ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Wednesday 3 May 2023

ಬೇಸಿಗೆ ಕಲಿಕಾ ಸಂಭ್ರಮದಲ್ಲಿ ಮಕ್ಕಳ ಮಂದಾರ ವಿಶೇಷ ಸಂಚಿಕೆ ಬಿಡುಗಡೆ

ಮಕ್ಕಳ ಮಂದಾರ ಬೇಸಿಗೆ ಸಂಭ್ರಮ ವಿಶೇಷ ಸಂಚಿಕೆ ಬಿಡುಗಡೆ.

ಮೇ-03-2023.ಮಲ್ಕಾಪುರ.

ಮಲ್ಕಾಪುರ ಶಾಲೆಯಲ್ಲಿ ಶ್ರಮಜೀವಿ ಸಂಸ್ಥೆಯಿಂದ ಆಯೋಜಿಸಿರುವ ಬೇಸಿಗೆ ಸಂಭ್ರಮ ಕಲಿಕಾ ಶಿಬಿರದಲ್ಲಿ ಮಲ್ಲಯ್ಯ ಗೋರ್ಕಲ್ ಅವರು ಸಂಚಿಕೆಯನ್ನು ಮುದ್ರಿಸಿಕೊಟ್ಟು ಬಿಡುಗಡೆ ಮಾಡಿದರು. 
ಬಗ್ಗೆ
ಬೇಸಿಗೆ ರಜೆಯಲ್ಲಿ ಮಕ್ಕಳು ಆಸಕ್ತಿಯಿಂದ ಶಿಬಿರದಲ್ಲಿ ಪಾಲ್ಗೊಳ್ಳುವಂತೆ ಮಾಡಿ ವಿವಿಧ ವಿಷಯಗಳನ್ನು ರಚನಾತ್ಮಕವಾಗಿ ಕ್ರಿಯಾತ್ಮಕವಾಗಿ ತೊಡಗಿಕೊಂಡು ಕಲಿಯುತ್ತಿರುವಂತೆ ಶ್ರಮಿಸುತ್ತಿರುವ  ಶಿಕ್ಷಕರಾದ ರವಿಚಂದ್ರ , ಸ್ವಯಂ ಸೇವಾ ಶಿಕ್ಷಕ ಅಯ್ಯಪ್ಪ ಅವರ ಶ್ರಮ ಶ್ಲಾಘನೀಯ ಎಂದು ಶ್ರಮಜೀವಿ  ಸಂಸ್ಥೆಯ ಮಲ್ಲಯ್ಯ ಗೋರ್ಕಲ್ ನುಡಿದರು.

16 ವರ್ಷಗಳಿಂದ ಮಕ್ಕಳ ಸೃಜನಶೀಲ ಬರಹಗಳಿಗೆ ವೇದಿಕೆಯಾಗಿ  ಪ್ರಕಟವಾಗುತ್ತಿರುವ ಮಕ್ಕಳ ಸಂಪಾದಕಿಯ ನೇತೃತ್ವದ ಮಕ್ಕಳ ಮಂದಾರ ವಿಶೇಷ ಸಂಚಿಕೆ ಮಕ್ಕಳ ಕಲ್ಪನಾಶೀಲತೆ ಮತ್ತು ಸೃಜನಶೀಲತೆಗೆ ಸಾಕ್ಷಿಯಾಗಿದೆ ಎಂದು ಪ್ರಧಾನ ಸಂಪಾದಕರಾದ ಶಿಕ್ಷಕ ರವಿಚಂದ್ರ  ನುಡಿದರು.

ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆ ರಾಯಚೂರು ಎನ್ನುವ ಹಣೆಪಟ್ಟಿ ಅಳಿಸುವಲ್ಲಿ , ನಮ್ಮ ಗ್ರಾಮೀಣ ಮಕ್ಕಳ ಬರಹ ಆಸಕ್ತಿ ಓದುವ ಅಭಿರುಚಿ ಬೆಳೆಸುವಲ್ಲಿ ಮಕ್ಕಳ ಮಂದಾರ ಯಶಸ್ವಿ ಪ್ರಯೋಗವಾಗಿದೆ ಎಂದು ಮಲ್ಲಯ್ಯ ಗೋರ್ಕಲ್ ಅವರು ಹೇಳಿದರು.

