ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Saturday 11 February 2017

ಕಳೆದು ಹೋದ ಮೊಬೈಲ್ ಸಿಗಲು ಹೀಗೆ ಮಾಡಿ

*_ನಿಮ್ಮ ಮೊಬೈಲ್ ಕಳೆದುಹೋದರೆ ಅದನ್ನು ಪತ್ತೆ ಮಾಡಲು ಏನು ಮಾಡಬೇಕು?_*

```ನಾವು ಎಷ್ಟೇ ಹುಷಾರಾಗಿದ್ದರೂ ಕೆಲವೊಮ್ಮೆ ಮೊಬೈಲ್'ಗಳು ಕಳುವಾಗಿಬಿಡುತ್ತವೆ. ಅಥವಾ ಕಳೆದುಕೊಂಡುಬಿಡುವ ಸಾಧ್ಯತೆ ಇದ್ದೇ ಇರುತ್ತದೆ. ಈ ಸಂದರ್ಭದಲ್ಲಿ ಏನು ಮಾಡಬೇಕು ಎಂದು ಗೊತ್ತಾಗದೇ ಹತಾಶರಾಗುತ್ತೇವೆ. ಪೊಲೀಸ್'ಗೆ ದೂರು ಕೊಟ್ಟರೆ ಮೊಬೈಲನ್ನು ಹುಡುಕಿಕೊಡುವ ಗ್ಯಾರಂಟಿ ಇರುವುದಿಲ್ಲ. ಆದರೆ, ನಿಮ್ಮ ಮೊಬೈಲನ್ನು ಒಂದೇ ದಿನದಲ್ಲಿ ಹುಡುಕಲು ಸಾಧ್ಯವಿದೆ. ಅದಕ್ಕೆ ನೀವು ಮಾಡಬೇಕಿರುವುದು ಇಷ್ಟೇ.

ನಿಮ್ಮ ಮೊಬೈಲ್'ನಲ್ಲಿ ಐಎಂಇಐ ಎಂಬ ವಿಶೇಷ ನಂಬರ್ ಇರುತ್ತದೆ. ಈ ಇಂಟರ್'ನ್ಯಾಷನಲ್ ಮೊಬೈಲ್ ಎಕ್ವಿಪ್ಮೆಂಟ್ ಐಡೆಂಟಿಟಿ ನಂಬರನ್ನು ಮೊದಲು ಗುರುತು ಮಾಡಿಟ್ಟುಕೊಂಡಿರಿ. ಇದು ಬಹಳ ಮುಖ್ಯ. ಈ ನಂಬರನ್ನು ಪಡೆಯಲು ನಿಮ್ಮ ಮೊಬೈಲ್'ನಿಂದ *#06# ಅನ್ನು ಡಯಲ್ ಮಾಡಿದರೆ ನಿಮಗೆ 15 ಅಕ್ಷರದ ಐಎಂಇಐ ನಂಬರ್ ಸಿಗುತ್ತದೆ. ಇದನ್ನು ನಿಮ್ಮ ಡೈರಿಯಲ್ಲಿ ಗುರುತು ಮಾಡಿಟ್ಟುಕೊಳ್ಳಿ.

ಅಕಸ್ಮಾತ್ ನಿಮ್ಮ ಮೊಬೈಲ್ ಕಳುವಾದಾಗ ಈ ಕೆಳಗಿನ ವಿವರಗಳೊಂದಿಗೆ copy@vsnl.net ಎಂಬ ವಿಳಾಸಕ್ಕೆ ಇ-ಮೇಲ್ ಮಾಡಿ.

ನಿಮ್ಮ ಹೆಸರು:
ವಿಳಾಸ:
ಫೋನ್ ಮಾಡೆಲ್:
ಮೇಕ್:
ಕೊನೆಯ ಬಾರಿ ಬಳಸಿದ ನಂಬರ್:
ನಿಮ್ಮ ಇಮೇಲ್ ವಿಳಾಸ:
ನಾಪತ್ತೆಯಾದ ದಿನಾಂಕ:
ಐಎಂಇಐ ನಂಬರ್:

ಮುಂದಿನ 24 ಗಂಟೆಯೊಳಗೆ ನಿಮ್ಮ ಮೊಬೈಲನ್ನು ಟ್ರೇಸ್ ಮಾಡಲಾಗುತ್ತದೆ. ಪೊಲೀಸ್ ಠಾಣೆಗೆ ಹೋಗುವ ಅಗತ್ಯವಿರುವುದಿಲ್ಲ. ಕಳೆದುಹೋದ ಮೊಬೈಲ್'ನಲ್ಲಿ ನಿಮ್ಮ ಸಿಮ್ ಕಾರ್ಡ್ ಬದಲಾಯಿಸಿದ್ದರೂ ಫೋನ್'ನ ಜಿಪಿಆರ್ಎಸ್ ಮೂಲಕ ಮೊಬೈಲನ್ನು ಪತ್ತೆಹಚ್ಚುವ ತಂತ್ರಜ್ಞಾನ ಇದೆ.

ಒಳ್ಳೆಯದಕ್ಕಾಗಿ

-ಶೇರ್ ಮಾಡಿ```

Wednesday 8 February 2017

ಕನ್ನಡದಲ್ಲಿ ಮಕ್ಕಳ ಸಾಹಿತ್ಯ ಕುರಿತು ಪಕ್ಷಿ ನೋಟ

ಕನ್ನಡದಲ್ಲಿ ಮಕ್ಕಳ ಸಾಹಿತ್ಯ ಕುರಿತ ಒಂದು ಪಕ್ಷಿನೋಟ
ಕೃತಿ : ಮಕ್ಕಳ ಸಾಹಿತ್ಯ : ಅಂದು - ಇಂದು
ಲೇಖಕರು : ಟಿ.ಎಸ್. ನಾಗರಾಜ ಶೆಟ್ಟಿ ಮತ್ತು ಎಂ.ಜಿ. ಗೋವಿಂದರಾಜು
ಪ್ರಕಾಶಕರು : ನಿರ್ಮಲ ಪ್ರಕಾಶನ, ಗೋವಿನಪುರ ಬಡಾವಣೆ, ತಿಪಟೂರು
ಪುಟಗಳು : 8 + 48 ಬೆಲೆ : ರೂ. 50-00

ಮಕ್ಕಳ ಸಾಹಿತ್ಯ ನಿರಂತರ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಈ ದಿನಗಳಲ್ಲಿ ಮಕ್ಕಳಿಗಾಗಿ ಬರೆಯುವವರು 'ವೈಯಕ್ತಿಕವಾಗಿ ನಷ್ಟವಾದರೂ ಚಿಂತಿಲ್ಲ ಒಂದಷ್ಟು ಏನಾದರೂ ಮಾಡೋಣ' ಎಂಬ ಹಂಬಲದಿಂದ ಅಲ್ಲಲ್ಲಿ ಕೃತಿ ಪ್ರಕಟಣೆಯನ್ನು ಮಾಡುತ್ತಲೇ ಬಂದಿದ್ದಾರೆ. ಕಥೆ, ಕವನ, ಚುಟುಕ, ನಾಟಕ, ಚಿಣ್ಣರ ಕಥೆಗಳು ಹಾಗೋ ಹೀಗೋ ಖರ್ಚಾಗಬಹುದು. ಮಕ್ಕಳ ಬಗ್ಗೆ ಪ್ರಬಂಧ, ಸಂಶೋಧನಾ ಲೇಖನಗಳು ಪ್ರಕಟವಾಗುವುದು, ಪ್ರಕಟವಾದರೂ ಖgïಗುವುದು ಅನುಮಾನವೇ. ಆದರೂ ಒಳಗಿನ ತುಡಿತ, ಮಕ್ಕಳ ಸಾಹಿತ್ಯದ ದಾಖಲೀಕರಣ ಎಂಬ ಸೇವೆಯನ್ನು ಪ್ರಾಂಜಲವಾಗಿ ಮಾಡುವ ಕೆಲವರು ಅಲ್ಲಲ್ಲಿ ಇದ್ದಾರೆ. ಈ ಸಾಲಿಗೆ ತೀರಾ ಇತ್ತೀಚೆಗೆ ಸೇರ್ಪಡೆಯಾದ ತಿಪಟೂರಿನ ನಿರ್ಮಲ ಪುಸ್ತಕ ಮಾಲೆಯ 26ನೇ ಹೂ 'ಮಕ್ಕಳ ಸಾಹಿತ್ಯ : ಅಂದು - ಇಂದು'. 'ಕನ್ನಡದಲ್ಲಿ ಮಕ್ಕಳ ಸಾಹಿತ್ಯ' ಎಂಬ ಎಂ.ಜಿ. ಗೋವಿಂದರಾಜು ಅವರ ಬಹುಮಾನಿತ ಪ್ರಬಂಧ ಮತ್ತು 'ಕನ್ನಡದಲ್ಲಿ ಮಕ್ಕಳ ಸಾಹಿತ್ಯ : ಇಂದು' (ಸ್ವಾತಂತ್ರ್ಯೋತ್ತರ ಅವಧಿ) ಎಂಬ ಟಿ.ಎಸ್. ನಾಗರಾಜ ಶೆಟ್ಟಿಯವರ ಲೇಖನಗಳನ್ನು ಒಳಗೊಂಡ ಈ ಕೃತಿ ಕನ್ನಡದಲ್ಲಿರುವ ಮಕ್ಕಳ ಸಾಹಿತ್ಯ ಕೃತಿಗಳು, ಕೃತಿಕಾರರು ಮತ್ತು ಪ್ರಕಾಶನಗಳ ಪಕ್ಷಿನೋಟ ನೀಡುವಲ್ಲಿ ಯಶಸ್ವಿಯಾಗಿದೆ.

