಗ್ಗೆ ಮಾತ್ರ ಬರೆದು ಬೀಗಿದರೆ ಸಾಲದು.ಹೊಸಬರನ್ನು ಸ್ವಾಗತಿಸೋಣ.  ಬೀರು
ಅವರ ಪುಸ್ತಕ  ದೇವರ ಮನಿ ಪ್ರಕಾಶನದಲ್ಲಿ ಲಭ್ಯ.ಅವರೊಂದಿಗೆ ಕರೆ ಮಾಡಿ ಮಾತಾಡಿ.8105788751.
ನಿಮ್ಮ ರವಿರಾಜ್ ಸಾಗರ್.

Sunday 16 December 2018

ಉದ್ಯೋಗ ಖಾತ್ರಿ ಯೋಜನೆಯ ಮಹತ್ವದ ಮಾಹಿತಿಗಳು

ಎಲ್ಲಾ ಸಮಸ್ತ ನಾಗರೀಕ ಬಾಂಧವರಲ್ಲಿ ತಿಳಿಸುವುದೇನೆಂದರೆ,
ನಮ್ಮ ಭಾರತ ದೇಶದಲ್ಲಿ ಅತೀ ಮುಂಚೂಣಿಯಲ್ಲಿರುವ ಮಹತ್ವಾಕಾಂಕ್ಷಿ ಯೋಜನೆಯಾದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ.

ಇದರ ಅಡಿಯಲ್ಲಿ ತಮ್ಮ ಹತ್ತಿರದ  ಗ್ರಾಮ ಪಂಚಾಯ್ತಿಗೆ ಬೇಟಿ ನೀಡಿ ಉದ್ಯೋಗ ಚೀಟಿ (job card) ಮಾಡಿಸಿ ಕೊಳ್ಳಲು ವಿನಂತಿ. 

ಒಂದು ಕುಟುಂಬಕ್ಕೆ 150 ದಿನಗಳ ಉದ್ಯೋಗ ಖಾತರಿ,ಒಂದು ದಿನಕ್ಕೆ 249/-ಕೂಲಿ ದರವನ್ನಾಗಿ ನಿಗದಿ ಪಡಿಸಲಾಗಿದೆ.

ಇದರ ಮುಖ್ಯ ಉದ್ದೇಶ ಗ್ರಾಮೀಣ ಬಡ ಜನರಿಗೆ ಆಧಾರವಾಗಿ ನೈಸಗ೯ಕ ಸಂಪನ್ಮೂಲ ಬಲಪಡಿಸುವುದು, ವಲಸೆ ತಡೆಗಟ್ಟುವುದು, ಆಥಿ೯ಕ ಭದ್ರತೆ ಒದಗಿಸುವುದು ಮತ್ತು ಆಸ್ತಿ ಸೃಜನೆ ಮಾಡುವುದಾಗಿದೆ.

ಇದರಿಂದಾಗುವ ಪ್ರಯೋಜನಗಳು:-

1.ಸಕಾ೯ರದಿಂದ ವಸತಿ ಮಂಜೂರಾದರೆ ಈ ಯೋಜನೆಯ ಅಡಿಯಲ್ಲಿ ಕೂಲಿ ಹಣ 22,410 ರೂ/- ದೊರೆಯುತ್ತದೆ.

2.ದನದ ಕೊಟ್ಟಿಗೆ ,ಕುರಿ ಶೆಡ್,ಮೇಕೆ ಶೆಡ್,ಕೋಳಿ ಶೆಡ್,ಹಂದಿ ಶೆಡ್ ನಿಮಾ೯ಣಕ್ಕೆ 43,000/- ದೊರೆಯುತ್ತದೆ.

3. ಜಮೀನು ಸಮತಟ್ಟು ಮಾಡಲು 10,000/- ದೊರೆಯುತ್ತದೆ.

4. ಜಮೀನಿನಲ್ಲಿ ತಡೆ ಗೋಡೆ( ರಿವೀಟ್ ಮೆಂಟ್ ) ಕಟ್ಟಲು ಪ್ರತೀ ರೈತರಿಗೆ 1 ಲಕ್ಷ ರೂ/- ವರೆಗೆ ದೊರೆಯುತ್ತದೆ.

5.ಜಮೀನಿನಲ್ಲಿ ಕೃಷಿ ಹೊಂಡ ನಿಮಾ೯ಣ ಮಾಡಲು 43.000/- ದೊರೆಯುತ್ತದೆ.

