ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Saturday 28 February 2015

ಮೈತ್ರಿ

'ಮೈತ್ರಿ' - ಬಹಳ ದಿನಗಳ ನಂತರ ಕನ್ನಡದಲ್ಲಿ ನಾನು ನೋಡಿದ ಒಂದು ಚೆಂದದ ಸಿನೆಮಾ. ದಯವಿಟ್ಟು ತಪ್ಪದೆ ಈ ಚಿತ್ರ ನೋಡಿ ಎಂಬುದು ನನ್ನೆಲ್ಲಾ ಗೆಳೆಯರಿಗೆ ನನ್ನ ಮನವಿ. ಯಾಕೆಂದರೆ ಒಂದು ಒಳ್ಳೆಯ ಸಿನೆಮಾ ಬಂದಾಗ ನಾವು ಅದನ್ನು ನೋಡದಿದ್ದರೆ , ಪ್ರೋತ್ಸಾಹಿಸದಿದ್ದರೆ, ಅಂತಹ ಒಳ್ಳೆಯ ಪ್ರಯತ್ನ ಮಾಡಿದವರ ಜತೆಗೆ ನಾವು ನಿಲ್ಲದಿದ್ದರೆ ಕೊನೆಗೆ ನಮಗೆ ಉಳಿಯುವುದು ಅದೇ 'ಮಚ್ಚು ಲಾಂಗು- ಐಟಂ ಸಾಂಗು' ಚಿತ್ರಗಳೇ. ಕನ್ನಡದಲ್ಲಿ ಒಳ್ಳೆಯ ಚಿತ್ರಗಳೇ ಬರಲ್ಲ ಗೊಣಗೋರು, ಕಂಪ್ಲೇಂಟ್ ಮಾಡೋರು ಈ ವಿಭಿನ್ನ ಪ್ರಯತ್ನವನ್ನು ನೋಡಿ, ಬೆಂಬಲಿಸಿ, ಇಲ್ಲವಾದಲ್ಲಿ ನಮಗೆ ಒಳ್ಳೆಯ ಚಿತ್ರಗಳು ಬರ್ತಿಲ್ಲ ಅಂತ ಟೀಕಿಸುವ ಹಕ...್ಕು ಅಧಿಕಾರ ಇರಲ್ಲ. ಬಿ. ಎ೦. ಗಿರಿರಾಜ್ ನಿರ್ದೇಶನದ, ಪುನೀತ್ ರಾಜ್ ಕುಮಾರ್ ಹಾಗೂ ಮೋಹನ್ ಲಾಲ್ ತಾರಾಗಣದ ಈ ಚಿತ್ರ ತನ್ನ ಹಲವು ವಿಶೇಷತೆಗಳಿಂದ ಗಮನಸೆಳೆಯುತ್ತದೆ. ಇತರ ಕಮರ್ಷಿಯಲ್ ಚಿತ್ರಗಳಂತೆ ಅಬ್ಬರದ ಡೈಲಾಗ್ ಗಳು, ಅಪ್ಪಳಿಸುವ ಸಂಗೀತ, ಹೀರೋಯಿಸಂ ಮೆರೆಸುವ ಫೈಟ್ ಗಳು, ಸೊಂಟ ಕುಣಿಸುವ ಹೀರೋಯಿನ್ ಗಳು, ಐಟಂ ಸಾಂಗ್ ಗಳು ಯಾವುದೂ ಇಲ್ಲದೆಯೂ, ಪುನೀತ್ ಹಾಗೂ ಮೋಹನ್ ಲಾಲ್ ರಂತಹ ಇಬ್ಬರು ದೊಡ್ಡ ನಟರಿದ್ದರೂ ಅವರನ್ನು ಹೀರೋ ಆಗಿ ಮೆರೆಸದೆಯೂ ಚಿತ್ರ ಎಲ್ಲೂ ಬೋರ್ ಹೊಡೆಸದೇ ತನ್ನ ವಿಭಿನ್ನ ಕಥಾಹಂದರ ಹಾಗೂ ಬಿಗಿಯಾದ ನಿರೂಪಣೆ ಯ ಮೂಲಕ ಇಷ್ಟವಾಗುತ್ತದೆ. ಚಿತ್ರ ನೋಡುವಾಗ 'ಸ್ಲಂ ಡಾಗ್ ಮಿಲೆಯನೇರ್' ಚಿತ್ರದಿಂದ ಸ್ಫೂರ್ತಿ ಪಡೆದಿರುವಂತೆ ಕಂಡುಬಂದರೂ ಚಿತ್ರದಲ್ಲಿ ತುಂಬಿರುವ ಅಪ್ಪಟ ಕನ್ನಡದ ಛಾಯೆ ಮನಸ್ಸು ತುಂಬುತ್ತದೆ. ಕೇವಲ ಕಲಾತ್ಮಕ ಚಿತ್ರವಾಗಿ ಕಳೆದು ಹೋಗಬಹುದಾಗಿದ್ದ ಅಪಾಯದಿಂದ ಚಿತ್ರ ಪಾರಾಗಿದೆ ಮತ್ತು ಕಮರ್ಷಿಯಲ್ ಚಿತ್ರವಾಗಿಯೂ ಆಪ್ತವಾಗುತ್ತದೆ. ಒಂದೆರಡು ದೃಶ್ಯಗಳಂತೂ ಕಣ್ಣಂಚು ಒದ್ದೆಮಾಡುತ್ತವೆ. ಇದು ರಿಮೇಕ್ ಅಲ್ಲದ ನಮ್ಮ ಕನ್ನಡದ್ದೇ ಆದ ಸ್ವಮೇಕ್ ಸಿನೆಮಾ ಅನ್ನೋದು ತುಂಬಾ ಹೆಮ್ಮೆಯ ವಿಚಾರ. ಇಂತಹ ಒಂದು ಒಳ್ಳೆಯ ಗಟ್ಟಿ ಕಥೆಯ ಚಿತ್ರ ಕೊಟ್ಟ ಗಿರಿರಾಜ್ ಅವರಿಗೆ ಮತ್ತು ಇಂತಹದೊಂದು ವಿಭಿನ್ನ ಪಾತ್ರವನ್ನು ಒಪ್ಪಿಕೊಂಡ ಅಪ್ಪಿಕೊಂಡ ಪುನೀತ್ ಅವರಿಗೂ ಅಭಿನಂದನೆ.

ಸುಳ್ಳೂರ ಶಾಲೆಯಲ್ಲಿ ಪಾಲಕರಿಂದ ಸ್ವಚ್ಛತಾ ಸಪ್ತಾಹ

ಊರಿನ ಗ್ರಾಮಸ್ಥರಿಂದ ಸುಳ್ಳೂರು ಶಾಲೆಯಲ್ಲಿ ಸ್ವಚ್ಛತಾ ಸಪ್ತಾಹ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಳೂರಿನ ಹಿರಿಯ ವಿದ್ಯಾರ್ಥಿಗಳು , ಪಾಲಕರೆಲ್ಲರೂ ಸೇರ...