ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Sunday 19 June 2016

ನಾನೂ ಅಪ್ಪಾನಪ್ಪಾ

ನಾನೂ ಅಪ್ಪಾನಪ್ಪಾ.          
                              
ಅಪ್ಪನಂತ ಅಪ್ಪನೊಳಗೂ         
ಅವ್ವನಂತ ಹೆಂಗರುಳಿದೆ
ಆಡಿಸಿ ನಲಿಸಿ ಹಾಲುಣಿಸಿಹನು     
ತೊಟ್ಟಿಲು ತೂಗಿ ಹಾಡಿಹನು.   
ಯಾರೂ ಅವನ ಕಕ್ಕುಲತೆಯ ಕೊಂಡಾಡದಿದ್ದರೂ ...
  ತನ್ನಪಾಡಿಗೆ ತಾ  ಪ್ರೀತಿಧಾರೆ ಎರೆದಿಹನು ಹಗಲೆಲ್ಲ ಮೈಮುರಿದು ದುಡಿದು  ಧಣಿದು
ಕಂದನ ಕಂಡು ಹಗುರಾಗುವ  ತಂದೆಯೊಲವಿಗೆ ಸಾಟಿಯಾರು.? 
ಹೆತ್ತವಳಕೂಗು ಲೋಕಕ್ಕೆಕೇಳಿತಾದರೂ..
ಅಪ್ಪನೋಡಲ ಅಂತರ್ಗತ ಅಕ್ಕರೆ
ಯಾರೂ  ಕೊಂಡಾಡರು...!!            
ಕಣ್ಣಿಂದ ಇಳಿಯದಂತೆ ಹನಿಯ ತಡೆದು                 ಎದೆಯ ಒಳಗೆ ಎಲ್ಲ ಬಚ್ಚಿಟ್ಟುಕೊಂಡು ಗಂಭೀರನಾಗಿ ಲೋಕದಿ ಉಳಿವ ಅವನ ಪ್ರೀತಿ   ಕಂಡರೂ
ತಾಯ ಬೆಚ್ಚನೆ ಮಡಿಲೇ ಹಿತ ಮಕ್ಕಳೆಲ್ಲರಿಗೂ....     
ಅಪ್ಪನ ತ್ಯಾಗ ನೀಲ ಬಾನು..
ಇನ್ನು ಏನು ಹೇಳಲಿ ನಾನೂ.  
ಅಪ್ಪಾ... ಅಪ್ಪಾ..
ತಿಳಿಯಿತು ನಿನ್ನ ತ್ಯಾಗ ಶ್ರಮ.  
  ನಾನಾದಮೇಲೆ ಅಪ್ಪ.         

# ರವಿರಾಜ್ ಸಾರ್#

No comments:

Post a Comment