'ಕನ್ನಡದಲ್ಲಿ ಮಕ್ಕಳ ಸಾಹಿತ್ಯ' ಎಂಬ ಎಂ.ಜಿ. ಗೋವಿಂದರಾಜು ಅವರ ಸುದೀರ್ಘ ಪ್ರಬಂಧ 1977ರಲ್ಲಿ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ ದಿ. ಶೇಷಮ್ಮ ಭಾಸ್ಕರರಾಯರ ದತ್ತಿನಿಧಿ ಪ್ರಬಂಧ ಸ್ಪಧರ್ೆಯಲ್ಲಿ ಪ್ರಥಮ ಬಹುಮಾನ ಗಳಿಸಿತ್ತು. ದುರ್ಗಸಿಂಹನ ಕನ್ನಡ ಪಂಚತಂತ್ರ ಕೃತಿಯಿಂದ ಹಿಡಿದು ಸ್ವಾತಂತ್ರ್ಯ ಪೂರ್ವದ ಪ್ರಮುಖ ಮಕ್ಕಳ ಕೃತಿಗಳ ಕಿರುಚಿತ್ರಣ ನೀಡುವ ಈ ಪ್ರಬಂಧ ಅಂದಿನ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಮಕ್ಕಳಿಗಾಗಿ ದುಡಿದವರ ಪರಿಚಯವನ್ನೂ ಮಾಡಿಕೊಡುತ್ತದೆ. ನವೋದಯ ಪಂಥದ ಅನೇಕ ಹಿರಿಯರು, ಪಂಜೆ ಮಂಗೇಶರಾಯರು, ಕುವೆಂಪು, ಜಿ.ಪಿ. ರಾಜರತ್ನಂ, ಹೊಯಿಸಳ, ದಿನಕರ ದೇಸಾಯಿ ಮೊದಲಾದವರು, ಮಕ್ಕಳಿಗಾಗಿ ಕಥನ ಕವನ, ಪದ್ಯಗಳು, ನಾಟಕ, ಕಥೆಗಳನ್ನು ರಚಿಸಿದ್ದು ಮಕ್ಕಳ ಮೇಲಿನ ಅವರ ಕಳಕಳಿಗೆ ಸಾಕ್ಷಿಯಾಗಿದ್ದರೆ, ಮಕ್ಕಳ ನಾಲಿಗೆಯ ಮೇಲೆ ಅವು ನಲಿದಾಡುತ್ತಿರುವುದು ಅವುಗಳ ಜನಪ್ರಿಯತೆ ತೋರಿಸಿದೆ. 1977ರವರೆಗೆ ಲಭ್ಯವಿದ್ದ ಮಾಹಿತಿಯನ್ನಷ್ಟೇ ಆಧರಿಸಿ ರಚಿಸಿದ ಪ್ರಬಂಧ ಕೇವಲ ಪರಿಚಯಾತ್ಮಕ ನೆಲೆಯಲ್ಲಿ ನಿಲ್ಲುತ್ತದೆ. ಮೂವತ್ತು ವರ್ಷಗಳ ನಂತರ ಪುಸ್ತಕ ರೂಪದಲ್ಲಿ ಬರುವಾಗ ಒಮ್ಮೆ ಪರಿಷ್ಕರಿಸಲ್ಪಡುವ ಅಗತ್ಯವಿತ್ತು. ಕನ್ನಡ ವಿಶ್ವಕೋಶದಲ್ಲಿ ಚೂರು ಇಣುಕಿದ್ದರೂ ಇನ್ನಷ್ಟು ಮಾಹಿತಿ ಸಿಗುತ್ತಿತ್ತು. ಕೇವಲ ದಾಖಲೆಗಾಗಿ ಮಾತ್ರ ಮೂಲ ಪ್ರಬಂಧವನ್ನು ಉಳಿಸಿಕೊಂಡು ಕೊನೆಯಲ್ಲಿ 'ಅಪ್ಡೇಟ್' ಎಂಬ ಪರಿಷ್ಕರಣ ಪುಟ ಸೇರಿಸಿದ್ದರೆ ಇನ್ನಷ್ಟು ಸಮಕಾಲೀನವಾಗುತ್ತಿತ್ತು. ಉತ್ತರ ಕನ್ನಡ, ದಕ್ಷಿಣ ಕನ್ನಡ, ಹೈದರಾಬಾದ್ ಕನ್ನಡ, ಮುಂಬೈ ಕನ್ನಡದ ನೆಲದಲ್ಲಿ ಮಕ್ಕಳ ಸಾಹಿತ್ಯ ಬೇರೆ ಬೇರೆ ಪ್ರಭಾವಗಳಿಗೆ ಒಳಗಾದರೂ ಚೆನ್ನಾಗಿ ಬೆಳೆದು ಹೂ ಬಿಟ್ಟಿತ್ತು ಎನ್ನುವುದನ್ನು ದಾಖಲಿಸಲು ಅಂದಿನ ಮಾಹಿತಿ ಲಭ್ಯತೆಯ ಕೊರತೆ ಕಾರಣವಾಗಿದ್ದಿರಬಹುದು. ಆದರೆ ಮೂವತ್ತು ವರ್ಷಗಳ ನಂತರ ಮಾಹಿತಿ ಬೆರಳುಗಳ ತುದಿಯಲ್ಲಿ ಕುಣಿಯುತ್ತಿರುವಾಗ ಮೂಲಕ್ಕೆ ಒಂದಷ್ಟು ಪೂರಕವೂ ಪೋಷಕವೂ ಆಗುವ ಮಾಹಿತಿಯನ್ನು ಕಲೆಹಾಕುವುದು ಅಗತ್ಯವಾಗಿತ್ತು ಎನಿಸುತ್ತದೆ.

'ಕನ್ನಡದಲ್ಲಿ ಮಕ್ಕಳ ಸಾಹಿತ್ಯ : ಇಂದು' (ಸ್ವಾತಂತ್ರ್ಯೋತ್ತರ ಅವಧಿ) ಎಂಬ ಟಿ.ಎಸ್. ನಾಗರಾಜ ಶೆಟ್ಟಿಯವರ ಲೇಖನ 2007 ರವರೆಗೆ ಲಭ್ಯವಿರುವ ಮಾಹಿತಿಯ ಸಂಗ್ರಹದಂತಿದೆ. ಮಕ್ಕಳ ಸಾಹಿತಿಗಳ ಬೃಹತ್ ಕೋಶ ಸಿದ್ಧಪಡಿಸುತ್ತಿರುವ ನಾಗರಾಜ ಶೆಟ್ಟಿ ಅವರಲ್ಲಿ ನೂರಾರು ಮಕ್ಕಳ ಸಾಹಿತಿಗಳ ಮಾಹಿತಿ ಲಭ್ಯವಿದ್ದರೂ ಬಹುತೇಕ ಕೃತಿಗಳ ಮತ್ತು ಕೃತಿಕಾರರ ಹೆಸರು ಉಲ್ಲೇಖವಾಗಿಲ್ಲ. ಮಕ್ಕಳ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಲ್ಲಿ ತೊಡಗಿರುವ ನೂರಾರು ಲೇಖಕರ ಒಂದಾದರೂ ಕೃತಿಯನ್ನು ಹೆಸರಿಸಬೇಕು ಎಂಬ ಆತುರದಲ್ಲಿ ಸುದೀರ್ಘ ಪಟ್ಟಿಯನ್ನಷ್ಟೇ ನೀಡಿದಂತಿದೆ. ವಿಮಶರ್ಾತ್ಮಕ ದೃಷ್ಟಿಕೋನದಿಂದ ಸಮಕಾಲೀನ ಮಕ್ಕಳ ಸಾಹಿತ್ಯ ಕೃತಿಗಳನ್ನು ಅವಲೋಕಿಸಿರುವ ಎನ್.ಎಸ್. ರಘುನಾಥ್, ಆನಂದ ಪಾಟೀಲರ ಹೇಳಿಕೆಗಳನ್ನು ಬಿಟ್ಟರೆ ತುಲನಾತ್ಮಕವಾಗಿ ಏನನ್ನೂ ಹೇಳಿಲ್ಲ.

