ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Friday 26 August 2022

ಮಕ್ಕಳ ಮಂದಾರ 15 ನೇ ವರ್ಷದತ್ತ ವಿಶೇಷ ಸಂಚಿಕೆ

https://drive.google.com/file/d/1n9-AcVSKa5byIWlKZWyrIBN2V3dlHuLP/view?usp=drivesdk
ಈ ಲಿಂಕ್ ಕ್ಲಿಕ್ ಮಾಡಿ ಮಕ್ಕಳ ಮಂದಿರ ಪತ್ರಿಕೆ ಓದಿ..

ಇದು 15ನೇ ವರ್ಷದತ್ತ ಯಶಸ್ವಿ ಪ್ರಯಾಣದ ವಿಶೇಷ ಸಂಚಿಕೆ.
ಕ್ಲಿಕ್ ಮಾಡಿ

Wednesday 27 July 2022

ಕಾಲೇಜು ವಿದ್ಯಾರ್ಥಿಗಳು ಪ್ರಬಂಧ ಬರೆದು 10000 ವಿವಿಧ ಬಹುಮಾನ ಗೆಲ್ಲುವ ಅವಕಾಶ

ಧಾರವಾಡದ ವಿದ್ಯಾವರ್ಧಕ ಸಂಘ ಏರ್ಪಡಿಸಿರುವ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ.ಬಹುಮಾನ ಗೆಲ್ಲುವ ಅವಕಾಶ ಕಾಲೇಜು ವಿದ್ಯಾರ್ಥಿಗಳಿಗೆ ನೀಡಲಾಗಿದೆ..
ಈ ಕೆಳಗಿನ ಪೋಸ್ಟ್ ಓದೀ. ಭಾಗವಹಿಸಿ.


Thursday 3 March 2022

ವಿವಿಧ ದತ್ತಿ ಪುರಸ್ಕಾರಗಳಿಗೆ ಆಹ್ವಾನ

*ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗ ಘಟಕದಿಂದ 2021 ನೇ ಸಾಲಿನ ವಿವಿಧ ದತ್ತಿ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ* 


ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗ
ಸೃಜನ ಶಿಕ್ಷಣ ಸಂಶೋಧನಾ ಟ್ರಸ್ಟ್ (ರಿ)
ಮಕ್ಕಳ ಮಂದಾರ ಬಳಗ ಸಹಯೋಗದಲ್ಲಿ
2021 ನೇ ಸಾಲಿನ ವಿವಿಧ ಐದು ವಿಭಾಗಗಳ ದತ್ತಿ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.


 *1. ಡಾ.ಕೊಡಕ್ಕಲ್ ಶಿವಪ್ರಸಾದ್ ದತ್ತಿ ಪುರಸ್ಕಾರ* 

ರಾಜ್ಯದ ಅಂಗವಿಕಲ ಮಕ್ಕಳ ಶಿಕ್ಷಣ , ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದವರಿಗೆ ಈ ಪುರಸ್ಕಾರ ಮೀಸಲಾಗಿದೆ. ಸಂಬಂಧಿಸಿದ ತಮ್ಮ ಸೇವಾ ವಿವರಗಳನ್ನು ಪಿಡಿ ಎಪ್ ಕಳುಹಿಸಲು ಕೋರಿದೆ.

Makkalamandara@gmail.com


2 *."ಮಕ್ಕಳ ಮಂದಾರ ರಾಜ್ಯ ಪ್ರಶಸ್ತಿ" ಪುರಸ್ಕಾರಕ್ಕೆ ಅರ್ಜಿ ಆಹ್ವಾನ* 

21 ನೇ ಸಾಲಿನಲ್ಲಿ ಪ್ರಕಟವಾದ ಯಾವುದೇ ರೀತಿಯ ಮಕ್ಕಳ ಸಾಹಿತ್ಯ ಕೃತಿಗಳಿಗೆ ಈ ಪ್ರಶಸ್ತಿ ಮೀಸಲು. 
ಈ ಪ್ರಶಸ್ತಿ ಆಯ್ಕೆಗೆ ಬಂದ ಮಕ್ಕಳ ಸಾಹಿತ್ಯದ ವೈವಿಧ್ಯಮಯ ಕೃತಿಗಳ ಸಂಖ್ಯೆಯನ್ನು ಗುಣಮಟ್ಟವನ್ನು ಆಧರಿಸಿ ಈ ಪ್ರಶಸ್ತಿಯ ಪುರಸ್ಕೃತರ ಸಂಖ್ಯೆಗಳನ್ನು ಸಮಿತಿಯಿಂದ ನಿರ್ಧರಿಸಲಾಗುತ್ತದೆ.