6.ಜಮೀನಿನಲ್ಲಿ ಕೊಳವೆ ಬಾವಿಗೆ ಹಿಂಗು ಗುಂಡಿ ನಿಮಾ೯ಣ ಮಾಡಲು 19.000/- ದೊರೆಯುತ್ತದೆ.

7. ಮನೆಗಳಿಗೆ ಮಳೆ ನೀರು ಕೊಯ್ಲು ಕಾಮಗಾರಿಗೆ 30.000/- ದೊರೆಯುತ್ತದೆ.

8. ತಮ್ಮ ಜಮೀನುಗಳಲ್ಲಿ ವಿವಿಧ ಜಾತಿಯ ತೋಟಗಾರಿಕಾ ಬೆಳೆಗಳು

   ಬೆಳೆ         ಹೆಕ್ಟೇರ್ ಗೆ

a. ತೆಂಗು   - 62.496/-
b. ಗೇರು    - 72.048/-
c. ಮಾವು,ಸಪೋಟ  - 101957
d. ದಾಳಿಂಬೆ - 59879/-
e. ಸೀಬೆ  -  94704/-
f.  ಸಿಟ್ರಸ್ - 71316/-
g. ಹುಣಸೆ - 94704/-
h.ಸೀತಾಫಲ  -  53330/-
i. ನುಗ್ಗೆ     -    116996/-
j. ಬಾಳೆ   -    211656/-
k. ಪಪ್ಪಾಯ - 205498/-

9. ತೇಗ, ವನ್ನೆ, ಬೀಟೆ, ಶ್ರೀಗಂಧ,ಅಕೇಶಿ, ರಕ್ತಚಂಧನ, ಸಿಲ್ವರ್, ಟೇಕ್ ಇತರೆ ಜಾತಿಯ ಸಸಿಗಳನ್ನು ತಮ್ಮ ಜಮೀನುಗಳಲ್ಲಿ ಬೆಳೆಸಲು MGNREGA  ಯೋಜನೆಯಲ್ಲಿ ಸಹಾಯ ಧನ  ದೊರೆಯುತ್ತದೆ.

10. ಹಿಪ್ಪುನೇರಳೆ ಹೊಸ ನಾಟಿ ಮತ್ತು ಹಿಪ್ಪುನೇರಳೆ ಮರದ ಕಡ್ಡಿ ನೆಡಲು ಸಹಾಯ ಧನ ದೊರೆಯುತ್ತದೆ.

11. ಮೀನು ಸಾಕಾಣಿಕೆ ತೊಟ್ಟಿ ನಿಮಿ೯ಸಲು ಸಹಾಯ ಧನ ದೊರೆಯುತ್ತದೆ.

12. ಎರೆ ಹುಳು ಗೊಬ್ಬರ ತಯಾರಿಸುವ ತೊಟ್ಟಿ ನಿಮಾ೯ಣಕ್ಕೆ ಸಹಾಯ ಧನ  ದೊರೆಯುತ್ತದೆ.

ಇನ್ನೂ ಆನೇಕ ಅನುಕೂಲಗಳು MGNREGA ಯೋಜನೆಯಲ್ಲಿ ನೆರವಾಗುತ್ತಿವೆ.

ಹೆಚ್ಚಿನ ಮಾಹಿತಿಗಾಗಿ :-
ನಿಮ್ಮ ಗ್ರಾಮ ಪಂಚಾಯ್ತಿಗೆ ಬೇಟಿ ನೀಡಿ.

Wednesday 5 December 2018

ನೌಕರರ ರಜೆಗಳ ಬಗ್ಗೆ .ಹಾಗೂ ಸೌಲಭ್ಯಗಳ ಮಹತ್ವದ ಸಂಗತಿ ಅರಿಯಿರಿ.