'ಮಕ್ಕಳಿಗಾಗಿ ಮಾಹಿತಿ ಸಾಹಿತ್ಯ', 'ಸಾಹಸ ಸಾಹಿತ್ಯ' ಎಂಬ ವಿಶಿಷ್ಟ ಪ್ರಕಾರಗಳ ಜೊತೆ ಚಟುವಟಿಕೆಗಳಿಂದ ಕೂಡಿದ 'ಮಕ್ಕಳ ಶೈಕ್ಷಣಿಕ ಹಾಗೂ ವಿಜ್ಞಾನ ಸಾಹಿತ್ಯ' ಸಮೃದ್ಧವಾಗಿ ಬೆಳೆದಿದೆ. ಮಕ್ಕಳ ಪತ್ರಿಕೆಗಳಲ್ಲಿ ಮತ್ತು ಪ್ರಕಾಶನಗಳಲ್ಲಿ ಮಕ್ಕಳಿಗಾಗಿಯೇ ಹೊಸ ಚಟುವಟಿಕೆ ಆಧರಿತ ಪುಟಾಣಿ ಪುಸ್ತಕಗಳ ರಾಶಿಯೇ ಬಿದ್ದಿದೆ. ಅಂತರಜಾಲದಲ್ಲಿ 'ಪುಟಾಣಿಗಳ ಇ-ಪತ್ರಿಕೆಗಳು, ಶಾಲಾ ಗೋಡೆ ಪತ್ರಿಕೆ'ಗಳು, ಪ್ರಮುಖ ಪತ್ರಿಕೆಗಳ ಮಕ್ಕಳ ಪುರವಣಿಗಳು ಮಕ್ಕಳ ಸಾಹಿತ್ಯಕ್ಕೆ, ಮಕ್ಕಳೇ ರಚಿಸಿದ ಸಾಹಿತ್ಯಕ್ಕೆ ನೀಡಿರುವ ಕೊಡುಗೆಗಳು, ಚಿಲಿಪಿಲಿ ಪ್ರಕಾಶನ ಮತ್ತು 'ಸಂಧ್ಯಾ' ಮಕ್ಕಳ ಪತ್ರಿಕೆ ಕೊಡಮಾಡುತ್ತಿರುವ ಮಕ್ಕಳ ಪ್ರಶಸ್ತಿಗಳ ವಿವರಗಳು ಇಲ್ಲದೆ ಈ ಕೃತಿ ಸೊರಗಿದೆ. ದೆಹಲಿಯ ರತನ್ ಟಾಟಾ ಫೌಂಡೇಶನ್ ನವರು ಕನ್ನಡದಲ್ಲಿ ಮಕ್ಕಳ ಸಾಹಿತ್ಯ ಕುರಿತಂತೆ ಸಮಗ್ರವಾದ ಅಧ್ಯಯನವೊಂದನ್ನು ಕೈಗೆತ್ತಿಕೊಂಡಿದ್ದು ಇದುವರೆಗೆ ಲಭ್ಯವಿರುವ ಎಲ್ಲ ಮಾಹಿತಿ ಅದರಲ್ಲಿ ಅಡಕಗೊಳ್ಳಲಿದೆ. ಅಲ್ಲಿಯವರೆಗೆ ಮಾರುಕಟ್ಟೆಯಲ್ಲಿ ಸಿಗುತ್ತಿರುವ ಕೊರತೆಗಳಿಂದ ಕೂಡಿರುವ ಕೃತಿಗಳನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಕನ್ನಡ ಮಕ್ಕಳ ಸಾಹಿತ್ಯದ ಪಾಲಿಗಿದೆ!
ಸಂಗ್ರಹ..
Raviraj sagar

Friday 13 January 2017

ಸೋತವರ ಗೆಲ್ಲಿಸಿ

ಸೋತವರ ಗೆಲ್ಲಿಸಿ ಗೆಲ್ಲಿರಿ
ಅದು ನೈಜ ಮಾನವೀಯತೆಯ ಗೆಲುವು;
ಕತ್ತಲೆಗೆ ಬೆಳಕಾಗಿ ನಡೆಯಿರಿ
ಬೆಳಕಿದ್ದೆಡೆ ನಡೆದರೆನು ವಿಶೇಷವಲ್ಲ.
ರವಿರಾಜ ಮಾರ್ಗ.

Saturday 7 January 2017

2016 ರಲ್ಲಿ ನೀವು ನೆನಪಿಡಲೇಬೇಕಾದ ಘಟನೆಗಳು

*2016 ಮೆಲುಕು: ಸದ್ದು ಮಾಡಿದ ಸುದ್ದಿಗಳು*

ಏಳು ಬೀಳುಗಳಿಂದ ಕೂಡಿದ 2016 ವರ್ಷ ಮುಗಿಯಲು ಇನ್ನೇನು ಕೆಲವೇ ಗಂಟೆಗಳು ಬಾಕಿ ಇವೆ. ವರ್ಷಾರಂಭದಲ್ಲೇ ಪಠಾಣ್ ಕೋಟ್ ವಾಯುನೆಲೆ ಮೇಲೆ ನಡೆದ ಉಗ್ರರ ದಾಳಿ ದೇಶವನ್ನೇ ನಡುಗಿಸಿ ಬಿಟ್ಟಿತ್ತು. ವಿಜ್ಞಾನ- ತಂತ್ರಜ್ಞಾನ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಭಾರತ ಮಿಂಚಿದಾಗ, ನವೆಂಬರ್ ತಿಂಗಳು ನೋಟು ಸಮಸ್ಯೆಯನ್ನೆದುರಿಸಬೇಕಾದ ಪರಿಸ್ಥಿತಿ ದೇಶದ ಜನರದ್ದಾಗಿತ್ತು
.
*2016ರಲ್ಲಿ ಸದ್ದು ಮಾಡಿದ ಸುದ್ದಿಗಳ ಪಟ್ಟಿ ಇಲ್ಲಿದೆ.*

*ಜನವರಿ*
* ಜನವರಿ 2 - ಪಠಾಣ್ ಕೋಟ್ ವಾಯು ನೆಲೆ ಮೇಲೆ ಉಗ್ರರ ದಾಳಿ
* ಇಸ್ರೋ ದಿಂದ ಐಆರ್ಎನ್ಎಸ್ಎಸ್-1ಇ ಉಪಗ್ರಹ ಯಶಸ್ವಿ ಉಡಾವಣೆ
* ಅಂತರ ಶಾಲಾ ಕ್ರಿಕೆಟ್ ಟೂರ್ನಿಯಲ್ಲಿ 1000 ರನ್ ಗಳಿಸಿ ಪ್ರಣವ್ ಧನಾವಡೆ ವಿಶ್ವ ದಾಖಲೆ

*ಫೆಬ್ರವರಿ*
* ನಿಜವಾಯಿತು ಐನ್ಸ್ಟೀನ್ ಭವಿಷ್ಯ ನುಡಿ; ಪತ್ತೆಯಾಯಿತು ಗುರುತ್ವಾಕರ್ಷಣ ಅಲೆ
* ರಸೂಲ್ ಪೂಕುಟ್ಟಿಗೆ ಗೋಲ್ಡನ್ ರೀಲ್ ಪ್ರಶಸ್ತಿ
* ಸಿಯಾಚಿನ್ ಹಿಮಪಾತದಲ್ಲಿ ಸಿಲುಕಿ ಹುತಾತ್ಮರಾದ ಯೋಧ ಹನುಮಂತಪ್ಪ ಕೊಪ್ಪದ್

*ಮಾರ್ಚ್*
* ಉದ್ದೀಪನ ಮದ್ದು ಸೇವನೆ ಆರೋಪದಲ್ಲಿ ಟೆನ್ನಿಸ್ ತಾರೆ ಮರಿಯಾ ಶರಪೋವಾಗೆ ನಿಷೇಧ
* ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಬಾಹುಬಲಿ ಅತ್ಯುತ್ತಮ ಚಿತ್ರ
* ಮಲಯಾಳಂ ನಟ ಕಲಾಭವನ ಮಣಿ ನಿಧನ

*ಏಪ್ರಿಲ್*
* ದೇಶದ ಅತಿ ವೇಗದ ರೈಲು ''ಗತಿಮಾನ್ ಎಕ್ಸ್ಪ್ರೆಸ್'ಗೆ ಚಾಲನೆ
* ಮಹಿಳೆಯರಿಂದ ಶನಿ ಶಿಂಗ್ಣಾಪುರ ದೇಗುಲ ಪ್ರವೇಶ
ಇಕ್ವಿಡಾರ್ನಲ್ಲಿ ಭೂಕಂಪ: 500ಕ್ಕೂ ಹೆಚ್ಚು ಮಂದಿ ಸಾವು

*ಮೇ*
* ಹೈದರಾಬಾದ್ನ ಹುಸೇನ್ ಸಾಗರ್ ಸರೋವರ ಬಳಿ ದೇಶದ ಅತಿದೊಡ್ಡ ತ್ರಿವರ್ಣ ಧ್ವಜಾರೋಹಣ
