ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Tuesday 18 August 2020

ಬಹುಮುಖ ಪ್ರತಿಭೆ ಬಾಲಸಾಹಿತಿ ಅನೀಶ್

 ಬಹುಮುಖ ಪ್ರತಿಭೆ ಬಾಲ ಸಾಹಿತಿಯಾಗಿ ಭರವಸೆ ಮೂಡಿಸಿದ ಅನೀಶ್ ಕುರಿತು ಕಿರು ಪರಿಚಯ:

ಅಂಕಗಳ ಬೆನ್ನು ಹತ್ತಿದವರ  ಸಾಲಿನಲ್ಲಿ ನಿಲ್ಲದೆ  ಶಾಲಾ ಕಲಿಕೆಯ ಜೊತೆಗೆ ಸಾಹಿತ್ಯ-ಸಾಂಸ್ಕೃತಿಕ , ಸಹಪಠ್ಯ ಚಟುವಟಿಕೆಗಳಲ್ಲಿ ಆಸಕ್ತಿಯಿಂದ ತೊಡಗಿಸಿಕೊಳ್ಳುತ್ತ  ಶಿಕ್ಷಕಿ ತಾಯಿ ಭಾರತಿ ಅವರ ಮಾರ್ಗದರ್ಶನದೊಂದಿಗೆ ನಿಂದು ವಿಶಿಷ್ಟ ಸಾಧನೆಯತ್ತ ಸಾಗುತ್ತಿರುವ ಅನಿಶ್ ಬಗ್ಗೆ ಬರೆಯಲು ಸಾಕಷ್ಟು ವಿಚಾರವಿದೆ..

ನಮ್ಮ ಮಕ್ಕಳ ಮಂದಾರ ಪತ್ರಿಕಾ ಬಳಗದಲ್ಲಿ ವಿದ್ಯಾರ್ಥಿಯ ಸಂಪಾದಕನಾಗಿ ತೊಡಗಿಸಿಕೊಂಡ ವಿಶಿಷ್ಟ ಪ್ರತಿಭೆ.

10 ನೇ ತರಗತಿ ಓದುತ್ತಿರುವ  ಅನೀಶ್    ಬಿಜಿಎಸ್ ಶ್ರೀ ವೆಂಕಟೇಶ್ವರ ವಿದ್ಯಾಮಂದಿರ, ಕೊಪ್ಪದಲ್ಲಿ ಪಠ್ಯ ಕಲಿಕೆಯ ಆಚೆ ಭರವಸೆ ಮೂಡಿಸಿದ್ದಾನೆ.     

*ಸಾಂಸ್ಕೃತಿಕ ಸಾಧನೆಗಳು:*  

* *"ಹೂರಣ" ಸ್ವರಚಿತ ಕವನ ಸಂಕಲನ- ಹಾಸನದಲ್ಲಿ ರಾಷ್ಟ್ರ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಬಿಡುಗಡೆ .*

* ಹಾಸನದಲ್ಲಿ ನಡೆದ ಪ್ರಥಮ ಅಖಿಲ ಭಾರತ ಕನ್ನಡ ಮಕ್ಕಳ ಸಾಹಿತ್ಯ ಸಮ್ಮೇಳನದ ವಿಚಾರ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.

