ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Monday, 13 November 2023

ದೆಹಲಿ ರಾಷ್ಟ್ರೀಯ ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ ಆಯ್ಕೆ




*ದೆಹಲಿ ರಾಷ್ಟ್ರೀಯ ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ  ಆಯ್ಕೆ* .


ದೆಹಲಿಯಲ್ಲಿ ನಡೆಯುತ್ತಿರುವ  ರಾಷ್ಟ್ರೀಯ ಮಕ್ಕಳ ಸಾಹಿತ್ಯ ಸಮ್ಮೇಳನಕ್ಕೆ ಶಿವಮೊಗ್ಗ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು ಘಟಕದಿಂದ  ಸಾಗರ ತಾಲೂಕಿನ  ಮಕ್ಕಳು, ಡೊಳ್ಳು ಕುಣಿತ, ವಿಚಾರಗೋಷ್ಠಿಗೆ ಆಯ್ಕೆಯಾಗಿದ್ದಾರೆ. ಗೌತಮಪುರದ ಮಲೆನಾಡು ಪ್ರೌಢಶಾಲೆಯ ಮಕ್ಕಳು ಡೊಳ್ಳು ಕುಣಿತ ಪ್ರದರ್ಶನ ನೀಡಲಿದ್ದಾರೆ. ಸಾಗರದ ಬಿಇಓ ಪರಶುರಾಮ, ಜಿಲ್ಲಾ ಅಧ್ಯಕ್ಷರಾದ ರವಿರಾಜ್ ಸಾಗರ್ ಮಂಡಗಳಲೆ, ಸಾಗರ ತಾಲೂಕು ಅಧ್ಯಕ್ಷ ಕಿಶೋರ್ ಕುಮಾರ್ ಬೈರಾಪುರ,  ಗೌತಮರದ ಗ್ರಾಮಸ್ಥರು, ಪೋಷಕರು, ಮಲೆನಾಡು ಪ್ರೌಢಶಾಲೆಯ ಅಧ್ಯಕ್ಷರು ಮತ್ತು ಶಿಕ್ಷಕರ ಬಳಗ ,ಗೌತಮ ಪುರದ ಗ್ರಾಮ ಪಂಚಾಯಿತಿ ವತಿಯಿಂದ  ಮಕ್ಕಳಿಗೆ ಶುಭ ಹಾರೈಸಿದ್ದಾರೆ.  

ಸಂಸದರಾದ ಬಿ ವೈ ರಾಘವೇಂದ್ರ, ಸಾಗರದ ಶಾಸಕರಾದ ಬೇಳೂರು ಗೋಪಾಲಕೃಷ್ಣ, ಶಾಶಕ ಭೀಮಣ್ಣ ನಾಯ್ಕ, ಮತ್ತಿತರ ಮುಖಂಡರು ಮಕ್ಕಳ ಪ್ರತಿಭೆಗೆ  ಶ್ಲಾಘಿಸಿದ್ದಾರೆ


Thursday, 5 October 2023

ಸುಳ್ಳೂರ ಶಾಲಾ ಮಕ್ಕಳ ಮಂತ್ರಿ ಮಂಡಲದಿಂದ ಪಂಚಾಯಿತಿಗೆ ವಿವಿಧ ಬೇಡಿಕೆಗಳ ಮನವಿ

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸುಳ್ಳೂರು ಶಾಲಾ ಮಕ್ಕಳ ಮಂತ್ರಿಮಂಡಲದಿಂದ ಶಾಲೆಯಲ್ಲಿ ಆಟದ ಮೈದಾನ, ವಿವಿಧ ಕ್ರೀಡಾಂಗಣ, ಶಾಲಾ ಪ್ರಾರ್ಥನ ಅಂಕಣದಲ್ಲಿ ಸಿಮೆಂಟ್ ಬ್ರಿಕ್ಸ್ ಅಳವಡಿಕೆ ಬಗ್ಗೆ ಮನವಿ ಸಲ್ಲಿಸಲಾಯಿತು. ಸೈದುರ್ ಗ್ರಾಮ ಪಂಚಾಯಿತಿ ಪಿಡಿಒ ಲತಾರಾಣಿ , ಪಂಚಾಯತಿ ಉಪಾಧ್ಯಕ್ಷರಾದ ಶಿವಕುಮಾರ್ ಅವರು, ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಗ್ರಾಮಸ್ಥರು ಮತ್ತು ಶಾಲಾ ಶಿಕ್ಷಕರು ಹಾಜರಿದ್ದರು.


