ಮಕ್ಕಳ ನಾಟಕಗಳೆಂದರೆ ಅವರ ಸಮಸ್ಯೆ , ನೋವು, ಕಲಿಕೆ, ಸಮಾಜದ ವಾಸ್ತವ ಸಮಸ್ಯೆಗಳ ಉದ್ದುದ್ದ ಸಂಬಾಷಣೆ, ಹಿಂದಿನ ಯಾವುದೋ ವ್ಯಕ್ತಿ ಚರಿತ್ರೆ ಅಭಿನಯ , ಇನ್ನಿತರೆ ಅಂಶಗಳತ್ತಲೇ ವಾಲುತ್ತಿರುವ ನಾಟಕಕಾರರಿಗಿಂತ ಕೊಂಚ ವಿಭಿನ್ನವಾಗಿ ಯೋಚಿಸಿ ಕುವೆಂಪು ಅವರು ಬರೆದ ವಿಶಿಷ್ಟ ಗೀತ ನಾಟಕ ಈ ಮೋಡಣ್ಣನ ತಮ್ಮ. ಬಹಳಷ್ಟು ವಿಷಯ , ವಸ್ತು ಸಂಭಾಷಣೆ ,ಭಾಷೆಯ ಬಳಕೆ ಮಕ್ಕಳ ಆಸಕ್ತಿ ಮತ್ತಿತರ ಅಂಶ ದತ್ತ ಗಮನವಿಟ್ಟು ಬರೆದ ವಿಶೇಷ ಪ್ರಯೋಗದ ನಾಟಕ ವಾಗಿ ಇದು ಗಮನ ಸೆಳೆಯಿತು. ಮಹಾಕಾವ್ಯ ಬರೆದರೂ ಮಕ್ಕಳ ಕಾವ್ಯ, ನಾಟಕಕ್ಕೂ ಕುವೆಂಪು ಅವರು ಅಂದೆ ತೊಡಗಿಕೊಂಡು ವಿಶಿಷ್ಟ ನಾಟಕ ಕವಿತೆ ಬರೆದು ಮಕ್ಕಳ ಸಾಹಿತ್ಯ ವಿಸ್ತಾರಗೊಳಿಸಿದ್ದಾರೆ.ಕೆಲವರಿಂದ ಮಕ್ಕಳ ಸಾಹಿತ್ಯ ಚರ್ಚೆ ನಿರ್ಲಕ್ಷೆ ಗೋಳಗಾದದ್ದೂ ಮಾತ್ರ ಗಂಭೀರ ವಿಷಯ.
ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ
- Home
- ಸಂಪಾದಕೀಯ
- ಮಕ್ಕಳು ಬರೆದ ಕತೆ /ಕವನಗಳು
- ನಮ್ಮೂರ ಸುದ್ದಿಗಳು
- ಮಕ್ಕಳ ಬರಹಗಳು
- ಬಾಲ ಸಾಧಕರು
- ಮಕ್ಕಳು ಬಿಡಿಸಿದ ಚಿತ್ರಗಳು
- ನಮ್ಮೂರ ಜಾನಪದ
- ಜ್ಞಾನ - ವಿಜ್ಞಾನ
- ಸಾಮಾನ್ಯ ಜ್ಞಾನ
- ನಮ್ಮ ಪತ್ರಿಕಾ ಅಭಿಯಾನಗಳು
- ಓದುಗರ ಓಲೆ
- ಅತಿಥಿ ಸಾಹಿತಿಗಳ ಅಂಕಣ
- ಮಕ್ಕಳ ಪುಸ್ತಕಗಳ ಪರಿಚಯ-ಆನ್ ಲೈನ್ ಬುಕ್ ಹೌಸ್
- ಶೈಕ್ಷಣಿಕ ಲೇಖನಗಳು
- ಶೈಕ್ಷಣಿಕ ಚಟುವಟಿಕೆಗಳು
- ಲಾಂಗ್ವೇಜ್ ಕಾರ್ನರ್
- 1ರಿಂದ -puc ತರಗತಿ ಈ ಶಾಲೆ
- ನನ್ನ ಶೈಕ್ಷಣಿಕ ವೀಡಿಯೋಗಳು
- ಸಾರ್ವಜನಿಕ ಶಿಕ್ಷಣ ಇಲಾಖೆ
- ಹಿಂದಿನ ಸಂಚಿಕೆಗಳು ಮತ್ತು ಪತ್ರಿಕೆ ಕುರಿತು ಮಾಧ್ಯಮ ವರದಿ ...