ಎಸ್ ಡಿ ಎಂ ಸಿ ಅಧ್ಯಕ್ಷ ಬಸವರಾಜ್, ನಿಂಗಪ್ಪ, ಸದಸ್ಯರು,ಹಿರಿಯ ವಿದ್ಯಾರ್ಥಿಗಳು, ಮಕ್ಕಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Wednesday 12 April 2023

ಮಕ್ಕಳ ಮಂದಾರ - ಬೇಸಿಗೆ ರಜಾ ವಿಶೇಷಾಂಕ


16 ನೇ ವರ್ಷದ ನಿರಂತರ ಯಶಸ್ವಿ ಹೆಜ್ಜೆಗಳ ಮಕ್ಕಳ ಸೃಜನಶೀಲ ಬರಹಗಳ ಪಯಣ. 
ಮಕ್ಕಳ ಪುಟ್ಟ ಪುಟ್ಟ ಸೃಜನಶೀಲ ಬರಗಳನ್ನ ಪ್ರೋತ್ಸಾಹಿಸಿ  ಅವರ ಕನಸುಗಳಿಗೆ ರೆಕ್ಕೆ ಹೆಚ್ಚೋಣ.
ಓದುವ ಮತ್ತು ಬರೆಯುವ ಅಭಿರುಚಿ ಬೆಳೆಸುವ ಸಣ್ಣ ಪ್ರಯತ್ನದಲ್ಲಿ ನೀವು ನಮ್ಮ ಜೊತೆಯಾಗಿ ಪತ್ರಿಕೆಯ ಬಾಗಿದಾರರಾಗಿ. ಕರೆ ಮಾಡಿ.
9980952630.

Friday 17 March 2023

ಮಲ್ಕಾಪುರದ ಹಿರಿಯ ವಿದ್ಯಾರ್ಥಿಗಳಿಂದ ಅಪ್ಪು ಸ್ಪೂರ್ತಿ ದಿನ ಆಚರಣೆ -ಶಾಲೆಗೆ ಧಣಿಗೆ

ಅಪ್ಪು ಉತ್ಸವ *ಸ್ಪೂರ್ತಿ ದಿನದ ಅಂಗವಾಗಿ ಹಿರಿಯ ವಿದ್ಯಾರ್ಥಿಗಳಿಂದ ಮಲ್ಕಾಪುರ ಶಾಲೆಗೆ ದೇಣಿಗೆ


ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಜನ್ಮದಿನಾಚರಣೆ ಪ್ರಯುಕ್ತ ಸ್ಪೂರ್ತಿ ದಿನಾಚರಣೆಯನ್ನು ಮಾನ್ವಿ ತಾಲೂಕಿನ ಮಲ್ಕಾಪುರ ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳಿಂದ 
  ಆಚರಿಸಲಾಯಿತು.

ಸ್ಪೂರ್ತಿ ದಿನದ ಅಂಗವಾಗಿ ಹಿರಿಯ ವಿದ್ಯಾರ್ಥಿ ಮೇಘರಾಜ್ ಶಾಲಾ ಮಕ್ಕಳಿಗಾಗಿ 200 ಕುಡಿಯುವ ನೀರಿನ ಲೋಟಗಳನ್ನು ದೇಣಿಗೆ ನೀಡಿ, ಸಿಹಿ ವಿತರಿಸಿ ಆಚರಣೆಯನ್ನು ಅರ್ಥಪೂರ್ಣ ಗೊಳಿಸಿದರು. ಹಳ್ಳಿಯೊಂದರ ಶಾಲಾ ಹಿರಿಯ  ವಿದ್ಯಾರ್ಥಿಗಳ  ಈ ಕೊಡುಗೆ ಮಲ್ಕಾಪುರ ಗ್ರಾಮಕ್ಕೆ ಅಷ್ಟೇ ಅಲ್ಲ ರಾಜ್ಯದ ಎಲ್ಲೆಡೆ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ. 