Monday, 2 October 2023

ಸುಳ್ಳೂರಿನಲ್ಲಿ ಸಮುದಾಯದ ಸಹಭಾಗಿತ್ವದಲ್ಲಿ ಶಾಲಾ ಸ್ವಚ್ಚತೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸುಳ್ಳೂರಿನಲ್ಲಿ ಮಹಾತ್ಮ ಗಾಂಧಿ ಜಯಂತಿ ಪ್ರಯುಕ್ತ ಶ್ರಮದಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ವಿಶೇಷವಾಗಿ ಗ್ರಾಮದ  ಪಾಲಕರು,ಯುವಕರು ಎಸ್ ಡಿ ಎಂ ಸಿ ಸಮಿತಿಯವರು ಶಾಲಾ ಸ್ವಚ್ಛತೆಯ ನೇತೃತ್ವ ವಹಿಸಿದ್ದರು. ಅಂಗನವಾಡಿ ಕಾರ್ಯಕರ್ತರು ಆಶಾ ಕಾರ್ಯಕರ್ತೆಯರು ಶಾಲಾ ಶಿಕ್ಷಕರು ಮಕ್ಕಳು ಶಾಲಾ ಸ್ವಚ್ಚತೆಯಲ್ಲಿ ನಿರತರಾಗಿರುವುದು ವಿಶೇಷವಾಗಿತ್ತು. ಸಮುದಾಯ ಮನಸ್ಸು ಮಾಡಿದರೆ ಮಾತ್ರ ಸರ್ಕಾರಿ ಶಾಲಾ ಸಬಲೀಕರಣ ಸಾಧ್ಯ. ಗಾಂಧಿ ಜಯಂತಿ ಪ್ರಯುಕ್ತ ಇದೊಂದು ಸಣ್ಣ ಪ್ರಯತ್ನ ಎಂದು ಶಿಕ್ಷಕರಾದ ರವಿಚಂದ್ರ ಅವರು ಹೇಳಿದರು. ಎಸ್ ಡಿ ಎಂ ಸಿ ಅಧ್ಯಕ್ಷರಾದ ರಾಘು ಬಿ, ಶಿಕ್ಷಕಿ ಕಲ್ಪನಾ,ದೀಪಾ, ಅಣ್ಣಪ್ಪ ಅವರು ಹಾಜರಿದ್ದರು. 

Friday, 28 July 2023

ವಿದ್ಯಾಧನ ಸ್ಕಾಲರ್ಶಿಪ್ ಪಡೆಯಲು ಮಾಹಿತಿ

ಈ ಮೇಲಿನ ಪೋಸ್ಟ್ ಸರಿಯಾಗಿ ಓದಿ .ವಿದ್ಯಾಧನ್ ವಿದ್ಯಾರ್ಥಿ ವೇತನದ ಲಾಭ ಪಡೆಯಿರಿ.

Thursday, 15 June 2023

ಗ್ರಾಮೀಣ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣೆ

#ಮಕ್ಕಳ #ಮುಂದಾರ ಬಳಗ
ಗ್ರಾಮೀಣ ಸರ್ಕಾರಿ ಶಾಲೆಗಳಿಗೆ ಉಚಿತ ನೋಟ್ ಬುಕ್ ವಿತರಣೆ.

ರಾಮನಗರದ ನವಚೇತನ ಸಂಸ್ಥೆಯ ಮಂಜುನಾಥ ಅವರು   ಮಕ್ಕಳ ಮಂದಾರ  ಶಾಲಾ ಮಕ್ಕಳ ಪತ್ರಿಕೆಯ  ಬರಹಗಳನ್ನು ಮೆಚ್ಚಿ  ಕಳುಹಿಸಿದ 2500 ನೋಟ್ ಬುಕ್ ವಿತರಣೆ ಸಮಾರಂಭ ವನ್ನು  ವಿಮುಕ್ತಿ ಸಂಸ್ಥೆ ಪೋತ್ನಾಳ್  ಸಹಯೋಗದಲ್ಲಿ  ಮಕ್ಕಳ ಮಂದಾರ ಬಳಗ, ಮಲ್ಕಾಪುರ ಶಾಲಾ ಶಿಕ್ಷಕ ರವಿಚಂದ್ರ ಅವರು ವಿವಿಧ ಗ್ರಾಮೀಣ ಶಾಲೆಗಳಿಗೆ  ನೋಟ್ ಬುಕ್ ವಿತರಣೆ ಸಮಾರಂಭ ಉದ್ಘಾಟಿಸಿದರು.

