ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ
- Home
- ಸಂಪಾದಕೀಯ
- ಮಕ್ಕಳು ಬರೆದ ಕತೆ /ಕವನಗಳು
- ನಮ್ಮೂರ ಸುದ್ದಿಗಳು
- ಮಕ್ಕಳ ಬರಹಗಳು
- ಬಾಲ ಸಾಧಕರು
- ಮಕ್ಕಳು ಬಿಡಿಸಿದ ಚಿತ್ರಗಳು
- ನಮ್ಮೂರ ಜಾನಪದ
- ಜ್ಞಾನ - ವಿಜ್ಞಾನ
- ಸಾಮಾನ್ಯ ಜ್ಞಾನ
- ನಮ್ಮ ಪತ್ರಿಕಾ ಅಭಿಯಾನಗಳು
- ಓದುಗರ ಓಲೆ
- ಅತಿಥಿ ಸಾಹಿತಿಗಳ ಅಂಕಣ
- ಮಕ್ಕಳ ಪುಸ್ತಕಗಳ ಪರಿಚಯ-ಆನ್ ಲೈನ್ ಬುಕ್ ಹೌಸ್
- ಶೈಕ್ಷಣಿಕ ಲೇಖನಗಳು
- ಶೈಕ್ಷಣಿಕ ಚಟುವಟಿಕೆಗಳು
- ಲಾಂಗ್ವೇಜ್ ಕಾರ್ನರ್
- 1ರಿಂದ -puc ತರಗತಿ ಈ ಶಾಲೆ
- ನನ್ನ ಶೈಕ್ಷಣಿಕ ವೀಡಿಯೋಗಳು
- ಸಾರ್ವಜನಿಕ ಶಿಕ್ಷಣ ಇಲಾಖೆ
- ಹಿಂದಿನ ಸಂಚಿಕೆಗಳು ಮತ್ತು ಪತ್ರಿಕೆ ಕುರಿತು ಮಾಧ್ಯಮ ವರದಿ ...
- ನಮ್ಮ ಕುರಿತು ಫೋಟೋ ಗ್ಯಾಲರಿ
- ಅಂಕಣ ಬರಹ- ಕನಸುಗಳೂರ ಶ್ರಮಿಕ
- ಆನ್ಲೈನ್ ಪುಸ್ತಕ ಮಳಿಗೆಗಳು
- ಪಿಡಿಎಫ್ ಪುಸ್ತಕಗಳು.
- Ravichandra
- ಆನ್ಲೈನ್ ಪಾಠಗಳು - ದೀಕ್ಷಾ ಪೊರ್ಟಲ್
- ಇನ್ನೋವೇಟಿವ್ ಎಜ್ಯುಕೇಶನ್
Wednesday, 18 September 2024
Tuesday, 13 August 2024
ಸುಳ್ಳೂರ ಶಾಲೆಯಲ್ಲಿ ಪಾಲಕರಿಂದ ಸ್ವಚ್ಛತಾ ಸಪ್ತಾಹ
ಊರಿನ ಗ್ರಾಮಸ್ಥರಿಂದ ಸುಳ್ಳೂರು ಶಾಲೆಯಲ್ಲಿ ಸ್ವಚ್ಛತಾ ಸಪ್ತಾಹ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಳೂರಿನ ಹಿರಿಯ ವಿದ್ಯಾರ್ಥಿಗಳು , ಪಾಲಕರೆಲ್ಲರೂ ಸೇರಿ ಶಾಲಾ ಮಕ್ಕಳ ಆಟದ ಮೈದಾನ ನಿರ್ಮಾಣ, ಸ್ವಚ್ಛತೆ, ಶಾಲಾವನ ಮತ್ತು ಶಾಲಾ ಕೈತೋಟ ನಿರ್ವಹಣಾ ಕಾರ್ಯವನ್ನು ಸ್ವಯಂ ಸೇವಾ ಆಸಕ್ತಿಯಿಂದ ಸ್ವತಹ ನಿರ್ವಹಿಸಿ ಮಾದರಿಯಾಗಿದ್ದಾರೆ. ತಮ್ಮ ಊರಿಗೆ ಸರ್ಕಾರಿ ಶಾಲೆಯ ಬಗ್ಗೆಗಿನ ಕಾಳಜಿಯ ಕುರಿತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮೆಚ್ಚುಗೆ ಸೂಚಿಸಿದ್ದಾರೆ.
