ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ
- Home
- ಸಂಪಾದಕೀಯ
- ಮಕ್ಕಳು ಬರೆದ ಕತೆ /ಕವನಗಳು
- ನಮ್ಮೂರ ಸುದ್ದಿಗಳು
- ಮಕ್ಕಳ ಬರಹಗಳು
- ಬಾಲ ಸಾಧಕರು
- ಮಕ್ಕಳು ಬಿಡಿಸಿದ ಚಿತ್ರಗಳು
- ನಮ್ಮೂರ ಜಾನಪದ
- ಜ್ಞಾನ - ವಿಜ್ಞಾನ
- ಸಾಮಾನ್ಯ ಜ್ಞಾನ
- ನಮ್ಮ ಪತ್ರಿಕಾ ಅಭಿಯಾನಗಳು
- ಓದುಗರ ಓಲೆ
- ಅತಿಥಿ ಸಾಹಿತಿಗಳ ಅಂಕಣ
- ಮಕ್ಕಳ ಪುಸ್ತಕಗಳ ಪರಿಚಯ-ಆನ್ ಲೈನ್ ಬುಕ್ ಹೌಸ್
- ಶೈಕ್ಷಣಿಕ ಲೇಖನಗಳು
- ಶೈಕ್ಷಣಿಕ ಚಟುವಟಿಕೆಗಳು
- ಲಾಂಗ್ವೇಜ್ ಕಾರ್ನರ್
- 1ರಿಂದ -puc ತರಗತಿ ಈ ಶಾಲೆ
- ನನ್ನ ಶೈಕ್ಷಣಿಕ ವೀಡಿಯೋಗಳು
- ಸಾರ್ವಜನಿಕ ಶಿಕ್ಷಣ ಇಲಾಖೆ
- ಹಿಂದಿನ ಸಂಚಿಕೆಗಳು ಮತ್ತು ಪತ್ರಿಕೆ ಕುರಿತು ಮಾಧ್ಯಮ ವರದಿ ...
- ನಮ್ಮ ಕುರಿತು ಫೋಟೋ ಗ್ಯಾಲರಿ
- ಅಂಕಣ ಬರಹ- ಕನಸುಗಳೂರ ಶ್ರಮಿಕ
- ಆನ್ಲೈನ್ ಪುಸ್ತಕ ಮಳಿಗೆಗಳು
- ಪಿಡಿಎಫ್ ಪುಸ್ತಕಗಳು.
- Ravichandra
- ಆನ್ಲೈನ್ ಪಾಠಗಳು - ದೀಕ್ಷಾ ಪೊರ್ಟಲ್
- ಇನ್ನೋವೇಟಿವ್ ಎಜ್ಯುಕೇಶನ್
Friday, 13 May 2016
ನಿಸರ್ಗ ನಿಯಮ
ನಿಸರ್ಗ ನಿಯಮ
ಕೋಗಿಲೆಯೊಂದು ಕರೆದಿದೆ ಕೂಗಿ
ಹಾಡಲು ತನ್ನೊಂದಿಗೆ
ವಯ್ಯಾರದ ನವಿಲು ಕೈಹಿಡಿದೆಳೆದಿದೆ
ಕುಣಿಯಲು ಜೂತೆಯಾಗಿದೆ.
ಮಲ್ಲಿಗೆ ಮೆಲ್ಲಗೆ ಮಾತಿಗೆಳೆದಿದೆ
ಸುಗಂಧವಾ ಹರಡಲೂ
ಜೋಗದಿ ದುಮುಕುತ ಶರಾವತಿ ಕರೆದಳು
ಸಾಗರವಾ ಸೇರಲೂ
ಕತ್ತಲ ಕರಗಿಸೋ ಜ್ಯೋತಿ ಸೆಳೆದಳು
ಶೃಂಗಾರ ಸಡಗರ ಸಮಯದ ಸಾಕ್ಷಿಗೇ;
ಸಂತಸ ಹಂಚಿ ಸುಂದರ ಬದುಕು
ಎನ್ನುವ ನಿಸರ್ಗ ನಿಯಮವೇ ಚೆಂದ
ಒಣ ವೇದಾಂತ ಕಿವಿಗೂ ಹಿತವಲ್ಲ..
ಆಸೆಗಳೂರಲಿ ಅಲೆದರೆ ತಪ್ಪಲ್ಲ.
ಸಂತಸ ಹಂಚಿರಿ ಧರೆಯೆಲ್ಲ..
# ರವಿರಾಜ್ ಸಾಗರ್
ಕೇಳೇ ಸಖೀ
ಕೇಳೇ ಸಖೀ...