ಸ ಹಿ ಪ್ರಾ.ಶಾಲೆ. ಮಲ್ಕಾಪುರ, ಬಸಾಪುರ ಶಾಲೆಗಳಿಗೆ ವಿತರಿಸಿದ ಅವರು   ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ, ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಿಸುವ ಅಂಗವಾಗಿ ಇದುಒಂದು ಸಣ್ಣ ಸೇವೆಯಾಗಿದೆ. ಇಂತಹ ಸಣ್ಣ ಸೇವೆಗಳು ಮಕ್ಕಳಲ್ಲಿ ಮತ್ತು  ಸಮಾಜದಲ್ಲಿ ಮತ್ತಷ್ಟು ಜನರಲ್ಲಿ ಸಮಾಜ ಸೇವಾ ಮನೋಭಾವ ಬೆಳೆಸಲು ಪ್ರೇರಣೆಯಾಗಲಿ ಎನ್ನುವುದು ಸಹ ನಮ್ಮ ಉದ್ದೇಶವೆಂದು ಮಕ್ಕಳ ಸಾಹಿತ್ಯ ಪರಿಷತ್ತಿನ ಮಸ್ಕಿ ಘಟಕದ ಅಧ್ಯಕ್ಷರಾದ ಶಿಕ್ಷಕ ರವಿಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಗ್ರಾಮೀಣ ಶಾಲೆಗಳ ಸಬಲೀಕರಣಕ್ಕೆ ಶಿಕ್ಷಕರೊಂದಿಗೆ ಸದಾ ಜೊತೆ ಇರುತ್ತೇವೆ ಎಂದು ಚಾರ್ಲಿ ಉದ್ಬಾಳ್ ನುಡಿದರು.


ವಿಮಕ್ತಿ ಸಂಸ್ಥೆಯ ಚಾರ್ಲಿ ಉದ್ಬಾಳ್,  ಆರೋಗ್ಯಪ್ಪ ಬಡಿಗೇರ್,  ಶಿಕ್ಷಕ ಸುಭಾಶ್, ಮೇಘೇಶ್, ಸುನೀಲ್,ಬೂದೇಶ್, ಶಿವರಾಂ, ಮುಖ್ಯ ಶಿಕ್ಷಕ ಅಳ್ಳಯ್ಯ, ಮಲ್ಕಾಪುರ ಶಾಲೆಯ ಶಿಕ್ಷಕರು, ಬಸಾಪುರ ಶಾಲೆಯ ಶಿಕ್ಷಕರು  ಹಾಗೂ ಗ್ರಾಮಸ್ಥರು  ಜೊತೆಯಾಗಿದ್ದರು.

Wednesday, 3 May 2023

ಬೇಸಿಗೆ ಕಲಿಕಾ ಸಂಭ್ರಮದಲ್ಲಿ ಮಕ್ಕಳ ಮಂದಾರ ವಿಶೇಷ ಸಂಚಿಕೆ ಬಿಡುಗಡೆ

ಮಕ್ಕಳ ಮಂದಾರ ಬೇಸಿಗೆ ಸಂಭ್ರಮ ವಿಶೇಷ ಸಂಚಿಕೆ ಬಿಡುಗಡೆ.

ಮೇ-03-2023.ಮಲ್ಕಾಪುರ.

ಮಲ್ಕಾಪುರ ಶಾಲೆಯಲ್ಲಿ ಶ್ರಮಜೀವಿ ಸಂಸ್ಥೆಯಿಂದ ಆಯೋಜಿಸಿರುವ ಬೇಸಿಗೆ ಸಂಭ್ರಮ ಕಲಿಕಾ ಶಿಬಿರದಲ್ಲಿ ಮಲ್ಲಯ್ಯ ಗೋರ್ಕಲ್ ಅವರು ಸಂಚಿಕೆಯನ್ನು ಮುದ್ರಿಸಿಕೊಟ್ಟು ಬಿಡುಗಡೆ ಮಾಡಿದರು. 
ಬಗ್ಗೆ
ಬೇಸಿಗೆ ರಜೆಯಲ್ಲಿ ಮಕ್ಕಳು ಆಸಕ್ತಿಯಿಂದ ಶಿಬಿರದಲ್ಲಿ ಪಾಲ್ಗೊಳ್ಳುವಂತೆ ಮಾಡಿ ವಿವಿಧ ವಿಷಯಗಳನ್ನು ರಚನಾತ್ಮಕವಾಗಿ ಕ್ರಿಯಾತ್ಮಕವಾಗಿ ತೊಡಗಿಕೊಂಡು ಕಲಿಯುತ್ತಿರುವಂತೆ ಶ್ರಮಿಸುತ್ತಿರುವ  ಶಿಕ್ಷಕರಾದ ರವಿಚಂದ್ರ , ಸ್ವಯಂ ಸೇವಾ ಶಿಕ್ಷಕ ಅಯ್ಯಪ್ಪ ಅವರ ಶ್ರಮ ಶ್ಲಾಘನೀಯ ಎಂದು ಶ್ರಮಜೀವಿ  ಸಂಸ್ಥೆಯ ಮಲ್ಲಯ್ಯ ಗೋರ್ಕಲ್ ನುಡಿದರು.