* ಮೇ -7 ಆಯಪಲ್ ಕಂಪನಿಯ ಇಂಡಿಯಾ ಸಿಇಒ ಸಂಜಯ್ ಕೌಲ್ ನೇಮಕ
* ಮೇ 10 - ಉತ್ತರಾಖಂಡ್ ನಲ್ಲಿ ಹರೀಶ್ ರಾವುತರ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ
* ಮೇ 16- ಕೇರಳದಲ್ಲಿ ಎಲ್ ಡಿ ಎಫ್ ಸರ್ಕಾರ ಅಧಿಕಾರಕ್ಕೆ
* ಮೇ 23 ಶ್ರೀಹರಿಕೋಟಾದಲ್ಲಿ ಆರ್ ಎಲ್ ವಿ ( ರೀಯೂಸೆಬಲ್ ಲಾಂಚ್ ವೆಹಿಕಲ್ )ಟೆಕ್ನಾಲಜಿ ಡೆಮಾನ್ ಸ್ಟ್ರೇಟರ್ ಯಶಸ್ವೀ ಪರೀಕ್ಷೆ
* ಮೇ 29- ಅತೀ ವೇಗದ ರೈಲು ಟಾಲ್ಗೋ ಯಶಸ್ವಿ ಪರೀಕ್ಷೆ
* ಹೈದರಾಬಾದ್ನ ಹುಸೇನ್ ಸಾಗರ್ ಸರೋವರ ಬಳಿ ದೇಶದ ಅತಿದೊಡ್ಡ ತ್ರಿವರ್ಣ ಧ್ವಜಾರೋಹಣ
* ಮೇ 29- ಅತೀ ವೇಗದ ರೈಲು ಟಾಲ್ಗೋ ಯಶಸ್ವಿ ಪರೀಕ್ಷೆ

*ಜೂನ್*
* ಜೂನ್ 5- ಫ್ರೆಂಚ್ ಓಪನ್ ಟೆನಿಸ್ ಕಿರೀಟ ಗೆದ್ದ ನೋವಾಕ್ ಜೊಕೊವಿಕ್
* ಸೈನಾ ನೆಹ್ವಾಲ್ ಮುಡಿಗೆ ಆಸ್ಟ್ರೇಲಿಯನ್ ಬ್ಯಾಡ್ಮಿಂಟನ್ ಕಿರೀಟ
* ಮೈಕ್ರೋಸಾಫ್ಟ್ ನಿಂದ ಲಿಂಕ್ಡ್ ಇನ್ ಖರೀದಿ- ₹1,75000 ಕೋಟಿಗೆ ಖರೀದಿ
* ಮೋಹನ ಸಿಂಗ್, ಅವನಿ ಚೌಧರಿ, ಭಾವನಾ ಕಾಂತ್ - ಯುದ್ಧ ವಿಮಾನ ಪೈಲೆಟ್ ಗಳಾದ ಮಹಿಳೆಯರು
* ಜೂನ್ 22 ಏಕಕಾಲಕ್ಕೆ 20 ಉಪಗ್ರಹಗಳ ಉಡ್ಡಯನ
* ಬ್ರೆಕ್ಸಿಟ್ -ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಕ್ಕೆ
* ಭಾರತಕ್ಕೆ ದಕ್ಕದ ಎನ್ಎಸ್ಜಿ ಸದಸ್ಯತ್ವ
* ಕೋಪಾ ಅಮೆರಿಕಾ ಫುಟ್ಬಾಲ್ ಫೈನಲ್ ನಲ್ಲಿ ಅರ್ಜೆಂಟಿನಾ ವಿರುದ್ಧ ಗೆದ್ದ ಚಿಲಿ
* ಮಿಸೈಲ್ ಟೆಕ್ನಾಲಜಿ ಕಂಟ್ರೋಲ್ ರೆಜಿಮ್ (ಎಂಟಿಸಿಆರ್ ) ನಲ್ಲಿ ಸದಸ್ಯತ್ವ ಪಡೆದ ಭಾರತ
* ಜೂನ್ 29 -ನೌಕಾ ಸೇನೆಗೆ ವರುಣಾಸ್ತ್ರ ಸೇರ್ಪಡೆ
* ಜೂನ್ 30 - ಸಲಿಂಗಕಾಮಿಗಳು ಟ್ರಾನ್ಸ್ ಜೆಂಡರ್ ಗಳೆಂದು ಪರಿಗಣಿಸಲ್ಪಡುವುದಿಲ್ಲ - ಸುಪ್ರೀಂ ಕೋರ್ಟ್
* ಜೂನ್ 4- ಬಾಕ್ಸಿಂಗ್ ದಂತ ಕತೆ ಮುಹಮ್ಮದ್ ಅಲಿ ನಿಧನ

*ಜುಲೈ*
* ಸ್ವದೇಶಿ ನಿರ್ಮಿತ ಯುದ್ಧ ವಿಮಾನ ತೇಜಸ್ ವಾಯುಪಡೆದೆ ಸೇರ್ಪಡೆ
* ಗುರು ಗ್ರಹದ ಕಕ್ಷೆಗೆ ಸೇರಿದ ಜೂನೋ ಗಗನ ನೌಕೆ
* ಜುಲೈ 8- ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವಾನಿ ಹತ್ಯೆ
* ಜುಲೈ 10 - ಫ್ರಾನ್ಸ್ ಪರಾಭವಗೊಳಿಸಿದ ಪೋರ್ಚುಗಲ್ಗೆ ಯೂರೋ ಕಪ್
* ಏಷ್ಯಾ ಫೆಸಿಪಿಕ್ ಸೂಪರ್ ಮಿಡಲ್​ವೇಟ್ ಪ್ರಶಸ್ತಿ ಗೆದ್ದ ಬಾಕ್ಸರ್ ವಿಜೇಂದರ್ ಸಿಂಗ್
* ತೆರೆಸಾ ಮೇ ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ
* ಟರ್ಕಿ ಸೇನಾ ದಂಗೆ: 200ಕ್ಕಿಂತಲೂ ಹೆಚ್ಚು ಸಾವು- ಸೇನೆ ಕೈಯಿಂದ ಅಧಿಕಾರ ಮರಳಿ ಪಡೆದು ದೇಶದ ಆಡಳಿತದ ಮೇಲೆ ಮತ್ತೆ ನಿಯಂತ್ರಣ
* ಸೇನಾಪಡೆ ಅಧಿಕಾರಿಗಳು ಸೇರಿದಂತೆ 29 ಮಂದಿ ಪ್ರಯಾಣಿಸುತ್ತಿದ್ದ ವಾಯುಸೇನೆಯ ವಿಮಾನ ನಾಪತ್ತೆ
* ಕರ್ನಾಟಕದ ಮಾನವ ಹಕ್ಕು ಹೋರಾಟಗಾರ ಬೆಜವಾಡ ವಿಲ್ಸನ್, ದಕ್ಷಿಣ ಭಾರತೀಯ ಶಾಸ್ತ್ರೀಯ ಸಂಗೀತ ವಿದ್ವಾಂಸ ಚೆನ್ನೈನ ಟಿ.ಎಂ ಕೃಷ್ಣ ಅವರಿಗೆ ಮ್ಯಾಗ್ಸೆಸ್ಸೆ ಪ್ರಶಸ್ತಿ

*ಅಗಸ್ಟ್*
* ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಆನಂದಿ ಬೆನ್
* ನೇಪಾಳದ ನೂತನ ಪ್ರಧಾನಿಯಾಗಿ ಪುಷ್ಪಕಮಲ್ ದಹಲ್ (ಪ್ರಚಂಡ) ಆಯ್ಕೆ
* ಅಗಸ್ಟ್ 7- ವಿಜಯ್ ರೂಪಾಣಿ ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ
* 16 ವರ್ಷಗಳ ದೀರ್ಘ ಉಪವಾಸ ಅಂತ್ಯಗೊಳಿಸಿದ ಇರೋಮ್ ಚಾನು ಶರ್ಮಿಳಾ
* ಐತಿಹಾಸಿಕ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಮಸೂದೆ ಪಾಸ್
* ಹವಿಲ್ದಾರ್ ಹಂಗ್ಪನ್ ದಾದಾಗೆ ಅಶೋಕ ಚಕ್ರ
* ಲೆ.ಕರ್ನಲ್ ಇ.ಕೆ.