- ನಮ್ಮ ಕುರಿತು ಫೋಟೋ ಗ್ಯಾಲರಿ
- ಅಂಕಣ ಬರಹ- ಕನಸುಗಳೂರ ಶ್ರಮಿಕ
- ಆನ್ಲೈನ್ ಪುಸ್ತಕ ಮಳಿಗೆಗಳು
- ಪಿಡಿಎಫ್ ಪುಸ್ತಕಗಳು.
- Ravichandra
- ಆನ್ಲೈನ್ ಪಾಠಗಳು - ದೀಕ್ಷಾ ಪೊರ್ಟಲ್
- ಇನ್ನೋವೇಟಿವ್ ಎಜ್ಯುಕೇಶನ್
Saturday, 22 September 2018
Thursday, 20 September 2018
ಕಾಗುಣಿತಗಳಿಲ್ಲದ ಪದ್ಯ
ಕಾಗುಣಿತಾಕ್ಷರಗಳೇ ಇಲ್ಲದ ಪದ್ಯ!
ಘನರಸಶಯನತನಯ ಮದಮಥನ ಧವಳಘನ
ಘನವರದ ಶತದಳನಯನ ನಯನಪದಕಮಳ
ವನದಗಮನಧವ ಶತದಳವರತಪನದ ದಹನ ನಯನಪರತರ ಗದಧರ
ಸನಕನತ ಸಮದಶಯನ ಶಮನಶಮನ ಭವರ
ಮನಭಯ ಶಮನ ಗರಳಧರ ಗರಳಧರ ಪರಗ
ಮನತನಯ ಶಶಧರಧರ ಧರವರಭವನ ಕನದನಘ ಭವಹರಪರಮವ
(ಅರ್ಥ- ಸಮುದ್ರಶಯನನಾದ ವಿಷ್ಣುವಿನ ಮಗ ಮನ್ಮಥನ ಗರ್ವಭಂಗ ಮಾಡಿದವ, ಬೆಳ್ಳಗಿನ ಮೈಯವ, ಶ್ರೇಷ್ಠ ವರಗಳನ್ನು ನೀಡುವವ, ವಿಷ್ಣುವಿನ ಕಣ್ಣಿನಿಂದ ಅರ್ಚಿಸಲ್ಪಟ್ಟ ಪಾದಪದ್ಮವುಳ್ಳವ, ಚಂದ್ರ ಸೂರ್ಯ ಮತ್ತು ಅಗ್ನಿಗಳನ್ನೇ ಕಣ್ಣಾಗಿ ಉಳ್ಳವ, ಶ್ರೇಷ್ಠ, ರೋಗನಿವಾರಕ, ಸನಕನಿಂದ ನಮಸ್ಕೃತನಾದವ, ಯಮನನ್ನು ನಿಗ್ರಹಿಸಿದವ, ಜನ್ಮ ಹಿಂಗಿಸಿದವ, ಭಯ ಹೋಗಲಾಡಿಸಿದವ, ವಿಷಕಂಠ, ಚಂದ್ರಶೇಖರ, ಕೈಲಾಸವಾಸಿ, ಪಾಪರಹಿತ, ಭವನೆಂದೂ ಹರನೆಂದೂ ಕೀರ್ತಿತ ಈಶ್ವರ).
ಪದ್ಮಣಾಂಕ ಎಂಬ ಕವಿಯ ಪದ್ಮರಾಜಪುರಾಣದಲ್ಲಿನ ಪದ್ಯ
Friday, 14 September 2018
bhumi butti chittara- raviraj sagar/ಭೂಮಿ ಬುಟ್ಟಿ ಚಿತ್ತಾರ ಹಾಗು ಹಸೆಗೋಡೆ ಚ...
ನಮ್ಮ ಜನಪದರ ಹಸೆಗೋಡೆ ಹಾಗು ಭೂಮಿ ಬುಟ್ಟಿ ಚಿತ್ತಾರ ಕಲೆ ಪರಿಚಯ - ನಮ್ಮೂರ ಜಾನಪದ ಅನುಸಂಧಾನದಲ್ಲಿ ..
ಈ ಲಿಂಕ್ ಕ್ಲಿಕ್ ಮಾಡಿ ..ಸಬ್ ಸ್ಕ್ರೈಬ್ / subscraibe ಬಟನ್ ಒತ್ತಿ ಹೆಚ್ಚು ಜಾನಪದ ವಿಡಿಯೋಗಳಿಗಾಗಿ ಬೆಂಬಲಿಸಿ
Saturday, 1 September 2018
ಕಾರಣ ನೀನೇನಾ ..
