ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Friday 2 April 2021

ಸೊರಬದಲ್ಲಿ ಸೃಜನಶೀಲ ಬರವಣಿಗೆ ಕಾರ್ಯಗಾರ

ಮಕ್ಕಳಿಗಾಗಿ ಸೃಜನಶೀಲ ಬರವಣಿಗೆ ಕಾರ್ಯಗಾರ


ಮಕ್ಕಳಲ್ಲಿಯೂ ತಮ್ಮದೇ ಆದ ಕಲ್ಪನೆ, ಪರಿಕಲ್ಪನೆಗಳು, ಕೌಶಲಗಳು ಇರುತ್ತವೆ.ಅವುಗಳನ್ನು ಬರಹರೂಪಕ್ಕೆ ಇಳಿಸಲು ಅವರಿಗೆ ಅಭ್ಯಾಸ ಬೇಕಾಗುತ್ತದೆ. ಅಂತಹ ಅಭ್ಯಾಸದ ಅವಕಾಶ , ಮಾರ್ಗದರ್ಶನ ಸಿಕ್ಕಾಗ ಅವರಲ್ಲಿಯೂ ಸೃಜನಶೀಲ ಬರವಣಿಗೆ ಸಾಧ್ಯವಾಗುತ್ತದೆ.
ಅದಕ್ಕಾಗಿ ಮಕ್ಕಳ ಸಾಹಿತ್ಯ ಪರಿಷತ್ತು ಶಿವಮೊಗ್ಗ, ಮಕ್ಕಳ ಮಂದಾರ ಪತ್ರಿಕಾ ಬಳಗ ವತಿಯಿಂದ ಜಿಲ್ಲೆಯಾದ್ಯಂತ ಸೃಜನಶೀಲ ಬರವಣಿಗೆಯ ಕಾರ್ಯಗಾರ ಏರ್ಪಡಿಸಲಾಗುತ್ತಿದೆ ಎಂದು ಸೊರಬದ ಮೆಟ್ರಿಕ್ ಪೂರ್ವ  ಎಸ್ ಸಿ ಎಸ್ಟಿ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ  ಹಮ್ಮಿಕೊಂಡಿದ್ದ ತರಬೇತಿಯಲ್ಲಿ ಮಕ್ಕಳ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷರಾದ ರವಿರಾಜ್  ಮಂಡಗಳಲೆ ಅವರು ಹೇಳಿದರು.

ಮಕ್ಕಳಲ್ಲಿ ಸೃಜನಶೀಲ ಬರವಣಿಗೆ ಸಾಮರ್ಥ್ಯ ಹೆಚ್ಚಿಸಲು ಮಕ್ಕಳ ಸಾಹಿತಿಗಳೂ ಆದ ರವಿರಾಜ್ ಅವರು ರೂಪಿಸಿರುವ ಸಾಹಿತ್ಯ ಅಧ್ಯಯನ ಸಾಮಗ್ರಿಗಳನ್ನು ಮಕ್ಕಳಿಗೆ ನೀಡಿ  ಸುಮಾರು 40 ಸಾಹಿತ್ಯ ಆಸಕ್ತ  ಪ್ರತಿಭಾವಂತ ಮಕ್ಕಳಿಗೆ ತರಬೇತಿ ನೀಡಿದರು.ಮಕ್ಕಳು ಕ್ರಿಯಾಶೀಲವಾಗಿ ಆರು ತಂಡಗಳಾಗಿ ತೊಡಗಿಕೊಂಡು ಸ್ಥಳದಲ್ಲಿಯೇ ಕಥೆ,ಕವನ,ಕಿರುನಾಟಕ ಸಹ ರಚಿಸಿದರು. ಸಂಜೆ ವೇಳೆಗೆ ಸ್ಥಳದಲ್ಲಿಯೇ  ಮಕ್ಕಳ ಮಂದಾರ ಕೈಬರಹ  ಪತ್ರಿಕೆ ಸಿದ್ದಪಡಿಸಿ ಗಮನ ಸೆಳೆದರು.
ಉಚಿತವಾಗಿ  ಜಿಲ್ಲೆಯಾದ್ಯಂತ ಕಾರ್ಯಾಗಾರ ಏರ್ಪಡಿಸಲು ಸಹಯೋಗಕ್ಕಾಗಿ 9980952630 ಗೆ ಕರೆ ಮಾಡಲು ಕೋರಿದರು.

ತಾಲ್ಲೂಕು ಘಟಕದ ಅಧ್ಯಕ್ಷ ಡಾ.ಉಮೇಶ್ ಭದ್ರಾಪುರ ಅವರು ಉಪನ್ಯಾಸ ನೀಡಿದರು. ನಿಲಯ ಪಾಲಕರಾದ ಉಮೇಶ್ ಮಂಡಗಳಲೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪರಿಷತ್ತಿನ ಖಜಾಂಚಿ ರವೀಂದ್ರ ಅವರು ಕಾರ್ಯಕ್ರಮ ನಿರ್ವಹಿಸಿದರು.ನಿಲಯದ ಸಿಬ್ಬಂದಿ ಸಹ ತರಬೇತಿಯಲ್ಲಿ ಪಾಲ್ಗೊಂಡಿದ್ದರು.

ಸುಳ್ಳೂರ ಶಾಲೆಯಲ್ಲಿ ಪಾಲಕರಿಂದ ಸ್ವಚ್ಛತಾ ಸಪ್ತಾಹ

ಊರಿನ ಗ್ರಾಮಸ್ಥರಿಂದ ಸುಳ್ಳೂರು ಶಾಲೆಯಲ್ಲಿ ಸ್ವಚ್ಛತಾ ಸಪ್ತಾಹ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಳೂರಿನ ಹಿರಿಯ ವಿದ್ಯಾರ್ಥಿಗಳು , ಪಾಲಕರೆಲ್ಲರೂ ಸೇರ...