 *3. ನೇಕಾರ ಪ್ರಕಾಶನ ದತ್ತಿ ಪುರಸ್ಕಾರ* 

ಈ ಪುರಸ್ಕಾರವು 2021 ನೇ ಸಾಲಿನಲ್ಲಿ
ಪ್ರಕಟವಾದ ಜಾನಪದ ಸಾಹಿತ್ಯ ವಿಭಾಗದಲ್ಲಿ ಕೃತಿ ಪ್ರಕಟಿಸಿದ ಉತ್ತಮ ಕೃತಿಗೆ ಮೀಸಲಾಗಿರುತ್ತದೆ.

 *4. ಶ್ರೀಮತಿ ಕುಮುದಾ ಸುಶೀಲಪ್ಪ ದತ್ತಿ ಪುರಸ್ಕಾರ.* 

ರಾಜ್ಯದ ಬುಡಕಟ್ಟು ಮಕ್ಕಳ ಶ್ರೇಯೋಭಿವೃದ್ಧಿಗೆ, ಬುಡಕಟ್ಟು ಕಲೆ, ಸಾಹಿತ್ಯ ಪರಂಪರೆಯ ಪುನರುಜ್ಜೀವನಕ್ಕೆ ಶ್ರಮಿಸಿದವರಿಗೆ ಈ ಪುರಸ್ಕಾರ ಮೀಸಲು. ತಮ್ಮ ಸೇವೆಯ ಸಂಬಂಧಿತ ದಾಖಲೆಗಳನ್ನು ಪಿಡಿಎಫ್ ನಲ್ಲಿ ಇ-ಮೇಲ್ ಮಾಡಬಹುದು.


5. *ಮಕ್ಕಳ ಮಂದಾರ ಗೌರವ ಪುರಸ್ಕಾರ.* 

  ಈ ಪುರಸ್ಕಾರ ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ ಮಕ್ಕಳ ಸಾಹಿತ್ಯ, ಪ್ರಕಾಶನ, ಶಾಲಾ ಶೈಕ್ಷಣಿಕ ಸೇವೆಯಲ್ಲಿನ ಸೂಕ್ತ ವ್ಯಕ್ತಿಗಳಿಗೆ ಮಾತ್ರ ಆಗಿರುತ್ತದೆ.

ಮಕ್ಕಳ ಶಿಕ್ಷಣದಲ್ಲಿ ನಾವಿನ್ಯ ಪ್ರಯೋಗ ಮಾಡಿದ ಶಿಕ್ಷಕರು , ಮಕ್ಕಳ ಶಿಕ್ಷಣಕ್ಕೆ ಹಾಗೂ ಸರ್ಕಾರಿ ಶಾಲಾ ಸಬಲಿಕರಣಕ್ಕೆ ಶ್ರಮಿಸಿದವರು, ಮಕ್ಕಳ ಹಕ್ಕುಗಳ ಹೋರಾಟಗಾರರ ಜೀವಮಾನದ ಸಾಧನೆಗೆ
ಮಕ್ಕಳ ಮಂದಾರ" ಗೌರವ ಪುರಸ್ಕಾರ ಮೀಸಲಾಗಿದೆ.

ಅಂತಹ ಸಾಧಕರ ವಿವರಗಳನ್ನು ಸೂಕ್ತ ಲಗತ್ತುಗಳೊಂದಿಗೆ ಪಿಡಿಎಫ್ ಫೈಲ್ ಜೊತೆಗೆ ಯಾರಾದರೂ ನಾಮನಿರ್ದೇಶನ ಮಾಡಬಹುದು. ಅಥವಾ ಸ್ವತಹ ಅಭ್ಯರ್ಥಿಯೆ ಅರ್ಜಿ ಸಲ್ಲಿಸಬಹುದು.

 *ರಾಜ್ಯ ಪ್ರಶಸ್ತಿಗಳು ನಗದು ಪುರಸ್ಕಾರ, ಸನ್ಮಾನ ಪತ್ರವನ್ನು ಒಳಗೊಂಡಿರುತ್ತದೆ.* 

 *ಗೌರವ ಪುರಸ್ಕಾರಗಳು ಸನ್ಮಾನ ಹಾಗೂ ಸನ್ಮಾನ ಪತ್ರ ಫಲಕ ಒಳಗೊಂಡಿರುತ್ತದೆ.* 

 ಸಾಹಿತ್ಯ ಕೃತಿಗಳ ವಿಭಾಗಕ್ಕೆ ಅರ್ಜಿ ಸಲ್ಲಿಸುವವರು
21 ನೇ ಸಾಲಿನ ಯಾವುದೇ ರೀತಿಯ ಮಕ್ಕಳ ಸಾಹಿತ್ಯ ಕೃತಿಗಳ ಎರಡು ಪ್ರತಿಗಳನ್ನು ಕಳುಹಿಸಬೇಕು.

ಪ್ರಶಸ್ತಿ ಪುರಸ್ಕೃತರ ಸಂಖ್ಯೆಯನ್ನು ದತ್ತಿ ಪ್ರಾಯೋಜಕರು ನಿರ್ಧರಿಸುತ್ತಾರೆ. 