ದೇಣಿಗೆ ನೀಡಿದ ಹಿರಿಯ ವಿದ್ಯಾರ್ಥಿ ಮೇಘರಾಜ್ ಮಲ್ಕಾಪುರ


ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಇದು ವಿಶೇಷವಾದ ನಡೆಯಾಗಿದೆ. ಈ ಮೂಲಕ ಇಂದಿನ ಯುವಕರು ಸರ್ಕಾರಿ ಶಾಲಾ ಸಬಲೀಕರಣಕ್ಕೆ ಕೈಲಾದ ದೇಣಿಗೆ ನೀಡಿ ಸಮಾಜ ಸೇವೆಗೆ ತೆರೆದುಕೊಳ್ಳಲು ಸ್ಪೂರ್ತಿ ತುಂಬಿದ ದಿನವೂ ಆಗಿದೆ.ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ನಿಜಕ್ಕೂ ಇಂದಿನ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ ಎಂಬುದಕ್ಕೆ ಇದು ತಾಜಾ ಉದಾಹರಣೆಯಾಗಿದೆ. ಎಂದು ಮಲ್ಕಾಪುರ ಶಾಲಾ ಶಿಕ್ಷಕ ಸಾಹಿತಿ ರವಿಚಂದ್ರ ಹೇಳಿದರು.

ಮುಖ್ಯ ಶಿಕ್ಷಕರಾದ ಮಲ್ಲಪ್ಪ, ಸುನಿಲ್ ಭೂದೇಶ್ ,ಶಿವರಾಂ ಸಂತೋಷ್ ,ರಾಜೇಶ್ವರಿ , ಮಲ್ಕಾಪುರದ ಗ್ರಾಮಸ್ಥರು, ಎಸ್ ಡಿ ಎಂ ಸಿ ಅಧ್ಯಕ್ಷರು  ಮಕ್ಕಳ ಕೊಡುಗೆಯನ್ನು ಶ್ಲಾಘಿಸಿದರು.

ಕರ್ನಾಟಕ ರತ್ನ   ಪುನೀತ್ ರಾಜಕುಮಾರ್  ಸಮಾಜ ಸೇವೆ ,ದೇಣಿಗೆ ನೀಡುವಲ್ಲಿ ವಿಶ್ವಕ್ಕೆ ಮಾದರಿಯಾಗಿದ್ದು ಇಂದು ವಿಶ್ವಾರ್ದ್ಯಂತ ಸ್ಪೂರ್ತಿದಿನವಾಗಿ ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಗಿರುವುದು ಕಂಡುಬರುತ್ತದೆ.

ಶಾಲಾ ಶಿಕ್ಷಕರು, ಊರಿನ ಗ್ರಾಮಸ್ಥರು, ಶಿಕ್ಷಣ ಇಲಾಖೆ ಹಳ್ಳಿಯ ಹಿರಿಯ ವಿದ್ಯಾರ್ಥಿಗಳ ಈ ಕೊಡುಗೆಯನ್ನು ಶ್ಲಾಘಿಸಿದರು.

Friday 26 August 2022

ಮಕ್ಕಳ ಮಂದಾರ 15 ನೇ ವರ್ಷದತ್ತ ವಿಶೇಷ ಸಂಚಿಕೆ

https://drive.google.com/file/d/1n9-AcVSKa5byIWlKZWyrIBN2V3dlHuLP/view?usp=drivesdk
ಈ ಲಿಂಕ್ ಕ್ಲಿಕ್ ಮಾಡಿ ಮಕ್ಕಳ ಮಂದಿರ ಪತ್ರಿಕೆ ಓದಿ..

ಇದು 15ನೇ ವರ್ಷದತ್ತ ಯಶಸ್ವಿ ಪ್ರಯಾಣದ ವಿಶೇಷ ಸಂಚಿಕೆ.
ಕ್ಲಿಕ್ ಮಾಡಿ

Wednesday 27 July 2022

ಕಾಲೇಜು ವಿದ್ಯಾರ್ಥಿಗಳು ಪ್ರಬಂಧ ಬರೆದು 10000 ವಿವಿಧ ಬಹುಮಾನ ಗೆಲ್ಲುವ ಅವಕಾಶ

ಧಾರವಾಡದ ವಿದ್ಯಾವರ್ಧಕ ಸಂಘ ಏರ್ಪಡಿಸಿರುವ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ.ಬಹುಮಾನ ಗೆಲ್ಲುವ ಅವಕಾಶ ಕಾಲೇಜು ವಿದ್ಯಾರ್ಥಿಗಳಿಗೆ ನೀಡಲಾಗಿದೆ..
ಈ ಕೆಳಗಿನ ಪೋಸ್ಟ್ ಓದೀ. ಭಾಗವಹಿಸಿ.