ನಾಮನಿರ್ದೇಶನದ  ಪ್ರಾಮುಖ್ಯತೆ
------------------------------------
  ಸರ್ಕಾರಿ  ನೌಕರ  GPF , KGID , LIC , FBF , KGIS , DCRG  , Family pension , ಅಲ್ಲದೆ   SB a/c , ಮತ್ತು  FD a/c ಇತ್ಯಾದಿಗಳಿಗೆ ಎಲ್ಲದಕ್ಕೂ  ನಾಮನಿರ್ದೇಶನ( Nominee ) ಕಡ್ಡಾಯವಾಗಿ ಮಾಡಲೇಬೇಕಾಗುತ್ತದೆ .
ಕೇವಲ ನಾಮನಿರ್ದೇಶನ  ಮಾಡಿದರೆ  ಸಾಲದು , ಅದನ್ನು  ಸಂದರ್ಭಾನುಸಾರ  Update  ಮಾಡುತ್ತಾ ಇರಬೇಕು .
  ನಾಮನಿರ್ದೇಶನಗಳನ್ನು  ಒಬ್ಬರ  ಹೆಸರಿನಲ್ಲಿಯೇ  ಮಾಡಬೇಕೆಂದೇನೂ
ಇಲ್ಲ . ಒಬ್ಬನಿಗಿಂತ  ಹೆಚ್ಚಿನ ವ್ಯಕ್ತಿಗಳನ್ನು  ನಾಮನಿರ್ದೇಶಿತರನ್ನಾಗಿ
ಮಾಡಬಹುದು . ಹೆಚ್ಚಿನ  ವ್ಯಕ್ತಿಗಳನ್ನು ಮಾಡುವಾಗ  ತಾನು  ಮೃತಪಟ್ಟಲ್ಲಿ
ಯಾವ ವ್ಯಕ್ತಿಗಳಿಗೆ  ಎಷ್ಟೆಷ್ಟು  ಪಾಲು ಹಣ ಕೊಡಬೇಕು  ಎಂಬುದನ್ನು ಕೂಡ  ದಾಖಲಿಸಬೇಕು. ನೌಕರನ  ಕೇಂದ್ರಸ್ಥಾನ
_____________________
KCSR ನಿಯಮ 513 ರ  ಪ್ರಕಾರ  ಕೇಂದ್ರ ಸ್ಥಾನ   ಎಂದರೆ   ತಾನು  ಕರ್ತವ್ಯ  ನಿರ್ವಹಿಸುವ  ಕಾರ್ಯಸ್ಥಳದಿಂದ  8 ಕಿ.ಮೀ. ದೂರವನ್ನು   ಕೇಂದ್ರ ಸ್ಥಾನ ವೆಂದು   ಕರೆಯುವರು .
8 ಕಿ. ಮೀ . ಮೀರಿ  ಬೆಳೆಸಿದ  ಪ್ರಯಾಣಕ್ಕೆ  ಪ್ರಯಾಣ ಭತ್ಯೆ  ಪಡೆಯಬಹುದು .
ಪ್ರವಾಸದ  ಕಾಲದಲ್ಲಿ  ಕೇಂದ್ರಸ್ಥಾನ ದಿಂದ 8 ಕಿ. ಮೀ .ಒಳಗೆ  ತಂಗುವುದನ್ನು  ಕೇಂದ್ರಸ್ಥಾನದಲ್ಲಿ   ತಂಗುವುದಾಗಿ ಭಾವಿಸಬೇಕು .
ದಿನದ 24 ಗಂಟೆಯೂ  ಸರ್ಕಾರಿ ನೌಕರ *

-------------------------------
K C S R ನಿಯಮಾವಳಿಯ  ನಿಯಮ  26( ಎ ) ಪ್ರಕಾರ  ಸರ್ಕಾರಿ ನೌಕರನು  ದಿನವಿಡಿ  ಅಂದರೆ 24 ಗಂಟೆಯೂ ಆತನಿಗೆ  ಸಂಬಳ ನೀಡುತ್ತಿರುವ  ಸರ್ಕಾರದ  ಕರ್ತವ್ಯಕ್ಕಾಗಿಯೇ  ಇರಬೇಕಾಗುತ್ತದೆ .