ಪ್ರಶಸ್ತಿ ಕುರಿತು ಯಾವುದೇ ಬದಲಾವಣೆ, ನಿಲುವುಗಳಲ್ಲಿ ಸಮಿತಿಯ ತೀರ್ಮಾನವೇ ಅಂತಿಮ.

 *ತಮ್ಮ ನಾಮನಿರ್ದೇಶನ ಪ್ರಸ್ತಾವನೆ ,ಕೃತಿಗಳನ್ನು ಕಳಿಸಲು ಕೊನೆಯ ದಿನ ಮಾರ್ಚ್ 30.2022* 

ಸೂಕ್ತ ದಾಖಲೆಗಳೊಂದಿಗೆ ತಮ್ಮ ಸೇವೆಯ ವಿವರಗಳನ್ನು ಕಳಿಸಬೇಕಾದ ಈಮೇಲ್
Makkalamandara@Gmail.com.

 *ಮಾಹಿತಿಗೆ ಕರೆ ಮಾಡಿ* - 9980952630

*********************
 *ಪ್ರಕಟಣೆ


ರವೀಂದ್ರ .ಆರ್.
ಅಧ್ಯಕ್ಷರು.
ಸೃಜನ ಶಿಕ್ಷಣ ಸಂಶೋಧನಾ ಟ್ರಸ್ಟ್.(ರಿ)



 *ಕೃತಿಗಳನ್ನು ಕಳುಹಿಸಬೇಕಾದ ವಿಳಾಸ* 

ಜಿಲ್ಲಾಧ್ಯಕ್ಷರು
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು

ಚೌಡೇಶ್ವರಿ ನಿಲಯ
ಮಂಡಗಳಲೆ
ಕಾನಲೇ ಪೋಸ್ಟ್.
ಸಾಗರ ತಾಲೂಕು
ಶಿವಮೊಗ್ಗ ಜಿಲ್ಲೆ -577430
ದೂರವಾಣಿ.
ವಾಟ್ಸಾಪ್- 9980952630.


ನಿಮ್ಮ 
ರವಿರಾಜ್ ಸಾಗರ್.
ಜಿಲ್ಲಾಧ್ಯಕ್ಷರು ಶಿವಮೊಗ್ಗ.

Thursday 24 February 2022

ಮಲ್ಕಾಪುರ ಶಾಲೆಯಲ್ಲಿ ಸಾಂಪ್ರದಾಯಿಕ ಚಿತ್ರಕಲೆ ಯೊಂದಿಗೆ ಸೃಜನಶೀಲ ಕಲಿಕೆ

"ಸಾಂಪ್ರದಾಯಿಕ ಚಿತ್ರಕಲೆಯೊಂದಿಗೆ ಸೃಜನಶೀಲ ಕಲಿಕೆ ಪರಿಣಾಮಕಾರಿ"  ಹಸೆ ಚಿತ್ತಾರ ಸಂಶೋಧನಾ ಕೃತಿಕಾರ ರವಿಚಂದ್ರ.


ಮಲ್ಕಾಪುರ:  ಕರ್ನಾಟಕ ನೆಲಮೂಲದ ಸಂಪ್ರದಾಯಿಕ ಚಿತ್ರ ಕಲೆಯಾದ ಹಸೆ ಚಿತ್ತಾರ ಪುನರುಜ್ಜೀವನಕ್ಕಾಗಿ ಸಾಂಪ್ರದಾಯಿಕ  ಚಿತ್ರಕಲೆಯಲ್ಲಿ ಸೃಜನಶೀಲ ಕಲಿಕೆ ಅಗತ್ಯ ಹಾಗೂ ಅದು ಮಕ್ಕಳ ಸೃಜನಶೀಲ  ಗುಣಮಟ್ಟ ಶಿಕ್ಷಣಕ್ಕೆ ಪೂರಕವಾಗಿದೆ ಎಂದು ಹಸೆ ಚಿತ್ತಾರ ಸಂಶೋಧನಾ ಕೃತಿ ಲೇಖಕ , ಮಲ್ಕಾಪುರ ಶಾಲಾ ಶಿಕ್ಷಕ ರವಿಚಂದ್ರ ಅವರು ಮಲ್ಕಾಪುರ ಶಾಲೆಯಲ್ಲಿ ಶಾಲಾ ಮಕ್ಕಳಿಗಾಗಿ ಆಯೋಜಿಸಿದ್ದ  "ಸಾಂಪ್ರದಾಯಿಕ ಚಿತ್ರಕಲೆ ಯೊಂದಿಗೆ ಸೃಜನಶೀಲ ಶಿಕ್ಷಣ ತರಬೇತಿ ಮತ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಅಭಿಪ್ರಾಯಪಟ್ಟರು.

