ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Friday 12 April 2019

ಮೇ 10 . ರೇಡಿಯೋ ನಾಟಕ

https://drive.google.com/file/d/1dzi0SJ0S0V6Okebs7iUD1LJ2rGgL3-se/view?usp=drivesdk.

ಈ ಲಿಂಕ ಕ್ಲಿಕ್ ಮಾಡಿ. ನಮ್ಮ ಶಾಲಾ ಮಕ್ಕಳ ರೇಡಿಯೋ ನಾಟಕ. ಮೇ -10 .   ನಾಟಕವನ್ನು ಅಲಿಸಬಹುದು.
      ಇದು ಮಕ್ಕಳ ಶೈಕ್ಷಣಿಕ ಸಮಸ್ಯೆ, ರಿಸಲ್ಟ್ ಫೋಬಿಯ, ಮಕ್ಕಳ ಮೇಲೆ ಪಾಲಕರ ಮಾನಸಿಕ ಒತ್ತಡ, ಮಕ್ಕಳ ಹುಕ್ಕುಗಳ ಉಲ್ಲಂಘನೆ  ಮತ್ತಿತರ ವಿಷಯ ವಸ್ತುವಿನ ರಂಗ ಪಠ್ಯವಾಗಿದೆ.

Tuesday 2 April 2019

ಸರ್ಕಾರಿ ಶಾಲಾ ಸಬಲೀಕರಣಕ್ಕೆ ಪಾಲಕರ ಪಾತ್ರ

ಸರ್ಕಾರಿ ಶಾಲಾ ಸಬಲೀಕರಣಕ್ಕೆ ಪಾಲಕರ ಪಾತ್ರ...

ಪ್ರಮುಖವಾದ ಸರಳ ಮಾರ್ಗಗಳು..

1.ಜೂನ್ ತಿಂಗಳಲ್ಲೇ ತಮ್ಮ ಮಕ್ಕಳಿಗೆ  ಶಾಲಾ ಪಠ್ಯ ಪುಸ್ತಕ ಪೂರೈಕೆ ಆಗಿದೆಯೇ.. ಎಂದು ಶಾಲೆಗೆ ಭೇಟಿ ನೀಡಿ ಖಾತರಿ ಮಾಡಿಕೊಳ್ಳುವುದು.. ಇರದಿದ್ದರೆ ಶೀಘ್ರ ಪೂರೈಸುವಂತೆ ಮೇಲಧಿಕಾರಿಗಳಿಗೆ ಗಮನಕ್ಕೆ ತರುವುದು.

2. ಪ್ರತಿ ತಿಂಗಳಿಗೊಮ್ಮೆ ಆದರೂ ಎಸ್ ಡಿ ಎಂ ಸಿ ಸಭೆ ಸೇರಿ ಶಾಲಾ ಅನುದಾನ ನಿರ್ವಹಣೆ , ಸಮರ್ಪಕ ಬಳಕೆ ,ಶಿಕ್ಷಕರ ಕೊರತೆ ಮತ್ತಿತರ ಸಮಸ್ಯೆ ಕುರಿತು ಆಲಿಸಿ ಶಿಕ್ಷಕರು ಗರಿಷ್ಠ ಸೇವೆ ಸಲ್ಲಿಸುವಂತೆ ಅವರನ್ನು ಪ್ರೋತ್ಸಾಹಿಸಿ ಸಹಕರಿಸುವುದು.

3.  ಶಾಲೆಯಲ್ಲಿ ಕೊಠಡಿ , ಶೌಚಾಲಯ  ಮತ್ತಿತರ ಭೌತಿಕ ಸೌಲಭ್ಯ ಇವೆಯಾ ...? ಇಲ್ಲವಾದರೆ ಅವನ್ನು ಪಡೆಯುವ ಮಾರ್ಗ ಕುರಿತು ಯೋಜನೆ ಹಮ್ಮಿಕೊಳ್ಳುವುದು.