ಸರ್ಕಾರ  ರಜಾ ದಿನದಂದು  ಕರ್ತವ್ಯ ನಿರ್ವಹಿಸಲು  ಆದೇಶಿಸಿದರೆ
ಅದನ್ನು  ತಿರಸ್ಕರಿಸಲು  ಬರುವುದಿಲ್ಲ . ಉದಾಹರಣೆಗೆ  ಒಬ್ಬ  ವ್ಯಕ್ತಿಯು ಸಂಜೆ 5-30 ಕ್ಕೆ  ವಯೋ ನಿವೃತ್ತಿ  ಹೊಂದಿ ,  ಅದೇ ದಿನ ರಾತ್ರಿ   11-30ಕ್ಕೆ
ಮೃತಪಟ್ಟ ಎಂದು ಭಾವಿಸೋಣ , K C S R ನಿಯಮಾವಳಿಯ  ನಿಯಮ 8 ( 14 )ರ ಪ್ರಕಾರ  ದಿನ ಎಂದರೆ  ಮಧ್ಯರಾತ್ರಿಯಲ್ಲಿ   ಆರಂಭಗೊಳ್ಳುತ್ತದೆ
ಮತ್ತು  ಕೊನೆಗೊಳ್ಳುತ್ತದೆ .
ಏಕೆಂದರೆ , X  ಎಂಬ ನೌಕರ  ದಿನಾಂಕ 30- 09 - 1993 ರಂದು   ಸಂಜೆ 5-30 ಕ್ಕೆ ವಯೋ ನಿವೃತ್ತಿ ಹೊಂದಿ ರಾತ್ರಿ  10-30 ಕ್ಕೆ ನಿಧನರಾದರು . ಈ
KAT ಯು  ಅರ್ಜಿ ಸಂಖ್ಯೆ  : 3452 ,98 ರ  ದಿನಾಂಕ 03-09-1998 ರಂದು ಈ ವ್ಯಕ್ತಿಯು ಸೇವಾವಧಿಯಲ್ಲಿ     ಮೃತಪಟ್ಟಿರುವುದರಿಂದ
ರಾಜ್ಯ ಸರ್ಕಾರಿ ನೌಕರರ ಸಮೂಹ ವಿಮಾ ಯೋಜನೆ  ನಿಯಮಗಳು
1981 ರ ನಿಯಮ  21(2) ರ ಪ್ರಕಾರ 3 ತಿಂಗಳ ಅವಧಿಯೊಳಗೆ
ಸಮೂಹ ವಿಮಾ ಹಣವನ್ನು ಪಾವತಿಸಲು  ಆದೇಶಿಸಿದೆ . Exemption on professional  Tax
ವೃತ್ತಿ  ತೆರಿಗೆಯಿಂದ  ವಿನಾಯತಿ
~~~~~~~~~~~~~
ಸರ್ಕಾರದ   ಅಧಿಸೂಚನೆ  ಸಂಖ್ಯೆ  ಎಫ್.ಡಿ. 12
ಸಿ.ಪಿ.ಟಿ.94( ¡¡¡ )ದಿನಾಂಕ  30 - 2 - 1994 ರ  ಪ್ರಕಾರ
ಒಂದೇ  ಮಗುವಿದ್ದು  ಸಂತಾನಹರಣ   ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡವರಿಗೆ   ( ದಂಪತಿಗಳ  ಪೈಕಿ  ಒಬ್ಬರಲ್ಲಿ )  ದಿನಾಂಕ  01 - 04 - 1994  ರಿಂದ  ವೃತ್ತಿ  ತೆರಿಗೆ  ವಿನಾಯತಿ ನೀಡಲಾಗಿದೆ .
ಮಹಿಳಾ  ನೌಕರರಿಗೆ  *
------------------------------------
  ಮಹಿಳಾ ನೌಕರರು   ಮದುವೆಯಾಗಿ   ಗಂಡನ ಮನೆಯಲ್ಲಿ 
ವಾಸವಾಗಿದ್ದರೂ  ಸಹ  ಮಹಿಳಾ  ನೌಕರರ  ತಂದೆ - ತಾಯಿ ಈ ನೌಕರರ
ಅವಲಂಬಿತರಾಗಿದ್ದಲ್ಲಿ  ಸರ್ಕಾರದ  ಅಧಿಸೂಚನೆ  ಸಂಖ್ಯೆ ಸಿ.ಆ.ಸು.ಇ.