ನಿರಂಜನ್ ಅವರಿಗೆ ಶೌರ್ಯ ಚಕ್ರ
* ಚೀನಾದಲ್ಲಿ ಅತೀ ದೊಡ್ಡ ಗಾಜಿನ ಸೇತುವೆ ಅನಾವರಣ
* ರಿಯೊ ಒಲಿಂಪಿಕ್ಸ್ : ಬ್ಯಾಡ್ಮಿಂಟನ್ (ಮಹಿಳಾ ವಿಭಾಗ)ದಲ್ಲಿ ಪಿವಿ ಸಿಂಧುವಿಗೆ ಬೆಳ್ಳಿ ಪದಕ
* ಮಹಿಳಾ ಕುಸ್ತಿ ವಿಭಾಗದಲ್ಲಿ ಸಾಕ್ಷಿ ಮಲಿಕ್ಗೆ ಕಂಚಿನ ಪದಕ
* ಮಹಿಳಾ ಜಿಮ್ನಾಸ್ಟಿಕ್ಸ್ನಲ್ಲಿ ದೀಪಾ ಕರ್ಮಾಕರ್ಗೆ ನಾಲ್ಕನೇ ಸ್ಥಾನ
* ಅಗಸ್ಟ್ 24 -ಇಟೆಲಿಯಲ್ಲಿ ಭೂಕಂಪ ; 250ಕ್ಕಿಂತಲೂ ಹೆಚ್ಚು ಸಾವು
* ಅಗಸ್ಟ್ 28 - ಶೀಲಂಕಾ ಕ್ರಿಕೆಟಿಗ ತಿಲಕೇರತ್ನ ದಿಲ್ಶಾನ್ ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ

*ಸಪ್ಟೆಂಬರ್*
* ಮದರ್ ತೆರೆಸಾಗೆ ಸಂತ ಪದವಿ
* ಶೂಟರ್ ಅಭಿನವ್ ಬಿಂದ್ರಾ ವಿದಾಯ
* ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ಅಧಿಕಾರವಾಧಿ ಅಂತ್ಯ
* ಸೆಪ್ಟೆಂಬರ್ 5- ಭಾರತೀಯ ರಿಸರ್ವ್ ಬ್ಯಾಂಕ್ ನೂತನ ಗವರ್ನರ್ ಆಗಿ ಉರ್ಜಿತ್ ಪಟೇಲ್ ಅಧಿಕಾರ ಸ್ವೀಕಾರ
* ಕಕ್ಷೆ ಸೇರಿದ ಇನ್ಸ್ಯಾಟ್ 3 ಡಿ ಆರ್
* ಮಸ್ವಿಜರ್ಲೆಂಡ್ನ ಸ್ಟಾನಿಸ್ಲಾಸ್ ವಾವರಿಂಕಾ ಮುಡಿಗೆ ಯುಎಸ್ ಓಪನ್ ಕಿರೀಟ
* ಯುಎಸ್ ಓಪನ್ ಮಹಿಳಾ ಟೆನಿಸ್ ಕಿರೀಟ ಗೆದ್ದ ಜರ್ಮನಿಯ ಆಯಂಜಲಿಕ್ ಕೆರ್ಬರ್
* ಗ್ರ್ಯಾಂಡ್ ಸ್ಲಾಮ್ ಇತಿಹಾಸದಲ್ಲಿ ಅತೀ ಹೆಚ್ಚು ಪಂದ್ಯ (308) ಗೆದ್ದ ದಾಖಲೆ ತನ್ನದಾಗಿಸಿಕೊಂಡ ಸೆರೀನಾ ವಿಲಿಯಮ್ಸ್
* ರಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಮರಿಯಪ್ಪನ್ ತಂಗವೇಲು (ಹೈಜಂಪ್), ವರುಣ್ ಸಿಂಗ್ ಭಾಟಿಗೆ ಕಂಚು
* ಜ್ಯಾವೆಲಿನ್ ಥ್ರೋ ವಿಭಾಗದಲ್ಲಿ ದೇವೇಂದ್ರ ಜಜಾರಿಯಾಗೆ ಚಿನ್ನ
* ಶಾಟ್ಪುಟ್ ಮಹಿಳಾ ವಿಭಾಗದಲ್ಲಿ ದೀಪಾ ಮಲಿಕ್ಗೆ ಬೆಳ್ಳಿ
* ಸಪ್ಟೆಂಬರ್ 18- ಉರಿ ಸೇನಾ ಶಿಬಿರದ ಮೇಲೆ ಉಗ್ರರ ದಾಳಿ: 19 ಸೈನಿಕರು ಹುತಾತ್ಮ
* ನವದೆಹಲಿಯಲ್ಲಿರುವ ಪ್ರಧಾನಿ ಅಧಿಕೃತ ನಿವಾಸವಿರುವ ರೇಸ್ ಕೋರ್ಸ್ ರಸ್ತೆಯ ಹೆಸರು ಕಲ್ಯಾಣ್ ಮಾರ್ಗ್ ಎಂದು ಬದಲಾವಣೆ
* ಅನ್ಯಗ್ರಹ ಜೀವಿಗಳನ್ನು ಪತ್ತೆ ಹಚ್ಚಲಿರುವ ಅತೀ ದೊಡ್ಡ ದೂರದರ್ಶಕ ಚೀನಾದಲ್ಲಿ ಕಾರ್ಯಾರಂಭ
* ಸೆಪ್ಟೆಂಬರ್ 23ರಿಂದ 27ರವರೆಗೆ ನಡೆದ ಭಾರತದ 500ನೇ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತಕ್ಕೆ ಐತಿಹಾಸಿಕ ಗೆಲವು
* ಸಪ್ಟೆಂಬರ್ 29 - ಪಾಕ್ ಆಕ್ರಮಿತ ಕಾಶ್ಮೀರದ ಉಗ್ರ ನೆಲೆಗಳ ಮೇಲೆ ಭಾರತದ ಸೇನೆಯಿಂದ ನಿರ್ದಿಷ್ಟ ದಾಳಿ

*ಅಕ್ಟೋಬರ್*
* ಪ್ಯಾರಿಸ್ ಹವಾಮಾನ ಒಪ್ಪಂದ ಸೇರಿದ ಭಾರತ
* ಅಮೆರಿಕದ ಹೈಟಿ ರಾಜ್ಯಕ್ಕೆ ಅಪ್ಪಳಿಸಿದ ಮ್ಯಾಥ್ಯೂ ಚಂಡಮಾರುತ
* ಕಕ್ಷೆ ಸೇರಿದ ಜಿಸ್ಯಾಟ್ 18
* ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಸಾರ್ಕ್ ಶೃಂಗಸಭೆ ರದ್ದು
*ಭಾರತದ ಶೂಟರ್ ಜಿತು ರಾಯ್ ಚಾಂಪಿಯನ್ಸ್ ಆಫ್ ಚಾಂಪಿಯನ್ಸ್ ಪಟ್ಟ
* ಅಕ್ಟೋಬರ್ 15, 16ರಂದು 8ನೇ ಬ್ರಿಕ್ಸ್ ಶೃಂಗಸಭೆ ಗೋವಾದಲ್ಲಿ ನಡೆಯಿತು
*ಕೊಲಂಬಿಯಾದ ಅಧ್ಯಕ್ಷ ಜಾನ್ ಮ್ಯಾನುವೆಲ್ ಸ್ಯಾಂಟೋಸ್ ಅವರು 2016ನೇ ಸಾಲಿನ ನೊಬೆಲ್ ಶಾಂತಿ ಪುರಸ್ಕಾರ
*ಅಮೆರಿಕದ ಲೇಖಕ, ಹಾಡುಗಾರ, ಗೀತ ರಚನೆಕಾರ ಬಾಬ್ ಡೈಲನ್ 2016ನೇ ಸಾಲಿನ ಸಾಹಿತ್ಯ ನೊಬೆಲ್
*ಡೇವಿಡ್ ಜೆ. ಥೌಲೆಸ್, ಎಫ್.ಡಂಕನ್ ಎಂ.ಹಲ್ಡೇನ್, ಜೆ.ಮೈಕೆಲ್ ಕೋಸ್ಟೆರ್ಲಿಟ್ಸ್ - 2016ನೇ ಸಾಲಿನ ಭೌತಶಾಸ್ತ್ರ ನೊಬೆಲ್
*ಜಪಾನಿನ ಯೋಶಿನೋರಿ ಒಸೂಮಿ - ವೈದ್ಯಕೀಯ ವಿಭಾಗದ ನೊಬೆಲ್ ಪ್ರಶಸ್ತಿ