Thursday 3 March 2022

ವಿವಿಧ ದತ್ತಿ ಪುರಸ್ಕಾರಗಳಿಗೆ ಆಹ್ವಾನ

*ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗ ಘಟಕದಿಂದ 2021 ನೇ ಸಾಲಿನ ವಿವಿಧ ದತ್ತಿ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ* 


ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗ
ಸೃಜನ ಶಿಕ್ಷಣ ಸಂಶೋಧನಾ ಟ್ರಸ್ಟ್ (ರಿ)
ಮಕ್ಕಳ ಮಂದಾರ ಬಳಗ ಸಹಯೋಗದಲ್ಲಿ
2021 ನೇ ಸಾಲಿನ ವಿವಿಧ ಐದು ವಿಭಾಗಗಳ ದತ್ತಿ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.


 *1. ಡಾ.ಕೊಡಕ್ಕಲ್ ಶಿವಪ್ರಸಾದ್ ದತ್ತಿ ಪುರಸ್ಕಾರ* 

ರಾಜ್ಯದ ಅಂಗವಿಕಲ ಮಕ್ಕಳ ಶಿಕ್ಷಣ , ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದವರಿಗೆ ಈ ಪುರಸ್ಕಾರ ಮೀಸಲಾಗಿದೆ. ಸಂಬಂಧಿಸಿದ ತಮ್ಮ ಸೇವಾ ವಿವರಗಳನ್ನು ಪಿಡಿ ಎಪ್ ಕಳುಹಿಸಲು ಕೋರಿದೆ.

Makkalamandara@gmail.com


2 *."ಮಕ್ಕಳ ಮಂದಾರ ರಾಜ್ಯ ಪ್ರಶಸ್ತಿ" ಪುರಸ್ಕಾರಕ್ಕೆ ಅರ್ಜಿ ಆಹ್ವಾನ* 

21 ನೇ ಸಾಲಿನಲ್ಲಿ ಪ್ರಕಟವಾದ ಯಾವುದೇ ರೀತಿಯ ಮಕ್ಕಳ ಸಾಹಿತ್ಯ ಕೃತಿಗಳಿಗೆ ಈ ಪ್ರಶಸ್ತಿ ಮೀಸಲು. 
ಈ ಪ್ರಶಸ್ತಿ ಆಯ್ಕೆಗೆ ಬಂದ ಮಕ್ಕಳ ಸಾಹಿತ್ಯದ ವೈವಿಧ್ಯಮಯ ಕೃತಿಗಳ ಸಂಖ್ಯೆಯನ್ನು ಗುಣಮಟ್ಟವನ್ನು ಆಧರಿಸಿ ಈ ಪ್ರಶಸ್ತಿಯ ಪುರಸ್ಕೃತರ ಸಂಖ್ಯೆಗಳನ್ನು ಸಮಿತಿಯಿಂದ ನಿರ್ಧರಿಸಲಾಗುತ್ತದೆ.


 *3. ನೇಕಾರ ಪ್ರಕಾಶನ ದತ್ತಿ ಪುರಸ್ಕಾರ* 

ಈ ಪುರಸ್ಕಾರವು 2021 ನೇ ಸಾಲಿನಲ್ಲಿ
ಪ್ರಕಟವಾದ ಜಾನಪದ ಸಾಹಿತ್ಯ ವಿಭಾಗದಲ್ಲಿ ಕೃತಿ ಪ್ರಕಟಿಸಿದ ಉತ್ತಮ ಕೃತಿಗೆ ಮೀಸಲಾಗಿರುತ್ತದೆ.

 *4. ಶ್ರೀಮತಿ ಕುಮುದಾ ಸುಶೀಲಪ್ಪ ದತ್ತಿ ಪುರಸ್ಕಾರ.* 

ರಾಜ್ಯದ ಬುಡಕಟ್ಟು ಮಕ್ಕಳ ಶ್ರೇಯೋಭಿವೃದ್ಧಿಗೆ, ಬುಡಕಟ್ಟು ಕಲೆ, ಸಾಹಿತ್ಯ ಪರಂಪರೆಯ ಪುನರುಜ್ಜೀವನಕ್ಕೆ ಶ್ರಮಿಸಿದವರಿಗೆ ಈ ಪುರಸ್ಕಾರ ಮೀಸಲು. ತಮ್ಮ ಸೇವೆಯ ಸಂಬಂಧಿತ ದಾಖಲೆಗಳನ್ನು ಪಿಡಿಎಫ್ ನಲ್ಲಿ ಇ-ಮೇಲ್ ಮಾಡಬಹುದು.