 ಮಲ್ಕಾಪುರ ಶಾಲಾ ಗೋಡೆಗಳಿಗೆ ಹಸೆ ಚಿತ್ತಾರ ಬಿಡಿಸಿ ಮೆರಗು ನೀಡಿರುವ ಹಸೆ ಚಿತ್ತಾರ ಕಲಾವಿದೆ ಉಷಾ .ಜಿ ಎ ಸಾಗರ ಇವರು ಸಂಪ್ರದಾಯಿಕ ಚಿತ್ತಾರ ಕಲೆ ಪುನರುಜ್ಜೀವನಕ್ಕೆ ಶಾಲೆ ಉತ್ತಮ ವೇದಿಕೆ. ಅದು ಮಕ್ಕಳ  ಸೃಜನಶೀಲ ಕಲಿಕೆಗೆ ಪೂರಕ ಎಂದರು.

ಮಸ್ಕಿಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಆದಪ್ಪ ಹೆಂಬಾ ಅವರು ಮಲ್ಕಾಪುರದಂತ ಸಣ್ಣ ಹಳ್ಳಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳ ಸಹಪಠ್ಯ  ಚಟುವಟಿಕೆಗೆ ಹಲವು ಹೊಸ ಸೃಜನಶೀಲ ಪ್ರಯೋಗಗಳನ್ನು  ನೀಡಿದ ರವಿಚಂದ್ರ ಹಾಗೂ ಈ ಶಾಲಾ  ಶಿಕ್ಷಕರ  ಪ್ರಯತ್ನ ಶ್ಲಾಘನೀಯ ಎಂದರು.

ಮಕ್ಕಳಿಗೆ ಹಸೆ ಚಿತ್ತಾರ ತರಬೇತಿಯನ್ನು ಶಾಲಾ ಸಹಪಠ್ಯ ಚಟುವಟಿಕೆಗಳ ಜೊತೆ ಕಲಿಸಿದ  ಶಿಕ್ಷಕ ರವಿಚಂದ್ರ ಅವರು   ಮಕ್ಕಳಿಗೆ ಹಸೆ ಚಿತ್ತಾರ ತರಬೇತಿ ಜೊತೆಗೆ  ಸ್ಪರ್ಧೆ ಆಯೋಜಿಸಿ ಬಹುಮಾನಗಳನ್ನು ನೀಡಿದರು.

 ಕರ್ನಾಟಕ ಹಸೆ ಚಿತ್ತಾರ ಪರಿಷತ್ತು, ಸೃಜನ ಶಿಕ್ಷಣ ಸಂಶೋಧನಾ ಟ್ರಸ್ಟ್ ಸಹಯೋಗದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಮಲ್ಕಾಪುರದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯಶಿಕ್ಷಕ ಮಲ್ಲಪ್ಪ ಅವರು ವಹಿಸಿದ್ದು ಮಕ್ಕಳಿಗೆ ಕಲಿಕೆ ಜೊತೆಗೆ  ಸದಾ ಯಾವುದಾದರು ಸಹಪಠ್ಯ ಚಟುವಟಿಕೆಗಳು ಅಗತ್ಯ ಎಂದರು.  ಎಸ್ಡಿಎಂಸಿ ಅಧ್ಯಕ್ಷೆ ರೇಣುಕಮ್ಮ,  ಬಸವರಾಜ್, ಹಳ್ಳಯ್ಯ ಶೆಟ್ಟಿ , ಶಿವಶಂಕರ್ ಗೌಡ ವೇದಿಕೆಯಲ್ಲಿದ್ದರು.ಶಿಕ್ಷಕರಾದ ಶಿವರಾಂ,ಬೂದೇಶ್ , ರಾಜೇಶ್ವರಿ ಕಾರ್ಯಕ್ರಮ ನಿರ್ವಹಿಸಿದರು. ಊರಿನ ಗ್ರಾಮಸ್ಥರು, ಹಿರಿಯ ವಿದ್ಯಾರ್ಥಿಗಳು ತರಬೇತಿಯಲ್ಲಿ ಪಾಲ್ಗೊಂಡಿದ್ದರು.

