ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Thursday 24 February 2022

ಮಲ್ಕಾಪುರ ಶಾಲೆಯಲ್ಲಿ ಸಾಂಪ್ರದಾಯಿಕ ಚಿತ್ರಕಲೆ ಯೊಂದಿಗೆ ಸೃಜನಶೀಲ ಕಲಿಕೆ

"ಸಾಂಪ್ರದಾಯಿಕ ಚಿತ್ರಕಲೆಯೊಂದಿಗೆ ಸೃಜನಶೀಲ ಕಲಿಕೆ ಪರಿಣಾಮಕಾರಿ"  ಹಸೆ ಚಿತ್ತಾರ ಸಂಶೋಧನಾ ಕೃತಿಕಾರ ರವಿಚಂದ್ರ.


ಮಲ್ಕಾಪುರ:  ಕರ್ನಾಟಕ ನೆಲಮೂಲದ ಸಂಪ್ರದಾಯಿಕ ಚಿತ್ರ ಕಲೆಯಾದ ಹಸೆ ಚಿತ್ತಾರ ಪುನರುಜ್ಜೀವನಕ್ಕಾಗಿ ಸಾಂಪ್ರದಾಯಿಕ  ಚಿತ್ರಕಲೆಯಲ್ಲಿ ಸೃಜನಶೀಲ ಕಲಿಕೆ ಅಗತ್ಯ ಹಾಗೂ ಅದು ಮಕ್ಕಳ ಸೃಜನಶೀಲ  ಗುಣಮಟ್ಟ ಶಿಕ್ಷಣಕ್ಕೆ ಪೂರಕವಾಗಿದೆ ಎಂದು ಹಸೆ ಚಿತ್ತಾರ ಸಂಶೋಧನಾ ಕೃತಿ ಲೇಖಕ , ಮಲ್ಕಾಪುರ ಶಾಲಾ ಶಿಕ್ಷಕ ರವಿಚಂದ್ರ ಅವರು ಮಲ್ಕಾಪುರ ಶಾಲೆಯಲ್ಲಿ ಶಾಲಾ ಮಕ್ಕಳಿಗಾಗಿ ಆಯೋಜಿಸಿದ್ದ  "ಸಾಂಪ್ರದಾಯಿಕ ಚಿತ್ರಕಲೆ ಯೊಂದಿಗೆ ಸೃಜನಶೀಲ ಶಿಕ್ಷಣ ತರಬೇತಿ ಮತ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಅಭಿಪ್ರಾಯಪಟ್ಟರು.

 ಮಲ್ಕಾಪುರ ಶಾಲಾ ಗೋಡೆಗಳಿಗೆ ಹಸೆ ಚಿತ್ತಾರ ಬಿಡಿಸಿ ಮೆರಗು ನೀಡಿರುವ ಹಸೆ ಚಿತ್ತಾರ ಕಲಾವಿದೆ ಉಷಾ .ಜಿ ಎ ಸಾಗರ ಇವರು ಸಂಪ್ರದಾಯಿಕ ಚಿತ್ತಾರ ಕಲೆ ಪುನರುಜ್ಜೀವನಕ್ಕೆ ಶಾಲೆ ಉತ್ತಮ ವೇದಿಕೆ. ಅದು ಮಕ್ಕಳ  ಸೃಜನಶೀಲ ಕಲಿಕೆಗೆ ಪೂರಕ ಎಂದರು.

ಮಸ್ಕಿಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಆದಪ್ಪ ಹೆಂಬಾ ಅವರು ಮಲ್ಕಾಪುರದಂತ ಸಣ್ಣ ಹಳ್ಳಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳ ಸಹಪಠ್ಯ  ಚಟುವಟಿಕೆಗೆ ಹಲವು ಹೊಸ ಸೃಜನಶೀಲ ಪ್ರಯೋಗಗಳನ್ನು  ನೀಡಿದ ರವಿಚಂದ್ರ ಹಾಗೂ ಈ ಶಾಲಾ  ಶಿಕ್ಷಕರ  ಪ್ರಯತ್ನ ಶ್ಲಾಘನೀಯ ಎಂದರು.

ಮಕ್ಕಳಿಗೆ ಹಸೆ ಚಿತ್ತಾರ ತರಬೇತಿಯನ್ನು ಶಾಲಾ ಸಹಪಠ್ಯ ಚಟುವಟಿಕೆಗಳ ಜೊತೆ ಕಲಿಸಿದ  ಶಿಕ್ಷಕ ರವಿಚಂದ್ರ ಅವರು   ಮಕ್ಕಳಿಗೆ ಹಸೆ ಚಿತ್ತಾರ ತರಬೇತಿ ಜೊತೆಗೆ  ಸ್ಪರ್ಧೆ ಆಯೋಜಿಸಿ ಬಹುಮಾನಗಳನ್ನು ನೀಡಿದರು.

 ಕರ್ನಾಟಕ ಹಸೆ ಚಿತ್ತಾರ ಪರಿಷತ್ತು, ಸೃಜನ ಶಿಕ್ಷಣ ಸಂಶೋಧನಾ ಟ್ರಸ್ಟ್ ಸಹಯೋಗದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಮಲ್ಕಾಪುರದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯಶಿಕ್ಷಕ ಮಲ್ಲಪ್ಪ ಅವರು ವಹಿಸಿದ್ದು ಮಕ್ಕಳಿಗೆ ಕಲಿಕೆ ಜೊತೆಗೆ  ಸದಾ ಯಾವುದಾದರು ಸಹಪಠ್ಯ ಚಟುವಟಿಕೆಗಳು ಅಗತ್ಯ ಎಂದರು.  ಎಸ್ಡಿಎಂಸಿ ಅಧ್ಯಕ್ಷೆ ರೇಣುಕಮ್ಮ,  ಬಸವರಾಜ್, ಹಳ್ಳಯ್ಯ ಶೆಟ್ಟಿ , ಶಿವಶಂಕರ್ ಗೌಡ ವೇದಿಕೆಯಲ್ಲಿದ್ದರು.ಶಿಕ್ಷಕರಾದ ಶಿವರಾಂ,ಬೂದೇಶ್ , ರಾಜೇಶ್ವರಿ ಕಾರ್ಯಕ್ರಮ ನಿರ್ವಹಿಸಿದರು. ಊರಿನ ಗ್ರಾಮಸ್ಥರು, ಹಿರಿಯ ವಿದ್ಯಾರ್ಥಿಗಳು ತರಬೇತಿಯಲ್ಲಿ ಪಾಲ್ಗೊಂಡಿದ್ದರು.

ಸುಳ್ಳೂರ ಶಾಲೆಯಲ್ಲಿ ಪಾಲಕರಿಂದ ಸ್ವಚ್ಛತಾ ಸಪ್ತಾಹ

ಊರಿನ ಗ್ರಾಮಸ್ಥರಿಂದ ಸುಳ್ಳೂರು ಶಾಲೆಯಲ್ಲಿ ಸ್ವಚ್ಛತಾ ಸಪ್ತಾಹ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಳೂರಿನ ಹಿರಿಯ ವಿದ್ಯಾರ್ಥಿಗಳು , ಪಾಲಕರೆಲ್ಲರೂ ಸೇರ...