 * ಶ್ರೀ ಕ್ಷೇತ್ರ ಆದಿಚುಂಚನಗಿರಿ ,ನಾಗಮಂಗಲ ತಾಲ್ಲೂಕು, ಮಂಡ್ಯ ಜಿಲ್ಲೆ, ಇಲ್ಲಿ ನಡೆದ ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದ ವಿಚಾರ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.ದೂರದರ್ಶನ ಚಂದನ ವಾಹಿನಿಯ " ಥಟ್ ಅಂತ ಹೇಳಿ " ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾನೆ.  ಚಂದನ ವಾಹಿನಿಯ 'ಥಟ್ ಅಂತ ಹೇಳಿ' ಕಾರ್ಯಕ್ರಮದಲ್ಲಿ  ಸ್ಪರ್ಧಿಗಳಿಗೆ ' ಹೂರಣ ' ಪುಸ್ತಕವನ್ನು ಬಹುಮಾನವಾಗಿ ಕೊಡಲಾಗುತ್ತಿದೆ.ಕರಾವಳಿಯ ಸ್ಥಳೀಯ ವಾಹಿನಿ " ಮುಕ್ತ "  ವಾಹಿನಿಯ *"ಅನ್ವೇಷಣ್"* ಕಾರ್ಯಕ್ರಮದಲ್ಲಿ ಪ್ರತಿಭೆಗಳ ಅನಾವರಣದಲ್ಲಿ ಪರಿಚಯಾತ್ಮಕ ಸಂದರ್ಶನ ಮಾಡಲಾಗಿದೆ 

 ಸೃಜನ ಟ್ರಸ್ಟ್(ರಿ.)., ಶಿವಮೊಗ್ಗ ಮತ್ತು ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು, ಶಿವಮೊಗ್ಗ ,ಇವರ ವತಿಯಿಂದ ನಡೆಸಿದ ರಾಜ್ಯ ಮಟ್ಟದ ಮಕ್ಕಳ ಕವನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ.ರಾಜ್ಯ ಯುವ ಬರಹಗಾರರ ಒಕ್ಕೂಟ (ರಿ.) ಬೆಂಗಳೂರು , ಇವರು ಕನ್ನಡ ಭವನ ತುಮಕೂರಿನಲ್ಲಿ ನಡೆಸಿದ ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ ಭಾಗವಹಿಸಿ ಪುರಸ್ಕಾರ ದೊರೆತಿದೆ.

ವಿಜಯ ಕರ್ನಾಟಕ ಪತ್ರಿಕೆಯ ಮಕ್ಕಳ ದಿನಾಚರಣೆ ರಾಜ್ಯ ಮಟ್ಟದ ಮಕ್ಕಳ *' ಪುಟ್ಟ ಮರಿ ಪದ್ಯ ಬರಿ '* ಸ್ಪರ್ಧೆಯಲ್ಲಿ *ಡಾ.ಹೆಚ್.ಎಸ್.ವೆಂಕಟೇಶ ಮೂರ್ತಿ* ಅವರ *ಮೆಚ್ಚುಗೆ ಪಡೆದ* ಟಾಪ್ 5 ಕವನಗಳಲ್ಲಿ *ಪ್ರಥಮ ಸ್ಥಾನ.*


* ರಾಷ್ಟ್ರೀಯ ಗ್ರಾಮೀಣ ಮಾಹಿತಿ ತಂತ್ರಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಜಿಲ್ಲೆಯನ್ನು ಮೈಸೂರು ವಿಭಾಗ ಮಟ್ಟದಲ್ಲಿ ಪ್ರತಿನಿಧಿಸಿದ್ದಾನೆ.  ರಾಜ್ಯ ಮಟ್ಟದ ವಿಜ್ಞಾನ ಮೇಳ ರಸಪ್ರಶ್ನೆ ಪ್ರಥಮ.ಸರ್ ಫೌಂಡೇಷನ್,ಮಹಾರಾಷ್ಟ್ರ ಮತ್ತು ಮಕ್ಕಳ ಸಾಹಿತ್ಯ ಪರಿಷತ್ತು,ಮಹಾರಾಷ್ಟ್ರ ಘಟಕದ ವತಿಯಿಂದ ಹಮ್ಮಿಕೊಂಡಿದ್ದ *ರಾಷ್ಟ್ರ ಮಟ್ಟದ ' ಕಥಾಕಥನ '* ಸ್ಪರ್ಧೆಯಲ್ಲಿ *ತೃತೀಯ* ಸ್ಥಾನ.