4.ಸರ್ಕಾರದ ಸೌಲಭ್ಯ ಗಳು , ಬಿಸಿಯೂಟ ಮತ್ತಿತರ ಯೋಜನೆಗಳು ನಿಮ್ಮ ಮಕ್ಕಳಿಗೆ ಸರಿಯಾಗಿ ಸಿಗುತ್ತಿವೆಯಾ.. ಎಂದು ಶಾಲೆಗೆ ಬಂದು ಆಗೀಗ ವಿಚಾರಿಸುವುದು.

5.ಶಾಲಾ ಸಿಬ್ಬಂದಿ ಹಾಜರಾತಿ , ಶಿಕ್ಷಕರ ರಜೆಯ ಅನುಪಸ್ಥಿತಿಯ ಅವಧಿಯಲ್ಲಿ ಬದಲಿ ವ್ಯವಸ್ಥೆ ಬಗ್ಗೆ  ಸಂಬಂಧಿಸಿದವರ ಗಮನಕ್ಕೆ ತರುವುದು.

6.ಶಾಲಾ ಕಾರ್ಯಕ್ರಮಗಳು , ರಾಷ್ಟ್ರೀಯ ಹಬ್ಬಗಳಿಗೆ ಭಾಗವಹಿಸುವುದು.

7.ಶಾಲಾ ಸಿಬ್ಬಂದಿಗೆ ಸರಿಯಾದ  ಗೌರವ , ಮಾರ್ಗದರ್ಶನ, ಸಲಹೆ ನೀಡಿ ಹೆಚ್ಚು ಸೇವೆ ಸಲ್ಲಿಸುವಂತೆ ಪೂರಕ ವಾತಾವರಣ ನಿರ್ಮಿಸುವುದು.

8.ಸಮುದಾಯವು  ಶಾಲೆಯನ್ನು  ವಿದ್ಯಾಲಯದಂತೆ  ಗೌರವದಿಂದ ಕಾಪಾಡುವುದರ ಜೊತೆಗೆ  ಸಾರ್ವಜನಿಕ ಅಸ್ತಿಯಾದ ಶಾಲೆಯ ರಕ್ಷಣೆ ಕುರಿತು ಕಾಳಜಿ  ವಹಿಸಬೇಕು.

9.ನಿಮ್ಮ ಮಕ್ಕಳು ನಿರಂತರವಾಗಿ ಹಾಜರಾಗುವಂತೆ ನೋಡಿಕೊಳ್ಳುವುದಲ್ಲದೆ ಅವರ ಓದು, ಬರಹ ಗಮನಿಸುತ್ತಾ ಮಕ್ಕಳ ಪ್ರಗತಿ ವರದಿ ಪರಿಶೀಲಿಸಲು ಆಗಾಗ್ಗೆ ಶಿಕ್ಷಕರನ್ನು ಭೇಟಿ ಮಾಡುತ್ತಿರಬೇಕು.

ಈ ಎಲ್ಲ ಕಾರ್ಯಗಳನ್ನು ಪಾಲಕರು ಆಗೀಗ ನಿರ್ವಹಿಸಿದರು ಶಿಕ್ಷಕರನ್ನು ,ಸರ್ಕಾರವನ್ನು ಎಚ್ಚರಿಸಿ ಸರ್ಕಾರಿ ಶಾಲೆಗಳು ಸಬಲೀಕರಣ ಆಗುವಂತೆ ಮಾಡಬಹುದಲ್ಲದೆ ಗುಣಮಟ್ಟದ ಶಿಕ್ಷಣ ನಿಮ್ಮ ಮಕ್ಕಳಿಗೆ ಸಿಕ್ಕೇ ಸಿಗುತ್ತದೆ.
#R .s.

ಸುಳ್ಳೂರ ಶಾಲೆಯಲ್ಲಿ ಪಾಲಕರಿಂದ ಸ್ವಚ್ಛತಾ ಸಪ್ತಾಹ

ಊರಿನ ಗ್ರಾಮಸ್ಥರಿಂದ ಸುಳ್ಳೂರು ಶಾಲೆಯಲ್ಲಿ ಸ್ವಚ್ಛತಾ ಸಪ್ತಾಹ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಳೂರಿನ ಹಿರಿಯ ವಿದ್ಯಾರ್ಥಿಗಳು , ಪಾಲಕರೆಲ್ಲರೂ ಸೇರ...