ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Monday, 20 July 2015

ಪ್ರೇಮ ಚಿಕಿತ್ಸೆ

ಪ್ರೇಮ ಚಿಕಿತ್ಸೆ
'''''''''"""""'''
ಬನದ ತುಂಬಾ
ಬಣ್ಣ ಬಣ್ಣದ ಹೂವು. ..
ವಿಧವಿಧದ  ದುಂಬಿ .
ಯಾವ ಹೂವಿಗೆ
ಯಾವ ದುಂಬಿಯೋ...
ಯಾವ ದುಂಬಿಗೆ
ಎಲ್ಲಿಯ ಹೂವೋ....!
ಬೆಸೆದವರಾರೋ...ಹೊಸೆದವರಾರೊ....?
ಆದಿ ಅಂತ್ಯ ಅರಿಯದ ಮುಗ್ಧ ಪ್ರೇಮ ಸಂಬಂಧ.
            ನೂರು ಬಣ್ಣದ ಹೂ ಚೆಲುವು
            ಮೈದುಂಬಿದೆ ನನ್ನ ಮನವು..
             ಎಲ್ಲ ಹೇಗೆ ಹೇಳಲಿ...
       ಹೂ ದುಂಬಿಯ
       ಒಲವ ಸೆಳೆತ
        ಬಾವ ಮಿಳಿತ...
       ಅಂಟು ರೋಗ ನನಗೂ... ತಗುಲಿದೆ.!
       ಪ್ರೇಮ ಚಿಕಿತ್ಸೆ ಬೇಕಿದೆ.
       ಮನವಿ  ಮಾಡುವೆ
        ಅನುಮತಿಸಿ....
        ಒಲವ ವೈಧ್ಯಾಲಯದ ವಿಳಾಸ ತಿಳಿಸಿ.
( ನನ್ನ " ರವಿರಾಜಮಾರ್ಗ " ಬಾವ ಸಂಕಲನ ದಿಂದ)