5. *ಮಕ್ಕಳ ಮಂದಾರ ಗೌರವ ಪುರಸ್ಕಾರ.* 

  ಈ ಪುರಸ್ಕಾರ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ ಮಕ್ಕಳ ಸಾಹಿತ್ಯ, ಪ್ರಕಾಶನ, ಶಾಲಾ ಶೈಕ್ಷಣಿಕ ಸೇವೆಯಲ್ಲಿನ ಸೂಕ್ತ ವ್ಯಕ್ತಿಗಳಿಗೆ ಮಾತ್ರ ಆಗಿರುತ್ತದೆ.

ಮಕ್ಕಳ ಶಿಕ್ಷಣದಲ್ಲಿ ನಾವಿನ್ಯ ಪ್ರಯೋಗ ಮಾಡಿದ ಶಿಕ್ಷಕರು , ಮಕ್ಕಳ ಶಿಕ್ಷಣಕ್ಕೆ ಹಾಗೂ ಸರ್ಕಾರಿ ಶಾಲಾ ಸಬಲಿಕರಣಕ್ಕೆ ಶ್ರಮಿಸಿದವರು, ಮಕ್ಕಳ ಹಕ್ಕುಗಳ ಹೋರಾಟಗಾರರ ಜೀವಮಾನದ ಸಾಧನೆಗೆ
ಮಕ್ಕಳ ಮಂದಾರ" ಗೌರವ ಪುರಸ್ಕಾರ ಮೀಸಲಾಗಿದೆ.

ಅಂತಹ ಸಾಧಕರ ವಿವರಗಳನ್ನು ಸೂಕ್ತ ಲಗತ್ತುಗಳೊಂದಿಗೆ ಪಿಡಿಎಫ್ ಫೈಲ್ ಜೊತೆಗೆ ಯಾರಾದರೂ ನಾಮನಿರ್ದೇಶನ ಮಾಡಬಹುದು. ಅಥವಾ ಸ್ವತಹ ಅಭ್ಯರ್ಥಿಯೆ ಅರ್ಜಿ ಸಲ್ಲಿಸಬಹುದು.

 *ರಾಜ್ಯ ಪ್ರಶಸ್ತಿಗಳು ನಗದು ಪುರಸ್ಕಾರ, ಸನ್ಮಾನ ಪತ್ರವನ್ನು ಒಳಗೊಂಡಿರುತ್ತದೆ.* 

 *ಗೌರವ ಪುರಸ್ಕಾರಗಳು ಸನ್ಮಾನ ಹಾಗೂ ಸನ್ಮಾನ ಪತ್ರ ಫಲಕ ಒಳಗೊಂಡಿರುತ್ತದೆ.* 

 ಸಾಹಿತ್ಯ ಕೃತಿಗಳ ವಿಭಾಗಕ್ಕೆ ಅರ್ಜಿ ಸಲ್ಲಿಸುವವರು
21 ನೇ ಸಾಲಿನ ಯಾವುದೇ ರೀತಿಯ ಮಕ್ಕಳ ಸಾಹಿತ್ಯ ಕೃತಿಗಳ ಎರಡು ಪ್ರತಿಗಳನ್ನು ಕಳುಹಿಸಬೇಕು.

ಪ್ರಶಸ್ತಿ ಪುರಸ್ಕೃತರ ಸಂಖ್ಯೆಯನ್ನು ದತ್ತಿ ಪ್ರಾಯೋಜಕರು ನಿರ್ಧರಿಸುತ್ತಾರೆ. 

ಪ್ರಶಸ್ತಿ ಕುರಿತು ಯಾವುದೇ ಬದಲಾವಣೆ, ನಿಲುವುಗಳಲ್ಲಿ ಸಮಿತಿಯ ತೀರ್ಮಾನವೇ ಅಂತಿಮ.

