ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Wednesday 24 February 2016

ಬೋದಿಸದ ಬುದ್ಧ

ಬೋದಿಸದ ಬುದ್ಧ
.................
ನಾನೂ  ಮುಗ್ದ ಮಗು....!
ಬದಲಿಸಿತು ನಿನ್ನ  ನಗು.
ಬುದ್ಧನೆದುರು ಬದಲಾದರೆಲ್ಲಾ.. ..
ಮುಗ್ದನೆದುರು ನಾನೂ....
ಮುದ್ದು ಮಗು.
         ನನ್ನ ಮನೆ ಗಡಿಯಾರದ
     ಮುಳ್ಳುಗಳೀಗ ಚಲನೆ ಬದಲಿಸಿ
     ಆಟಕ್ಕಿಳಿದಿವೆ ನನಗೇ ಚೇಷ್ಟೆ ಮಾಡುತ.
     ನನ್ನ ಪುಸ್ತಕಗಳೆಲ್ಲಾ ಹಾಯಾಗಿ 
ಚೂರಾಗಿ  ಮುಕ್ತಿ ಪಡೆಯಲು ತವಕಿಸುತಿವೆ
ಹಸುಗೂಸಿನ ಕೋಮಲ ಕೈಗಳಲಿ
ಪರ್ರನೆ ಕೇಕೆ ಹಾಕುತಿವೆ.
ಇನ್ನು  ನಾನು ಉಳಿದೆನೇ...
ಬದಲಾಗಿಬಿಟ್ಟೆ ಮಗುವಾಗಿ....
        ಎಸು ಓದಿದರೂ ಬದಲಾಗದವರೆಲ್ಲ
        ಬದಲಾಗಬಹುದಾದ
         ಪುಸ್ತಕವೇ ಮಗು .
           ಮಗುವೇ ಪುಸ್ತಕ.
          ಎಲ್ಲ ಬದಲಿಸಿತು.
         ಏನೂ ಹೇಳದೆ.
ಬೋದಿಸದ ಬುದ್ಧ.

Sunday 14 February 2016

"ಮಂದಾರ ಕನ್ನಡ". ಶಾಲಾ ಮಕ್ಕಳ ಪತ್ರಿಕೆ

ಮಕ್ಕಳಿಂದ ಮಕ್ಕಳಿಗೆ ಸೃಜನಶೀಲ ಬರವಣಿಗೆ ಗೆ ವೇದಿಕೆಗಾಗಿ "ಮಂದಾರ ಕನ್ನಡ"  ಶಾಲಾ  ಮಕ್ಕಳ ಪತ್ರಿಕೆಯ ಜೆಪಿ. ಜೆ ಆವೃತ್ತಿ. ನಿನಿಮಗಾಗಿ.

Friday 5 February 2016

ಮುಳುಗಡಲೇ. .(ಮಂಡಗಳಲೆ )

ಮುಳುಗಡಲೇ...(ಮಂಡಗಳಲೆ)