16 ವರ್ಷಗಳಿಂದ ಮಕ್ಕಳ ಸೃಜನಶೀಲ ಬರಹಗಳಿಗೆ ವೇದಿಕೆಯಾಗಿ  ಪ್ರಕಟವಾಗುತ್ತಿರುವ ಮಕ್ಕಳ ಸಂಪಾದಕಿಯ ನೇತೃತ್ವದ ಮಕ್ಕಳ ಮಂದಾರ ವಿಶೇಷ ಸಂಚಿಕೆ ಮಕ್ಕಳ ಕಲ್ಪನಾಶೀಲತೆ ಮತ್ತು ಸೃಜನಶೀಲತೆಗೆ ಸಾಕ್ಷಿಯಾಗಿದೆ ಎಂದು ಪ್ರಧಾನ ಸಂಪಾದಕರಾದ ಶಿಕ್ಷಕ ರವಿಚಂದ್ರ  ನುಡಿದರು.

ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆ ರಾಯಚೂರು ಎನ್ನುವ ಹಣೆಪಟ್ಟಿ ಅಳಿಸುವಲ್ಲಿ , ನಮ್ಮ ಗ್ರಾಮೀಣ ಮಕ್ಕಳ ಬರಹ ಆಸಕ್ತಿ ಓದುವ ಅಭಿರುಚಿ ಬೆಳೆಸುವಲ್ಲಿ ಮಕ್ಕಳ ಮಂದಾರ ಯಶಸ್ವಿ ಪ್ರಯೋಗವಾಗಿದೆ ಎಂದು ಮಲ್ಲಯ್ಯ ಗೋರ್ಕಲ್ ಅವರು ಹೇಳಿದರು.

ಎಸ್ ಡಿ ಎಂ ಸಿ ಅಧ್ಯಕ್ಷ ಬಸವರಾಜ್, ನಿಂಗಪ್ಪ, ಸದಸ್ಯರು,ಹಿರಿಯ ವಿದ್ಯಾರ್ಥಿಗಳು, ಮಕ್ಕಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Wednesday, 12 April 2023

ಮಕ್ಕಳ ಮಂದಾರ - ಬೇಸಿಗೆ ರಜಾ ವಿಶೇಷಾಂಕ


16 ನೇ ವರ್ಷದ ನಿರಂತರ ಯಶಸ್ವಿ ಹೆಜ್ಜೆಗಳ ಮಕ್ಕಳ ಸೃಜನಶೀಲ ಬರಹಗಳ ಪಯಣ. 
ಮಕ್ಕಳ ಪುಟ್ಟ ಪುಟ್ಟ ಸೃಜನಶೀಲ ಬರಗಳನ್ನ ಪ್ರೋತ್ಸಾಹಿಸಿ  ಅವರ ಕನಸುಗಳಿಗೆ ರೆಕ್ಕೆ ಹೆಚ್ಚೋಣ.
ಓದುವ ಮತ್ತು ಬರೆಯುವ ಅಭಿರುಚಿ ಬೆಳೆಸುವ ಸಣ್ಣ ಪ್ರಯತ್ನದಲ್ಲಿ ನೀವು ನಮ್ಮ ಜೊತೆಯಾಗಿ ಪತ್ರಿಕೆಯ ಬಾಗಿದಾರರಾಗಿ. ಕರೆ ಮಾಡಿ.
9980952630.

Friday, 17 March 2023

ಮಲ್ಕಾಪುರದ ಹಿರಿಯ ವಿದ್ಯಾರ್ಥಿಗಳಿಂದ ಅಪ್ಪು ಸ್ಪೂರ್ತಿ ದಿನ ಆಚರಣೆ -ಶಾಲೆಗೆ ಧಣಿಗೆ

ಅಪ್ಪು ಉತ್ಸವ *ಸ್ಪೂರ್ತಿ ದಿನದ ಅಂಗವಾಗಿ ಹಿರಿಯ ವಿದ್ಯಾರ್ಥಿಗಳಿಂದ ಮಲ್ಕಾಪುರ ಶಾಲೆಗೆ ದೇಣಿಗೆ


ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಜನ್ಮದಿನಾಚರಣೆ ಪ್ರಯುಕ್ತ ಸ್ಪೂರ್ತಿ ದಿನಾಚರಣೆಯನ್ನು ಮಾನ್ವಿ ತಾಲೂಕಿನ ಮಲ್ಕಾಪುರ ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳಿಂದ 
  ಆಚರಿಸಲಾಯಿತು.