*ಫ್ರಾನ್ಸ್ ನ ಜೀನ್ ಪಿಯರ್ ಸಾವೇಜ್, ಅಮೆರಿಕದ ಫ್ರೇಸರ್ ಸ್ಟೋಡರ್ಟ್, ನೆದರ್ ಲ್ಯಾಂಡ್ನ ಬರ್ನಾರ್ಡ್ ಫೆರಿಂಗ - ರಸಾಯನ ಶಾಸ್ತ್ರದ ನೊಬೆಲ್
*ಅಮೆರಿಕದ ಅರ್ಥಶಾಸ್ತ್ರಜ್ಞ ಆಲಿವರ್ ಹಾರ್ಟ್ ಮತ್ತು ಫಿನ್ಲೆಂಡ್ನ ಬೆಂಗ್ಟ್ ಹೋಲ್ಮಸ್ಟ್ರಾಮ್ - ಅರ್ಥಶಾಸ್ತ್ರ ನೊಬೆಲ್
* ಅಕ್ಟೋಬರ್ 17- ನೌಕಾಪಡೆಗೆ 'ಅರಿಹಂತ್' ಸೇರ್ಪಡೆ
* 'ಪ್ರಜಾ'ಎಂಬ ಹೊಸ ಪಕ್ಷ ಹುಟ್ಟುಹಾಕಿದ ಮಣಿಪುರದ ಐರನ್ ಲೇಡಿ ಇರೋಮ್ ಶರ್ಮಿಳಾ
* ಐಎನ್ಎಸ್ ತಿಹಾಯು ನೌಕಾಪಡೆಗೆ ಸೇರ್ಪಡೆ
* ಕಬಡ್ಡಿ ವಿಶ್ವಕಪ್ನಲ್ಲಿ ಭಾರತಕ್ಕೆ ಹ್ಯಾಟ್ರಿಕ್ ಕಿರೀಟ
* ಟಾಟಾ ಸನ್ಸ್ ಸಮೂಹ ಸಂಸ್ಥೆಯ ಅಧ್ಯಕ್ಷ ಸ್ಥಾನದಿಂದ ಸೈರಸ್ ಮಿಸ್ತ್ರಿಗೆ ಕೊಕ್
* ಅಮೆರಿಕದ ಖ್ಯಾತ ಸಾಹಿತಿ ಪಾಲ್ ಬೇಟ್ಟಿ ಅವರಿಗೆ ಮ್ಯಾನ್ ಬೂಕರ್ ಪ್ರಶಸ್ತಿ
* ಏಷ್ಯನ್ ಚಾಂಪಿಯನ್ಸ್ ಹಾಕಿ ಟ್ರೋಫಿ ಗೆದ್ದ ಭಾರತ

*ನವೆಂಬರ್*
* ನವೆಂಬರ್ 5- ಮೊದಲ ಬಾರಿ ವನಿತಾ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ
* 100 ಕೋಟಿ ಕ್ಲಬ್ ಗೆ ಪುಲಿಮುರುಗನ್ - ₹100 ಕೋಟಿ ಕ್ಲಬ್ ಸೇರಿದ ಮೊದಲ ಮಲಯಾಳಂ ಚಿತ್ರ ಎಂಬ ಹೆಗ್ಗಳಿಕೆ
* ನವೆಂಬರ್ 8- ₹500 ಮತ್ತು ₹1000 ಮುಖಬೆಲೆಯ ನೋಟುಗಳು ರದ್ದು
* ನವೆಂಬರ್ 8 - ಅಮೆರಿಕ ಅಧ್ಯ ಕ್ಷರಾಗಿ ರಿಪಬ್ಲಿಕ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಆಯ್ಕೆ
* ನವೆಂಬರ್ 9 - ಭಾರತ- ಜಪಾನ್ ಅಣು ಒಪ್ಪಂದಕ್ಕೆ ಸಹಿ
* ನವೆಂಬರ್ 20 - ಉತ್ತರ ಪ್ರದೇಶದಲ್ಲಿ ರೈಲು ಅವಘಡ; 150ಕ್ಕಿಂತಲೂ ಹೆಚ್ಚು ಮಂದಿ ಸಾವು
* ನವೆಂಬರ್ 20 - ಚೀನಾ ಸೂಪರ್ ಸೀರಿಸ್ ಕಿರೀಟ ಗೆದ್ದ ಪಿವಿ ಸಿಂಧು
* ನವೆಂಬರ್ 21- ಐಎನ್ಎಲ್ ಚೆನ್ನೈ ಯುದ್ಧನೌಕೆ ನೌಕಾ ಸೇನೆಗೆ ಸೇರ್ಪಡೆ
*ರಣಜಿ ಕ್ರಿಕೆಟ್ ಪಂದ್ಯದಲ್ಲಿ ದೆಹಲಿಯ ರಿಷಬ್ ಪಂತ್ ಅತಿ ವೇಗದ ಶತಕ ದಾಖಲೆ (48 ಎಸೆತಗಳಲ್ಲಿ 100 ರನ್)ನಿಧನ
* ಖ್ಯಾತ ಶಾಸ್ತ್ರೀಯ ಸಂಗೀತ ಗಾಯಕ ಡಾ ಎಂ ಬಾಲ ಮುರಳಿ ಕೃಷ್ಣ ವಿಧಿವಶ

*ಡಿಸೆಂಬರ್*
* ಉಸೇನ್ ಬೋಲ್ಟ್ ಅವರಿಗೆ ಅಂತರ ರಾಷ್ಟ್ರೀಯ ಅಥ್ಲೆಟಿಕ್ ಫೆಡರೇಷನ್ ನೀಡುವ ಶ್ರೇಷ್ಠ ಕ್ರೀಡಾಪಟು ಪುರಸ್ಕಾರ
* ವಿಶ್ವ ಚೆಸ್ ಚಾಂಪಿಯನ್ಶಿಪ್ ನಲ್ಲಿ ಮಾಗ್ನಸ್ ಕಾರ್ಲ್ಸನ್ ಗೆಲುವು
* ಡಿಸೆಂಬರ್ 6- ತಮಿಳುನಾಡು ಮುಖ್ಯಮಂತ್ರಿಯಾಗಿ ಪನ್ನೀರ್ ಸೆಲ್ವಂ ಪ್ರಮಾಣ ವಚನ
* ರಿಸೋರ್ಸ್ಸ್ಟಾಟ್ 2ಎ ಉಪಗ್ರಹ ಯಶಸ್ವಿ ಉಡಾವಣೆ
* ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೈಮ್ ನಿಯತಕಾಲಿಕದ ವರ್ಷದ ವ್ಯಕ್ತಿಯಾಗಿ ಆಯ್ಕೆ
*ತಮಿಳುನಾಡು- ಆಂಧ್ರ ಪ್ರದೇಶ ಕರಾವಳಿಗೆ ಅಪ್ಪಳಿಸಿದ ವಾರ್ದಾ ಚಂಡ ಮಾರುತ
* ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳಲ್ಲಿ ಮದ್ಯದ ಅಂಗಡಿಗಳಿಗೆ ನಿಷೇಧ ವಿಧಿಸಿದ ಸುಪ್ರೀಂಕೋರ್ಟ್
* ಇಂಡಿಯನ್ ಸೂಪರ್ ಲೀಗ್ ಪಂದ್ಯಾವಳಿಯಲ್ಲಿ ಅಟ್ಲೆಟಿಕೊ ಡಿ ಕೋಲ್ಕತ್ತ ಚಾಂಪಿಯನ್
* ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್ನಲ್ಲಿ ಕರುಣ್ ನಾಯರ್ ಗೆ ತ್ರಿಶತಕ ದಾಖಲೆ
* ಬೌಲರ್ ಆರ್.ಅಶ್ವಿನ್ಗೆ ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿ
ನಿಧನ
* ಡಿಸೆಂಬರ್ 5- ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ನಿಧನ
* ಡಿಸೆಂಬರ್ 7- ಪತ್ರಕರ್ತ, ರಾಜಕೀಯ ವಿಶ್ಲೇಷಕ, ನಾಟಕ, ಸಿನಿಮಾ ಕಲಾವಿದ ಚೋ ರಾಮಸ್ವಾಮಿ ನಿಧನ