Friday 21 January 2022

ಹಸೆ ಚಿತ್ತಾರಗಿತ್ತಿ ಲಕ್ಷ್ಮಮ್ಮ ಗಡೆಮನೆ ಅವರಿಗೆ ಜಾನಪದ ಅಕಾಡೆಮಿ ಗೌರವ ಪ್ರಶಸ್ತಿ


 ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಗಡೇಮನೆ ಗ್ರಾಮದವರಾದ ಶ್ರೀಮತಿ ಲಕ್ಷ್ಮಿ ರಾಮಪ್ಪ ಇವರು ಕರ್ನಾಟಕದ ಹಸೆ ಚಿತ್ತಾರ ಕಲೆಯನ್ನು ರಾಷ್ಟ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯಗೊಳಿಸಲು ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಗೃಹಿಣಿಯಾಗಿ ಕೃಷಿಕರಾಗಿದ್ದು ಸೂಕ್ಷ್ಮ ವಿನ್ಯಾಸದ ಹಸೆ ಚಿತ್ತಾರ ಕಲಾವಿದೆ. ಎಲ್ಲಾ ದೀವರ ಹೆಣ್ಣುಮಕ್ಕಳಂತೆ ಸಾಂಪ್ರದಾಯಿಕ ಹಸೆ ಚಿತ್ತಾರ ಬರೆಯುವುದನ್ನು ಕಲಿತ ಇವರು ತಮ್ಮ ತಾಯಿಯಿಂದ ನೋಡುತ್ತಲೇ ಕಲಿತಿದ್ದಾರೆ. ದೀವರ ಹೆಣ್ಣುಮಕ್ಕಳಿಗೆ ಸಾಮಾನ್ಯವಾಗಿ ಹಸೆಚಿತ್ತಾರ ರಕ್ತಗದ ಕಲೆ ಎಂದೇ ಹೇಳಬಹುದು. ಇವರು ಸುಮಾರು ಮೂವತ್ತು ವರ್ಷಗಳಿಂದ ಇವರ ಹಸೆಚಿತ್ತಾರಗಳು ರಾಜ್ಯ ಮಟ್ಟದಲ್ಲಿ, ರಾಷ್ಟçಮಟ್ಟದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವು ಬಾರಿ ಪ್ರದರ್ಶನವಾಗಿವೆ. ಮತ್ತು ತರಬೇತಿ ಸಹ ನೀಡಿದ್ದಾರೆ. ಮಲೆನಾಡಿನ ರೈತಾಪಿ ವರ್ಗದ ಜಾನಪದ ಗೀತೆಗಳನ್ನು ಹಾಡುವಲ್ಲಿಯೂ ಸಹ ಇವರು ಎತ್ತಿದ ಕೈ.
  ಇವರಿಗೆ 2021 ನೇ ಸಾಲಿನ ಜಾನಪದ ಅಕಾಡೆಮಿ ಗೌರವ ಪ್ರಶಸ್ತಿ ಒಲಿದು ಬಂದಿರುವುದು ಮಲೆನಾಡಿನ ಹಸೆಚಿತ್ತಾರ ಪರಂಪರೆಗೆ ಸಂದ ಗೌರವ ಎಂದು ಜಾನಪದ ಅಕಾಡೆಮಿ ಸದಸ್ಯ ಪುಷ್ಪಲತ ಹರ್ಷ ವ್ಯಕ್ತಪಡಿಸಿದ್ದಾರೆ.
 

ಮಲೆನಾಡಿನಲ್ಲಿ ಮದುವೆ ಶಾಸ್ತ್ರಕ್ಕೆ ,ಭೂಮಣ್ಣಿ ಹಬ್ಬಕ್ಕೆ ಪ್ರದಾನವಾಗಿ ಲಕ್ಷಾಂತರ ದೀವರ ಹೆಣ್ಣುಮಕ್ಕಳು, ಹಾಗು ಬೇರೆ ಬೇರೆ ಜಾತಿ ಸಮುದಾಯದ ಹಳ್ಳಿಯ ಹೆಣ್ಣುಮಕ್ಕಳು ಬಿಡಿಸುವ ಸಂಪ್ರದಾಯಿಕ ಚಿತ್ತಾರ ಕಲೆಯಾಗಿರುವ ಹಸೆಚಿತ್ತಾರವನ್ನು ಗಡೇಮನೆ ಲಕ್ಷ್ಮಮ್ಮ ಅವರು ಮತ್ತಷ್ಟು ಸೂಕ್ಷ ವಿನ್ಯಾಸಗಳೊಂದಿಗೆ ಚಿತ್ರಿಸುವಲ್ಲಿ ಸಿದ್ದಹಸ್ತರಾಗಿದ್ದಾರೆ.

