ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Tuesday 25 August 2015

ಸತ್ಯವತಿ

ಸತ್ಯವತಿ
...........
ನನಗೆ ಅವಳ ಕೆಣಕುವ ಹಠ
ಅವಳಿಗೆ ಸುಳ್ಳುಗಳ ಪೋಣಿಸುವ ಚಟ
ಹೆಸರು ಸತ್ಯವತಿ. ..!
          ಇಷ್ಟು ಹೊತ್ತು ಹೋಗಿದ್ದು ಎಲ್ಲಿಗೆ ಎಂದರೆ....
          ಅವಳು ಅಂತಾಳೆ.....
          ನೀಲ ಗಗನದಲಿ ಹರಿದು  ಮುರಿದು
        ಹಪ್ಪಳ ವಾಗಿರುವ ಮೋಡಗಳ ಎಳೆದು ತಂದು
ಜೇಡರ ಬಲೆಯ ನೂಲಲಿ ಹೊಲೆದು
ಬಿರಿದ ನಮ್ಮ ಹೊಲದಲ್ಲಿ ಕಟ್ಟಿ ಹಾಕಿ
ಕೆಳಗೆ ಬೆಂಕಿ ಮಾಡಿ  ಕಾಯಿಸಿ
ಮೋಡಗಳೆಲ್ಲ ನಮ್ಮ ಹೊಲದಲ್ಲಿ ಕರಗಿ ಮಳೆ ಸುರಿವವರೆಗೆ  ಬಿಡುಗಡೆ  ಮಾಡದಂತೆ
ಗಾಳಿಗೆ ಹೇಳಿ ಬರಲು ಹೋಗಿದ್ದೆ ಎಂದಳು...

Sunday 2 August 2015

ಮೌನ ಮೋಹಿ ಅವಳು

ಮೌನ ಮೋಹಿ ಅವಳು. .
"""""""""""""
ನಾನು ಜಾಲಿಯಲ್ಲ ...
ಅವಳು ಪೋಲಿಯಲ್ಲ.
ನಾವಿಬ್ಬರೂ  ಮೌನ ಮೋಹಿ..!
      ಮೌನ ಮೌನ ನುಂಗಿ
       ಮಾತಿಲ್ಲದೇ   ಪ್ರೀತಿ ಕಡಲು ಕಂಪಿಸಿ
      ತೀರದಲ್ಲಿ ತೀರದ ಪ್ರೇಮ
      ಆವರಿಸಿತು  ಹುಣ್ಹಿಮೆ ರಾತ್ರಿ.
ನನ್ನ ಖಾಲಿ ಎದೆಗೆ ಕಲ್ಲು ಹೊಡೆದು
ಮಜ ನೋಡುವ ಲಗೋರಿ ಚಲಾಕಿ.
ಮತ್ತೆ ಅವಳೇ ಒಲವ ಕನಸಿನ ಕಲ್ಲು ಜೋಡಿಸಿ
ಒಲವ ಲಗೋರಿ ಗೆಲ್ಲುವಾಕೆಯೂ ಅವಳೆ..!
    ಮಾತು ಮೀರಿದ ಮೌನ ಮೋಹ
   ಹೆಚ್ಚಿದೆ ಒಲವ ದಾಹ
   ಕುಡಿಸಿದಳು  ಕೇಳದೇ...!
    ನಾನೀಗ  ಅಮಲು ಪರ್ವತದಲಿ ಅಲೆಯುತಿರುವೆ.
    ನಾ..ಒಲವ ಬಲೆಯಲಿ ಬಂದಿ
    ಆದರೂ ಅಲ್ಲಿದೆ ಸುಖ ಸಮೃದ್ಧಿ.    

ಕತ್ತಲೆ ಕರೆದಾಗ

ಕತ್ತಲೆ ಕರೆದಾಗ..
"""""""""""""""
ಹಗಲು ಓಡಿ ಬಂತು
ಕತ್ತಲೆ ಕರೆದಾಗ...
ಪಾಪ..ಕತ್ತಲೆ ಮಾಯವಾದಳು.
         ಕನವರಿಕೆಯಲಿ ಕತ್ತಲೆ..
          ಹಗಲುಗನಸು ಕಂಡಳು.
           ರವಿ-ಚಂದ್ರರು ಸ್ಪರ್ಧೆಗೆ ಇಳಿದರು.
             ಧರಣಿ ನಗದೆ ಅಳದೆ...
             ಮಳೆ. ಚಳಿ.ಬಿಸಿಲಿಗೆ ಮೈವೂಡ್ಡಿ
             ಹಸಿರಾದಳು.
ಕತ್ತಲೆ ಕರೆದಾಗೆಲ್ಲ
  ಬೆಳಕು ಕದ್ದು ಓಡಿ ಬಂದರೂ ..
ಇನ್ನೂ ಸೇರಲಾಗಿಲ್ಲ. .

ಸುಳ್ಳೂರ ಶಾಲೆಯಲ್ಲಿ ಪಾಲಕರಿಂದ ಸ್ವಚ್ಛತಾ ಸಪ್ತಾಹ

ಊರಿನ ಗ್ರಾಮಸ್ಥರಿಂದ ಸುಳ್ಳೂರು ಶಾಲೆಯಲ್ಲಿ ಸ್ವಚ್ಛತಾ ಸಪ್ತಾಹ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಳೂರಿನ ಹಿರಿಯ ವಿದ್ಯಾರ್ಥಿಗಳು , ಪಾಲಕರೆಲ್ಲರೂ ಸೇರ...