 *ತಮ್ಮ ನಾಮನಿರ್ದೇಶನ ಪ್ರಸ್ತಾವನೆ ,ಕೃತಿಗಳನ್ನು ಕಳಿಸಲು ಕೊನೆಯ ದಿನ ಮಾರ್ಚ್ 30.2022* 

ಸೂಕ್ತ ದಾಖಲೆಗಳೊಂದಿಗೆ ತಮ್ಮ ಸೇವೆಯ ವಿವರಗಳನ್ನು ಕಳಿಸಬೇಕಾದ ಈಮೇಲ್
Makkalamandara@Gmail.com.

 *ಮಾಹಿತಿಗೆ ಕರೆ ಮಾಡಿ* - 9980952630

*********************
 *ಪ್ರಕಟಣೆ


ರವೀಂದ್ರ .ಆರ್.
ಅಧ್ಯಕ್ಷರು.
ಸೃಜನ ಶಿಕ್ಷಣ ಸಂಶೋಧನಾ ಟ್ರಸ್ಟ್.(ರಿ)



 *ಕೃತಿಗಳನ್ನು ಕಳುಹಿಸಬೇಕಾದ ವಿಳಾಸ* 

ಜಿಲ್ಲಾಧ್ಯಕ್ಷರು
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು

ಚೌಡೇಶ್ವರಿ ನಿಲಯ
ಮಂಡಗಳಲೆ
ಕಾನಲೇ ಪೋಸ್ಟ್.
ಸಾಗರ ತಾಲೂಕು
ಶಿವಮೊಗ್ಗ ಜಿಲ್ಲೆ -577430
ದೂರವಾಣಿ.
ವಾಟ್ಸಾಪ್- 9980952630.


ನಿಮ್ಮ 
ರವಿರಾಜ್ ಸಾಗರ್.
ಜಿಲ್ಲಾಧ್ಯಕ್ಷರು ಶಿವಮೊಗ್ಗ.

Thursday 24 February 2022

ಮಲ್ಕಾಪುರ ಶಾಲೆಯಲ್ಲಿ ಸಾಂಪ್ರದಾಯಿಕ ಚಿತ್ರಕಲೆ ಯೊಂದಿಗೆ ಸೃಜನಶೀಲ ಕಲಿಕೆ

"ಸಾಂಪ್ರದಾಯಿಕ ಚಿತ್ರಕಲೆಯೊಂದಿಗೆ ಸೃಜನಶೀಲ ಕಲಿಕೆ ಪರಿಣಾಮಕಾರಿ"  ಹಸೆ ಚಿತ್ತಾರ ಸಂಶೋಧನಾ ಕೃತಿಕಾರ ರವಿಚಂದ್ರ.


ಮಲ್ಕಾಪುರ:  ಕರ್ನಾಟಕ ನೆಲಮೂಲದ ಸಂಪ್ರದಾಯಿಕ ಚಿತ್ರ ಕಲೆಯಾದ ಹಸೆ ಚಿತ್ತಾರ ಪುನರುಜ್ಜೀವನಕ್ಕಾಗಿ ಸಾಂಪ್ರದಾಯಿಕ  ಚಿತ್ರಕಲೆಯಲ್ಲಿ ಸೃಜನಶೀಲ ಕಲಿಕೆ ಅಗತ್ಯ ಹಾಗೂ ಅದು ಮಕ್ಕಳ ಸೃಜನಶೀಲ  ಗುಣಮಟ್ಟ ಶಿಕ್ಷಣಕ್ಕೆ ಪೂರಕವಾಗಿದೆ ಎಂದು ಹಸೆ ಚಿತ್ತಾರ ಸಂಶೋಧನಾ ಕೃತಿ ಲೇಖಕ , ಮಲ್ಕಾಪುರ ಶಾಲಾ ಶಿಕ್ಷಕ ರವಿಚಂದ್ರ ಅವರು ಮಲ್ಕಾಪುರ ಶಾಲೆಯಲ್ಲಿ ಶಾಲಾ ಮಕ್ಕಳಿಗಾಗಿ ಆಯೋಜಿಸಿದ್ದ  "ಸಾಂಪ್ರದಾಯಿಕ ಚಿತ್ರಕಲೆ ಯೊಂದಿಗೆ ಸೃಜನಶೀಲ ಶಿಕ್ಷಣ ತರಬೇತಿ ಮತ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಅಭಿಪ್ರಾಯಪಟ್ಟರು.