ನಮ್ಮ ಶಾಲೆ ನಮ್ಮ ಹೆಮ್ಮೆ ತಂಡ ಮತ್ತು ಮಕ್ಕಳ ಮಂದಾರ ತಂಡದ ವತಿಯಿಂದ ಪೋಷಕರ ಮಹಾಸಭೆ ಮತ್ತು ಸ್ವಚ್ಛತಾ ಸಪ್ತಾಹವನ್ನು ಆಯೋಜಿಸಲಾಗಿತ್ತು. ಈ ವರ್ಷ ಸುರಿದ ಅಧಿಕ ಮಳೆಯಿಂದ ಶಾಲಾ ಆವರಣ ಬೃಹತ್ ಕಳೆ, ಹುಲ್ಲಿನಿಂದಾಗಿ ಹಾವುಗಳ ಹಾವಳಿ ಅಧಿಕವಾಗಿತ್ತು. ಇದನ್ನು ಗಮನಿಸಿದ ಮುಖ್ಯ ಗುರುಗಳಾದ ರವಿಚಂದ್ರರವರು ಮಕ್ಕಳೊಂದಿಗೆ ತಾವೇ ಸ್ವತಹ ಶಾಲಾ ಸ್ವಚ್ಚತೆ ಆರಂಭಿಸಿ ಊರಿನ ಪಾಲಕರಿಗೆ ಶಾಲಾ ಸ್ವಚ್ಛತಾ ನಿರ್ವಹಣೆಗೆ ಬರುವಂತೆ ಕರೆ ನೀಡಿದ್ದರು. 20ಕ್ಕೂ ಅಧಿಕ ಪಾಲಕರು ತಮ್ಮ ಜವಾಬ್ದಾರಿ ಅರಿತು ಗುದ್ದಲಿ, ಕುಡುಗೋಲು ಹಿಡಿದುಕೊಂಡು ಬಂದು ಸುಮಾರು ಎರಡು ಎಕರೆಗಿಂತಲೂ ಅಧಿಕ ವಿಸ್ತೀರ್ಣ ಹೊಂದಿರುವ ಶಾಲಾ ಆವರಣವನ್ನು ಸ್ವಚ್ಛಗೊಳಿಸಿದರು. ಕೈತೋಟದ ಅಡಿಕೆ ಗಿಡ, ತೆಂಗಿನ ಮರ, ವಿವಿಧ ಹೂವಿನ ಗಿಡಗಳು ಮತ್ತು ಮತ್ತಿತರ ಗಿಡಗಳಿಗೆ ಮಣ್ಣು ಹಾಕುವುದು, ಕಳೆ ನಿರ್ವಹಣೆ, ಚರಂಡಿ ಸ್ವಚ್ಛತೆ ಮತ್ತಿತರ ಕೆಲಸಗಳನ್ನು ಮಾಡಿ ತಮ್ಮ ಊರಿನ ಶಾಲೆಯನ್ನ ಸುಂದರಗೊಳಿಸಿದ್ದು ಶ್ಲಾಘನೀಯ ವಿಷಯವಾಗಿದೆ. ಎಸ್ ಡಿ ಎಂ ಸಿ ಅಧ್ಯಕ್ಷರಾದ ಬೀರನ್ ಕುಟ್ಟಿ, ಮುಖ್ಯ ಶಿಕ್ಷಕರಾದ ರವಿಚಂದ್ರ, ಹಿರಿಯ ಶಿಕ್ಷಕರಾದ ಪರುಶುರಾಮಪ್ಪ ಅವರು ಸಹ ಸ್ವಚ್ಛತಾ ಕೆಲಸದಲ್ಲಿ ತೊಡಗಿಕೊಂಡು ಮಾರ್ಗದರ್ಶನ ಮಾಡಿದ್ದರು.
ಜಾನಪದ ವಿಶ್ವವಿದ್ಯಾಲಯದ ಡಿಪ್ಲೋಮಾ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ ..
ಜಾನಪದ ವಿಶ್ವವಿದ್ಯಾಲಯದ ಡಿಪ್ಲೋಮಾ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ . ಹಸೆ ಚಿತ್ತಾರ , ನಾಟಿ ವೈದ್ಯ ,ವಿವಿಧ ಜಾನಪದ ನಿಕಾಯಗಳಲ್ಲಿ ಸ್ನಾತಕೋತ್ತರ ಡಿಪ್ಲೋಮಾ ,ಡಿಪ್ಲೋಮಾ ...
-
ಚಿಕ್ಕಂದಿನಲ್ಲಿ ನಮಗೆ ಬರುತ್ತಿದ್ದ, ನಾವೆಲ್ಲಾ ಹಾಡುತ್ತಿದ್ದ ಮರೆಯಲಾಗದ ಪದ್ಯಗಳು.. ಇವುಗಳಲ್ಲಿ ನಿಮಗೆಷ್ಟು ಗೊತ್ತು.. ತಿಳಿಸಿ..* ❤️❤️❤️...
-
ಕನ್ನಡ ವ್ಯಾಕರಣ @EDUCATIONGKNEWS. •ಕನ್ನಡ ವರ್ಣಮಾಲೆ •ಸಂಧಿ ಪ್ರಕರಣ •ನಾಮ ಪದ ಪ್ರಕರಣ •ಲಿಂಗಳು •ವಚನಗಳು •ವಿಭಕ್ತಿ ಪ್ರತ್ಯಯಗಳು •ಕ್ರಿಯಾಪದ ಪ್ರಕರಣ •ಕ...
-
*ಛಂದಸ್ಸು* ಛಂದಸ್ಸು - ಪದ್ಯವನ್ನು ರಚಿಸುವ ಶಾಸ್ತ್ರ. ಛಂದಸ್ಸಿನ ಶಾಸ್ತ್ರದ ಪ್ರಕಾರ ರಚಿತವಾದ ಪದ್ಯವನ್ನು ಛಂದೋಬದ್ಧ ಪದ್ಯ ಎನ್ನುವರು. ಛಂದಸ್ಸು ಕನ್ನಡ ಸಾಹಿತ್ಯ, ಸ...