ಸ್ಪೂರ್ತಿ ದಿನದ ಅಂಗವಾಗಿ ಹಿರಿಯ ವಿದ್ಯಾರ್ಥಿ ಮೇಘರಾಜ್ ಶಾಲಾ ಮಕ್ಕಳಿಗಾಗಿ 200 ಕುಡಿಯುವ ನೀರಿನ ಲೋಟಗಳನ್ನು ದೇಣಿಗೆ ನೀಡಿ, ಸಿಹಿ ವಿತರಿಸಿ ಆಚರಣೆಯನ್ನು ಅರ್ಥಪೂರ್ಣ ಗೊಳಿಸಿದರು. ಹಳ್ಳಿಯೊಂದರ ಶಾಲಾ ಹಿರಿಯ  ವಿದ್ಯಾರ್ಥಿಗಳ  ಈ ಕೊಡುಗೆ ಮಲ್ಕಾಪುರ ಗ್ರಾಮಕ್ಕೆ ಅಷ್ಟೇ ಅಲ್ಲ ರಾಜ್ಯದ ಎಲ್ಲೆಡೆ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ. 


ದೇಣಿಗೆ ನೀಡಿದ ಹಿರಿಯ ವಿದ್ಯಾರ್ಥಿ ಮೇಘರಾಜ್ ಮಲ್ಕಾಪುರ


ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಇದು ವಿಶೇಷವಾದ ನಡೆಯಾಗಿದೆ. ಈ ಮೂಲಕ ಇಂದಿನ ಯುವಕರು ಸರ್ಕಾರಿ ಶಾಲಾ ಸಬಲೀಕರಣಕ್ಕೆ ಕೈಲಾದ ದೇಣಿಗೆ ನೀಡಿ ಸಮಾಜ ಸೇವೆಗೆ ತೆರೆದುಕೊಳ್ಳಲು ಸ್ಪೂರ್ತಿ ತುಂಬಿದ ದಿನವೂ ಆಗಿದೆ.ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ನಿಜಕ್ಕೂ ಇಂದಿನ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ ಎಂಬುದಕ್ಕೆ ಇದು ತಾಜಾ ಉದಾಹರಣೆಯಾಗಿದೆ. ಎಂದು ಮಲ್ಕಾಪುರ ಶಾಲಾ ಶಿಕ್ಷಕ ಸಾಹಿತಿ ರವಿಚಂದ್ರ ಹೇಳಿದರು.

ಮುಖ್ಯ ಶಿಕ್ಷಕರಾದ ಮಲ್ಲಪ್ಪ, ಸುನಿಲ್ ಭೂದೇಶ್ ,ಶಿವರಾಂ ಸಂತೋಷ್ ,ರಾಜೇಶ್ವರಿ , ಮಲ್ಕಾಪುರದ ಗ್ರಾಮಸ್ಥರು, ಎಸ್ ಡಿ ಎಂ ಸಿ ಅಧ್ಯಕ್ಷರು  ಮಕ್ಕಳ ಕೊಡುಗೆಯನ್ನು ಶ್ಲಾಘಿಸಿದರು.

ಕರ್ನಾಟಕ ರತ್ನ   ಪುನೀತ್ ರಾಜಕುಮಾರ್  ಸಮಾಜ ಸೇವೆ ,ದೇಣಿಗೆ ನೀಡುವಲ್ಲಿ ವಿಶ್ವಕ್ಕೆ ಮಾದರಿಯಾಗಿದ್ದು ಇಂದು ವಿಶ್ವಾರ್ದ್ಯಂತ ಸ್ಪೂರ್ತಿದಿನವಾಗಿ ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಗಿರುವುದು ಕಂಡುಬರುತ್ತದೆ.

ಶಾಲಾ ಶಿಕ್ಷಕರು, ಊರಿನ ಗ್ರಾಮಸ್ಥರು, ಶಿಕ್ಷಣ ಇಲಾಖೆ ಹಳ್ಳಿಯ ಹಿರಿಯ ವಿದ್ಯಾರ್ಥಿಗಳ ಈ ಕೊಡುಗೆಯನ್ನು ಶ್ಲಾಘಿಸಿದರು.