ಲಾಕ್ ಡೌನ್ ಅವಧಿಯಲ್ಲಿ* ವಿವಿಧ ಸಂಸ್ಥೆಗಳು ಏರ್ಪಡಿಸಿದ್ದ *ಅಂತರ್ಜಾಲ ಆಧಾರಿತ ರಾಜ್ಯ ಮಟ್ಟದ ವಿವಿಧ ಸ್ಪರ್ಧೆ* ಗಳಲ್ಲಿ ಭಾಗವಹಿಸಿ, *೧೫ ಕ್ಕೂ ಹೆಚ್ಚಯ ಬಹುಮಾನ* ಗಳನ್ನು ಪಡೆದಿದ್ದಾರೆ.ರಾಜ್ಯ ಮಟ್ಟದ ಚುಂಚಾದ್ರಿ ಕಲೋತ್ಸವ ರಸಪ್ರಶ್ನೆ ದ್ವಿತೀಯ.*2018 ಮೇ ತಿಂಗಳಲ್ಲಿ ಕುಪ್ಪಳಿಯಲ್ಲಿ ನಡೆದ ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಕಮ್ಮಟದ ಕವನ ವಿಭಾಗದಲ್ಲಿ ರಚಿಸಿದ ಸ್ವರಚಿತ ಕವನ ಪ್ರಥಮ ಸ್ಥಾನದಲ್ಲಿ ಆಯ್ಕೆ.ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯ ರಸಪ್ರಶ್ನೆ ಸ್ಪರ್ಧೆ ಅನೀಶ್ ನಾಯಕತ್ವದಲ್ಲಿ ಸತತ 2 ವರ್ಷ ಪ್ರಥಮ ಸ್ಥಾನ ಪಡೆದಿದೆ.


* ಜಿಲ್ಲಾ ಮಟ್ಟದ *'ಸ್ವಚ್ಛ ಕ್ವಿಜ಼್'* ನಲ್ಲಿ *ದ್ವಿತೀಯ.*

* ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ "ಚಿಕ್ಕಮಗಳೂರು ಜಿಲ್ಲಾ ಮಟ್ಟದ ಯುವ ಕವಿ ಗೋಷ್ಠಿ"ಯಲ್ಲಿ ಕಿರಿಯ ವಯಸ್ಸಿನ ಯುವ ಕವಿಯಾಗಿ ಕವನ ವಾಚನ.ಶಾಂತಿವನ ಟ್ರಸ್ಟ್(ರಿ.)ಧರ್ಮಸ್ಥಳ , ಇವರು ನಡೆಸಿದ ನೈತಿಕ ಶಿಕ್ಷಣ ಆಧಾರಿತ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ.


*_ಪ್ರಶಸ್ತಿಗಳು :_*


* ಸಾಂಸ್ಕೃತಿಕ ಪ್ರತಿಭೆಯನ್ನು ಗುರುತಿಸಿ ಚಿಕ್ಕಮಗಳೂರು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸಮಿತಿಯಿಂದ ಸನ್ಮಾನ.(2019-20).


* ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ವತಿಯಿಂದ *' ರಾಜ್ಯ ಮಟ್ಟದ ಬಾಲ ಪರಿಸರ ಪ್ರೇಮಿ '* ಪುರಸ್ಕಾರ.


* 2018 ರಲ್ಲಿ *ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ* ಯಿಂದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಕ್ಷೇತ್ರದ *ಅಸಾಧಾರಣ ಪ್ರತಿಭೆ ಪುರಸ್ಕಾರ.*2017 ರಲ್ಲಿ ಹಾಸನದಲ್ಲಿ ನಡೆದ ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಕವನ ವಾಚನಕ್ಕೆ ಪುರಸ್ಕಾರ.