ಅತ್ತ ಸಹ್ಯಾದ್ರಿ ಕಣಿವೆಯಲಿ
  ಸೊಗಸಾಗಿ  ದುಮುಕುವ ಶರಾವತಿ
ಇತ್ತ ಅಬ್ಬರಿಸುತ  ವಯ್ಯಾರದಿ ಬರುವ ವರದಾ ನದಿ
ನಾನೇನು ಕಡಿಮೆಯೇ ಎನ್ನುವ ಕನ್ನೆಹೊಳೆ
ಆದ್ರೆ ಮಳೆಯನುಂಡು
ಅಣ್ಣ ತಮ್ಮನ ಮಳೆಯಲಿ
ಮೈದುಂಬಿ ಮೆರೆದು
ನಮ್ಮೂರ ಮುಳುಗಿಸಿ
ಮಜ ನೋಡುವಳು...
ಆದರೂ ಮಳುಗಡೆಯ ಮಕ್ಕಳು ನಾವು
ಮುಳುಗಿ ಹೋಗುವೆವೇ..?
ದೀವರ ಕುಲದ ದಿಟ್ಟರು ನಾವು
ಕಾಯಕವೇ ಕೈಲಾಸ ಎನ್ನುತ
ಆಳಾಗಲೂ ಸೈ.. ಅರಸಾಗಲೂ ಜೈ,
            ಸಹ್ಯಾದ್ರಿಯ ಹೆಬ್ಬಾಗಿಲ
  ಪುಟ್ಟ  ತಗ್ಗು ಬಯಲು ನನ್ನೂರು..
ಸಮಾಜವಾದಿಗಳ ಕಾಗೋಡು ಚಳುವಳಿಗೆ
ಜೂತೆಯಾದವರು ನನ್ನೋರು..
  ಶೂದ್ರ ಕುಲಗಳ ಸುಶಿಕ್ಷಿತರ ನೆಲೆಬೀಡು
  ದಂಡು ದಾಳಿಗೆ ಅಂಜದ ದೀವರ ಗೂಡು.
ಮುಳುಗೇಳುವ  ಮಂಡಗಳಲೆ
ಶ್ರಮಿಕರ ಸಹಬಾಳ್ವೆಯ ನೆಲೆ.
- ರವಿರಾಜ್ ಸಾಗರ್.ಮಂಡಗಳಲೆ.

Tuesday 2 February 2016

ಹುಸಿಯಲ್ಲ ಹಸಿವು

ಹುಸಿಯಲ್ಲ ಹಸಿವು
...................
ಕಾಲೆಳೆವ ಕಾಲದ ಕಾಲೆಳೆದೇ ಬದುಕಬೇಕೆಂದು ಹಠ ಹಿಡಿದು
ಕಡಲಲೆಯ ತಡೆದು
ಹೊಂಬಣ್ಣದ ಕಡಲೇ ಕೆಂಪಾಗುವಂತೆ ಮುನಿದು
ಸೂರ್ಯನ  ನೆತ್ತಿ ಸುಟ್ಟು
ನಗುನಗುತ ಕುಂತ ಕಾಲಬೈರವ ನಾನು.
ನಿನಗೆ ಹೆದರುವೆನೆ  ಚೆಲುವೆ.?
ಅಂತೇನು ಹೇಳಲಾರೆ
ನಿನ್ನ ಅಂಗಾಲಿಗೆ ಹಾಲು ಸುರಿದು
ಮುಡಿಗೆ ಮಲ್ಲಿಗೆ ಮುಡಿಸಿ
ನಿನ್ನ ಹುಸಿ ಮುನಿಸಿಗೆ
ಕ್ಷಮೆ ಕೇಳುವಾಸೆ
ಹುಸಿ ಮುನಿಸಿಕೊಂಡಾಗ ನೀ ಬಲು ಚೆಲುವೆ
  ಹಸಿ ಪ್ರೇಮದಿಂದ ಮನ್ನಿಸಿ ಬಿಡು ಒಲವೇ..
ಹುಸಿಯಲ್ಲ ನನ್ನೊಲವು
ಒಲವ   ಹಸಿವಾಗಿದೆ
ಉಳಿಸಿ, ಉಣಿಸು ಬಾ ಒಲವಾಮೃತ.
ರವಿರಾಜ್ ಸಾಗರ್. - (ಬಾವಜೀವಿ ಸಂಕಲನ ದಿಂದ. )

ಸುಳ್ಳೂರ ಶಾಲೆಯಲ್ಲಿ ಪಾಲಕರಿಂದ ಸ್ವಚ್ಛತಾ ಸಪ್ತಾಹ

ಊರಿನ ಗ್ರಾಮಸ್ಥರಿಂದ ಸುಳ್ಳೂರು ಶಾಲೆಯಲ್ಲಿ ಸ್ವಚ್ಛತಾ ಸಪ್ತಾಹ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಳೂರಿನ ಹಿರಿಯ ವಿದ್ಯಾರ್ಥಿಗಳು , ಪಾಲಕರೆಲ್ಲರೂ ಸೇರ...