Friday 16 December 2016

ವಿವಿಧ ವಿಷಯಗಳ 100 ಪ್ರಮುಖ ಪಿತಾಮಹರು

✌ಪ್ರಮುಖ100 ಪಿತಾಮಹರುಗಳು✌

1)ವಿಜ್ಞಾನದ ಪಿತಾಮಹ��ರೋಜರ್ ಬೇಕನ್
2)ಜೀವ ಶಾಸ್ತ್ರದ ಪಿತಾಮಹ��ಅರಿಸ್ಟಾಟಲ್
3)ಸೈಟಾಲಾಜಿಯ ಪಿತಾಮಹ��ರಾಬರ್ಟ್ ಹುಕ್
4)ರಸಾಯನಿಕ ಶಾಸ್ತ್ರದ ಪಿತಾಮಹ��ಆಂಟೋನಿ ಲೇವಸಿಯರ್
5)ಸಸ್ಯ ಶಾಸ್ತ್ರದ ಪಿತಾಮಹ��ಜಗದೀಶ್ ಚಂದ್ರಬೋಸ್
6)ಭೂಗೋಳ ಶಾಸ್ತ್ರದ ಪಿತಾಮಹ��ಎರಟೋಸ್ತನೀಸ್
7)ಪಕ್ಷಿ ಶಾಸ್ತ್ರದ ಪಿತಾಮಹ��ಸಲೀಂ ಆಲಿ
8)ಓಲಂಪಿಕ್ ಪದ್ಯಗಳ ಪಿತಾಮಹ��ಪಿಯರನ್ ದಿ ಕೊಬರ್ಲೆನ್
9)ಅಂಗ ರಚನಾ ಶಾಸ್ತ್ರದ ಪಿತಾಮಹ��ಸುಶ್ರುತ
10)ಬೀಜಗಣಿತದ ಪಿತಾಮಹ��ರಾಮಾನುಜಂ
11)ಜನಸಂಖ್ಯಾ ಶಾಸ್ತ್ರದ ಪಿತಾಮಹ��ಟಿ.ಆರ್.ಮಾಲ್ಥಸ್
12)ಭಾರತೀಯ ಸೈನ್ಯದ ಪೂಜ್ಯ ಪಿತಾಮಹ ��ಸ್ಟ್ರೇಂಜರ್ ಲಾರೇನ್ಸ್
13)ಜೈವಿಕ ಸಿದ್ಧಾಂತದ ಪಿತಾಮಹ��ಚಾರ್ಲ್ಸ್ ಡಾರ್ಮಿನ್
14)ಭಾರತದ ಪತ್ರಿಕೋದ್ಯಮದ ರಂಗದ ಪಿತಾಮಹ ��ಆಗಸ್ಟ್ ಹಿಕ್ಕಿಸ್
15)ಆಧುನಿಕ ವರ್ಗೀಕರಣ ಶಾಸ್ತ್ರದ ಪಿತಾಮಹ��ಕರೋಲಸ್ ಲಿನಿಯಸ್
16)ಭಾರತೀಯ ಸಾರ್ವಜನಿಕ ಸೇವೆಯ ಪಿತಾಮಹ��ಕಾರ್ನ್ ವಾಲೀಸ್
17)ಮನೋವಿಶ್ಲೇಷಣಾ ಪಂಥ ಪಿತಾಮಹ��ಸಿಗ್ಮಂಡ್ ಫ್ರಾಯ್ಢ್
18)ಮೋಬೆಲ್ ಫೋನ್ ನ ಪಿತಾಮಹ ��ಮಾರ್ಟಿನ್ ಕೂಪರ್
19)ಹೋಮಿಯೋಪತಿಯ ಪಿತಾಮಹ��ಸ್ಯಾಮ್ಸುಯಲ್ ಹಾನಿಯನ್
20)ಭಾರತೀಯ ವೈದ್ಯಶಾಸ್ತ್ರದ ಪಿತಾಮಹ��ಧನ್ವಂತರಿ
21)ಕರ್ನಾಟಕದ ಪತ್ರಿಕೋದ್ಯಮದ ಪಿತಾಮಹ�� ಮೊಗ್ಲಿಂಗ್
22)ಇ ಮೇಲ್ ನ ಪಿತಾಮಹ��ಸಭಿರಾ ಭಟಿಯಾ
23)ಆಧುನಿಕ ಬುದ್ಧಿಶಕ್ತಿ ಪರಿಕ್ಪೆಯ ಪಿತಾಮಹ��ಅಲ್ ಫ್ರೆಡ್ ಬೀಲೆ
24)ಆಧುನಿಕ ಕ್ಷಿಪಣಿ ತಂತ್ರಜ್ಞಾನದ ಪಿತಾಮಹ��ಟಿಪ್ಪು ಸುಲ್ತಾನ್
25)ವೈದ್ಯಕೀಯ ಕ್ಷೇತ್ರದ ಪಿತಾಮಹ��ಸುಶ್ರುತ
26)ಭಾರತೀಯ ಹಸಿರು ಕ್ರಾಂತಿಯ ಪಿತಾಮಹ��ಎಂ.ಎಸ್.ಸ್ವಾಮಿನಾಥನ್
27)ಭಾರತೀಯ ಕೈಗಾರಿಕಾ ರಂಗದ ಪಿತಾಮಹ��ಜೆಮ್ ಷೆಡ್ ಜಿ ಟಾಟಾ
28)ಭಾರತದ ಅಣು ವಿಜ್ಞಾದ ಪಿತಾಮಹ��ಹೋಮಿ ಜಾಹಂಗೀರ್ ಬಾಬಾ
29)ರೈಲ್ವೆಯ ಪಿತಾಮಹ��ಸ್ಟಿಫನ್ ಥಾಮಸ್
30)ಭಾರತೀಯ ಶ್ವೇತಾ ಕ್ರಾಂತಿಯ ಪಿತಾಮಹ��ವರ್ಗೀಸ್ ಕುರಿನ್
31)ವಂಶವಾಹಿನಿ ಶಾಸ್ತ್ರದ ಪಿತಾಮಹ��
ಗ್ರೆಗರ್ ಮೆಂಡಲ್
32)ಏಷಿಯನ್ ಕ್ರೀಡೆಯ ಪಿತಾಮಹ��ಜೆ.ಡಿ.ಸೊಂಧಿ
33)ರೇಖಾಗಣಿತದ ಪಿತಾಮಹ��ಯೂಕ್ಲಿಡ್
34)ವೈಜ್ಞಾನಿಕ ಸಮಾತಾವಾದದ ಪಿತಾಮಹ��ಕಾರ್ಲ್ ಮಾರ್ಕ್ಸ್
35)ಭಾರತೀಯ ಆರ್ಥಿಕ ಯೋಜನೆಯ ಪಿತಾಮಹ��ಪಿ.ವಿ.ನರಸಿಂಹರಾವ್
36)ಭಾರತೀಯ ಚಲನಚಿತ್ರ ರಂಗದ ಪಿತಾಮಹ��ದಾದಾ ಸಾಹೇಬ್ ಫಾಲ್ಕೆ
37)ಭಾರತೀಯ ಸಮಾಜಶಾಸ್ತ್ರದ ಪಿತಾಮಹ��ಜಿ.ಎಸ್.ಘುರೆ
38)ಕರ್ನಾಟಕ ಸುಗಮ ಸಂಗೀತದ ಪಿತಾಮಹ��ಶಿಶುನಾಳ ಷರೀಪ
39)ಭಾರತೀಯ ಜ್ಯೋತಿಷ್ಯ ಶಾಸ್ತ್ರದ ಪಿತಾಮಹ��ವರಹಮೀರ
40)ಆರ್ಥಿಕ ಭೂಗೋಳ ಶಾಸ್ತ್ರದ ಪಿತಾಮಹ��ರಾಟ್ಜಲ್
41)ಭಾರತೀಯ ರೈಲ್ವೆಯ ಪಿತಾಮಹ��ಲಾರ್ಡ್ ಡಾಲ್ ಹೌಸಿ
42)ಆರ್ಯುವೇದದ ಪಿತಾಮಹ��ಚರಕ
43)ಯೋಗಾಸನದ ಪಿತಾಮಹ��ಪತಂಜಲಿ ಮಹರ್ಷಿ
44)ಭಾರತದ ವಿದೇಶಾಂಗ ನೀತಿಯ ಶಿಲ್ಪಿ��ಜವಾಹರಲಾಲ್ ನೆಹರೂ
45)ಭಾರತದ ನವ ಜಾಗ್ರತಿಯ ಜನಕ��ರಾಜರಾಮ್ ಮೋಹನ್ ರಾವ್
46)ಹಸಿರು ಕ್ರಾಂತಿಯ ಪಿತಾಮಹ��ನಾರ್ಮನ್ ಬೋರ್ಲಾನ್
47)ಕರ್ನಾಟಕ ಶಾಸ್ತ್ರೀಯ ಸಂಗೀತದ ಪಿತಾಮಹ��ಪುರಂದರದಾಸರು
48)ಆಧುನಿಕ ಕರ್ನಾಟಕದ ಶಿಲ್ಪಿ��ಸರ್.ಎಂ.ವಿಶ್ವೇಶ್ವರಯ್ಯ
49)ಭಾರತದ ಶಾಸನದ ಪಿತಾಮಹ��ಅಶೋಕ