ಕನಸುಗಳೂರಿನ ಪರಿಶ್ರಮಿ ನಾನು
ಮನಸಿದ್ದರೆ ಸಹಬಾಳ್ವೆಗೆ ಜೊತೆಯಾಗು ನೀನೂ
ಮಿತಿಯಿಲ್ಲದ ಆಸೆಗಳ ಬೆನ್ನೇರೆನು ನಾನೂ
ಸರಳ ಬದುಕಲ್ಲೇ ಸಂತೋಷ ಇಲ್ಲವೇನು..?
ಕೊಂಡಷ್ಟೂ ಮುಗಿಯದ ಮಾರುಕಟ್ಟೆ ಒಡಲು
ಕೊನೆಗಾಣದ ಅಸೆಗಳ ಮುಗಿಲು
ಯಾಕೊ ಏನೂ ಈಗೀಗ ದಿಗಿಲು
ಶಾಂತವಾಗುತಿಲ್ಲ ಮನದ ಕಡಲು.
ಕತ್ತಲಲಿ ಕರಿಮಣಿಯ ಕಟ್ಟಿದವ ನಾನಲ್ಲ
ಕತ್ತುಒಡ್ಡಿದ ಮೇಲೆಯೇ ಕಿರುಬೆರಳು ಹಿಡಿದೆನಲ್ಲೇ..
ಕಾಯಾ ವಾಚಾ ಮನಸಾ ನೀನೆ ನನ್ನ ನಲ್ಲೇ
ಸಮಯ ಕೆಟ್ಟರೂನು ಇರುವೆ ನಿನ್ನಲ್ಲೇ
ಬದುಕಿನ ಫರೀಕ್ಷೆಗಳಲಿ ಪಾಸಾಗು ಬಾ ನಲ್ಲೇ
ಹಗಲಿಗಂಜಿದ ಚುಕ್ಕಿಗಳು ನಲಿದಿವೆ ಕತ್ತಲಾ ಬಾನಲ್ಲೇ
ಒಲವೇ ಜೀವನ ಸಾಕ್ಷಾತ್ಕಾರ
ಸ್ವಲ್ಪ ಇರಲಿ ಲೆಕ್ಕಾಚಾರ.
ಒಲವಿಗೂ ತಪ್ಪೊಲ್ಲ ಗ್ರಹಚಾರ
ನಾವೇ ಅರಿಯಬೇಕು ವಿಚಾರ-ಆಚಾರ
ನಾಳೆ ಅನ್ನೊದು ಅಗೋಚರ
ಆದರೂ ಕಟ್ಟೋಣ ಕನಸುಗಳ ಗೋಪುರ
ಅಲ್ಲಿ ರಾಜಾ ರಾಣಿ ಪಟ್ಟ ನಮಗೆ ನಿರಂತರ
ಸಹನೆಯಿಂದಲೇ ಸಹಬಾಳ್ವೆಯ ಸಂಸಾರ.
ಕೊನೇ ಮಾತು ಕೇಳೇ ಸಖೀ
ನಿನ್ನಿಂದಲೇ ನಾನು ಪರಮಸುಖೀ.
( " ಅವಳ ಡೈರಿಯ ಗೆದ್ದಲು ನೆಕ್ಕಿದ ಸಾಲುಗಳು".. ಕವನ ಸಂಕಲನ ದಿಂದ )
Subscribe to:
Posts (Atom)
-
ಚಿಕ್ಕಂದಿನಲ್ಲಿ ನಮಗೆ ಬರುತ್ತಿದ್ದ, ನಾವೆಲ್ಲಾ ಹಾಡುತ್ತಿದ್ದ ಮರೆಯಲಾಗದ ಪದ್ಯಗಳು.. ಇವುಗಳಲ್ಲಿ ನಿಮಗೆಷ್ಟು ಗೊತ್ತು.. ತಿಳಿಸಿ..* ❤️❤️❤️...
-
*ಛಂದಸ್ಸು* ಛಂದಸ್ಸು - ಪದ್ಯವನ್ನು ರಚಿಸುವ ಶಾಸ್ತ್ರ. ಛಂದಸ್ಸಿನ ಶಾಸ್ತ್ರದ ಪ್ರಕಾರ ರಚಿತವಾದ ಪದ್ಯವನ್ನು ಛಂದೋಬದ್ಧ ಪದ್ಯ ಎನ್ನುವರು. ಛಂದಸ್ಸು ಕನ್ನಡ ಸಾಹಿತ್ಯ, ಸ...
-
ಕನ್ನಡ ವ್ಯಾಕರಣ @EDUCATIONGKNEWS. •ಕನ್ನಡ ವರ್ಣಮಾಲೆ •ಸಂಧಿ ಪ್ರಕರಣ •ನಾಮ ಪದ ಪ್ರಕರಣ •ಲಿಂಗಳು •ವಚನಗಳು •ವಿಭಕ್ತಿ ಪ್ರತ್ಯಯಗಳು •ಕ್ರಿಯಾಪದ ಪ್ರಕರಣ •ಕ...