2018 ನವೆಂಬರ್ ನಲ್ಲಿ *ವಿಜಯ ಕರ್ನಾಟಕ - ಹಾರ್ಲಿಕ್ಸ್ ಜ್ಯೂನಿಯರ್ ಸಾಧಕರು ಪುರಸ್ಕಾರ.*

ಚಿಕ್ಕಮಗಳೂರು *ಜಿಲ್ಲಾ  ಕಲಾಶ್ರೀ ಪ್ರಶಸ್ತಿ- ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ.*ಸಿರಿಗನ್ನಡ ರಾಷ್ಟ್ರೀಯ ಶ್ರೇಷ್ಠ  ಬಾಲ ಕಲಾ ರತ್ನ"* ಪ್ರಶಸ್ತಿ- ಕರ್ನಾಟಕ ಕಲಾ ಪೋಷಕ ಸಂಘ (ರಿ) ಬೆಂಗಳೂರು. ಕಿರಿಯ  ಬರಹಗಾರ"* ರಾಜ್ಯ ಪ್ರಶಸ್ತಿ - ರಾಯಚೂರು ತಾಲ್ಲೂಕು ಮಕ್ಕಳ ಸಾಹಿತ್ಯ ಪರಿಷತ್ತಿನ ವತಿಯಿಂದ.


ಹೀಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದು ವಿಶಿಷ್ಟ ಪ್ರತಿಭೆಯಾಗಿ ಬೆಳೆಯುತ್ತಿರುವ ಅನಿಶ್ ವಿದ್ಯಾರ್ಥಿಗೆ ಮಕ್ಕಳ ಮಂದಾರ ಪತ್ರಿಕೆ ಬಳಗ ಶುಭಾಶಯಗಳನ್ನು ತಿಳಿಸುತ್ತದೆ.

*__________________________*

Monday 17 August 2020

ಒಂದು ಮತ್ತು ಎರಡನೇ ತರಗತಿ ಮಕ್ಕಳಿಗಾಗಿ ಶೈಕ್ಷಣಿಕ ವಿಡಿಯೋಗಳು

 *ಗುರು ಚೈತನ್ಯ ನಲಿಕಲಿ ಮಿಡಿಯಾ ಕಲಬುರಗಿ*


*ನಲಿಕಲಿಯಲ್ಲಿ ತಂತ್ರಜ್ಞಾನ ಬಳಕೆ*


*ವೀಡಿಯೋ ಪಾಠಗಳು ಮೈಲಿಗಲ್ಲುವಾರು ತರಗತಿ 1 ನೇ ಭಾಷೆ*

*https://youtu.be/fYSieqHRoFc*

👆ಮೈಲಿಗಲ್ಲು -1 ರ ಗ ಸ ದ ಅ

*https://youtu.be/9LhLth_gwzQ*

👆ಮೈಲಿಗಲ್ಲು - 2 ಜ ವ ಮ ಬ ನ.


*https://youtu.be/v2XV-dghsTE*

👆ಮೈಲಿಗಲ್ಲು - 3 ಪ ಯ ಉ ಡ ಟ ಚ.


*https://youtu.be/pd7ztuZz2kM*

👆 ಮೈಲಿಗಲ್ಲು - 4 ಲ ಷ ಈ ಊ ಕ 


*https://youtu.be/iGbHD5lJvu0*

👆ಮೈಲಿಗಲ್ಲು -5 ಎ ಏ ಇ ಆ ತ ಳ.


*https://youtu.be/nRudAv0wZuw*

👆ಮೈಲಿಗಲ್ಲು -6 ಓ ಔ ಹ ಶ


*https://youtu.be/NGHVe3r6jx0*

👆ಮೈಲಿಗಲ್ಲು - 7 ಐ ಋ ಣ ಛ ಒ


*https://youtu.be/jrGJrESo8eI*

👆 ಮೈಲಿಗಲ್ಲು - 8 ರಾ ಗಾ ಸಾ ದಾ ಜಾ ವಾ.......


*https://youtu.be/a3CP_WKNz4U*

👆ಮೈಲಿಗಲ್ಲು - 9 ರಿ ಗಿ ಸಿ ದಿ ಜಿ..........


*https://youtu.be/KXPI7PWc-2Y*

👆ಮೈಲಿಗಲ್ಲು - 10 ರೀ ಗೀ ಸೀ ದೀ ಜೀ ವೀ........