50)ಕರ್ನಾಟಕದ ಶಾಸನದ ಪಿತಾಮಹ��ಬಿ.ಎಲ್.ರೈಸ್
51)ಪ್ರತಿ ಸುಧಾರಣ ಚಳುವಳಿಯ ಪಿತಾಮಹ��ಇಗ್ನೇಷಿಯಸ್ ಲಯೋಲ
52)ಸಮಾಜಶಾಸ್ತ್ರದ ಪಿತಾಮಹ��ಆಗಸ್ಟ್ ಕಾಂಟೆ
53)ಪ್ರಾಚೀನ ಅರ್ಥ ಶಾಸ್ತ್ರದ ಪಿತಾಮಹ��ವಿಷ್ಣುಶರ್ಮ
54)ಆಧುನಿಕ ಭಾರತದ ಜನಕ��ರಾಜರಾಮ್ ಮೋಹನ್ ರಾವ್
55)ಸಾಂಸ್ಕೃತಿಕ ಭೂಗೋಳ ಶಾಸ್ತ್ರದ ಪಿತಾಮಹ��ಲಾಟಿನ್ ಸಾಚ್
56)ಕಂಪ್ಯೂಟರ್ ನ ಪಿತಾಮಹ ��ಚಾಲ್ಸ್ ಬ್ಯಾಬೇಜ್
57)ಗದ್ಯಶಾಸ್ತ್ರದ ಪಿತಾಮಹ��ಡಾಂಟೆ
58)ಪದ್ಯಶಾಸ್ತ್ರದ ಪಿತಾಮಹ��ಪೆಟ್ರಾರ್ಕ್
59)ಭಾರತದ ನ್ಯೂಕ್ಲಿಯರ್ ಕಾರ್ಯಕ್ರಮದ ಪಿತಾಮಹ��ಹೋಮಿ ಜಹಾಂಗೀರ್ ಬಾಬಾ
60)ಉರ್ದು ಭಾಷೆಯ ಪಿತಾಮಹ��ಅಮೀರ್ ಖುಸ್ರೋ
61)ಭಾರತದ ಇತಿಹಾಸದ ಪಿತಾಮಹ��ಕಲ್ಹಣ
62)ಭಾರತದ ರಸಾಯನಿಕ ಪಿತಾಮಹ��2ನೇ ನಾಗರ್ಜುನ
63)ಭಾರತೀಯ ಸಾಮಾಜಿಕ ಕ್ರಾಂತಿಯ ಪಿತಾಮಹ��ಜ್ಯೋತಿರಾವ್ ಪುಲೆ
64)ಭೂವಿಜ್ಞಾನದ ಪಿತಾಮಹ��ಎ.ಜೇಮ್ಸ್ ಹಟನ್
65)ಪುನರುಜ್ಜಿವನದ ಪಿತಾಮಹ��ಪೆಟ್ರಾರ್ಕ್
66)ಭಾರತೀಯ ಪುನರುಜ್ಜಿವನದ ಪಿತಾಮಹ��ರಾಜರಾಮ್ ಮೋಹನ್ ರಾವ್
67)ಕರ್ನಾಟಕದ ಸಮಾಜ ಶಾಸ್ತ್ರದ ಪಿತಾಮಹ��ಎಂ.ಎನ್.ಶ್ರೀನಿವಾಸ್
68)ಭಾರತದ ಕ್ಷಿಪಣಿಗಳ ಪಿತಾಮಹ��ಎ.ಪಿ.ಜೆ.ಅಬ್ದುಲ್ ಕಲಾಂ
69)ನೀಲಿ ಕ್ರಾಂತಿಯ ಪಿತಾಮಹ��ಹರಿಲಾಲ್ ಚೌಧರಿ
70)ಹಳದಿ ಕ್ರಾಂತಿಯ ಪಿತಾಮಹ��ಶ್ಯಾಮ್ ಪಿತ್ರೋಡಾ
71)ಇತಿಹಾಸದ ಪಿತಾಮಹ��ಹೆರೋಡಾಟಸ್
72)ಆರ್ಥಶಾಸ್ತ್ರದ ಪಿತಾಮಹ��ಆಡಂ ಸ್ಮಿತ್
73)ರಾಜ್ಯ ಶಾಸ್ತ್ರದ ಪಿತಾಮಹ��ಅರಿಸ್ಟಾಟಲ್
74)ಭಾರತದ ಪೂಜ್ಯ ಪಿತಾಮಹ��ದಾದಾಬಾಯಿ ನೌರೋಜಿ
75)ಭಾರತದ ಹೈನುಗಾರಿಕೆಯ ಪಿತಾಮಹ��ಜಾರ್ಜ ಕುರಿಯನ್
76)ಭಾರತದ ಅರಣ್ಯ ಶಾಸ್ತ್ರದ ಪಿತಾಮಹ��ಬ್ರಾಂಡೀಸ್
77)ಹರಿದಾಸ ಪಿತಾಮಹ��ಶ್ರೀಪಾದರಾಯರು
78)ಕನ್ನಡದ ಕಾವ್ಯ ಪಿತಾಮಹ��ಪಂಪ
79)ಕನ್ನಡ ಚಳುವಳಿಯ ಪಿತಾಮಹ��ಅ.ನ.ಕೃಷ್ಣರಾಯ
80)ಸಹಕಾರಿ ಚಳುವಳಿಯ ಪಿತಾಮಹ��ದಿ.ಮೊಳಹಳ್ಳಿ ಶಿವರಾಯರು
81)ವಚನ ಸಂಪಾದನೆಯ ಪಿತಾಮಹ��ಫ.ಗು.ಹಳಕಟ್ಟಿ
82)ಕರ್ನಾಟಕದ ಪ್ರಹಸನದ ಪಿತಾಮಹ��ಟಿ.ಪಿ.ಕೈಲಾಸಂ
83)ಕಾದಂಬರಿಯ ಪಿತಾಮಹ��ಗಳಗನಾಥ
84)ಹೋಸಗನ್ನಡ ಸಾಹಿತ್ಯದ ಪಿತಾಮಹ��ಬಿ.ಎಮ್.ಶ್ರೀಕಂಠಯ್ಯ
85)ಕರ್ನಾಟಕದ ಜಾನಪದ ಸಾಹಿತ್ಯದ ಪಿತಾಮಹ��ಜಿ.ಎಂ.ಪರಮಶಿವಯ್ಯ
86)ಆಧುನಿಕ ಕನ್ನಡ ನಿಘಂಟಿನ ಪಿತಾಮಹ��ಜಿ.ವೆಂಕಟಸುಬ್ಬಯ್ಯ
87)ಕನ್ನಡ ಸಾಹಿತ್ಯದ ನವ್ಯ ನಾಟಕದಪಿತಾಮಹ��ಟಿ.ಪಿಕೈಲಾಸಂ
88)ಭಾರತದ ಮೆಟ್ರೋ ರೈಲಿನ ಪಿತಾಮಹ��ಇ.ಶ್ರೀಧರನ್
89)ಭಾರತದ ಬಾಹ್ಯಕಾಶ ಯೋಜನೆಯ ಪಿತಾಮಹ��ವಿಕ್ರಂ ಸಾರಾಭಾಯಿ
90)ಭಾರತದ ವೃದ್ಧರ ಪಿತಾಮಹ��ದಾದಾಬಾಯಿ ನವರೋಜಿ
91)ಹಿಂದಿಳಿದ ವರ್ಗಗಳ ಪಿತಾಮಹ��ದೇವರಾಜ ಅರಸ್
91)ಫೇಸ್ ಬುಕ್ ನ ಪಿತಾಮಹ��ಮಾರ್ಕ್ ಜುಗರ್ ಬರ್ಗ್
92)ಇಂಗ್ಲಿಷ್ ಕಾವ್ಯದ ಪಿತಾಮಹ��ಜಿಯಾಪ್ರೆರಿ ಚೌಸೆರ್
93)ಭಾರತದ ಯೋಜನೆಯ ಪಿತಾಮಹ��ಸರ್.ಎಂ.ವೀಶ್ವೇಶ್ವರಯ್ಯ
94)ವಿಕಾಸವಾದದ ಪಿತಾಮಹ��ಚಾರ್ಲ್ಸ್ ಡಾರ್ವಿನ್
95)ಪಾಶ್ಚಿಮಾತ್ಯ ವೈದ್ಯ ಶಾಸ್ತ್ರದ ಪಿತಾಮಹ��ಹಿಪ್ಪೋಕ್ರೇಟ್ಸ್
96)ಆಧುನಿಕ ಯೋಗದ ಪಿತಾಮಹ��ಬೆಳ್ಳೂರು ಕೃಷ್ಣಮಾಚಾರ ಸುಂದರ್ ರಾಜ ಅಯ್ಯಂಗಾರ್
97)ಆಧುನಿಕ ಶೈಕ್ಷಣಿಕ ಮನೋ ವಿಜ್ಞಾನದ ಪಿತಾಮಹ��ಥಾರ್ನ್ ಡೈಕ್
98)ಕನ್ನಡದ ಸಣ್ಣ ಕಥೆಗಳ ಪಿತಾಮಹ��ಪಂಜೆ ಮಂಗೇಶರಾಯರು
99)ರಾಷ್ಟ್ರ ಪಿತಾಮಹ��ದಾದಾಬಾಯಿ ನವರೋಜಿ
100)ಭಾರತದ ಸಂವಿಧಾನದ ಶಿಲ್ಪಿ�� ಬಿ.ಆರ್.ಅಂಬೇಡ್ಕರ್