ಕಾರಣ ನೀನೇನಾ....
ಪ್ರೀತಿಯ ಬೆಳಕು ಚೆಲ್ಲಿ
ವಿರಹದ ನೆರಳೂ ಹಿಂಬಾಲಿಸುವಂತೆ ಮಾಡಿದವಳು .....,?
ಸಾಗರದ ದಂಡೆಯಲ್ಲಿ ಜೊತೆ ಜೊತೆಗೆ ಹೆಜ್ಜೆ ಹಾಕಿ....
ಅವುಗಳನ್ನು ಅಳಿಸಿಬಿಡುವಂತೆ
ಅಲೆಗಳನು ಚೂ ಬಿಟ್ಟಿದ್ದು...?
ಒಲವ ಬಳ್ಳಿಯಲಿ
ಹೂ ಬಿಟ್ಟು ಅರಳುವವರೆಗೂ ನೀರುಣಿಸಿ
ಸಂಜೆವೇಳೆಗೆ ಬಾಡುವ ಶಾಪ ಕೊಟ್ಟಿದ್ದು...?
ಸ್ವರ್ಗದಲೇ ಮದುವೆ ನಿಶ್ಚಯ ಆಗಿರುವುದೆಂದು
ಬದನೆ ಶಾಸ್ತ್ರ ಅದ್ಯಾರಿಂದಲೋ ಹೇಳಿಸಿ
ಒಲವ ವಿಶ್ವಾಸದಲ್ಲಿ ತೇಲಿಸಿ
ಶ್ವಾಶವೆ ನಿಲ್ಲುವಂತೆ ಎದೆಗೆ ಬಂಡೆಕಲ್ಲು ತಳ್ಳಿದ್ದು...
ವಿಧಿ ಹಡೆದು ,ಹೆಣೆದು ಕಳಿಸಿದ ಬಲೆಯ
ನೀ ನನಗೆ ಬೀಸಲು ಕಾರಣವಿದೆಯ ಹೇಳಿಬಿಡು...
ಎಲ್ಲೋ ತೇಲಿ ಹೊರಟ ಮೋಡ ನೀನು..
ಹೆಪ್ಪುಗಟ್ಟಿ ಒಲವು ಉಕ್ಕಿಸಿ
ಒಲವ ವರ್ಷಧಾರೆ ಹರಿಸಿ
ಬಯಲು ಸೀಮೆಯ ಬಿಸಿಲಲಿ
ಒಂಟಿ ಮಾಡಲು ಕಾರಣವೆನಿತ್ತು...?
ಮತ್ತೆ ಮತ್ತೆ ಕೇಳಲಾರೆ ಕಾರಣ
ಬದುಕೀಗ ಅಲ್ಪಾವರಣ... ರವಿರಾಜ್ ಸಾಗರ್💕🌹🌹
-
ಚಿಕ್ಕಂದಿನಲ್ಲಿ ನಮಗೆ ಬರುತ್ತಿದ್ದ, ನಾವೆಲ್ಲಾ ಹಾಡುತ್ತಿದ್ದ ಮರೆಯಲಾಗದ ಪದ್ಯಗಳು.. ಇವುಗಳಲ್ಲಿ ನಿಮಗೆಷ್ಟು ಗೊತ್ತು.. ತಿಳಿಸಿ..* ❤️❤️❤️...
-
*ಛಂದಸ್ಸು* ಛಂದಸ್ಸು - ಪದ್ಯವನ್ನು ರಚಿಸುವ ಶಾಸ್ತ್ರ. ಛಂದಸ್ಸಿನ ಶಾಸ್ತ್ರದ ಪ್ರಕಾರ ರಚಿತವಾದ ಪದ್ಯವನ್ನು ಛಂದೋಬದ್ಧ ಪದ್ಯ ಎನ್ನುವರು. ಛಂದಸ್ಸು ಕನ್ನಡ ಸಾಹಿತ್ಯ, ಸ...
-
ಕನ್ನಡ ವ್ಯಾಕರಣ @EDUCATIONGKNEWS. •ಕನ್ನಡ ವರ್ಣಮಾಲೆ •ಸಂಧಿ ಪ್ರಕರಣ •ನಾಮ ಪದ ಪ್ರಕರಣ •ಲಿಂಗಳು •ವಚನಗಳು •ವಿಭಕ್ತಿ ಪ್ರತ್ಯಯಗಳು •ಕ್ರಿಯಾಪದ ಪ್ರಕರಣ •ಕ...