ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Monday, 21 September 2015

ಮೀನಿನ ಹೆಜ್ಜೆಯ ಚೋರಿ ಅವಳು..

ಮೀನಿನ  ಹೆಜ್ಜೆಯ ಚೋರಿ ..
ಸೂರ್ಯ ಇನ್ನೂ  ಬಂದಿರಲಿಲ್ಲ, ..
ಚಂದ್ರ ಇನ್ನೂ ಹೋಗಿರಲಿಲ್ಲ...
ಆಗಸದ ಬೆಳ್ಳಿ ಕೂಡ ನನ್ನನ್ನೇದಿಟ್ಟಸುತಿರಲು  ಹಸಿರು ಹೊನ್ನ ಮಲೆಗಳ ದಾಟಿ
ಕೋಟಿ ಚಂದ್ರನ ಕಾಂತಿಯ ತುಂಟಿ    ಹಾಲುಗಡಲ ಇಬ್ಬನಿ ಮಿಂದು
ಮೆಲ್ಲಗೆ ಬಳುಕುತ ಬಂದಳೂ ಉಷೆ...!
ರವಿ ರಾಜನ ಅರಮನೆಗೇ...
         ಮೌನ ಮೌನದ  ಬರವಣಿಗೆ
        ಕಣ್ಣು ಕಣ್ಣಲೇ ಮೆರವಣಿಗೆ
        ನಾಚಿಕೆ ಗಡಿಯೂರ ದಾಟಿ
        ಜಗದ  ಎಲ್ಲಾ ಎಲ್ಲೇ ಮೀಟಿ..
        ಎಸೆದಳು ಒಲವ ಬಾವದೀಟಿ
       ಎಲ್ಲಾ ಆವರಿಸಿ...ನನ್ನೇ ಅಪಹರಿಸಿ...
      ಮೆಲ್ಲ ಮೆಲ್ಲಗೆ   ಮಲ್ಲಿಗೆಗಂಧ
      ಮೈಮನಾ ಮರೆಸಿ
       ಎಲ್ಲಾ ದೋಚಿದಳು..!
ಮೀನಿನ ಹೆಜ್ಜೆಯ ಚೋರಿ   ಅವಳು ..
ಎಚ್ಚೆತ್ತು ನೋಡಲು ಅವಳಿಲ್ಲ...!
ನನಗಿನ್ನೂ  ಗೊತ್ತಾಗಿಲ್ಲ..
ಇದು  ಬೆಳಬೆಳಿಗ್ಗೆ  ಬಿದ್ದ  ಕನಸಲ್ವಾ..?
  ಎಲ್ಲ ಹೇಳಲು ಸಾಕ್ಷಿ ಯಾರಿಲ್ವಾ..?!



Friday, 11 September 2015

ರೈತನ ಎದೆಯಿಂದ ಸಿಡಿಲು ಬಡಿವ ಮುನ್ನ. ..