*ಮಗ್ಗಿಗಳ ಪರಿಚಯ*


*https://youtu.be/VxgeWM2-HC8*

👆2 ರಿಂದ 10 ರ ವರೆಗೆ ಗುಣಾಕಾರ ಮಗ್ಗಿಗಳು.


*ಕಥೆ*


*https://youtu.be/UaObAFe445o*

👆 ಜಾಣ ಕಾಗೆ


*ಪರಿಸರ ಅಧ್ಯಯನ*


*https://youtu.be/TmnztQl0-oI*

👆ತರಕಾರಿ ಅಭಿನಯ ಗೀತೆ

*https://youtu.be/BcgXPDgOSC0*

👆ಕುಟುಂಬ ಪರಿಸರ ಅಧ್ಯಯನ

*ಕಥೆ*


*https://youtu.be/0ac4HcYkQ3w*

👆ಸಿಂಹ ಮತ್ತು ಇಲಿ


*ಅಭಿನಯ ಗೀತೆ*

*https://youtu.be/Wplcl8hTe8o* ಕೈಯಲ್ಲಿ 👆ಕಿನ್ನೂರಿ......


*ಅಭಿನಯ ಗೀತೆ*

*https://youtu.be/u4FEqypDw_0* ಬಾನ 👆ಬಿಳಿ ಚಂದಿರನೆ.....

*ಪದ್ಯ*

*https://youtu.be/jdc4Jgcloo0*

👆 ಹಾವಿನ ಹೆಡೆ ಚಂದ..


*ಪರಿಸರ ಅಧ್ಯಯನ*


*https://youtu.be/Aq6Nl1SbKOU* ನೀರು


*ಅವಶ್ಯಕತೆ ಇದ್ದಲ್ಲಿ ಬಳಸಬಹುದು*


*1 ನೇ ಮೈಲಿಗಲ್ಲು ನಿಂದ 10 ನೇ ಮೈಲಿಗಲ್ಲು ವರೆಗೆ ಮೈಲಿಗಲ್ಲು ವಾರು ಅಕ್ಷರಗಳ ಪರಿಚಯ ಮತ್ತು ಉಚ್ಚಾರಣೆ, ಎರಡು ಅಕ್ಷರ ಪದ,ಮೂರು ಅಕ್ಷರ ಪದ,ನಾಲ್ಕು ಅಕ್ಷರ ಪದ ,ಮತ್ತು ವಾಕ್ಯ ರೂಪ ಚಿತ್ರ ಸಹಿತ ನೀಡಲಾಗಿದೆ*


ಮುಂದಿನ ಮೈಲಿಗಲ್ಲುಗಳು ಮುಂದುವರೆಯಲಿದೆ.


*ಪ್ರಸ್ತುತಿ : ಹುಸೇನ್ ವಡಗೇರಿ ಸಹ ಶಿಕ್ಷಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸನಾಳ .ಹಾಗೂ ನಲಿಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿ ಕಲಬುರಗಿ ಜಿಲ್ಲೆ*

*ದೂರವಾಣಿ : 9916394885*

🙏🏻🙏🏻🙏🏻🙏🏻🙏🏻🙏🏻

Thursday 13 August 2020

ನಿಮ್ಮ ಮಕ್ಕಳ ಬರಹಗಳಿಗೆ ಆಹ್ವಾನ

 ನಿಮ್ಮ ಮಕ್ಕಳ ಬರಹಗಳಿಗೆ ಸುಂದರ ವೇದಿಕೆ

ನೀವು ನಮ್ಮ ಪತ್ರಿಕೆಯ ಸಹ ಭಾಗಿಗಳಾಗಲು ಸ್ವಾಗತ.

ಆತ್ಮೀಯರೇ ನಮಸ್ಕಾರ

ನಿಮ್ಮ ಮಕ್ಕಳು ಬರೆದ ಯಾವುದೇ ರೀತಿಯ ಬರಹಗಳನ್ನು, ಕಥೆ ಕವನ ಪ್ರಬಂಧ ಚುಟುಕು, ಪ್ರವಾಸ ಬರಹ, ಅನುಭವ ಲೇಖನ,ಸಂಗ್ರಹಿಸಿದ ಜಾನಪದಗಳನ್ನು, ಚಿತ್ರಗಳನ್ನು ಕಳುಹಿಸಬಹುದು.

