ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Saturday 5 August 2017

ಎಲ್ಲದಕ್ಕೂ ರಾಜಕಾರಣಿಗಳೇ ಹೊಣೆಯೇ....

ಈ ವ್ಯವಸ್ಥೆಯ ಬಗ್ಗೆ  ಧನಿ ಎತ್ತಬೇಕಾದ ಚಿಂತಕರು ಬುದ್ಧಿಜೀವಿಗಳನ್ನು ಅಕಾಡೆಮಿಗಳ ಹುದ್ದೆಗಳಲ್ಲಿ ಬಂಧಿತರಾಗಿದ್ದರೆ..ಕೆಲವರು ಕೆಲವೇ ಸಿದ್ದಾಂತಗಳಿಗೆ ಅಂಟಿಕೊಂಡಿದ್ದಾರೆ... ಸಾಮಾನ್ಯರಿಗೆ ಈಗೀಗ ಸರಕಾರಿ ಸವಲತ್ತು ಕೊಡಿಸುವ ರಾಜಕಾರಣಿಗಳ ಸುತ್ತ ಸುತ್ತುವ ಅನಿವಾರ್ಯ. ಇನ್ನು ನೌಕರರಿಗೆ ತಿಂಗಳ ಸಂಬಳ ಹೆಚ್ಚಾದರೆ ಸಾಕು... ಎಲ್ಲ ಅಭಿವೃದ್ಧಿ  ಅಥವಾ ಸಮಸ್ಯೆಗೆ ಮುಖ್ಯಮಂತ್ರಿ ಅತ್ವಾ ಪ್ರಧಾನ ಮಂತ್ರಿ ಪರಿಹಾರ ಕೊಡಲು ಸಾಧ್ಯವಿಲ್ಲ... ಅತ್ವಾ ಅಧಿಕಾರದಲ್ಲಿದ್ದವರೆ ಎಲ್ಲದಕ್ಕೂ ಹೊಣೆಗಾರರಲ್ಲ. ಎಲ್ಲರೂ ಬದಲಾವಣೆಗೆ ಸ್ಪಂದಿಸಬೇಕು...ಹಕ್ಕಿನ ಜೊತೆಗೆ ಕರ್ತ್ಯವ್ಯ ನಿಭಾಯಿಸಬೇಕು...
         ಮೋದಿ. ನೇಹರು ,ಇಂದಿರಾಗಾಂಧಿ  ಎಲ್ಲರೂ ಅವರವರ ಶ್ರಮ ದೇಶಕ್ಕೆ ನೀಡಿದ್ದಾರೆ...  ಶ್ರಮ ಸಾಮಾನ್ಯರು  ಟೀಕಿಸುವಷ್ಟು ಕೆಳಮಟ್ಟದ್ದಲ್ಲ. ಎಲ್ಲ ಪ್ರಧಾನಿಗಳು ನಮ್ಮ ದೇಶದ ಏಳಿಗೆಗೆ ಒಂದಿಷ್ಟು ಶ್ರಮಿಸಿದ್ದಾರೆ... ಅವರವರ ರಾಜಕೀಯ ಭವಿಷ್ಯದ ಜೊತೆಗೆ ನಡೆದಿದ್ದಾರೆ... ಗಾಂಧಿಜಿಯಂತಹವರನ್ನು ಟೀಕಿಸುವ ಗುಂಪುಗಳಿವೆ.... ರಾಮನಲ್ಲೂ ದೋಷ ಹುಡುಕುವವರಿದ್ದಾರೆ..ಹೀಗಿರಲು ಸಾಮಾನ್ಯರು ಮತ್ತು ಅಸಮಾನ್ಯರು... ಅಧಿಕಾರಿಗಳು ಮತ್ತು ಆಡಳಿತ ಶಾಹಿಗಳು ಯಾರದು ಸರಿ ಯಾರದು ತಪ್ಪು...

ಸುಳ್ಳೂರ ಶಾಲೆಯಲ್ಲಿ ಪಾಲಕರಿಂದ ಸ್ವಚ್ಛತಾ ಸಪ್ತಾಹ

ಊರಿನ ಗ್ರಾಮಸ್ಥರಿಂದ ಸುಳ್ಳೂರು ಶಾಲೆಯಲ್ಲಿ ಸ್ವಚ್ಛತಾ ಸಪ್ತಾಹ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಳೂರಿನ ಹಿರಿಯ ವಿದ್ಯಾರ್ಥಿಗಳು , ಪಾಲಕರೆಲ್ಲರೂ ಸೇರ...