ಬರೀ ಚಿಲ್ಲರೆ ದಕ್ಷಿಣೆ ಹಾಕೋ ರೈತರ ಮೇಲೆ ದೇವರಿಗಂತೂ ಕರುಣೆ ಇಲ್ಲ. ಕೇಳಿದಾಗೆಲ್ಲ ಪ್ರಶ್ನೆ ಮಾಡದೆ  ಕಣ್ಣು ಮುಚ್ಚಕೊಂಡು ಜಾತಿ ಮಗಾ ಅಂತಾ ಓಟು ಹಾಕೋ ಪ್ರಜೆಗಳ ಮೇಲೆ ಈ ರಾಜಕೀಯ ದೇವರುಗಳಿಗಾದರೂ ಕರುಣೆ ಬೇಡವೇ...?. ಈಚಿನ ದಶಕಗಳಲ್ಲಿ 15 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ದಾಖಲಾಗಿದೆ ..ಇನ್ನು ದಾಖಲಾಗದೆ ಉಳಿದವು ಅದೆಷ್ಟೋ. ..?
           ದೇವರು, ಧರ್ಮದ ಉಳಿಸುವಿಕೆಗೆ ,ಉತ್ಸವಕ್ಕೆ ಜಾತ್ರೆಗೆ  ಪಟ್ಟಿ ಎತ್ತೋಕೆ ಮನೆ ಮನೆ ಸುತ್ತೋ ಧರ್ಮಗಳ ಗುಂಪುಗಳ ಪಾಳೇಗಾರರೂ ಕೂಡ ರೈತನ ನೋವು ಆಲಿಸುತ್ತಿಲ್ಲ.. ಅವರೂ ಸಹ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ ಅಷ್ಟೇ. .!. ರೈತರ ನೋವಿಗೆ ಸ್ಪಂದಿಸದ ಧರ್ಮದ ಮುಖಂಡರು, ದೇವರು ಯಾಕೆ ಬೇಕು.? ಅವರಿಗೇಕೆ ರೈತ ಕಷ್ಟದಲ್ಲೂ ದೇವರಿಗಂತ ಹಣ ಕೊಡಬೇಕೂ...?
    ಎಲ್ಲೊ ಸುನಾಮಿ, ಭೂಕಂಪ ಆದಾಗ ದಾನ ಮಾಡುವ ..ಬಿಕ್ಷಗೆ ಇಳಿವವರು ನಮ್ಮ ರೈತರ ನೆರವಿಗೆ ಎಂದಾದರೂ ದಾವಿಸಿದ್ದಾರಾ....?   ಯೋಚಿಸಿ. .. ! ನೌಕರರ ಸಂಬಳ ಏರಿಸಿ ಅಂತಾ ಸ್ಟೈಕು ಬಂದ್ ಈ ದೇಶದಲ್ಲಿ ಸಹಜ. ಆದರೆ ರೈತರಿಗಾಗಿ ಯಾವ ಬಂದ್ ನಡೆದಿದೆ... ? ರೈತರೆಲ್ಲ ತಿರುಗಿ ಬಿದ್ದರೆ ರೈತರ  ರೋಷಾಗ್ನಿ ಜ್ವಾಲೆಗೆ ಇವರೆಲ್ಲ ಉಳಿದಾರೆಯೇ...?  ರೈತ ಸಿಡಿದರೆ ಸಿಡಿಲು. ಬಡಿಬಡವ ಮುಮುನ್ನ ಎಲ್ಲಾ ಎಚ್ಚರ ವಹಿಸಬೇಕು.  ಅವನಿಲ್ಲದೆರೆ  ನಿಮ್ಮ ಹಣ ನಿಮ್ಮ ಹೆಣದ ಮೇಲೆ ಕೇಕೆ ಹಾಕುವ ದಿನ ದೂರವಿಲ್ಲ... ಏನಂತೀರಿ. .?

Saturday, 5 September 2015

ದಿವ್ಯ ಜ್ಯೋತಿ.

ದಿವ್ಯ ಜ್ಯೋತಿ
,,,,,,,,,,,,,,,,,,,,,
ಕತ್ತಲೂ ಸುತ್ತಲೂ
  ಹಿಂಬಾಲಿಸಿದೆ ಎತ್ತಲೂ...
ಹಣವಿದ್ದಾಗ ಮಾತ್ರ ಸುಳಿದಾಡುವ ಬಂಧು ಬಳಗದಂತೆ
ಬೆಳಕಿದ್ದಾಗ  ಮಾತ್ರ ಜೊತೆ ಇಣುಕುವ
ನೆರಳು ಕೂಡ ಮಾಯ....!
ಕತ್ತಲು ನುಂಗಿದ ನನ್ನ ಸಹಾಯಕ್ಕೆ
ಬೆಳಕು ಕೂಡ ವಿಧಿ ಜೊತೆಸೇರಿ ಬೆದರಿ ನಿಂತಿತ್ತು.
ಆದರೆ. ...
       ಅದ್ಯಾವುದೋ  ಮಾಯಾ ಶಿಖರದಿಂದ
       ಬಂದಳು  ಸಿಂಹಿಣಿ....!
        ಕತ್ತಲನು ಬೆನ್ನಟ್ಟಿ ಬೇಟಿಯಾಡಿದಳು ನನ್ನ.
       ನಾನೀಗ ಅವಳ ಪಾಲು...!
          ಅವಳ ಕಣ್ಣ ವಜ್ರ ಶೋಭೆಗೆ
          ಆಂಗ್ಲರಂತೆ ನಡುರಾತ್ರಿಯೇ ಇದ್ದಕಿದ್ದಂತೆ
           ನಮಗೆ ಸ್ವತಂತ್ರ ನೀಡಿ ಓಡಿತು.
          ಅವಳು ನನಗೆ ದಿವ್ಯ ಜ್ಯೋತಿ,
           ಬದುಕಿಗೆಲ್ಲ ಅವಳೇ ಸ್ಪೂರ್ತಿ.
ಅವಳು  ಕಾಂತಿ
ಕತ್ತಲಲಿದ್ದ ನನಗೆ ನವ ಬರವಸೆಯ ಕ್ರಾಂತಿ.