 ತರಬೇತಿ ಮತ್ತು ಪ್ರದರ್ಶನಗಳು
 
ಅವರು ಹಲವು ತಾಲ್ಲೂಕು, ಜಿಲ್ಲೆ ರಾಜ್ಯ ರಾಷ್ಟçಹಂತದಲ್ಲಿ ಸಾಕಷ್ಟು ತರಬೇತಿಗಳನ್ನು ನೀಡಿದ್ದಾರೆ. ಹಸೆ ಚಿತ್ತಾರ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದಾರೆ. ಮುಖ್ಯವಾಗಿ 1999 ರಲ್ಲಿ ನೀನಾಸಂ ಸಂಸ್ಥೆಯಿಂದ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಒಂದು ವಾರ ವಿವಿಧ ಜಿಲ್ಲೆಯ ಶಿಬಿರಾರ್ಥಿಗಳಿಗೆ ತರಬೇತಿ ನೀಡಿದ್ದಾರೆ. 2000ನೇ ಸಾಲಿನಲ್ಲಿ ಹೊನ್ನೆಮರಡುವಿನಲ್ಲಿ ಒಂದು ವರ್ಷ ಹಲವಾರು ಮಹಿಳೆಯರಿಗೆ ತರಬೇತಿ ನೀಡಿದ್ದಾರೆ. 2002ರಲ್ಲಿ ಸಾಗರದ ಸ್ಥಳೀಯರಿಗೆ ಭೀಮನಕೇರಿ ಶಾಲೆ, ಹೊನಕೇರಿ ಶಾಲೆ ಇನ್ನಿತರ ಕಡೆಗಳಲ್ಲಿ ಶಾಲಾ ಮಕ್ಕಳಿಗೆ ತರಬೇತಿ ನೀಡಿದ್ದಾರೆ. 2007ರಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಶಾಲಾ ಮಕ್ಕಳಿಗೆ ತರಬೇತಿ ನೀಡಿದ್ದಾರೆ. 2011ರಲ್ಲಿ ಸರ್ವ ಶಿಕ್ಷಣ ಅಭಿಯಾನ ಕರ್ನಾಟಕ ಸರ್ಕಾರ ಸಂಸ್ಥೆಗಳ ಸಹಯೋಗದೊಂದಿಗೆ ಬೆಂಗಳೂರಿನಲ್ಲಿ ಹೆಬ್ಬಾಳದಲ್ಲಿ 2000ಕ್ಕೂ ಹೆಚ್ಚು ಶಾಲಾ ಮಕ್ಕಳಿಗೆ ತರಬೇತಿ ನೀಡಿದ್ದಾರೆ. 2012ರಲ್ಲಿ ಹಂಪಿ ವಿಶ್ವವಿದ್ಯಾನಿಲಯದ ವಸ್ತುಸಂಗ್ರಹಾಲಯದಲ್ಲಿ ಚಿತ್ತಾರದ ವಿವಿಧ ಬಗೆಯ ಪ್ರಕಾರಗಳನ್ನು ಪ್ರದರ್ಶನ ಮಾಡಿದ್ದಾರೆ. 2013 ರಿಂದ 18 ರವರೆಗೆ ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಮಾಸ್ ಕಮ್ಯುನಿಕೇಷನ್ ವಿದ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಚಿತ್ತಾರ ತರಬೇತಿಯನ್ನು ಹೇಳಿದ್ದಾರೆ. 2014ರಲ್ಲಿ ಹಂಪಿ ವಿಶ್ವವಿದ್ಯಾಲಯ ಚಿತ್ರಕಲಾ ಪರಿಷತ್ ಬೆಂಗಳೂರು ವಿಶ್ವವಿದ್ಯಾಲಯ ಕಲಾಮಂದಿರ ವಿದ್ಯಾರ್ಥಿಗಳಿಗೆ ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ಸಂಸ್ಥೆಯಲ್ಲಿ ತರಬೇತಿ ಏರ್ಪಡಿಸಿದಾರೆ.
 2015ರಲ್ಲಿ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕು ಚಿತ್ರಕಲಾ ಶಿಕ್ಷಕರ ಸಂಘ ಇವರು ಬೆಂಗಳೂರು ಇವರ ಸಹಯೋಗದೊಂದಿಗೆ ಆಯೋಜಿಸಿದ ಚಿತ್ತಾರದಲ್ಲಿ ನಿರ್ದೇಶಕರಾಗಿ ತಾಲ್ಲೂಕಿನ ಚಿತ್ರಕಲಾ ಶಿಕ್ಷಕರಿಗೆ ತರಬೇತಿ ನೀಡಿದ್ದಾರೆ. 2016ರಲ್ಲಿ ಮೇಲುಕೋಟೆಯಲ್ಲಿ ಕರ್ನಾಟಕ ಲಲಿತ ಕಲಾ ಅಕಾಡೆಮಿಯಿಂದ ದೃಶ್ಯ ಕಲಾವಿದರ ಚಿತ್ರಕಲಾ ಶಿಬಿರದಲ್ಲಿ ಭಾಗವಹಿಸಿ ಚಿತ್ತಾರ ಪ್ರದರ್ಶನ ಮಾಡಿದ್ದಾರೆ. ಜಾನಪದ ವಿಶ್ವವಿದ್ಯಾಲಯದಲ್ಲಿ ಗೊಟಗೋಡಿಯಲ್ಲಿ ಚಿತ್ರಕಲಾ ವಿಷಯದಲ್ಲಿ ಎಂ.ಎ ಪದವಿ ವಿದ್ಯಾರ್ಥಿಗಳಿಗೆ
ಸಂಪನ್ಮೂಲ ವ್ಯಕ್ತಿಯಾಗಿ ಸಹ ಸೇವೆ ಸಲ್ಲಿಸಿದ್ದಾರೆ. ಸಿಪ್ರಿಯ ಸಂಸ್ಥೆ ಬೆಂಗಳೂರು ಜೊತೆಗೂಡಿ ಹಲವಾರು ಶಿಬಿರ ಏರ್ಪಡಿಸಿದ್ದಾರೆ.

 ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ತರಬೇತಿ ಮತ್ತು ಪ್ರದರ್ಶನಗಳು
 
ಇವರು ಬಿಡಿಸಿದ ಹಸೆ ಚಿತ್ತಾರಗಳು ದೇಶದಲ್ಲಿ ಅಲ್ಲದೆ ವಿದೇಶಗಳಲ್ಲಿಯೂ ಸಹ ಪ್ರದರ್ಶನ ಆಗಿವೆ.ಹಲವು ದೇಶವಿದೇಶಗಳ ಕಲಾವಿದರಿಗೆ ಚಿತ್ತಾರ ಕಲೆಯನ್ನು ತರಬೇತಿಗಳಲ್ಲಿ ಪರಿಚಯಿಸಿದ್ದಾರೆ. ಅಪ್ಪಟ ಮಲೆನಾಡಿನ ದೀವರ ಸಂಪ್ರದಾಯಿಕ ಹಸೆಚಿತ್ತಾರ ಕಲೆಯನ್ನು ದೇಶದ ವಿವಿಧ ರಾಜ್ಯಗಳಲ್ಲಿ ಸಹ ಪ್ರದರ್ಶನ ಮತ್ತು ತರಬೇತಿ ನೀಡಿದ್ದಾರೆ. ಕಲ್ಕತ್ತಾ, ನವದೆಹಲಿ, ಕುಪ್ಪಂ, ಚೆನ್ನೆöÊನಲ್ಲಿ ಜರುಗಿದ ಕಲಾಮೇಳದಲ್ಲಿ ಪ್ರದರ್ಶನ ನೀಡಿದ್ದಾರೆ. 2011ರಲ್ಲಿ ನಡೆದ ಜಪಾನ್ ಹಬ್ಬದಲ್ಲಿ ಸುಮಾರು 170 ರಿಂದ 150 ವಿದ್ಯಾರ್ಥಿಗಳಿಗೆ ಹಾಗೂ 20ರಿಂದ 25 ಶಿಕ್ಷಕರಿಗೆ ನೈಸರ್ಗಿಕವಾಗಿ ಮಾಡಿದ ಕುಂಚ ಮತ್ತು ನೈಸರ್ಗಿಕವಾಗಿ ತಯಾರಿಸಿದ ಬಣ್ಣದಲ್ಲಿ ತರಬೇತಿ ನೀಡಿದ್ದಾರೆ. ಹಾಗೂ ಜಪಾನಿನ 200 ಜನ ಸಾರ್ವಜನಿಕರಿಗೆ ತರಬೇತಿ ನೀಡಲಾಗಿದೆ. 2011ರಲ್ಲಿ ರವೀಂದ್ರ ಕಲಾಕ್ಷೇತ್ರ ಬೆಂಗಳೂರಿನಲ್ಲಿ ತರಬೇತಿ ನೀಡಲಾಗಿದೆ. 2012ರಲ್ಲಿ ವೀಲರ್ಸ್ ವೀಲ್ ಆಯೋಜಿಸಿರುವ ಲೆಕ್ಚರ್ ಡೆಮಾನ್ ಸ್ಟೇಷನ್ ನಲ್ಲಿ ಇಟಲಿಯ ಪ್ರೊ ಆಲ್ಬರ್ಟ್ ಅವರಿಗೆ ತರಬೇತಿ ನೀಡಿದ್ದಾರೆ. 2012ರಲ್ಲಿ ಫಾರ್ಮ್ ಹೌಸ್ ನಲ್ಲಿ ಜಪಾನ್ ದೇಶದ ಸುಮಾರು 18 ರಿಂದ 20 ಜನರಿಗೆ ಲೆಕ್ಚರ್ ಡೇಮಾನ್ ಸ್ಟೇಷನ್ ನೀಡಿದ್ದಾರೆ. 2013ರಲ್ಲಿ ಕಲಾಪೂರ್ಣಿಮದಲ್ಲಿ ಸುಮಾರು 50 ಜನರಿಗೆ ತರಬೇತಿ ನೀಡಿದ್ದಾರೆ. 1999 ರಲ್ಲಿ ರಮಾದೇವಿ ಅವರು ರಾಜ್ಯಪಾಲರಾಗಿದ್ದಾಗ ರಾಜಭವನದ ಗೋಡೆಯಲ್ಲಿ ಹಸೆ ಚಿತ್ತಾರ ಪ್ರದರ್ಶನ ಮಾಡಲಾಗಿದೆ. ರಾಜ್ಯದ ಹಲವಾರು ಹಸೆ ಚಿತ್ತಾರ ಪ್ರಿಯರ ಮನೆಯಲ್ಲಿ, ವಾಣಿಜ್ಯ ಕೇಂದ್ರಗಳಲ್ಲಿ, ಚಿತ್ತಾರವನ್ನು ಬಿಡಿಸಿದ್ದಾರೆ.
 ಪ್ರಶಸ್ತಿ-ಪುರಸ್ಕಾರಗಳು
2014 ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರ ನೀಡುವ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಕರ್ನಾಟಕ ಲಲಿತ ಕಲಾ ಅಕಾಡೆಮಿ ಗೌರವ ಪ್ರಶಸ್ತಿ 2014ರಲ್ಲಿ ಲಭಿಸಿದೆ. ಅಶೋಕ ಫೌಂಡೇಷನ್ ಅಂತರಾಷ್ಟ್ರೀಯ ಸಂಸ್ಥೆ 2003ರಲ್ಲಿ ಗೌರವ ಪುರಸ್ಕಾರ ನೀಡಿದೆ. ಭಾರತೀಯ ರೈಲ್ವೆ ಇಲಾಖೆ ಗೌರವ ಪುರಸ್ಕಾರ ನೀಡಿದೆ. ರಾಜ್ಯದ ವಿವಿಧ ಸಂಘ ಸಂಸ್ಥೆಗಳು ಇವರ ಕಲೆಯನ್ನು ಗುರುತಿಸಿ ಗೌರವ ಪುರಸ್ಕಾರ ನೀಡಿವೆ. ರಾಜ್ಯದ ಹಲವಾರು ಪತ್ರಿಕೆಗಳು ಇವರ ಹಸೆಚಿತ್ತಾರ ಸೇವೆಯನ್ನು ಕಲೆಯ ಕುರಿತು ಲೇಖನಗಳನ್ನು ಪ್ರಕಟಿಸಿವೆ.ದೀವರ ಯುವ ವೇದಿಕೆ, ಧೀರ ದೀವರ ಬಳಗ, ದೀವರ ಸಾಂಸ್ಕೃತಿಕ ಕ್ಷೇಮಾಭಿವೃದ್ದಿ ಸಂಘ ಗೌರವ ಪುರಸ್ಕಾರ ನೀಡಿದೆ.