26/ ಎಸ್ . ಎಂ . ಆರ್ 2011 ದಿನಾಂಕ 27- 03- 2012 ರಂತೆ ಪೋಷಕರ  ಮಾಸಿಕ  ಆದಾಯ 6000/- ರೂ  ಮೀರದಿದ್ದರೆ  ಅಂತವರು ವೈದ್ಯಕೀಯ ಮರುವೆಚ್ಛ  ಪಾವತಿ ಮಾಡಿಕೊಳ್ಳುವ ಅವಕಾಶವಿದೆ.
ಅಸಾಧಾರಣ ರಜೆ ( Extraordinary Leave )
_________________

ಸರ್ಕಾರಿ  ನೌಕರನು ಅವನ  ಹಕ್ಕಿನಲ್ಲಿ  ಯಾವುದೇ  ವಿಧವಾದ  ರಜೆ  ಇಲ್ಲದಿದ್ದಾಗ , ಅಥವಾ  ವಿಶೇಷ ಸನ್ನಿವೇಶಗಳಲ್ಲಿ  KCSR  ನಿಯಮ  117 ( ಎ ) ರ ಪ್ರಕಾರ  ಅಸಾಧಾರಣ  ರಜೆಯನ್ನು  ಪಡೆಯಬಹುದಾಗಿರುತ್ತದೆ .
        ಆದರೆ  ಈ  ಅಸಾಧಾರಣ  ರಜೆಯ  ಅವಧಿಗೆ  ಯಾವುದೇ  ವೇತನ  ಭತ್ಯೆಗಳು  ಲಭ್ಯವಾಗುವುದಿಲ್ಲ .

   ಯಾವುದೇ  ರಜೆ  ಇಲ್ಲದ  ನೌಕರರು  ಕ್ಯಾನ್ಸರ್  ,  ಕುಷ್ಠ  ,  ಕ್ಷಯ ,  ಮಾನಸಿಕ  ಅಸ್ವಸ್ಥತೆ   ಇತ್ಯಾದಿ  ಮಾರಕ  ಖಾಯಿಲೆಗಳಿಗೆ   ತುತ್ತಾದಲ್ಲಿ   ವೈದ್ಯಕೀಯ
ಪ್ರಮಾಣಪತ್ರದ  ಆಧಾರದ  ಮೇಲೆ  18 ತಿಂಗಳ  ಅವಧಿಗೆ  ಅಸಾಧಾರಣ  ರಜೆ  ಮಂಜೂರು ಮಾಡಲು ಅವಕಾಶವಿದೆ .
KCSR  ನಿಯಮ 117 ( ಬಿ )( ¡¡¡ ) ರ  ಪ್ರಕಾರ  ಸತತ ಮೂರು  ವರ್ಷ  ಸೇವೆ  ಸಲ್ಲಿಸಿದ  ನೌಕರರಿಗೆ  ಉನ್ನತ ವ್ಯಾಸಂಗಕ್ಕೆ  2 ವರ್ಷ , ಡಾಕ್ಟರೇಟ್  ಕೋರ್ಸ್ ಗಾಗಿ 3 ವರ್ಷಅಸಾಧಾರಣ  ರಜೆ  ಪಡೆಯಲು ಅವಕಾಶವಿದೆ .ರಿಮೂವಲ್ -  ಡಿಸ್ಮಿಸಲ್ ಗೂ  ಇರುವ  ವ್ಯತ್ಯಾಸ  ? ?
_____________________
ರಿಮೂವಲ್ ( ಕೆಲಸದಿಂದ  ತೆಗೆದುಹಾಕುವುದು).  ಯಾವುದೇ  ಆರ್ಥಿಕ ಸೌಲಭ್ಯವೂ  ದೊರೆಯುವುದಿಲ್ಲ , ಆದರೆ  ಮತ್ತೊಂದು  ಹುದ್ದೆಗೆ
ಆಯ್ಕೆಯಾಗಬಹುದು .
ಆದರೆ  ಡಿಸ್ಮಿಸಲ್ ( ಕೆಲಸದಿಂದ  ವಜಾ ಮಾಡುವುದು ) . ಈ ಆದೇಶವಾದಾಗ  ಆರ್ಥಿಕ  ಸೌಲಭ್ಯವೂ  ಸಿಗುವುದಿಲ್ಲ , ಹಾಗು  ಬೇರೆ ಹುದ್ದೆಗೆ
ನೇಮಕಾತಿಯು  ಸಿಗುವುದಿಲ್ಲ .ಅಮಾನತ್ತು  ( Suspension )