 ಮಲ್ಕಾಪುರ ಶಾಲಾ ಗೋಡೆಗಳಿಗೆ ಹಸೆ ಚಿತ್ತಾರ ಬಿಡಿಸಿ ಮೆರಗು ನೀಡಿರುವ ಹಸೆ ಚಿತ್ತಾರ ಕಲಾವಿದೆ ಉಷಾ .ಜಿ ಎ ಸಾಗರ ಇವರು ಸಂಪ್ರದಾಯಿಕ ಚಿತ್ತಾರ ಕಲೆ ಪುನರುಜ್ಜೀವನಕ್ಕೆ ಶಾಲೆ ಉತ್ತಮ ವೇದಿಕೆ. ಅದು ಮಕ್ಕಳ  ಸೃಜನಶೀಲ ಕಲಿಕೆಗೆ ಪೂರಕ ಎಂದರು.

ಮಸ್ಕಿಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಆದಪ್ಪ ಹೆಂಬಾ ಅವರು ಮಲ್ಕಾಪುರದಂತ ಸಣ್ಣ ಹಳ್ಳಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳ ಸಹಪಠ್ಯ  ಚಟುವಟಿಕೆಗೆ ಹಲವು ಹೊಸ ಸೃಜನಶೀಲ ಪ್ರಯೋಗಗಳನ್ನು  ನೀಡಿದ ರವಿಚಂದ್ರ ಹಾಗೂ ಈ ಶಾಲಾ  ಶಿಕ್ಷಕರ  ಪ್ರಯತ್ನ ಶ್ಲಾಘನೀಯ ಎಂದರು.

ಮಕ್ಕಳಿಗೆ ಹಸೆ ಚಿತ್ತಾರ ತರಬೇತಿಯನ್ನು ಶಾಲಾ ಸಹಪಠ್ಯ ಚಟುವಟಿಕೆಗಳ ಜೊತೆ ಕಲಿಸಿದ  ಶಿಕ್ಷಕ ರವಿಚಂದ್ರ ಅವರು   ಮಕ್ಕಳಿಗೆ ಹಸೆ ಚಿತ್ತಾರ ತರಬೇತಿ ಜೊತೆಗೆ  ಸ್ಪರ್ಧೆ ಆಯೋಜಿಸಿ ಬಹುಮಾನಗಳನ್ನು ನೀಡಿದರು.

 ಕರ್ನಾಟಕ ಹಸೆ ಚಿತ್ತಾರ ಪರಿಷತ್ತು, ಸೃಜನ ಶಿಕ್ಷಣ ಸಂಶೋಧನಾ ಟ್ರಸ್ಟ್ ಸಹಯೋಗದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಮಲ್ಕಾಪುರದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯಶಿಕ್ಷಕ ಮಲ್ಲಪ್ಪ ಅವರು ವಹಿಸಿದ್ದು ಮಕ್ಕಳಿಗೆ ಕಲಿಕೆ ಜೊತೆಗೆ  ಸದಾ ಯಾವುದಾದರು ಸಹಪಠ್ಯ ಚಟುವಟಿಕೆಗಳು ಅಗತ್ಯ ಎಂದರು.  ಎಸ್ಡಿಎಂಸಿ ಅಧ್ಯಕ್ಷೆ ರೇಣುಕಮ್ಮ,  ಬಸವರಾಜ್, ಹಳ್ಳಯ್ಯ ಶೆಟ್ಟಿ , ಶಿವಶಂಕರ್ ಗೌಡ ವೇದಿಕೆಯಲ್ಲಿದ್ದರು.ಶಿಕ್ಷಕರಾದ ಶಿವರಾಂ,ಬೂದೇಶ್ , ರಾಜೇಶ್ವರಿ ಕಾರ್ಯಕ್ರಮ ನಿರ್ವಹಿಸಿದರು. ಊರಿನ ಗ್ರಾಮಸ್ಥರು, ಹಿರಿಯ ವಿದ್ಯಾರ್ಥಿಗಳು ತರಬೇತಿಯಲ್ಲಿ ಪಾಲ್ಗೊಂಡಿದ್ದರು.