 ಮಲೆನಾಡಿನ ಹಸೆ ಚಿತ್ತಾರ ಕಲಾವಿದೆಯನ್ನು ಗುರುತಿಸಿದ್ದು ತಲೆತಲಾಂತರಗಳಿಂದ ಪೋಷಿಸಿಕೊಂಡು ಬಂದ ಹಸೆ ಚಿತ್ತಾರ ಪರಂಪರೆಗೆ ಸಂದ ಗೌರವವಾಗಿದ್ದು ಗುರುತಿಸಿದ ಆಯ್ಕೆ ಸಮಿತಿಗೆ ಲಕ್ಷ್ಮಮ್ಮ ಕೃತಜ್ಞತೆ ಸಲ್ಲಿಸಿದ್ದಾರೆ. ಮಂಜಮ್ಮ ಜೋಗತಿಯವರ ಅಧ್ಯಕ್ಷತೆಯಲ್ಲಿ ಜಾನಪದ ಅಕಾಡೆಮಿ ಉತ್ತಮ ಸೇವೆ ಸಲ್ಲಿಸುತ್ತಿದ್ದು ಈ ಬಾರಿ ಆಯ್ಕೆಸಮಿತಿ ಉತ್ತಮ ಕಲಾವಿದರನ್ನು ಗುರುತಿಸಿ ಆರಿಸಿದೆ. ಕರ್ನಾಟಕ ದೇಶ ಚಿತ್ರಕಲೆಯಾದ ಹಸೆ ಚಿತ್ತಾರ ಕಲಾವಿದರನ್ನು ಪ್ರೋತ್ಸಾಹಿಸಿ ಗುರುತಿಸಿರುವುದು ಶ್ಲಾಘನೀಯ ಎಂದು ಇತ್ತೀಚೆಗೆ ಹಸೆ ಚಿತ್ತಾರ ಸಂಶೋಧನಾ ಕೃತಿ ಪ್ರಕಟಿಸಿದ   ಕರ್ನಾಟಕ ಹಸೆಚಿತ್ತಾರ ಪರಿಷತ್ತಿನ  ರವಿರಾಜ್ ಸಾಗರ್ ತಿಳಿಸಿದರು.

ಸುಳ್ಳೂರ ಶಾಲೆಯಲ್ಲಿ ಪಾಲಕರಿಂದ ಸ್ವಚ್ಛತಾ ಸಪ್ತಾಹ

ಊರಿನ ಗ್ರಾಮಸ್ಥರಿಂದ ಸುಳ್ಳೂರು ಶಾಲೆಯಲ್ಲಿ ಸ್ವಚ್ಛತಾ ಸಪ್ತಾಹ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಳೂರಿನ ಹಿರಿಯ ವಿದ್ಯಾರ್ಥಿಗಳು , ಪಾಲಕರೆಲ್ಲರೂ ಸೇರ...