____________________
1)ಒಬ್ಬ ನೌಕರರನ್ನು  ಅಮಾನತ್ತು ಮಾಡುವಾಗ ಮುಂಚಿತವಾಗಿ ನೋಟೀಸು ಕೊಡಬೇಕೆಂದು ನಿಯಮವಿಲ್ಲ .
2) ಅಮಾನತ್ತು ಅವಧಿಯಲ್ಲಿ ಕಡ್ಡಾಯವಾಗಿ ಶೇಕಡಾ 50% ಜೀವನಾಧಾರ ಭತ್ಯೆ  ಕೊಡಬೇಕು .
3) ಅಮಾನತ್ತನ್ನು  ಗರಿಷ್ಠ 6 ತಿಂಗಳೊಳಗಾಗಿ  ಅಂತಿಮ  ಆದೇಶ ಹೊರಡಿಸಬೇಕು . ಮುಂದುವರಿಸಬೇಕಾದರೆ ಸರ್ಕಾರಕ್ಕೆ  ವರದಿ ಸಲ್ಲಿಸಬೇಕು .
4) ಯಾವುದಾದರೂ  ಕಾರಣದಿಂದ 48 ಗಂಟೆ ಮೀರಿದ  ಅವಧಿಯವರಿಗೆ ಅಭಿರಕ್ಷೆಯಲ್ಲಿ  ( ಪೋಲಿಸ್ ಕಷ್ಟಡಿ ) ತಡೆಹಿಡಿದಿದ್ದರೆ  ಸ್ವಯಂಚಾಲಿತವಾಗಿ  ಅಮಾನತ್ತು ಜಾರಿಯಾಗುತ್ತದೆ .
5)  ವಿಚಾರಣೆ  ಬಾಕಿ ಇರುವಾಗ ನೌಕರರನನ್ನು  ಅಮಾನತ್ತುಗೊಳಿಸಬಹುದು. ಆದರೆ,  ಅಮಾನತ್ತು ದಂಡನೆ  ಅಲ್ಲ.
6) ತಿಂಗಳಿಗೂ  ಮೀರಿದ ಅವಧಿಗೆ  ಅಮಾನತ್ತು ಮುಂದುವರಿದ ಪ್ರಕರಣಕ್ಕೆ ಶೇಕಡಾ 75% ,  ಹಾಗು ವರ್ಷಕ್ಕೂ  ಮೀರಿದ ಅವಧಿಗೆ  ಶೇ100% ರಷ್ಟು ಸಂಬಳ ಪಾವತಿಸಬೇಕು .
7) ಅಮಾನತ್ತಾದ  ನೌಕರ  ವಿಚಾರಣೆಯಿಂದ  ಆರೋಪ ಮುಕ್ತನಾದಲ್ಲಿ  ಪೂರ್ಣ  ವೇತನ  ನೀಡಬೇಕು .
8 ) ಅಮಾನತ್ತು ನಂತರ ಶಿಸ್ತು ನಡವಳಿಕೆ  ನಡೆಸದಿದ್ದಲ್ಲಿ  ಅದು  ನ್ಯಾಯಸಮ್ಮತವಲ್ಲ .
9 ) ಲಘು ದಂಡನೆ  ವಿಧಿಸುವುದೊಂದಿಗೆ  ಅಮಾನತ್ತು ಅವಧಿ ಕೊನೆಗೊಂಡಾಗ ಈ ಅವಧಿಗೆ  ಪೂರ್ಣ ವೇತನ  ಮತ್ತು ಭತ್ಯೆಗಳನ್ನು ಕೊಡಬೇಕು .
10 ) ' ಬಿ ' ಗುಂಪಿನ  ಅಧಿಕಾರಿಗಳನ್ನು  ಅಮಾನತ್ತುಗೊಳಿಸುವ  ಅಧಿಕಾರ - ಜಿಲ್ಲಾಧಿಕಾರಿ  ಮತ್ತು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿಗೆ  ಅಧಿಕಾರ ಇರುವುದಿಲ್ಲ .

ಸುಳ್ಳೂರ ಶಾಲೆಯಲ್ಲಿ ಪಾಲಕರಿಂದ ಸ್ವಚ್ಛತಾ ಸಪ್ತಾಹ

ಊರಿನ ಗ್ರಾಮಸ್ಥರಿಂದ ಸುಳ್ಳೂರು ಶಾಲೆಯಲ್ಲಿ ಸ್ವಚ್ಛತಾ ಸಪ್ತಾಹ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಳೂರಿನ ಹಿರಿಯ ವಿದ್ಯಾರ್ಥಿಗಳು , ಪಾಲಕರೆಲ್ಲರೂ ಸೇರ...