Makkalamandara@Gmail.com ಗೆ ಕಳುಹಿಸಿ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿನನ್ನ ವಾಟ್ಸಪ್ 9980952630.

12 ವರ್ಷಗಳ ನಿರಂತರ ಪಯಣದ ಮಕ್ಕಳಿಂದ ಮಕ್ಕಳಿಗಾಗಿ ಮಕ್ಕಳೆ ಬರೆದ ಬರಹಗಳ "ಮಕ್ಕಳ ಮಂದಾರ "ಪತ್ರಿಕೆಯ ಮೇ-ಜೂನ್ ಸಂಚಿಕೆ ಸಿದ್ದವಾಗುತ್ತಿದೆ.ಇದು ಮಕ್ಕಳ  ಸೃಜನಾತ್ಮಕ ಆಂತರಿಕ ಸಂವಹನಕ್ಕಾಗಿ ಉಚಿತ ಪತ್ರಿಕೆಯಾಗಿ ಮುನ್ನಡೆಯುತ್ತಿದೆ.ಈ ಪತ್ರಿಕೆಗೆ ಮಕ್ಕಳೇ ವರದಿಗಾರರು ಮಕ್ಕಳೇ ಬರಹಗಾರರು ಮಕ್ಕಳೇ  ವಿದ್ಯಾರ್ಥಿ ಸಂಪಾದಕರು ಆಗಿರುತ್ತಾರೆ.ಹಿರಿಯರಾದ ತಾವುಗಳು ಸಹ ನಮ್ಮ ಸಂಪಾದಕೀಯ ಮಂಡಳಿ ಜೊತೆಗೂಡಬಹುದು. ಮಕ್ಕಳಿಗಾಗಿ ಪತ್ರಿಕೆಯೊಂದಿಗೆ ಕೈಜೋಡಿಸಬಹುದು. ಪತ್ರಿಕೆಯ ಸದಸ್ಯರಾಗಬಹುದು. ನಿಮ್ಮ ಪ್ರೋತ್ಸಾಹ ಬಯಸುತ್ತೇವೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ.ನನ್ನ ವಾಟ್ಸಪ್ 9980952630.

ನಿಮ್ಮ ರವಿರಾಜ್ ಸಾಗರ್.

Sunday 9 August 2020

may - 10 children educational drama-''ಮೇ -೧೦'' ಮಕ್ಕಳ ಶೈಕ್ಷಣಿಕ ನಾಟಕ





ನಮ್ಮ ಶಾಲಾ ಮಕ್ಕಳಿಂದ ರಾಯಚೂರಿನ ಆಕಾಶವಾಣಿಯಲ್ಲಿ ನಾಟಕ

ನನ್ನ ರಚನೆ ಮತ್ತು ನಿರ್ಧೆಶನದಲ್ಲಿ  may - 10,  children educational drama-''ಮೇ -೧೦'' ಮಕ್ಕಳ ಶೈಕ್ಷಣಿಕ ನಾಟಕ

ಗುಡುಗು ಮಿಂಚು-ಮಳೆ- ವೈಜ್ಞಾನಿಕ ಕತೆ





ಗುಡುಗು ಮಿಂಚು-ಮಳೆ- ವೈಜ್ಞಾನಿಕ  ಕತೆ

ನಲಿ ಕಲಿ ಗೀತೆ ಮಕ್ಕಳಿಂದ - nali kali songs



ನಲಿ ಕಲಿ  ಗೀತೆ ಮಕ್ಕಳಿಂದ - nali kali  songs

ಹಬ್ಬಗಳು - ಪರಿಸರ ಪಾಠ.3 ನೇತರಗತಿ.





ಹಬ್ಬಗಳು - ಪರಿಸರ ಪಾಠ.3 ನೇತರಗತಿ.